Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಕಿಂಗ್ಡಮ್ ನ ಪ್ರಧಾನಮಂತ್ರಿ ಘನತೆವೆತ್ತ ಬೋರಿಸ್ ಜಾನ್ಸನ್ ಅವರಿಂದ ಬಂದ ದೂರವಾಣಿ ಕರೆಯನ್ನು ಸ್ವೀಕರಿಸಿದರು.

ಇಬ್ಬರೂ ನಾಯಕರು ಭಾರತ – ಯು ಕೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಸ ದಶಕದಲ್ಲಿ ಮತ್ತಷ್ಟು ಬಲವರ್ಧನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಈ ಉದ್ದೇಶದ ಈಡೇರಿಕೆಗಾಗಿ ಸಮಗ್ರ ಮಾರ್ಗಸೂಚಿಯನ್ನು ರೂಪಿಸುವುದು ಉಪಯುಕ್ತ ಎಂಬುದಕ್ಕೆ ಇಬ್ಬರೂ ಸಮ್ಮತಿಸಿದರು.

ನಾಯಕರು, ಭಾರತ ಮತ್ತು ಯು ಕೆ ನಡುವೆ ಹವಾಮಾನ ಬದಲಾವಣೆ ಕ್ಷೇತ್ರ, ಅದರಲ್ಲೂ ವಿಶೇಷವಾಗಿ ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ (ಸಿಡಿಆರ್.ಐ) ಒಕ್ಕೂಟಕ್ಕೆ ಸಂಬಂಧಿಸಿದ ಸಹಕಾರದ ಬಗ್ಗೆ ತಮ್ಮ ಸಂತೃಪ್ತಿ ವ್ಯಕ್ತಪಡಿಸಿದರು. ಈ ವರ್ಷಾಂತ್ಯದಲ್ಲಿ ಗ್ಲಾಗೌನಲ್ಲಿ ನಡೆಯಲಿರುವ ಕಾಪ್ 26ಕ್ಕೆ ಆಹ್ವಾನಿಸಿದ ಪ್ರಧಾನಮಂತ್ರಿ ಜಾನ್ಸನ್ ಅವರಿಗೆ ಪ್ರಧಾನಮಂತ್ರಿ ಮೋದಿ ಧನ್ಯವಾದ ಅರ್ಪಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಕುರಿತಂತೆಯೂ ಇಬ್ಬರೂ ಪ್ರಧಾನಮಂತ್ರಿಗಳು ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್ ಸೋಂಕು ಇದೆ ಎಂದು ದೃಢಪಟ್ಟಿರುವ ಯು.ಕೆ. ಆರೋಗ್ಯ ಸಚಿವೆ ಶ್ರೀಮತಿ ನಾಡಿನ್ ಡೋರಿಸ್ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಪ್ರಧಾನಮಂತ್ರಿ ಮೋದಿ ಅವರು ಪರಸ್ಪರ ಅನುಕೂಲಕರ ದಿನಾಂಕದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಶ್ರೀ ಜಾನ್ಸನ್ ಅವರಿಗೆ ಪುನರ್ ಆಹ್ವಾನ ನೀಡಿದರು.

**********