Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

74 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಭಾಷಣ


ನನ್ನ ಪ್ರೀತಿಯ ದೇಶವಾಸಿಗಳೇ,

74ನೇ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

ಇಂದು, ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿರುವುದರ ಹಿಂದೆ ಭಾರತ ಮಾತೆಯ ಲಕ್ಷಾಂತರ ಪುತ್ರ ಮತ್ತು ಪುತ್ರಿಯರ ಸಮರ್ಪಣೆ, ತ್ಯಾಗ, ಬಲಿದಾನ ಮತ್ತು ತಾಯಿ ಭಾರತಿಯನ್ನು ಸ್ವತಂತ್ರಗೊಳಿಸುವ ಸಂಕಲ್ಪ ಇದೆ. ಇಂದು ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯ ವೀರರಿಗೆ, ಹುತಾತ್ಮರಿಗೆ, ಧೈರ್ಯಶಾಲಿ ಧೀರರಿಗೆ ಗೌರವ ಸಲ್ಲಿಸುವ ಸುಸಂದರ್ಭ ಇದು.

ನಮ್ಮ ಧೀರ ಸೇನಾ ಸಿಬ್ಬಂದಿ, ನಮ್ಮ ಅರೆಸೈನಿಕ ಪಡೆಗಳು, ನಮ್ಮ ಪೊಲೀಸ್ ಸಿಬ್ಬಂದಿ, ಎಲ್ಲಾ ಭದ್ರತಾ ಪಡೆಯವರು  ತಾಯಿ ಭಾರತಿಯನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.  ಅವರೆಲ್ಲರೂ ಜನ ಸಾಮಾನ್ಯರ  ಸುರಕ್ಷತೆಯಲ್ಲಿ ತೊಡಗಿಗೊಂಡಿದ್ದಾರೆ. ಇಂದು ಅವರೆಲ್ಲರ ತ್ಯಾಗ ಮತ್ತು ಬಲಿದಾನವನ್ನು ಹೃತ್ಪೂರ್ವಕವಾಗಿ, ಗೌರವದಿಂದ ನೆನೆಯುವ ದಿನವಾಗಿದೆ.

ಇನ್ನೊಂದು ಹೆಸರು: ಅರಬಿಂದೋ ಘೋಷ್. ಅರಬಿಂದೋ ಘೋಷ್ ಅವರ ಜನ್ಮ ದಿನಾಚರಣೆ ಇಂದು. ಅವರು ಕ್ರಾಂತಿಕಾರಿ ಮಾರ್ಗದಿಂದ ಆಧ್ಯಾತ್ಮಿಕತೆಯತ್ತ ಸಾಗಿದವರು. ನಾವು ಅವರ ಆಶೀರ್ವಾದವನ್ನು ಹೊಂದೋಣ  ಇದರಿಂದ ನಾವು ಅವರ ಮತ್ತು ನಮ್ಮ ದೂರದೃಷ್ಟಿಯನ್ನ್ನೂ ಪೂರೈಸಿಕೊಳ್ಳೋಣ.

ನಾವು ಒಂದು ಅಸಾಧಾರಣ ಪರಿಸ್ಥಿತಿಯನ್ನು ಎದುರಿಸಿಕೊಂಡು ಹಾದುಹೋಗುತ್ತಿದ್ದೇವೆ. ಇಂದು,  ಭಾರತದ ಉಜ್ವಲ ಭವಿಷ್ಯವಾದ  ಮಕ್ಕಳು ನನ್ನ ಮುಂದೆ ಇಲ್ಲ. ಏಕೆ?  ಏಕೆಂದರೆ ಕೊರೊನಾ  ಎಲ್ಲರನ್ನೂ ಎಲ್ಲಿಯೂ ಹೋಗದಂತೆ ನಿಲ್ಲಿಸಿರುವುದೇ ಇದಕ್ಕೆ ಕಾರಣ. ಕೊರೊನಾದ ಈ ಅವಧಿಯಲ್ಲಿ, ನಾನು ಲಕ್ಷಾಂತರ ಕೊರೊನಾ ಯೋಧರಿಗೆ ವಂದಿಸುತ್ತೇನೆ- ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರು, ಆಂಬ್ಯುಲೆನ್ಸ್ ಚಾಲಕರು ಮತ್ತು  ನಾನು ಎಲ್ಲರನ್ನು ಪರಿಗಣಿಸುತ್ತೇನೆ.

‘ಸೇವಾ ಪರಮೋ ಧರ್ಮ’ ಎಂಬ ಮಂತ್ರವನ್ನು ದೀರ್ಘಕಾಲದಿಂದ ಪಾಲಿಸಿದ ಎಲ್ಲ ಕೊರೊನಾ ಯೋಧರಿಗೆ ನಾನು ವಂದಿಸುತ್ತೇನೆ. ಸೇವೆಯು ಅತ್ಯುತ್ತಮ ಧರ್ಮವಾಗಿದೆ ಮತ್ತು ಭಾರತಾಂಭೆಯ ಮಕ್ಕಳಿಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಕೊರೊನಾ ಯೋಧರು ಸೇವೆ ಸಲ್ಲಿಸಿರುವರು.

ಕೊರೊನಾ ಅವಧಿಯಲ್ಲಿ, ನಮ್ಮ ಅನೇಕ ಸಹೋದರ ಸಹೋದರಿಯರು ಈ ಸಾಂಕ್ರಾಮಿಕ ರೋಗದಿಂದ ಕಷ್ಟಕ್ಕೀಡಾಗಿದ್ದಾರೆ; ಅನೇಕ ಕುಟುಂಬಗಳಿಗೆ ಪರಿಣಾಮ ಬೀರಿವೆ; ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂತಹ ಎಲ್ಲ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ, ಮತ್ತು 130 ಕೋಟಿ ದೇಶವಾಸಿಗಳ ಅದಮ್ಯ ಇಚ್ಛಾಶಕ್ತಿ ಮತ್ತು ದೃಢ ನಿಶ್ಚಯವು ನಮ್ಮನ್ನು ಕೊರೊನಾ  ವಿರುದ್ಧ ಗೆಲ್ಲುವಂತೆ ಮಾಡುತ್ತದೆ ಮತ್ತು ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ನಾನು ನಂಬುತ್ತೇನೆ.

ಇತ್ತೀಚೆಗೆ ನಾವು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದೇವೆ ಎಂದು ನನಗೆ ತಿಳಿದಿದೆ. ಪ್ರವಾಹಗಳು, ವಿಶೇಷವಾಗಿ ಈಶಾನ್ಯ, ಪೂರ್ವ ಭಾರತ, ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ; ಅನೇಕ ಪ್ರದೇಶಗಳಲ್ಲಿ ಭೂಕುಸಿತ; ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆ ಕುಟುಂಬಗಳಿಗೆ ನನ್ನ ಸಂತಾಪವನ್ನೂ ವ್ಯಕ್ತಪಡಿಸುತ್ತೇನೆ. ದೇಶವು ರಾಜ್ಯಗಳೊಂದಿಗೆ ಇಂತಹ ಬಿಕ್ಕಟ್ಟಿನಲ್ಲಿ ಒಟ್ಟಿಗೆ ನಿಂತಿರುವುದು. ಸಾಧ್ಯವಾದಷ್ಟು ಸಹಾಯವನ್ನು ಯಶಸ್ವಿಯಾಗಿ ಪೂರೈಸಲು ಯಾವುದೇ ಪ್ರಯತ್ನವನ್ನೂ ಬಿಡುವುದಿಲ್ಲ.

ನನ್ನ ಪ್ರೀತಿಯ ದೇಶವಾಸಿಗಳೇ,

ಸ್ವಾತಂತ್ರ್ಯ ದಿನಾಚರಣೆಯು ಸ್ವಾತಂತ್ರ್ಯವನ್ನು ಆಚರಿಸುವ ಹಬ್ಬವಾಗಿದೆ.  ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಮೂಲಕ ಹೊಸ ಶಕ್ತಿಯನ್ನು ಪ್ರಚೋದಿಸುವ ಸಂದರ್ಭ ಇದು.  ಈ ದಿನವು ಹೊಸ ಸ್ಫೂರ್ತಿಗಳ ಮುನ್ನುಡಿಯಾಗಿದೆ. ಇದು ಹೊಸ ಉತ್ಸಾಹ, ಲವಲವಿಕೆ ಮತ್ತು ಚೈತನ್ಯವನ್ನು ಪುನರುಚ್ಚರಿಸುತ್ತದೆ. ಈ ಪರಿಸ್ಥಿತಿಗಳಲ್ಲಿ, ನಾವು ದೃಢ ನಿರ್ಧಾರ ತೆಗೆದುಕೊಳ್ಳುವುದು ಇನ್ನೂ ಹೆಚ್ಚು ಅಗತ್ಯವಾಗುತ್ತದೆ. ಇದು ಶುಭ ದಿನವಾಗಿದೆ ಏಕೆಂದರೆ ಮುಂದಿನ ವರ್ಷ ಆಚರಿಸಲು ನಾವು ಮತ್ತೆ ಭೇಟಿಯಾದಾಗ, ನಮ್ಮ ಮುಕ್ತವಾದ ಅಸ್ತಿತ್ವದ 75ಯ ವರ್ಷವನ್ನು ನಾವು ಪ್ರವೇಶಿಸುತ್ತೇವೆ. ಇದು ಒಂದು ಮಹತ್ವದ ಸಂದರ್ಭ. ಇಂದು, ನಾವೆಲ್ಲರೂ 130 ಕೋಟಿ ಭಾರತೀಯರು ಮುಂಬರುವ ಎರಡು ವರ್ಷಗಳಲ್ಲಿ ಗಮನಾರ್ಹ ಪ್ರತಿಜ್ಞೆಗಳನ್ನು ಮಾಡಬೇಕಾಗಿದೆ ಮತ್ತು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ನಾವು ಪೂರ್ಣಗೊಳಿಸಿದಾಗ, ಆ ಪ್ರತಿಜ್ಞೆಗಳ  ಫಲಿತಾಂಶಗಳನ್ನು ನಾವು ಆಚರಿಸಲು ಸಾಧ್ಯವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪೂರ್ವಜರು ಈ ಸ್ವಾತಂತ್ರ್ಯಕ್ಕಾಗಿ ತೀವ್ರ ಬದ್ಧತೆ, ಅತ್ಯಂತ ಸಮಗ್ರತೆ, ಪ್ರಾಮಾಣಿಕ ತಪಸ್ಸು, ಬಲಿದಾನ ಮತ್ತು ತ್ಯಾಗದಿಂದ ಹೋರಾಡಿದರು; ಭಾರತಾಂಬೆಗಾಗಿ ಅವರು ತಮ್ಮ ಪ್ರಾಣವನ್ನು ಅರ್ಪಿಸಿದ ರೀತಿಯನ್ನು ನಾವು ಎಂದಿಗೂ ಮರೆಯಬಾರದು. ಗುಲಾಮಗಿರಿಯ ಆ ದೀರ್ಘ ಮತ್ತು ಕರಾಳ ಯುಗದಲ್ಲಿ, ಸ್ವಾತಂತ್ರ್ಯದ ಬಯಕೆಯಿಂದ ಅವರು ಒಂದು ಕ್ಷಣವನ್ನೂ ಕಳೆಯಲಿಲ್ಲ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಯುದ್ಧವನ್ನು ನಡೆಸುವ ಮೂಲಕ ಮತ್ತು ಈ ದಿನವನ್ನು ತರಲು ಯಾವುದೇ ತ್ಯಾಗವನ್ನು ಮಾಡುವ ಮೂಲಕ, ಗುಲಾಮಗಿರಿಯ ಸಂಕೋಲೆಗಳಿಂದ ರಾಷ್ಟ್ರವನ್ನು ಮುಕ್ತಗೊಳಿಸುವ ಆಶಯದೊಂದಿಗೆ ತನ್ನ ಅತ್ಯುತ್ತಮ ಕಾರ್ಯವನ್ನು   ಮಾಡದ ದೇಶವಾಸಿಯೇ ಇಲ್ಲ. ಅನೇಕರು ತಮ್ಮ ಜೀವನವನ್ನು ಜೈಲುಗಳಲ್ಲಿ ಕಳೆದರು. ಅನೇಕರು ತಮ್ಮ ಜೀವನದ ಕನಸುಗಳನ್ನು ಬಿಟ್ಟು ಗಲ್ಲು ಶಿಕ್ಷೆಯನ್ನು ಸ್ವೀಕರಿಸಿದರು. ತಮ್ಮನ್ನೇ ಅರ್ಪಿಸಿದ ಈ ಪೂಜ್ಯ ಹುತಾತ್ಮರಿಗೆ ನಾನು ವಂದಿಸುತ್ತೇನೆ. ಇದು ನಿಜಕ್ಕೂ ಅದ್ಭುತ! ಒಂದು ಕಡೆ, ದೇಶವು ಒಂದು ಹಂತದ ಸಾಮೂಹಿಕ ಚಳುವಳಿಗಳಿಗೆ ಸಾಕ್ಷಿಯಾಯಿತು ಮತ್ತು ಇನ್ನೊಂದು ಕಡೆ ಸಶಸ್ತ್ರ ದಂಗೆಯ ಧ್ವನಿಯು ಮೊಳಗಿತು.

ಪೂಜ್ಯ ಬಾಪುರವರ ನೇತೃತ್ವದಲ್ಲಿ, ಬೃಹತ್ ಚಳುವಳಿಗಳೊಂದಿಗೆ ಮಹಾನ್ ರಾಷ್ಟ್ರೀಯ ಜಾಗೃತಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಪ್ರಚೋದನೆಯನ್ನು ನೀಡಿತು. ಹಾಗಾಗಿ ಇಂದು ನಮ್ಮ ಸ್ವಾತಂತ್ರ್ಯ ದಿನಾಚರಣೆಯನ್ನು ಅಂತಹ ಉತ್ಸಾಹದಿಂದ ಆಚರಿಸಲು ನಮಗೆ ಸಾಧ್ಯವಾಗಿದೆ.

ಈ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ದಂಗೆಯ ಬೆಂಕಿಯನ್ನು ನಂದಿಸಲು ಮತ್ತು ನಮ್ಮ ತಾಯಿನಾಡಿನ ಆತ್ಮ ಮತ್ತು ಚೈತನ್ಯವನ್ನು ಹತ್ತಿಕ್ಕಲು ಹಲವಾರು ಪ್ರಯತ್ನಗಳು ನಡೆದವು. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳು ಮತ್ತು ಪರಂಪರೆಯನ್ನು ಹಾಳುಮಾಡಲು ಅನೇಕ ಪ್ರಯತ್ನಗಳು ನಡೆದವು. ಅದು ಸಾಮ ದಾಮ ದಂಡ ಭೇದಗಳ (ಹೇಗಾದರೂ ಅಥವಾ ವಂಚನೆಯಿಂದ) ಅವಧಿ ಶತಮಾನಗಳಿಂದಲೂ ಇದೇ ರೀತಿ ನಡೆಯುತ್ತಿತ್ತು ಮತ್ತು ಇದೆಲ್ಲವೂ ಉತ್ತುಂಗದಲ್ಲಿತ್ತು. ಅನೇಕರು ಶಾಶ್ವತವಾಗಿ ಜಗತ್ತನ್ನು ಆಳಲು ಬಂದಿದ್ದಾರೆ ಎಂಬ ಸಹಜ ನಂಬಿಕೆಯೊಂದಿಗೆ ಇಲ್ಲಿಗೆ ಬಂದರು (ಯವತ್ ಚಂದ್ರ ದಿವಾಕರೊ-ಸೂರ್ಯ ಮತ್ತು ಚಂದ್ರ ಇರುವವರೆಗೂ). ಆದರೆ ಮುಕ್ತಗೊಳ್ಳುವ ದೃಢ  ಸಂಕಲ್ಪವು ಅಂತಹ ಮಹತ್ವಾಕಾಂಕ್ಷೆಗಳನ್ನು ಧೂಳುಪಟವಾಗಿಸಿತು. ಬಹು ಚಹರೆಗಳು, ಉದಾತ್ತತೆಗಳು, ಭಾಷೆಗಳು ಮತ್ತು ಉಪಭಾಷೆಗಳು, ಪಾಕಪದ್ಧತಿಗಳು, ವೇಷಭೂಷಣಗಳು ಮತ್ತು ಸಂಸ್ಕೃತಿಯ ಅಸ್ತಿತ್ವದಿಂದಾಗಿ ಭಾರತವು ವಿಭಜಿತ ಸ್ಥಳವಾಗಿದೆ ಎಂದು ಅವರು ನಂಬಿದ್ದರು. ಅನೇಕ ವೈವಿಧ್ಯತೆಗಳನ್ನು ಹೊಂದಿರುವ ದೇಶವು ಯಾವುದೇ ಶಕ್ತಿಯ ವಿರುದ್ಧ ಎಂದಿಗೂ ಒಂದಾಗಿ ನಿಲ್ಲಲು ಸಾಧ್ಯವಿಲ್ಲ ಎಂಬ ತಪ್ಪುಗ್ರಹಿಕೆಯಡಿಯಲ್ಲಿ ಅವರು ಶ್ರಮಿಸಿದರು. ಆದರೆ ಅವರು ದೇಶದ ಆತ್ಮ ಮತ್ತು ನಾಡಿಮಿಡಿತವನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆ ಜೀವ ಶಕ್ತಿ, ನಮ್ಮನ್ನು ಒಟ್ಟಿಗೆ ಬಂಧಿಸುವ ನಾಡಿಯಾಗಿತ್ತು ಮತ್ತು ಸ್ವಾತಂತ್ರ್ಯದ  ಹೋರಾಟದಲ್ಲಿ ಈ ಶಕ್ತಿಯು ಸಂಪೂರ್ಣ ಹುರುಪಿನಿಂದ ಹೊರಬಂದಾಗ, ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆಯುವಲ್ಲಿ ಭಾರತವು ಯಶಸ್ವಿಯಾಯಿತು.

ವಿಸ್ತರಣಾ ವಾದದ ಪ್ರಚಾರಕರು ಪ್ರಪಂಚದಾದ್ಯಂತ ಹರಡಿದಾಗ ಮತ್ತು ಪ್ರಾಬಲ್ಯ ಮತ್ತು ಅಧಿಕಾರವನ್ನು ಪಡೆದಾಗ ಅದೇ ಆಡಳಿತವಾಗಿತ್ತು ಎಂಬ ಅಂಶ ನಮಗೆ ತಿಳಿದಿದೆ, ಆದರೆ ಭಾರತದ ಸ್ವಾತಂತ್ರ್ಯ ಚಳವಳಿಯು ಜಗತ್ತಿನಾದ್ಯಂತ ಅನೇಕರಿಗೆ ಈ ಶಕ್ತಿಗಳ ವಿರುದ್ಧ ನಿಲ್ಲಲು ಪ್ರೇರಣೆ ನೀಡಿತು. ಭಾರತವು ಒಂದು ಆಧಾರಸ್ತಂಭವಾಯಿತು ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಹೋರಾಟದ ಬೆಂಕಿಯನ್ನು ಹೊತ್ತಿಸಿತು.

ವಿಸ್ತರಣಾ ವಾದದ ಕುರುಡು ಕಲ್ಪನೆಯಲ್ಲಿ ತೊಡಗಿಸಿಕೊಂಡವರು, ತಮ್ಮ ದುರುದ್ದೇಶಕ್ಕಾಗಿ ಜಗತ್ತನ್ನು ಎರಡು ಮಹಾ ವಿಶ್ವ ಯುದ್ಧಗಳೆಡೆಗೆ ತಳ್ಳಿದರು. ಮಾನವೀಯತೆಯನ್ನು ನಾಶಪಡಿಸಿದರು, ಜೀವನವನ್ನು ನಾಶಮಾಡಿದರು ಮತ್ತು ಜಗತ್ತನ್ನು ಧ್ವಂಸಮಾಡಿದರು.

ಆದರೆ ಅಂತಹ ಅವಧಿಯಲ್ಲಿಯೂ ಕೂಡ, ವಿನಾಶಕಾರಿ ಯುದ್ಧದ ನಡುವೆಯೂ, ಭಾರತವು ತನ್ನ  ಸ್ವಾತಂತ್ರ್ಯದ ಹಂಬಲವನ್ನು ತ್ಯಜಿಸಲಿಲ್ಲ; ಅದರ ಕೊರತೆಯೂ ಕಂಡುಬರಲಿಲ್ಲ, ಅಥವಾ ಅದರ  ಹೋರಾಟವನ್ನು ಬಿಡಲಿಲ್ಲ.

ಅಗತ್ಯವಿದ್ದಾಗಲೆಲ್ಲಾ, ದೇಶವು ತ್ಯಾಗಗಳನ್ನು ಮಾಡುವ ಸಂದರ್ಭ ಬಂದಾಗ ತ್ಯಾಗಗಳನ್ನು ಮಾಡಿದೆ, ನೋವುಗಳನ್ನು ಸಹಿಸಿತು ಮತ್ತು ಜನಾಂದೋಲನವನ್ನು ಮುನ್ನಡೆಸುತ್ತಿತ್ತು. ಭಾರತದ ಹೋರಾಟವು ವಿಶ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ವಾತಾವರಣವನ್ನು ಸೃಷ್ಟಿಸಿತು. ಮತ್ತು ಭಾರತದ ಶಕ್ತಿಯು ಜಗತ್ತಿನಲ್ಲಿ ತಂದ ಬದಲಾವಣೆಯು ವಿಸ್ತರಣಾವಾದಕ್ಕೆ ಸವಾಲಾಗಿ ಪರಿಣಮಿಸಿತು.  ಇತಿಹಾಸ ಅದನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಡೀ ಜಗತ್ತಿನಲ್ಲಿ, ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧದಲ್ಲಿ, ಭಾರತವು ತನ್ನ ಏಕತೆ, ಸಾಮೂಹಿಕತೆ, ಅದರ ಉಜ್ವಲ ಭವಿಷ್ಯದ ಸಂಕಲ್ಪ, ಅದರ ಬದ್ಧತೆ ಮತ್ತು ಸ್ಫೂರ್ತಿಯೊಂದಿಗೆ ತನ್ನ ತಲೆಯನ್ನು ಹೆಮ್ಮೆಯಿಂದ ಎತ್ತಿಕೊಂಡು ಸಾಗುತ್ತಿತ್ತು.

ನನ್ನ ಪ್ರೀತಿಯ ದೇಶವಾಸಿಗಳೇ,

ಕೊರೊನಾ ಸಾಂಕ್ರಾಮಿಕದ ಮಧ್ಯೆ, 130 ಕೋಟಿ ಭಾರತೀಯರು ಸ್ವಾವಲಂಬಿಗಳಾಗಲು ಪ್ರತಿಜ್ಞೆ ಮಾಡಿದರು. ಇಂದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಸ್ವಾವಲಂಬನೆ ಇದೆ. ಸ್ವ-ಅವಲಂಬಿತ ಭಾರತದ (“ಆತ್ಮ ನಿರ್ಭರ ಭಾರತ್”) ಕನಸಿನ ಸಾಕಾರಕ್ಕೂ ನಾವು ಸಾಕ್ಷಿಯಾಗಿದ್ದೇವೆ. “ಸ್ವಾವಲಂಬಿ ಭಾರತ” ಕೇವಲ ಒಂದು ಪದವಲ್ಲ, ಇದು 130 ಕೋಟಿ ದೇಶವಾಸಿಗಳಿಗೆ ಒಂದು ಮಂತ್ರವಾಗಿ ಮಾರ್ಪಟ್ಟಿದೆ.

ನಾನು ಸ್ವಾವಲಂಬನೆಯ ಬಗ್ಗೆ ಮಾತನಾಡುವಾಗ, ಈಗ 25-30 ವರ್ಷಕ್ಕಿಂತ ಮೇಲ್ಪಟ್ಟ ನಾವೆಲ್ಲರೂ ಖಂಡಿತವಾಗಿಯೂ ನಾವು 20-21 ನೇ ವಯಸ್ಸನ್ನು ತಲುಪುತ್ತಿದ್ದಂತೆ ನಮ್ಮ ಪೋಷಕರು ಮತ್ತು ಹಿರಿಯರು ಹೇಗೆ ಸ್ವಾವಲಂಬಿಗಳಾಗಬೇಕೆಂದು ನಮ್ಮನ್ನು ಒತ್ತಾಯಿಸುತ್ತಿದ್ದರು ಎನ್ನುವುದನ್ನು ನೆನಪಿಸಿಕೊಳ್ಳುತ್ತೇವೆ. ಪ್ರತಿ ಕುಟುಂಬವು 20-21 ವರ್ಷ ವಯಸ್ಸಿನ ತನ್ನ ಮಕ್ಕಳು ಸ್ವಾವಲಂಬಿಗಳಾಗಬೇಕೆಂದು ನಿರೀಕ್ಷಿಸುತ್ತದೆ.  ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ ನಾವು ಕೇವಲ ಒಂದು ಹೆಜ್ಜೆ ದೂರದಲ್ಲಿರುವುದರಿಂದ, ಭಾರತದಂತಹ ದೇಶವು ತನ್ನದೇ ಕಾಲ ಮೇಲೆ ನಿಲ್ಲುವುದು ಮತ್ತು ಸ್ವಾವಲಂಬಿಯಾಗುವುದು ಅತ್ಯಗತ್ಯ. ಒಂದು ಕುಟುಂಬಕ್ಕೆ ಅಗತ್ಯವಾದದ್ದು ಒಂದು ದೇಶಕ್ಕೂ ಅವಶ್ಯಕ. ಈ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಮತ್ತು ಇದಕ್ಕೆ ಕಾರಣ ನನ್ನ ದೇಶದ ನಾಗರಿಕರ ಬಲ, ಅದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ, ಅವರ ಪ್ರತಿಭೆಯ ಬಗ್ಗೆ ನನಗೆ ಹೆಮ್ಮೆ ಇದೆ, ನಮ್ಮ ಯುವಕರ ಬಗ್ಗೆ ಮತ್ತು ದೇಶದ ಸಾಟಿಯಿಲ್ಲದ ಮಹಿಳಾ ಶಕ್ತಿಯ ಬಗ್ಗೆ ನನಗೆ ವಿಶ್ವಾಸವಿದೆ. ಭಾರತದ ವಿಧಾನದಲ್ಲಿ ನನಗೆ ಆಲೋಚನೆಯಲ್ಲಿ ನಂಬಿಕೆ ಇದೆ. ಭಾರತವು ಏನನ್ನಾದರೂ ಮಾಡಲು ನಿರ್ಧರಿಸಿದಾಗಲೆಲ್ಲಾ ಅದನ್ನು ಮಾಡಿ ಸಾಧಿಸಿದೆ  ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ಆದ್ದರಿಂದ, ನಾವು ಸ್ವಾವಲಂಬನೆಯ ಬಗ್ಗೆ ಮಾತನಾಡುವಾಗ, ಇದು ಪ್ರಪಂಚದಾದ್ಯಂತ ಕುತೂಹಲವನ್ನು ಮಾತ್ರವಲ್ಲದೆ ಭಾರತದಿಂದ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಆ ನಿರೀಕ್ಷೆಯನ್ನು ಸಾಕಾರಗೊಳಿಸಲು ನಾವು ನಮ್ಮನ್ನು ಸಮರ್ಥರನ್ನಾಗಿ ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ. ನಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಅವಶ್ಯಕ.

ಭಾರತದಂತಹ ದೊಡ್ಡ ದೇಶವು ಯುವ ಜನತೆಯ ಶಕ್ತಿಯಿಂದ ತುಂಬಿದೆ. ಸ್ವಾವಲಂಬಿ ಭಾರತಕ್ಕೆ ಮೊದಲ ಅಗತ್ಯವೇ ಆತ್ಮವಿಶ್ವಾಸವಾಗಿದ್ದು ಅದು ಸ್ವಾವಲಂಬನೆಯ ಅಡಿಪಾಯವಾಗಿದೆ. ಅಭಿವೃದ್ಧಿಗೆ ಹೊಸ ದೃಷ್ಟಿ ಮತ್ತು ಹೊಸ ಶಕ್ತಿಯನ್ನು ನೀಡುವ ಶಕ್ತಿ ಹೊಂದಿದೆ.

‘ಇಡೀ ಜಗತ್ತು ಒಂದೇ ಕುಟುಂಬ’ ಎಂಬ ಮಾತನ್ನು ಭಾರತವು ಯಾವಾಗಲೂ ಅನುಸರಿಸುತ್ತದೆ. ವೇದವು ‘ವಸುದೈವ ಕುಟಂಬಕಂ’ ಮತ್ತು ವಿನೋಬಾ ಜಿ ‘ಜೈ ಜಗತ್’ ಎಂದು ಹೇಳುತ್ತಿದ್ದರು, ಅಂದರೆ ಜಗತ್ತಿಗೇ ಜಯವಾಗಲಿ ಎಂದು ಅರ್ಥ. ಆದ್ದರಿಂದ, ಇಡೀ ಜಗತ್ತು ನಮಗೆ ಒಂದು ಕುಟುಂಬವಾಗಿದೆ. ಆದ್ದರಿಂದ, ಆರ್ಥಿಕ ಅಭಿವೃದ್ಧಿಯ ಜೊತೆಗೆ, ಮಾನವಕುಲ ಮತ್ತು ಮಾನವೀಯತೆಗೂ ಪ್ರಾಮುಖ್ಯತೆ ಸಿಗಬೇಕು. ಮತ್ತು ನಾವು ಈ ಸೂಕ್ತಿಯನ್ನು ಅನುಸರಿಸುತ್ತೇವೆ.

ಇಂದು ಪ್ರಪಂಚವು ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಅವಲಂಬಿತವಾಗಿದೆ. ಆದ್ದರಿಂದ, ಭಾರತದಂತಹ ವಿಶಾಲವಾದ ದೇಶವು ವಿಶ್ವ ಆರ್ಥಿಕತೆಗೆ ತನ್ನ ಕೊಡುಗೆಯನ್ನು ಹೆಚ್ಚಿಸಿಕೊಳ್ಳುವುದು ಪ್ರಸ್ತುತ ಸಮಯದ ಅವಶ್ಯಕತೆಯಾಗಿದೆ. ಇದು ವಿಶ್ವ ಕಲ್ಯಾಣಕ್ಕೆ ಭಾರತದ ಕರ್ತವ್ಯವಾಗಿದೆ. ಭಾರತವು ತನ್ನ ಕೊಡುಗೆಯನ್ನು ಹೆಚ್ಚಿಸಲು ತಾನು ಸಶಕ್ತವಾಗಿರಬೇಕಾಗುತ್ತದೆ; ಸ್ವಾವಲಂಬಿಯಾಗಿರಬೇಕು ಅಥವಾ ‘ಆತ್ಮಾನಿರ್ಭರ್’ ಆಗಿರಬೇಕು. ವಿಶ್ವ ಕಲ್ಯಾಣಕ್ಕೆ ಕೊಡುಗೆ ನೀಡುವ ಸಾಮರ್ಥ್ಯವನ್ನು ನಾವೇ ಮಾಡಿಕೊಳ್ಳಬೇಕು. ನಮ್ಮ ಬೇರುಗಳು ಪ್ರಬಲವಾಗಿದ್ದರೆ ಮತ್ತು ನಾವು ಸಾಕಷ್ಟು ಸಮರ್ಥರಾಗಿದ್ದರೆ, ನಾವು ವಿಶ್ವ ಕಲ್ಯಾಣದತ್ತ ಹೆಜ್ಜೆ ಇಡಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಈ ನೈಸರ್ಗಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ಮೌಲ್ಯವರ್ಧನೆಯನ್ನು ನಾವು ಪ್ರಾರಂಭಿಸುವುದು ಈಗಿನ ಅಗತ್ಯವಾಗಿದೆ; ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು. ಕಚ್ಚಾ ವಸ್ತುಗಳನ್ನು ಜಗತ್ತಿಗೆ ರಫ್ತು ಮಾಡುವುದನ್ನು ನಾವು ಎಷ್ಟು ದಿನ ಮುಂದುವರಿಯಲು ಸಾಧ್ಯ? ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಮತ್ತು ಸಿದ್ಧಪಡಿಸಿದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಎಷ್ಟು ದಿನ ಮುಂದುವರಿಯಲು ಸಾಧ್ಯ? ಆದ್ದರಿಂದ, ನಾವು ಸ್ವಾವಲಂಬಿಗಳಾಗಿರಬೇಕು. ವಿಶ್ವದ ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಸಾಮರ್ಥ್ಯಗಳ ಮೌಲ್ಯವರ್ಧನೆಗೆ ನಾವು ಆಶ್ರಯಿಸಬೇಕಾಗುತ್ತದೆ. ಇದು ನಮ್ಮ ಜವಾಬ್ದಾರಿ. ವಿಶ್ವ ಕಲ್ಯಾಣಕ್ಕೆ ಕೊಡುಗೆ ನೀಡಲು ಮೌಲ್ಯವರ್ಧನೆ ಕ್ಷೇತ್ರದಲ್ಲಿ ಮುಂದುವರಿಯಲು ನಾವು ಬಯಸುತ್ತೇವೆ. ಅದೇ ರೀತಿ, ನಾವು ವಿದೇಶದಿಂದ ಗೋಧಿಯನ್ನು ಆಮದು

***