ಇಂದು ಆಗಸ್ಟ್ ಕ್ರಾಂತಿಯ ದಿನ. ಆಗಸ್ಟ್ 8 ರಂದು ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಆಡಳಿತಕ್ಕೆ ಸವಾಲೊಡ್ಡಿ ’ಭಾರತ ಬಿಟ್ಟು ತೊಲಗಿ’ ಎಂದು ಕರೆ ನೀಡಿದ್ದರು ಮತ್ತು ಆಗಸ್ಟ್ 9 ರಂದು ಬ್ರಿಟಿಷ್ ಆಡಳಿತಗಾರರು ಭಾರತದಾದ್ಯಂತ ಸ್ವಾತಂತ್ರ್ಯ ಪ್ರೇಮಿಗಳ ಮೇಲೆ ದೌರ್ಜನ್ಯಗಳನ್ನೆಸಗಲು ಆರಂಭಿಸಿದರು. ಇಂದು ಆ ಕೆಂಪು ದಿನದ 75ನೇ ವರ್ಷಾಚರಣೆ. ಇದಲ್ಲದೆ, ಭಾರತ ಬರುವ ಆಗಸ್ಟ್ 15 ರಂದು 70ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ, ಹಾಗಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯ ಸಮಯ ಹಾಗೂ ಪ್ರಾಣವನ್ನು ತ್ಯಾಗ ಮಾಡಿದವರನ್ನು ಸ್ಮರಿಸಲು ಇದು ಸಕಾಲ. ಅವರಿಂದಾಗಿಯೇ ನಾವು ಸ್ವಾತಂತ್ರ್ಯದ ಉಸಿರಾಡುತ್ತಿದ್ದೇವೆ. ಇದು ಸ್ವಾತಂತ್ರ್ಯ ಪ್ರೇಮಿಗಳ ತ್ಯಾಗ, ಬಲಿದಾನ ಮತ್ತು ತಪ್ಪಸ್ಸಿನಿಂದಾಗಿ ಇದು ಸಾಧ್ಯವಾಯಿತು. ಅದರಿಂದಾಗಿ ನಾವು ಇಂದು ಸ್ವತಂತ್ರ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ.
ದೇಶಕ್ಕಾಗಿ ನಮ್ಮ ಪೂರ್ವಜರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ತಮ್ಮೆಲ್ಲಾ ಕುಟುಂಬಗಳನ್ನು ತೊರೆದರು ಮತ್ತು ಎಲ್ಲಾ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡರು. ಅವರ ಉತ್ತರಾಧಿಕಾರಿಗಳಾದ ನಾವು ದೇಶದ ಎಲ್ಲ 125 ಕೋಟಿ ಜನ, ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಶ್ರೇಷ್ಠ ವ್ಯಕ್ತಿಗಳನ್ನು ಸ್ಮರಿಸುವುದು ಆದ್ಯ ಕರ್ತವ್ಯ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ ಸೆಣಸಿದ ಶ್ರೇಷ್ಠ ವ್ಯಕ್ತಿಗಳ ಶ್ರೇಷ್ಠ ಉದ್ದೇಶಗಳನ್ನು ಈಡೇರಿಸಲು ನಾವು ಪಣತೊಡಬೇಕಿದೆ. ಭಾರತ ಮಾತೆಯು ಹೇಗಿರಬೇಕು ಎಂದು ಅವರುಗಳು ಕನಸು ಕಂಡಿದ್ದರೋ, ಅವುಗಳನ್ನು ನನಸು ಮಾಡಲು ನಾವು ಒಗ್ಗೂಡೋಣ. ಈ ಸಂದರ್ಭದಲ್ಲಿ ನಾನು ನನ್ನ ರಾಷ್ಟ್ರದ ಜನತೆಗೆ ಕೆಲವು ಮಾತುಗಳನ್ನು ಹೇಳ ಬಯಸುತ್ತೇನೆ. ಅದು ಪ್ರತಿಯೊಬ್ಬ ಭಾರತೀಯರ ನಿರ್ಣಯವಾಗಬೇಕು.
ತಾಂತ್ಯಾ ಭಿಲ್, ಭೀಮಾ ನಾಯಕ್, ರಾಣಾ ಬಕ್ತಿಯಾರ್ ಸಿಂಗ್ ಮತ್ತು ಲಕ್ಷಾಂತರ ಹುತಾತ್ಮರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ, ಅವರನ್ನು ನಾವು ಸ್ಮರಿಸಬೇಕಾಗಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ಒಂದು ಕ್ಷಣವೂ ತಮಗಾಗಿ ಬದುಕಲಿಲ್ಲ ಎಂಬುದು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅವರಿಗೆ ಶಿಕ್ಷಣ ಪಡೆಯುವ ಅದೃಷ್ಟ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರಿಗೆ ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿದಿತ್ತು ಮತ್ತು ಅದನ್ನು ಹೇಗೆ ಶತಾಯ ಗತಾಯ ಪಡೆಯಲೇಬೇಕು ಎಂಬುದು ಸಹ ತಿಳಿದಿದ್ದರು. ಅವರು ತಮ್ಮಲ್ಲಿದ್ದ ಸರ್ವಸ್ವವನ್ನೂ ತ್ಯಾಗ ಮಾಡಲು ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದರು.
ಇಂದು ನನಗೆ ಚಂದ್ರಶೇಖರ ಆಜಾದ್ ಅವರ ಜನ್ಮಸ್ಥಳ ಆಜಾದ್ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು, ನನ್ನ ಸುದೈವ. ನಾನು ಆ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನಿಗೆ ನಮಿಸಿದೆ. ನಾವು ಯಾವಾಗ ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಸ್ಮರಿಸುತ್ತೇವೆಯೋ ಆಗ ನಮ್ಮ ದೇಶಕ್ಕಾಗಿ ನಾವೂ ಕೂಡ ಏನಾದರೂ ಮಾಡಬೇಕು ಎಂಬ ಸ್ಫೂರ್ತಿ ಉತ್ಕರ್ಷವಾಗುತ್ತದೆ. ಸಹೋದರ ಸಹೋದರಿಯರೇ ! ನಮ್ಮಲ್ಲಿ ಬಹುತೇಕ ಮಂದಿ ಸ್ವಾತಂತ್ರ್ಯಾ ನಂತರದಲ್ಲಿ ಜನಿಸಿದ್ದೇವೆ. ಭಾರತದ ಜನಸಂಖ್ಯೆಯ ಬಹುದೊಡ್ಡ ವರ್ಗ ಸ್ವತಂತ್ರ ಭಾರತದಲ್ಲಿ ಜನಿಸಿರುವುದರಿಂದ ನಮ್ಮಲ್ಲಿ ಅಂತಹ ಬಾಂಧವ್ಯ ಬೆಳೆದಿಲ್ಲ, ಆದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಿ, ತಮ್ಮ ಕುಟುಂಬಗಳನ್ನು ಅನಾಥವನ್ನಾಗಿ ಮಾಡಿದ್ದರು. ಹಾಗಾಗಿಯೇ ಅವರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಅಂತಹ ಉತ್ತಮ ಅದೃಷ್ಟವನ್ನು ನಾವು ಪಡೆದುಕೊಂಡು ಬಂದಿಲ್ಲ. ಆದರೂ ನಾವು ಆಗಸ್ಟ್ ಕ್ರಾಂತಿ ದಿನದ 75ನೇ ವರ್ಷಾಚರಣೆ ನೆನಪು ಮಾಡಿಕೊಳ್ಳುತ್ತಿದ್ದೇವೆ ಮತ್ತು 70ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಹಾಗಾಗಿ ಚಂದ್ರಶೇಖರ ಆಜಾದ್, ಭೀಮಾ ನಾಯಕ್, ತಾಂತ್ಯಾ ಭಿಲ್ ಅವರಂತೆ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡುವಂತಹ ಅವಕಾಶ ನಮಗೆ ಸಿಗುವುದಿಲ್ಲ, ಕನಿಷ್ಠ ನಮಗೆ ರಾಷ್ಟ್ರಕ್ಕಾಗಿಯಾದರೂ ಬದುಕುವ ಅವಕಾಶ ಸಿಕ್ಕಿದೆ. ಆದರೂ ನಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಬಡವರು, ಗ್ರಾಮೀಣ ಜನರು, ದುರ್ಬಲ ವರ್ಗದವರು, ಶೋಷಿತರ ಕನಸುಗಳನ್ನು ನನಸು ಮಾಡುವ ಮತ್ತು ದೇಶವನ್ನು ಬದಲಾಯಿಸುವಂತಹ ಅವಕಾಶ ಸಿಕ್ಕಿದೆ. ಸ್ವಾತಂತ್ರ್ಯಗಳಿಸಿ 70 ವರ್ಷಗಳಾದರೂ ಸಹ ಭಾರತದ ಎಲ್ಲ ಹಳ್ಳಿಗಳಿಗೆ ಕನಿಷ್ಠ ವಿದ್ಯುತ್ ಸಂಪರ್ಕವನ್ನು ಒದಗಿಸುವುದು ನಮ್ಮ ಹೊಣೆಗಾರಿಕೆ ಅಲ್ಲವೇ?.
ಸಹೋದರ ಸಹೋದರಿಯರೇ, ದೇಶದ ಸಾವಿರಾರು ಗ್ರಾಮಗಳಿಗೆ ಇನ್ನೂ ವಿದ್ಯುತ್ ಕಂಬ ಮತ್ತು ತಂತಿ ಹಾಕದಿರುವುದರಿಂದ ಅವರು ಇನ್ನು 21ನೇ ಶತಮಾನದ ಬದಲು 18ನೇ ಶತಮಾನದಲ್ಲೇ ವಾಸಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, 70 ವರ್ಷಗಳ ಅವಧಿ ಅತಿ ಕಡಿಮೆಯೇನಲ್ಲ. ಪ್ರತಿ ದಿನ ಸಂಜೆ ಮಬ್ಬುಗತ್ತಲೆ ಕವಿಯುತ್ತಿದ್ದಂತೆ ಆ ಗ್ರಾಮಗಳ ಜನ ಗಾಢನಿದ್ರೆಗೆ ಜಾರುತ್ತಾರೆ. ಆ ಗ್ರಾಮಗಳ ಜನರಿಗಿನ್ನೂ ವಿದ್ಯುತ್ ಸಂಪರ್ಕ ಹೊಂದಿ ಅದನ್ನು ಅನುಭವಿಸಲಾಗುತ್ತಿಲ್ಲ, ಇದಕ್ಕಾಗಿಯೇ, ಸ್ವಾತಂತ್ರ್ಯ ಹೋರಾಟಗಾರರು ಬೆಲೆಕಟ್ಟಲಾಗದಂತಹ ತ್ಯಾಗ ಮಾಡಿದ್ದರಾ? ಸಹೋದರ ಸಹೋದರಿಯರೇ, ನನ್ನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಅಂತಹ ವಿದ್ಯುತ್ ಸಂಪರ್ಕವಿಲ್ಲದ, ಗ್ರಾಮಗಳ ಬಗ್ಗೆ ವಿವರಗಳನ್ನು ಕೇಳಿದೆ, ಆಗ ಅಂತಹ 18 ಸಾವಿರ ಗ್ರಾಮಗಳು ಕಂಡುಬಂದವು. ನಾವೀಗ 21ನೇ ಶತಮಾನದಲ್ಲಿದ್ದರೂ ಸಹ ಅಲ್ಲಿನ ಜನರಿಗೆ ನಿಜಕ್ಕೂ ವಿದ್ಯುತ್ ಸಂಪರ್ಕದ ಅನುಭವವೇ ಆಗಿರಲಿಲ್ಲ. ಸಹೋದರ ಸಹೋದರಿಯರೇ, ಈ 18 ಸಾವಿರ ಗ್ರಾಮಗಳನ್ನು ವಿದ್ಯುದೀಕರಣಗೊಳಿಸುವ ದೊಡ್ಡ ಸವಾಲಿನ ಕೆಲಸವನ್ನು ನಾನು ಕೈಗೆತ್ತಿಕೊಂಡೆ. ಕಳೆದ ಆಗಸ್ಟ್ 15ರಂದು ನಾನು ಕೆಂಪುಕೋಟೆಯಿಂದ ಒಂದು ಸಾವಿರ ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದ್ದೆ. 7 ದಶಕಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಈ ಬಹುನಿರೀಕ್ಷಿತ ಕೆಲಸ ಹಾಗೆಯೇ ಉಳಿದಿರುವುದು ದುರಾದೃಷ್ಟಕರ.
ನನ್ನ ನಲ್ಮೆಯ ಸಹೋದರ ಸಹೋದರಿಯರೇ, ಇನ್ನು ನಾನು ಪ್ರಕಟಿಸಿ ಒಂದು ವರ್ಷ ಸರಿದಿಲ್ಲ, ಆಗಲೇ ಶೇಕಡ 50ರಷ್ಟು ಗ್ರಾಮಗಳಲ್ಲಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸಿ, ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಮಕ್ಕಳು ಆ ವಿದ್ಯುತ್ ದೀಪದ ಬೆಳಕಿನಲ್ಲಿ ಓದುತ್ತಿದ್ದಾರೆ. ಸಹೋದರರೇ, ಪ್ರತಿಯೊಂದು ಸರ್ಕಾರವು ದೇಶದ ಅಭಿವೃದ್ಧಿಗಾಗಿ ಶ್ರಮಿಸಿವೆ. ಕಳೆದ 70 ವರ್ಷಗಳಲ್ಲಿ ಏನೂ ಪ್ರಗತಿಯಾಗಿಲ್ಲ ಎಂದು ನಾವೆಲ್ಲೂ ಹೇಳುತ್ತಿಲ್ಲ. ಆದರೆ ವಾಸ್ತವವಾಗಿ ಎಷ್ಟು ಪ್ರಗತಿ ಆಗಬೇಕಿತ್ತೂ ಅಷ್ಟು ನಿರೀಕ್ಷಿತ ಪ್ರಮಾಣದಲ್ಲಿ 70 ವರ್ಷಗಳಲ್ಲಿ ಆಗಿಲ್ಲ ಮತ್ತು ನಾನು ಆ ಸ್ಥಿತಿಯಿಂದ ದೇಶವನ್ನು ಹೊರತರುತ್ತೇನೆ.
ಶಾಲೆಗಳು ಮತ್ತು ಶಿಕ್ಷಕರು ಲಭ್ಯವಿದ್ದರೂ ಸಹ ನಮ್ಮ ಹೆಣ್ಣು ಮಕ್ಕಳು ಇಂದಿಗೂ ಕೂಡ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಗ್ರಾಮಗಳ ಮಕ್ಕಳು ಶಿಕ್ಷಣ ಪಡೆಯಲಾಗದಿರುವುದು ನಿಜಕ್ಕೂ ಅತ್ಯಂತ ನೋವಿನ ಮತ್ತು ಸಮಾಧಾನಕರವಲ್ಲದ ಸಂಗತಿ. ನನ್ನ ದೇಶವಾಸಿಗಳೇ, 70ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಯಾವೊಂದು ಮಗುವೂ ಕೂಡ ಶಿಕ್ಷಣದಿಂದ ಹಾಗೂ ಶಾಲೆಗೆ ಹೋಗುವುದರಿಂದ ವಂಚಿತವಾಗದಂತೆ ಮಾಡುವ ನಿಟ್ಟಿನಲ್ಲಿ ಪಣತೊಡೋಣ. ನಾವು ಆತ ಅಥವಾ ಆಕೆಗೆ ಖಂಡಿತವಾಗಿಯೂ ಸ್ವಲ್ಪ ವಿದ್ಯೆ ಕಲಿಯುವಂತೆ ಮಾಡೋಣ. ಈ ಬಗ್ಗೆ ನಾವೆಲ್ಲ ನಾಗರಿಕರು ಏಕೆ ಪಣತೊಡಬಾರದು ? ಶಾಲೆಗಳು ಮತ್ತು ಶಿಕ್ಷಕರು ಲಭ್ಯವಿದ್ದು, ಅವರಿಗೆ ಸರ್ಕಾರದಿಂದ ಸಂಬಳ ನೀಡಲಾಗುತ್ತಿದೆ. ನಾವೆಲ್ಲ ನಮ್ಮ ಮಕ್ಕಳು ಶಾಲೆಗೆ ಹೋಗುವಂತೆ ಉತ್ತೇಜನ ನೀಡಿ, ಅವರಲ್ಲಿ ಸ್ಫೂರ್ತಿ ತುಂಬಬೇಕಿದೆ. ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಹಾಗೆ ಮಾಡಿದರೆ ನಮ್ಮ ದೇಶ ಖಂಡಿತವಾಗಿಯೂ ಹಿಂದೆ ಬೀಳುವುದಿಲ್ಲ.
ಈ ದೇಶವನ್ನು ಮುನ್ನಡೆಸುವ ಅತಿದೊಡ್ಡ ಶಕ್ತಿ ಎಂದರೆ ಅದು ಜನಶಕ್ತಿ. ವೈಯಕ್ತಿಕ ಬೆಳವಣಿಗೆಗೆ ಹಣ ಅತ್ಯಂತ ಪ್ರಮುಖ ಅಂಶವಾಗಿದೆ. ಆದರೆ ದೇಶದ ಪ್ರಗತಿ ಜನರ ಆಸೆ, ಆಶೋತ್ತರಗಳು, ಕನಸು – ಪರಿಶ್ರಮ ಮತ್ತು ತ್ಯಾಗ, ಜನ ಶಕ್ತಿಯನ್ನು ಅವಲಂಬಿಸಿದೆ. ಹಾಗಾಗಿ ದೇಶದ ಎಲ್ಲ 125 ಕೋಟಿ ಜನರು ದೇಶದ ಅಭಿವೃದ್ಧಿಗೆ ಟೀಂ ಇಂಡಿಯಾ ರೀತಿ ಶ್ರಮಿಸುವುದಾಗಿ ಸಂಕಲ್ಪ ಮಾಡೋಣ.
ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಹಿತಾಸಕ್ತಿಯ ಶಾಸನಗಳನ್ನು ಒಂದಾದ ನಂತರ ಒಂದರಂತೆ ರೂಪಿಸುತ್ತಿರುವುದನ್ನು ನೀವು ಗಮನಿಸಿರಬಹುದು. ಈ ಎಲ್ಲ ಕಾನೂನುಗಳು ವಾಸ್ತವವಾಗಿ ತಳಮಟ್ಟದಲ್ಲಿ ಸರ್ಕಾರಿ ಯಂತ್ರ ಅಥವಾ ಆಡಳಿತ ಯಂತ್ರದ ಪೂರ್ಣ ಸಹಭಾಗಿತ್ವದೊಂದಿಗೆ ಜಾರಿಯಾದಾಗ ಮಾತ್ರ ಅವು ನಿಜಕ್ಕೂ ಜನ ಸಾಮಾನ್ಯರನ್ನು ತಲುಪಲು ಸಾಧ್ಯ.
ನನ್ನ ನೆಚ್ಚಿನ ಸಹೋದರ ಸಹೋದರಿಯರೇ, ಈ ದೇಶವನ್ನು ಸುಜಲಾಂ, ಸುಫಲಾಂ(ಜಲಸಂಪದ್ಭರಿತ ಮತ್ತು ಫಲಭರಿತ) ದೇಶವನ್ನಾಗಿ ಮಾಡಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ದೇಶವಾಸಿಗಳಿಗೆ ಕಾಶ್ಮೀರ, ಭೂಮಿಯ ಮೇಲಿನ ಸ್ವರ್ಗವಾಗಿದೆ, ಭಾರತದ ಪ್ರತಿಯೊಬ್ಬ ಪ್ರಜೆಯ ಕನಸು ಒಮ್ಮೆಯಾದರೂ ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂಬುದಾಗಿದೆ. ಈ ಭೂಮಿಯ ಮೇಲಿನ ಸ್ವರ್ಗವನ್ನು ಕಣ್ತುಂಬಿಕೊಳ್ಳಬೇಕು ಎಂದು ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಆಸೆ ಹೊಂದಿರುತ್ತಾರೆ. ಆದರೆ ಭಾರತ ಅತಿಯಾಗಿ ಪ್ರೀತಿಸುವ ಕಾಶ್ಮೀರದಲ್ಲಿ, ಕೆಲವೇ ಕೆಲವು ಜನ ಹಾದಿತಪ್ಪಿ, ಅಲ್ಲಿನ ಶ್ರೇಷ್ಠ ಸಂಪ್ರದಾಯವನ್ನು ಮುರಿದು, ಆತಿಥ್ಯ ಸಂಸ್ಕೃತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಛಿದ್ರ ಛಿದ್ರ ಮಾಡಿದ್ದಾರೆ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಮಂತ್ರಿಯಾಗಿದ್ದಾಗ ಇನ್‌ಸಾನಿಯತ್(ಮಾನವೀಯತೆ), ಜಮೂರಿಯತ್ (ಪ್ರಜಾಪ್ರಭುತ್ವ) ಮತ್ತು ಕಾಶ್ಮೀರಿಯತ್ ಮಾರ್ಗವನ್ನು ಅನುಸರಿಸುತ್ತಿದ್ದರು ಮತ್ತು ನಾವು ಅದೀಗ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.
ಇಂದು ನಾನು ನನ್ನ ಸಹೋದರ ಸಹೋದರಿಯರಿಗೆ ತಿಳಿಸುವುದೇನೆಂದರೆ ಕಾಶ್ಮೀರದ ಈ ಶ್ರೇಷ್ಠ ಹಾಗೂ ಚಂದ್ರಶೇಖರ ಆಜಾದ್ ಅವರ ಪವಿತ್ರ ಭೂಮಿ ಸ್ವಾತಂತ್ರ್ಯ ಹೋರಾಟಕ್ಕೆ ಇಂದಿಗೂ ದೇಶದ ಎಲ್ಲ ಭಾಗಗಳಲ್ಲಿರುವಂತೆ ಅದೇ ಶಕ್ತಿ ಇದೆ. ಕಾಶ್ಮೀರಕ್ಕೆ ಪ್ರತಿಯೊಬ್ಬ ಭಾರತೀಯರೂ ಅನುಭವಿಸುವಂತೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕಾಶ್ಮೀರವನ್ನು ನಾವು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಯಸಿದ್ದೇವೆ. ಕಾಶ್ಮೀರದ ಪ್ರತಿಯೊಂದು ಪಂಚಾಯಿತಿಯನ್ನು ಸಬಲೀಕರಣಗೊಳಿಸುವುದು ಮತ್ತು ಕಾಶ್ಮೀರದ ಪ್ರತಿಯೊಬ್ಬ ಯುವಕನಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು.
ಕೆಲವು ವ್ಯಕ್ತಿಗಳ ದುಷ್ಟ ಉದ್ದೇಶಗಳ ನಡುವೆಯೂ ಅಮರನಾಥ ಯಾತ್ರೆ ಅದ್ಧೂರಿಯಾಗಿ ಮುಂದುವರಿಯುತ್ತಿರುವುದಕ್ಕೆ ನಾನು ಜಮ್ಮು ಮತ್ತು ಕಾಶ್ಮೀರದ ಸರ್ಕಾರವನ್ನು ಅಭಿನಂದಿಸಲು ಬಯಸುತ್ತೇನೆ. ಲಕ್ಷಾಂತರ ಭಕ್ತಾದಿಗಳು ಅಮರನಾಥ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ಇದಲ್ಲದೆ ಲಡಾಕ್‌ನ ನೆಲದಲ್ಲಿ ಹೊಸ ಸೌರಶಕ್ತಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಶ್ಮೀರದಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾನು ಮುಖ್ಯವಾಗಿ ಕಾಶ್ಮೀರದ ಯುವಜನತೆ ಮುಂದೆ ಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಗೆಳೆಯರೇ, ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮರುಸ್ಥಾಪಿಸುವ ಮುನ್ನೋಟದೊಂದಿಗೆ ನಾವೆಲ್ಲ ಮುನ್ನಡೆಯೋಣ.
ನನ್ನ ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮಕ್ಕಳು ಹಾಗೂ ಯುವಕರು ಶಾಲಾ ಪುಸ್ತಕಗಳು, ಲ್ಯಾಪ್‌ಟಾಪ್‌ಗಳನ್ನು ಹಿಡಿದು, ಇಲ್ಲವೇ ವಾಲಿಬಾಲ್, ಕ್ರಿಕೆಟ್ ಬ್ಯಾಟ್ ಹಿಡಿದು ಉದ್ಯಾನವನಗಳಲ್ಲಿ ಹಾಗೂ ಮೈದಾನಗಳಲ್ಲಿ ಆಡುವ ಕನಸು ಹೊಂದಿರುವ ಮುಗ್ಧ ಮಕ್ಕಳು ಮತ್ತು ಯುವಜನತೆ ಕೈಯಲ್ಲಿ ಕಲ್ಲುಗಳನ್ನು ಕಾಣುತ್ತಿರುವುದು ನನಗೆ ನೋವು ತಂದಿದೆ. ಇದರಿಂದ ಕೆಲವು ವ್ಯಕ್ತಿಗಳ ರಾಜಕೀಯ ಕಾರ‍್ಯಸೂಚಿ ಈಡೇರಬಹುದು, ಆದರೆ ದೇಶದ ಮುಗ್ಧ ಮಕ್ಕಳಿಗೆ ಏನಾಗುವುದೆಂದು ತಿಳಿದಿದೆಯೇ? ಇನ್‌ಸಾನಿಯತ್ (ಮಾನವೀಯತೆ) ಮತ್ತು ಕಾಶ್ಮೀರಿಯತ್‌ಗೆ ಧಕ್ಕೆ ಅಥವಾ ಹಾನಿಯಾಗಲು ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಮಾತುಕತೆ ಮಾರ್ಗಗಳು ಸದಾ ತೆರೆದಿವೆ.
ನಾವು ಸ್ವಾತಂತ್ರ್ಯದ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ನಾನು ಯುವಜನರಲ್ಲಿ ಕೇಳಿಕೊಳ್ಳುವುದೇನೆಂದರೆ, ಮಾವೋವಾದಿ ಮತ್ತು ಭಯೋತ್ಪಾದನೆ ಹೆಸರಿನಲ್ಲಿ ಬಂದೂಕುಗಳನ್ನು ಕೈಗೆತ್ತಿಕೊಳ್ಳುತ್ತಿರುವ ನಿಮ್ಮಿಂದ ಸಾಕಷ್ಟು ನೆತ್ತರು ಹರಿದಿದೆ, ಹಲವು ಅಮಾಯಕ ಜೀವಗಳು ಕೊಲ್ಲಲ್ಪಟ್ಟಿವೆ, ಅದರಿಂದ ಯಾರಿಗಾದರೂ ಏನಾದರೂ ಲಾಭವಾಗಿದೆಯೇ ಎಂದು? ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ನೇಗಿಲನ್ನು ಹಿಡಿಯಲು ಇದು ಸಕಾಲ. ಈ ಕೆಂಪು ಭೂಮಿಯನ್ನು ಹಸಿರುಮಯವನ್ನಾಗಿ ಮಾಡೋಣ. ಈ ದೇಶವನ್ನು ಸುಜಲಾಂ, ಸುಫಲಾಂ ಆಗಿ ಬದಲಾಯಿಸೋಣ.
ಸಹೋದರ, ಸಹೋದರಿಯರೇ..! ಇತ್ತ ರಾಜ್ಯದ ಮೆಹಬೂಬ (ಮುಫ್ತಿ) ನಾಯಕತ್ವದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇರಬಹುದು, ಅತ್ತ ದೆಹಲಿಯಲ್ಲಿನ ಕೇಂದ್ರ ಸರ್ಕಾರವಿರಬಹುದು ಎರಡೂ ಜಂಟಿಯಾಗಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗೋಪಾಯಗಳ ಕಡೆಗೆ ಗಮನಹರಿಸುವ ಜೊತೆಗೆ ಅಭಿವೃದ್ಧಿಯ ಮಾರ್ಗದತ್ತ ಕೊಂಡೊಯ್ಯಲು ಶ್ರಮಿಸುತ್ತಿವೆ ಆದರೆ ಈ ಅಭಿವೃದ್ಧಿಯನ್ನು ಸಹಿಸಿಕೊಳ್ಳದ ಕೆಲವು ವ್ಯಕ್ತಿಗಳು, ಹಿಂಸಾ ಮತ್ತು ವಿನಾಶದ ಮಾರ್ಗವನ್ನು ಅಂಟಿಕೊಂಡಿದ್ದಾರೆ. ಈ ಸಂರ್ಭದಲ್ಲಿ ನಾನು ಎಲ್ಲ ರಾಜಕೀಯ ಪಕ್ಷಗಳಿಗೆ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ಗೆ ಅಭಿನಂದನೆಗಳನ್ನು ಹೇಳಬಯಸುತ್ತೇನೆ, ಕಾಶ್ಮೀರದ ವಿಷಯದಲ್ಲಿ ಅತ್ಯಂತ ಬುದ್ದಿವಂತಿಕೆಯಿಂದ ನಿಭಾಯಿಸಲು ಮತ್ತು ಅಲ್ಲಿ ದೇಶಭಕ್ತಿಯ ವಾತಾವರಣ ನೆಲೆಸುವಂತೆ ಮಾಡುವ ಪ್ರಯತ್ನಗಳಿಗೆ ಬೆಂಬಲ ನೀಡಿವೆ. ಇಂದಿಗೂ ಕಾಶ್ಮೀರದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡುತ್ತಿವೆ ಮತ್ತು ಅವೆಲ್ಲಾ ಒಂದೇ ದಿಕ್ಕಿನಲ್ಲಿ ನಡೆಯಲು ಬದ್ಧವಾಗಿವೆ. ಇದು ಭಾರತದ ಶಕ್ತಿ ಮತ್ತು ಸಾಮರ್ಥ್ಯವಾಗಿದ್ದು, ಅದರಿಂದಲೇ ನಾವು ಮುನ್ನಡೆಯುವ ಗುರಿ ಹೊಂದಿದ್ದೇವೆ.
ಕಾಶ್ಮೀರಕ್ಕೆ ಬೇಕಾಗಿರುವುದು ಶಾಂತಿ ಮತ್ತು ಸಂತೋಷ. ಕಾಶ್ಮೀರದ ಜನತೆ ಪ್ರವಾಸೋದ್ಯಮದಿಂದಾಗಿ ತಮ್ಮ ಜೀವನೋಪಾಯ ಸಾಗಿಸುವಂತಾಗಬೇಕು. ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತಾಧಿಗಳು , ಶ್ರೀನಗರಕ್ಕೂ ಭೇಟಿ ನೀಡುವಂತಾಗಬೇಕು ಮತ್ತು ಅದರಿಂದ ಸ್ಥಳೀಯ ಆರ್ಥಿಕತೆಗೆ ಲಾಭವಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಕಾಶ್ಮೀರಿ ಸೇಬುಗಳ ಋತುಮಾನ ಬರಲಿದೆ, ಆ ಸೇಬುಗಳಿಗಾಗಿ ಇಡೀ ದೇಶ ಕಾಯುತ್ತಿದೆ. ನನ್ನ ನಲ್ಮೆಯ ಸಹೋದರ, ಸಹೋದರಿಯರೇ, ಕಾಶ್ಮೀರ ಸೇಬುಗಳನ್ನು ಬೆಳೆಯುವುದರಲ್ಲಿ ಹೆಸರುವಾಸಿಯಾಗಿದೆ, ನೀವು ಬೆಳೆಯುವ ಸೇಬು ಭಾರತದ ಎಲ್ಲ ಮೂಲೆ, ಮೂಲೆಗಳನ್ನು ತಲುಪುತ್ತದೆ, ನಿಮ್ಮ ಕರಕುಶಲ ಉತ್ಪನ್ನಗಳಿಗೆ ದೇಶವ್ಯಾಪಿ ಮಾರುಕಟ್ಟೆ ಇದೆ ಮತ್ತು ನಿಮ್ಮ ಬೆಲೆ ಕಟ್ಟಲಾಗದ ಶ್ರಮಕ್ಕೆ ಹಣ ಹರಿದುಬರಲಿದೆ. ಅದಕ್ಕಾಗಿ ನಿಮಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ಸಹ ಭಾರತ ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ. ಎಲ್ಲ ವೈದ್ಯರು, ವಕೀಲರು, ಎಂಜಿನಿಯರ್‌ಗಳು,ಪ್ರೊಫೆಸರ್ ಗಳು , ರೈತರು, ವರ್ತಕರು ಮತ್ತು ಹಣ್ಣು ಬೆಳೆಯುವವರಿಗೆ ನಾನು ಹೇಳುವುದಿಷ್ಟೇ, ನೀವು ನಿಮ್ಮ ಉದ್ಯೋಗವನ್ನು ಸುಗಮವಾಗಿ ನಡೆಸಲು ಭಾರತ ಸರ್ಕಾರ ಮತ್ತು ಜಮ್ಮು -ಕಾಶ್ಮೀರ ಸರ್ಕಾರವಲ್ಲದೆ, ಎಲ್ಲ ರಾಜಕೀಯ ಪಕ್ಷಗಳು ಮತ್ತು ದೇಶದ 125 ಕೋಟಿ ಜನರು ನಿಮ್ಮೊಂದಿಗಿದ್ದಾರೆ ಮತ್ತು ನಿಮಗೆ ಒಳಿತನ್ನು ಬಯಸುತ್ತಿದ್ದಾರೆ. ಅವರೆಲ್ಲಾ ನಿಮಗೆ ಅಭಿವೃದ್ಧಿಯ ಶುಭ ಕೋರುತ್ತಿದ್ದಾರೆ. ನಿಮ್ಮ ಅಭಿವೃದ್ಧಿಗೆ ಭಾರತ ಏನು ಕೊಡಬೇಕೋ ಅದೆಲ್ಲವನ್ನೂ ನೀಡಲು ಸಿದ್ಧವಿದೆ. ದೇಶದ ಯಾವುದೇ ಭಾಗಕ್ಕೆ ಆರ್ಥಿಕ ಕೊರತೆ ಆದರೂ ಸಹ ನಿಮಗೆ ಹಣಕಾಸಿನ ಕೊರತೆ ಇದೆ ಎಂಬ ಭಾವನೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ.
ನನ್ನ ಪ್ರೀತಿಯ ಸಹೋದರ, ಸಹೋದರಿಯರೇ..! ನಾವು ಅಭಿವೃದ್ಧಿಯ ಮಂತ್ರವನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ನಮ್ಮ ಹೃದಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಿದ್ದೇವೆ. ಕಾಶ್ಮೀರದ ಈ ಮಣ್ಣಿನಲ್ಲಿ , ದೇಶಕ್ಕಾಗಿ ಪ್ರಾಣತ್ಯಾಗ ಮಾಡುವಂತಹ ಮನಸ್ಸುಳ್ಳವರಿಗೆ ಏನೂ ಕೊರತೆ ಇಲ್ಲ. ಸಹೋದರ, ಸಹೋದರಿಯರೇ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ರಾಮಸೇತು, ಹಿಮಾಚಲ ಸೇರಿದಂತೆ ಇಡೀ ಹಿಂದೂಸ್ತಾನ್ ಸ್ವಾತಂತ್ರ್ಯಗಳಿಸುವ ಕನಸಿನ ಸಾಕಾರಕ್ಕೆ ಒಟ್ಟಾಗಿ ಹೋರಾಡಿತ್ತು. ಇಂದು ನಾವು ಏಕೈಕ ಕನಸಿನ ಸಾಧನೆಗೆ ಎಲ್ಲರೂ ಒಂದಾಗಿ ಕಾರ‍್ಯಪ್ರವೃತ್ತರಾಗುವ ಅಗತ್ಯವಿದೆ ಮತ್ತು ಆ ಮೂಲಕ ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆದು ದೇಶವನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿದೆ.
ಮುಂದಿನ ದಿನಗಳಲ್ಲಿ ದೇಶಾದ್ಯಂತ ತಿರಂಗಾ ಯಾತ್ರೆ ನಡೆಯಲಿದೆ. ಈ ತ್ರಿವರ್ಣ ಧ್ವಜ ನಮ್ಮೆಲ್ಲರನ್ನು ಒಂದುಗೂಡಿಸಿದ್ದು, ಶೌರ್ಯ, ಬಲಿದಾನವನ್ನು ನೆನಪಿಸಿ, ಭಾರತದ ಹಣೆಬರಹವನ್ನು ಮತ್ತೆ ಬರೆಯಲು ನಮಗೆ ಸ್ಫೂರ್ತಿ ನೀಡುತ್ತದೆ. ರಾಷ್ಟ್ರಧ್ವಜಕ್ಕಿಂತ ನಮಗೆ ಸ್ಫೂರ್ತಿ ತುಂಬುವ ಶ್ರೇಷ್ಠ ವಸ್ತು ಇನ್ಯಾವುದಿದೆ ಅಲ್ಲವೇ? 70ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ತ್ರಿವರ್ಣಧ್ವಜ ದೇಶದ ಎಲ್ಲ ಗ್ರಾಮ, ನಗರ ಮತ್ತು ಪಟ್ಟಣಗಳಲ್ಲಿ ರಾಷ್ಟ್ರಭಕ್ತಿಯನ್ನು ಪಸರಿಸುತ್ತದೆ. ದೇಶಕ್ಕಾಗಿ ನಾವು ಪ್ರಾಣ ನೀಡುವಂತಹ ಅವಕಾಶ ಇಲ್ಲವಾದರೂ ಸಹ ಏನಾದರು ಮಾಡಬೇಕು ಎನ್ನುವ ತುಡಿತದ ವಾತಾವರಣ ನಿರ್ಮಿಸುತ್ತದೆ. ನನ್ನ ದೇಶವಾಸಿಗಳೆ, ಇಡೀ ದೇಶ ಹೊಸ ಸ್ಫೂರ್ತಿ ಮತ್ತು ಓಜಸ್ಸಿನೊಂದಿಗೆ ಮುನ್ನಡೆಯುತ್ತಿದೆ. 70ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ದೇಶದಲ್ಲಿ ಹೊಸ ಸ್ವಪ್ರೇರಣೆ ಜಾಗೃತವಾಗಿ ಉತ್ಸಾಹದ ಅಲೆ ಸೃಷ್ಟಿಯಾಗುತ್ತಿದೆ.
ನನಗೆ ಇಂದು ಇಲ್ಲಿ ಒಂದು ಅವಕಾಶ ಸಿಕ್ಕಿದೆ. ವಿಶೇಷವಾಗಿ ಮಧ್ಯಪ್ರದೇಶ ಸರ್ಕಾರ, ಜಿಲ್ಲಾಡಳಿತ ಹಾಗೂ ಸರ್ಕಾರದ ಎಲ್ಲ ಹಿರಿಯ ಹಾಗೂ ಕಿರಿಯ ಅಧಿಕಾರಿಗಳಿಗೆ ನಾನು ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಹೇಳಬಯಸುತ್ತೇನೆ. ನಾನು ಇಲ್ಲಿ ಬಂದಿಳಿಯುವ ಮುನ್ನ, ಇಲ್ಲಿ ಸುತ್ತ ಜಲಾವೃತಗೊಂಡಿದ್ದನ್ನು ಮತ್ತು ಪ್ರತಿಕೂಲ ಸಂದರ್ಭಗಳನ್ನು ಗಮನಿಸಿದೆ. ನೀವು ಕಾರ್ಯೋನ್ಮುಖವಾಗಿ ನನ್ನ ಹೃದಯದಲ್ಲಿ ಅದು ಕೇವಲ ಊಹೆಯಷ್ಟೇ ಎನ್ನುವ ರೀತಿಯಲ್ಲಿ ಬದಲಾಯಿಸಿದ್ದೀರಿ. ನೀವು ರಾತ್ರಿಯಿಡೀ ದುಡಿದಿದ್ದೀರಿ, ಹಾಗಾಗಿಯೇ ಇದು ಸಾಧ್ಯವಾಗಿದೆ. ನೀವ್ಯಾರಾದರೂ ಅನಾರೋಗ್ಯ ಪೀಡಿತರಾದರೆ ಎಂಬ ಆತಂಕ ನನಗಿದೆ. ಚಂದ್ರಶೇಖರ ಆಜಾದ್ ಅವರು ನಮಗೆ ಅತ್ಯಂತ ಸ್ಫೂರ್ತಿಯ ವ್ಯಕ್ತಿಯಾಗಿದ್ದಾರೆ. ನೀವು ನಿದ್ದೆಯನ್ನೆಲ್ಲ ಬದಿಗೊತ್ತಿ, ಮಳೆಯಲ್ಲಿಯೇ ಸಣ್ಣ ಜಾಗದಲ್ಲಿ ಕಡಿಮೆ ಆಹಾರ ಸಾಧ್ಯತೆಗಳಿರುವಲ್ಲಿ ಕೆಲಸ ಮಾಡಿದ್ದೀರಿ, ಇದೇ ನಮ್ಮ ರಾಷ್ಟ್ರದ ವಿಶಿಷ್ಟ ಸಾಮರ್ಥ್ಯವಾಗಿದೆ.
ಚಂದ್ರಶೇಖರ ಆಜಾದ್ ಅವರ ಜನ್ಮಸ್ಥಳದ ಈ ನೆಲವನ್ನು ಅವಿರತವಾಗಿ ಶ್ರಮಿಸಿ ಸ್ವಚ್ಛಗೊಳಿಸಿದ್ದಕ್ಕಾಗಿ ನಾನು ನನ್ನ ಹೃದಯಾಂತರಾಳದಿಂದ ಅಭಿನಂದನೆಗಳನ್ನು ಹೇಳಬಯಸುತ್ತೇನೆ. ಜನತಾ ಜನಾರ್ಧನ ರಿಗೆ ನನ್ನ ಪ್ರಣಾಮಗಳು. ನೀವೆಲ್ಲಾ ನೀರಿನಲ್ಲಿ ನಿಂತಿರುವುದನ್ನು ನಾನು ಕಾಣುತ್ತಿದ್ದೇನೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೀರ್ಘಕಾಲ ನೀರಿನಲ್ಲಿಯೇ ನಿಂತಿದ್ದ ನೆನಪಾಗುತ್ತದೆ. ಇದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚಂದ್ರಶೇಖರ ಆಜಾದ್ ಅವರಿಗೆ ನಮನ ಸಲ್ಲಿಸಲು ಬೇರೇನಿದೆ.
ನೀವು ಸಲ್ಲಿಸಿದ ಪ್ರಣಾಮಗಳಿಗೆ ಸ್ಪೂರ್ತಿಯಲ್ಲಿ ಚಂದ್ರಶೇಖರ ಆಜಾದ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಹಲವು ತೊಂದರೆಗಳನ್ನು ಅನುಭವಿಸಿ, ಇಲ್ಲಿಗೆ ಬಂದಿದ್ದ ಅವರು, ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರನ್ನು ತಲುಪಿದ್ದರು. ಅವರು ತಮ್ಮ ಯೌವನದ ಬಹುತೇಕ ಸಮಯವನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾರಾಗೃಹದಲ್ಲಿ ಕಳೆದರು. ಜೀವನದುದ್ದಕ್ಕೂ ಸಾಮಾಜಿಕ ಕಲ್ಯಾಣದ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು, ಸ್ವಾತಂತ್ರ್ಯದ ಮಂತ್ರವನ್ನು ಪಠಿಸಿದರು. ಶ್ರೇಷ್ಠ ವ್ಯಕ್ತಿಗಳು ಪಾಲಿಸಿದ ಅಹಿಂಸೆ ಮತ್ತು ಶಸ್ತ್ರ ಕ್ರಾಂತಿಯಿಂದಾಗಿ ನಮಗೆ ಈ ಸ್ವಾತಂತ್ರ್ಯ ಲಭಿಸಿದೆ. ಅವರಿಗೆಲ್ಲಾ ನನ್ನ ಪ್ರಣಾಮಗಳು ಮತ್ತು ಎಲ್ಲರಿಗೂ ಧನ್ಯವಾದಗಳು.
ತುಂಬಾ ಧನ್ಯವಾದಗಳು
आज अगस्त क्रांति दिवस है। महात्मा गाँधी ने 'क्विट इंडिया' का आह्वान किया था : PM @narendramodi
— PMO India (@PMOIndia) August 9, 2016
Let us remember those who gave their lives so that we can breathe the air of freedom: PM @narendramodi
— PMO India (@PMOIndia) August 9, 2016
It is my privilege to come here, the birthplace of Chandra Shekhar Azad. People like him inspire us to work for the nation: PM @narendramodi
— PMO India (@PMOIndia) August 9, 2016
आजादी के लिए लड़ने वालों को देश के लिए मरने का सौभाग्य मिला। हमें वो सौभाग्य नहीं मिला : PM @narendramodi
— PMO India (@PMOIndia) August 9, 2016
हमें देश के लिए मरने का मौका नहीं मिला, तो कम से कम देश के लिए जीने का मौका तो मिला है : PM @narendramodi
— PMO India (@PMOIndia) August 9, 2016
So many years after Independence also why are so many village lacking access to electricity: PM @narendramodi in Madhya Pradesh
— PMO India (@PMOIndia) August 9, 2016
जब शाम के अंधेरे के बाद जिंदगी सो जाती है, तो बहुत से लोग याद करते होंगे कि हमें बिजली कब मिलेगी : PM @narendramodi in Madhya Pradesh
— PMO India (@PMOIndia) August 9, 2016
देश आगे बढ़ता है जन शक्ति से, जन शक्ति के सपनों से, जन शक्ति के पुरुषार्थ से, तब देश आगे बढ़ता है : PM @narendramodi in Madhya Pradesh
— PMO India (@PMOIndia) August 9, 2016
Every Indian desires to go to Kashmir, every Indian loves Kashmir: PM @narendramodi
— PMO India (@PMOIndia) August 9, 2016
गुमराह हुए कुछ मुट्ठी भर लोग कश्मीर की महान परंपरा को कहीं न कहीं ठेस पहुंचा रहे हैं : PM @narendramodi
— PMO India (@PMOIndia) August 9, 2016
हम कश्मीर की युवा पीढ़ी के लिए रोजगार के अवसर मुहैया कराना चाहते हैं : PM @narendramodi
— PMO India (@PMOIndia) August 9, 2016
मैं कश्मीर के युवकों को आह्वान करता हूं, आइए हम मिलकर कश्मीर को दुनिया का स्वर्ग बनाने के सपने को लेकर चलें : PM @narendramodi
— PMO India (@PMOIndia) August 9, 2016
Kashmir wants peace. The citizen of Kashmir wants to earn more money through tourism: PM @narendramodi
— PMO India (@PMOIndia) August 9, 2016
Be it the J&K Government under Mehbooba Mufti or the Central Government, we are finding solution to all problems through development: PM
— PMO India (@PMOIndia) August 9, 2016
आज समय की मांग की है कि हम एक देश के रूप में एक संकल्प को लेकर राष्ट्र को नई ऊंचाइयों पर पहुंचाने के लिए आगे बढ़ें : PM @narendramodi
— PMO India (@PMOIndia) August 9, 2016
तिरंगा झंडा हम सबको जोड़ता है, बलिदानियों की याद दिलाता है, भारत के भाग्य को बदलने की प्रेरणा देता है : PM @narendramodi
— PMO India (@PMOIndia) August 9, 2016
Remembering our brave freedom fighters. https://t.co/4fvbC3jwZw
— PMO India (@PMOIndia) August 9, 2016
via NMApp pic.twitter.com/PdsLN3Mjn9
Saluting a courageous personality whose life was devoted to India's independence. https://t.co/4fvbC3jwZw
— PMO India (@PMOIndia) August 9, 2016
via NMApp pic.twitter.com/ZaJTK2iUOJ
We remember with pride the innumerable people from various walks of life who participated in Quit India movement & fought for our freedom.
— Narendra Modi (@narendramodi) August 9, 2016
भारत मां के वीर सपूत चंद्रशेखर आजाद के जन्म स्थल पर। pic.twitter.com/J863qsgssP
— Narendra Modi (@narendramodi) August 9, 2016
Thanks to all those people who joined the public meeting in Bhabra for launch of #YaadKaroKurbani. pic.twitter.com/834WZUY3va
— Narendra Modi (@narendramodi) August 9, 2016
The Tricolour unites us, reminds of the sacrifices made by great women & men. It inspires us to work for India. pic.twitter.com/ZGp0bWARfc
— Narendra Modi (@narendramodi) August 9, 2016
We did not have the privilege of dying for India but we have a chance to live for India & work for India’s growth. https://t.co/P5S5rBGPOd
— Narendra Modi (@narendramodi) August 9, 2016
देश आगे बढ़ता है जन शक्ति से, जन शक्ति के सपनों से, जन शक्ति के पुरुषार्थ से।https://t.co/0BqIWrFV65
— Narendra Modi (@narendramodi) August 9, 2016
Every Indian loves Kashmir. Kashmir wants peace. We want to create maximum job opportunities for Kashmir’s youth.https://t.co/KmXdTvAiJ7
— Narendra Modi (@narendramodi) August 9, 2016
गुमराह हुए कुछ मुट्ठी भर लोग कश्मीर की महान परंपरा को ठेस नहीं पहुंचा सकते।https://t.co/bvH30USV66
— Narendra Modi (@narendramodi) August 9, 2016