ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವೇತನ ಹಾಗೂ ಪಿಂಚಣಿ ಲಾಭಕ್ಕೆ ಸಂಬಂಧಿಸಿದ 7ನೇ ಕೇಂದ್ರೀಯ ವೇತನ ಆಯೋಗ (ಸಿಪಿಸಿ)ದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ತನ್ನ ಅನುಮೋದನೆ ನೀಡಿದೆ.ಇದು 01.01.2016.ರಿಂದ ಜಾರಿಗೆ ಬರಲಿದೆ.
ಈ ಹಿಂದೆ ನೌಕರರು 5ನೇ ಸಿಪಿಸಿ ಸಂದರ್ಭದಲ್ಲಿ ಅದರ ಶಿಫಾರಸುಗಳ ಜಾರಿಗಾಗಿ 19 ತಿಂಗಳುಗಳ ಕಾಲ ಮತ್ತು 6ನೇ ಸಿಪಿಸಿ ಶಿಫಾರಸುಗಳ ಜಾರಿಗಾಗಿ 32 ತಿಂಗಳುಗಳ ಕಾಲ ಕಾದಿದ್ದರು. ಆದರೆ ಈ ಬಾರಿ 7ನೇ ಸಿಪಿಸಿ ಶಿಫಾರಸುಗಳನ್ನು ವಾಯಿದೆಯ 6 ತಿಂಗಳೊಳಗಾಗಿ ಅನುಷ್ಠಾನ ಮಾಡಲಾಗುತ್ತಿದೆ.
ಈ ಹಿಂದೆ ಬಾಕಿ ವೇತನದ ಭಾಗವನ್ನು ಮುಂದಿನ ಹಣಕಾಸು ವರ್ಷದಲ್ಲಿ ನೀಡುತ್ತಿದ್ದರು ಆದರೆ ಈ ಬಾರಿ ವೇತನ ಬಾಕಿ ಮತ್ತು ಪಿಂಚಣಿ ಲಾಭವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ(2016-17)ಯೇ ಪಾವತಿ ಮಾಡಲೂ ಸಂಪುಟ ನಿರ್ಧರಿಸಿದೆ. ಈ ಶಿಫಾರಸುಗಳು 1 ಕೋಟಿ ಉದ್ಯೋಗಿಗಳಿಗೆ ಲಾಭ ತರಲಿದೆ. ಇದಲ್ಲಿ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 53 ಲಕ್ಷ ಪಿಂಚಣಿದಾರರು ಸೇರಿದ್ದಾರೆ. ಈ ಪೈಕಿ 14 ಲಕ್ಷ ಉದ್ಯೋಗಿಗಳು ಹಾಗೂ 18 ಲಕ್ಷ ಪಿಂಚಣಿದಾರರು ಸೇನಾ ಪಡೆಯವರಾಗಿದ್ದಾರೆ.
ಮುಖ್ಯಾಂಶಗಳು:
1. ಹಾಲಿ ಇರುವ ಪೇ ಬಾಂಡ್ ಮತ್ತು ಗ್ರೇಡ್ ಪೇ ವ್ಯವಸ್ಥೆಯನ್ನು ಕೈ ಬಿಡಲಾಗಿದ್ದು, ಆಯೋಗ ಶಿಫಾರಸು ಮಾಡಿರುವ ಹೊಸ ಪೇ ಮ್ಯಾಟ್ರಿಕ್ಸ್ ಅನ್ನು ಅನುಮೋದಿಸಲಾಗಿದೆ. ಉದ್ಯೋಗಿಯ ದರ್ಜೆ, ಇಲ್ಲಿಯವರೆಗೆ ಅವರ ಗ್ರೇಡ್ ಪೇ ನಿರ್ಧರಿಸುತ್ತಿತ್ತು, ಈಗ ಅದು ಪೇ ಮ್ಯಾಟ್ರಿಕ್ಸ್ ನ ಮಟ್ಟದಿಂದ ನಿರ್ಧರಿತವಾಗುತ್ತದೆ. ನಾಗರಿಕರಿಗೆ, ರಕ್ಷಣಾ ಸಿಬ್ಬಂದಿಗೆ ಮತ್ತು ಸೇನಾ ಶುಶ್ರೂಷಕಿಯರ ಸೇವೆಗೆ ಪ್ರತ್ಯೇಕ ವೇತನ ಮೆಟ್ರಿಕ್ಸ್ ರೂಪಿಸಲಾಗಿದೆ. ಮ್ಯಾಟ್ರಿಕ್ ಗಳ ಹಿಂದಿರುವ ತರ್ಕ ಮತ್ತು ತತ್ವ ಒಂದೇ ಆಗಿದೆ.
2. ಹಾಲಿ ಇರುವ ಎಲ್ಲ ಹಂತಗಳೂ ಈಗ ಹೊಸ ರಚನೆಯಲ್ಲಿ ಒಂದುಗೂಡಿವೆ. ಯಾವುದೇ ಹೊಸ ಮಟ್ಟವನ್ನು ಅಳವಡಿಸಿಲ್ಲ ಅಥವಾ ಯಾವುದೇ ಮಟ್ಟವನ್ನು ಕೈಬಿಟ್ಟಿಲ್ಲ. ಹೆಚ್ಚಿನ ಪಾತ್ರ, ಜವಾಬ್ದಾರಿ ಮತ್ತು ಹೊಣೆಗಾರಿಕೆ ವೇತನ ಶ್ರೇಣಿಯ ಪ್ರತಿ ಮಟ್ಟದಲ್ಲಿ ಕನಿಷ್ಠ ವೇತನ ನಿಗದಿಗೆ ಶ್ರೇಣಿಯ ಪ್ರತಿ ಮಟ್ಟದಲ್ಲೂ ಶ್ರೇಣೀಕೃತವಾಗಿ ಹೆಚ್ಚಿನ ಪಾತ್ರ, ಜವಾಬ್ದಾರಿ ಮತ್ತು ಹೊಣೆಗಾರಿಕೆ ಅವಲಂಬಿಸಿ ತರ್ಕಬದ್ಧ ಸೂಚ್ಯಂಕವನ್ನು ಅನುಮೋದಿಸಲಾಗಿದೆ.
3. ಕನಿಷ್ಠ ವೇತನವನ್ನು ಮಾಸಿಕ ರೂ. 7 ಸಾವಿರದಿಂದ 18 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಹೊಸದಾಗಿ ಕೆಲಸಕ್ಕೆ ಸೇರುವ ಕೆಳಗಿನ ಮಟ್ಟದ ಉದ್ಯೋಗಿ ಕೂಡ 18 ಸಾವಿರ ರೂಪಾಯಿ ಪಡೆಯಲಿದ್ದರೆ, ಹೊಸದಾಗಿ ಸೇರುವ ಪ್ರಥಮ ದರ್ಜೆ ಅಧಿಕಾರಿ 56,100 ರೂಪಾಯಿ ಮಾಸಿಕ ವೇತನ ತೆಗೆದುಕೊಳ್ಳಲಿದ್ದಾರೆ. ಇದು 1:3.12 ಅನುಪಾತದಲ್ಲಿ ಪ್ರತಿಫಲಿಸಲಿದ್ದು, ಇದು ನೇರವಾಗಿ ನೇಮಕಗೊಂಡ ಪ್ರಥಮ ದರ್ಜೆ ಅಧಿಕಾರಿಗಳ ವೇತನ ಸೂಚಿಸುತ್ತದೆ. ಇದು ಕೆಳ ಮಟ್ಟದಲ್ಲಿ ಹೊಸದಾಗಿ ಸೇರಿದ ಸಿಬ್ಬಂದಿಯ ವೇತನದ ಮೂರು ಪಟ್ಟು ಹೆಚ್ಚಾಗಿರುತ್ತದೆ.
4. ವೇತನ ಮತ್ತು ಪಿಂಚಣಿಯ ಪರಿಷ್ಕರಣೆ ಉದ್ದೇಶಕ್ಕಾಗಿ, ಫಿಟ್ ಮೆಂಟ್ ಅಂಶವಾದ 2.57 ಎಲ್ಲ ಮ್ಯಾಟ್ರಿಕ್ಸ್ ನ ಎಲ್ಲ ಮಟ್ಟಕ್ಕೂ ಅನ್ವಯಿಸುತ್ತದೆ.
5. ವೇತನ ಹೆಚ್ಚಳದ ದರವನ್ನು ಶೇ.3ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ಉನ್ನತ ಮೂಲ ವೇತನದ ಹಿನ್ನೆಲೆಯಲ್ಲಿ ಇದು ಭವಿಷ್ಯದಲ್ಲಿ ಉದ್ಯೋಗಿಗಳಿಗೆ ಲಾಭ ತರಲಿದೆ. ಭವಿಷ್ಯದಲ್ಲಿ ಅವರು ಪಡೆಯುವ ವಾರ್ಷಿಕ ವೇತನ ಹೆಚ್ಚಳ ಪ್ರಸಕ್ತ ಇರುವುದಕ್ಕಿಂತ 2.57ರಷ್ಟು ಹೆಚ್ಚಳವಾಗಲಿದೆ.
6. ಸಂಯೋಜಿತ ಸಶಸ್ತ್ರ ಪೊಲೀಸ್ ಪಡೆ (ಸಿ.ಎ.ಪಿ.ಎಫ್.) ಸಹವರ್ತಿಗಳಿಗೆ ಗರಿಷ್ಠ ಸಮಾನವಾದ ಮಟ್ಟಗಳಿಗೆ ಸಮಾನತೆ ತರುವ ಸಲುವಾಗಿ 13ಎ (ಬ್ರಿಗೇಡಿಯರ್) ಮಟ್ಟಕ್ಕೆ ಬದಲಾವಣೆ ಮತ್ತು 12ಎ (ಲೆಫ್ಟಿನೆಂಟ್ ಕರ್ನಲ್) ಮಟ್ಟದಲ್ಲಿ ಹೆಚ್ಚುವರಿ ಹಂತ ಅಳವಡಿಕೆ, 13 (ಕರ್ನಲ್) ಮತ್ತು 13 ಎ (ಬ್ರಿಗೇಡಿಯರ್) ನಲ್ಲಿ ಹೆಚ್ಚಳ ಮಾಡುವ ಮೂಲಕ ಸಂಪುಟವು ತರ್ಕಬದ್ದವಾದ ಸೂಚ್ಯಂಕವನ್ನು ಬದಲಾವಣೆ ಮಾಡುವ ಮೂಲಕ ರಕ್ಷಣಾ ಪೇ ಮೆಟ್ರಿಕ್ಸ್ ನಲ್ಲಿ ಮತ್ತಷ್ಟು ಸುಧಾರಣೆಗಳನ್ನು ಅನುಮೋದಿಸಿದೆ.
7. ರಕ್ಷಣೆ ಮತ್ತು ಸಂಯೋಜಿತ ಸಶಸ್ತ್ರ ಪೊಲೀಸ್ ಪಡೆ (ಸಿ.ಎ.ಪಿ.ಎಫ್.) ಸಿಬ್ಬಂದಿ ಸೇರಿದಂತೆ ನೌಕರರಿಗೆ ಪರಿಣಾಮ ಬೀರುವ ಇತರ ನಿರ್ಧಾರಗಳು:
· ಗ್ರಾಚ್ಯುಯಿಟಿ ಮಿತಿ 10ರಿಂದ 20 ಲಕ್ಷಕ್ಕೆ ಏರಿಕೆ. ಡಿ.ಎ. ಶೇ.50ರಷ್ಟು ಏರಿದರೆ ಗ್ರಾಚ್ಯುಯಿಟಿ ಮಿತಿ ಶೇ.25 ಏರಿಕೆ.
· ಎಕ್ಸ್ ಗ್ರೇಷಿಯಾ ಪರಿಹಾರ ಪಾವತಿಗೆ ಸಮಾನ ನಿಯಮ. ನಾಗರಿಕ ಮತ್ತು ರಕ್ಷಣಾ ಪಡೆಗಳ ಸಿಬ್ಬಂದಿಯ ಹತ್ತಿರದ ಸಂಬಂಧಿಕರಿಗೆ ನೀಡಲಾಗುವ ಒಂದೇ ಬಾರಿ ನೀಡುವ ಪರಿಹಾರದ ಹಾಲಿ ಇರುವ ದರವನ್ನು ವಿವಿಧ ವರ್ಗಗಳಿಗೆ. 10-20 ಲಕ್ಷ ರೂ.ನಿಂದ 25-45 ಲಕ್ಷ ರೂ.ವರೆಗೆ ಹೆಚ್ಚಳ.
· ಸೇನಾ ಸೇವೆಗಳ ದರ ರೂ1000, 2000, 4200 ಮತ್ತು 6000 ದಿಂದ 3600, 5200, 10800 ಮತ್ತು 15500ರವರೆಗೆ ಅನುಕ್ರಮವಾಗಿ ರಕ್ಷಣಾ ಪಡೆ ಸಿಬ್ಬಂದಿಯ ವಿವಿಧ ವರ್ಗಗಳಿಗೆ ವೇತನ ಪರಿಷ್ಕರಣೆ.
· ಅಂತಿಮ ಗ್ರಾಚ್ಯುಯಿಟಿಯು 7 ರಿಂದ 10 ವರ್ಷಗಳ ಅವಧಿಯಲ್ಲಿ ಸಶಸ್ತ್ರ ಪಡೆ ಸೇವೆಯಿಂದ ನಿರ್ಗಮಿಸಲು ಅವಕಾಶ ನೀಡಿದ ಕಮಿಷನ್ಡ್ ಅಧಿಕಾರಿಗಳ ಅಲ್ಪ ಸೇವೆಗೆ 10.5 ತಿಂಗಳ ಪರಿಗಣಿಸಬಹುದಾದ ಸಂಬಳಕ್ಕೆ ಸಮಾನವಾಗಿರುತ್ತದೆ.
· ಆಸ್ಪತ್ರೆ ರಜೆ, ವಿಶೇಷ ಅಂಗವೈಕಲ್ಯತೆ ರಜೆ ಮತ್ತು ಅನಾರೋಗ್ಯದ ರಜೆಗಳನ್ನು ಸಂಯುಕ್ತ ಹೊಸ ಮಟ್ಟದಲ್ಲಿ ಅಂತರ್ಗತಗೊಳಿಸಿದ್ದು ಅದಕ್ಕೆ ಕೆಲಸಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಗಾಯದ ರಜೆ ಎಂದು ಹೆಸರಿಸಲಾಗಿದೆ. (ಡಬ್ಲ್ಯುಆರ್.ಐ.ಎಲ್.). ಸಂಪೂರ್ಣ ವೇತನ ಮತ್ತು ಭತ್ಯೆಗಳನ್ನು ಡಬ್ಲ್ಯುಆರ್.ಐ.ಎಲ್ ಖಾತೆಯಲ್ಲಿ ಆಸ್ಪತ್ರೆಯಲ್ಲಿರುವ ಪೂರ್ಣ ಅವಧಿಗೆ ಎಲ್ಲ ಉದ್ಯೋಗಿಗಳಿಗೂ ಮಂಜೂರು ಮಾಡಲಾಗುತ್ತದೆ.
8. ಮನೆ ನಿರ್ಮಾಣ ಸಾಲದ ಮಿತಿಯನ್ನು ರೂ.7.50 ಲಕ್ಷದಿಂದ 25 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲು ಆಯೋಗ ಮಾಡಿದ್ದ ಶಿಫಾರಸ್ಸನ್ನು ಸಂಪುಟವು ಅನುಮೋದಿಸಿದೆ. ನೌಕರರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನಾಲ್ಕು ಬಡ್ಡಿ ರಹಿತ ಸಾಲಗಳನ್ನು ಅಂದರೆ ವೈದ್ಯಕೀಯ ಚಿಕಿತ್ಸೆಯ ಸಾಲ, ಪ್ರವಾಸ/ವರ್ಗಾವಣೆಯ ಟಿ.ಎ, ಮೃತಪಟ್ಟ ಉದ್ಯೋಗಿಯ ಕುಟುಂಬದವರ ಟಿಎ ಮತ್ತು ಎಲ್.ಟಿ.ಸಿ.ಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಉಳಿದ ಎಲ್ಲ ಬಡ್ಡಿ ರಹಿತ ಸಾಲಗಳನ್ನು ರದ್ದು ಮಾಡಲಾಗಿದೆ.
9. ಕೇಂದ್ರ ಸರ್ಕಾರಿ ನೌಕರರ ಗುಂಪು ವಿಮೆ ಯೋಜನೆ (ಸಿಜಿಇಜಿಐಎಸ್)ಯ ಮಾಸಿಕ ಕೊಡುಗೆಯನ್ನು ತೀವ್ರವಾಗಿ ಹೆಚ್ಚಿಸುವ ಕುರಿತು ಆಯೋಗ ಮಾಡಿದ್ದ ಶಿಫಾರಸ್ಸನ್ನು ಒಪ್ಪಿಕೊಳ್ಳದಿರಲು ಸಂಪುಟ ನಿರ್ಧರಿಸಿದೆ. ಹಾಲಿ ಇರುವ ಮಾಸಿಕ ಕೊಡುಗೆ ದರಗಳೇ ಮುಂದುವರಿಯುತ್ತವೆ. ಇದರಿಂದ ಕೆಳ ಮಟ್ಟದ ನೌಕರರು ಮನೆಗೆ ತೆಗೆದುಕೊಂಡು ಹೋಗುವ ವೇತನದಲ್ಲಿ ರೂ.1470 ಹೆಚ್ಚಳವಾಗಲಿದೆ. ಆದಾಗ್ಯೂ, ನೌಕರರ ಸಾಮಾಜಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟವು ಹಣಕಾಸು ಸಚಿವಾಲಯಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಕಂತು ಮತ್ತು ಹೆಚ್ಚಿನ ವ್ಯಾಪ್ತಿಯ ಪರಿಹಾರದ ಕಸ್ಟಮೈಸ್ಡ್ ಗುಂಪು ವಿಮೆ ಯೋಜನೆ ರೂಪಿಸುವಂತೆ ಸೂಚಿಸಿದೆ.
10. ಆಯೋಗವು ಪಿಂಚಣಿ ಮತ್ತು ಸಂಬಂಧಿತ ಲಾಭಕ್ಕೆ ಸಂಬಂಧಿಸಿದಂತೆ ಮಾಡಿದ್ದ ಸಾಮಾನ್ಯ ಶಿಫಾರಸುಗಳನ್ನು ಸಂಪುಟ ಅನುಮೋದಿಸಿದೆ. ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಯೋಗ ಶಿಫಾರಸು ಮಾಡಿದ್ದ ಎರಡು ಆಯ್ಕೆಗಳನ್ನೂ ಅನುಷ್ಠಾನದಲ್ಲಿ ಅವುಗಳ ಕಾರ್ಯಸಾಧ್ಯತೆಗೆ ಷರತ್ತಿಗೆ ಒಳಪಟ್ಟು ಒಪ್ಪಿಕೊಳ್ಳಲಾಗಿದೆ. 2.57ರ ಫಿಟ್ ಮೆಂಟ್ ಅಂಶ ಆಧಾರಿತ ಪಿಂಚಣಿ ಪರಿಷ್ಕರಣೆಯ ಎರಡನೇ ಆಯ್ಕೆಯನ್ನು ತತ್ ಕ್ಷಣದಿಂದಲೇ ಜಾರಿಮಾಡಲಾಗುತ್ತದೆ. ಅನುಷ್ಠಾನದ ವೇಲೆ ಪ್ರಥಮ ಸೂತ್ರೀಕರಣದಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಅವುಗಳನ್ನು ಎದುರಿಸಲು ಸಮಿತಿಯೊಂದನ್ನು ರಚಿಸಲಾಗಿದೆ.ಇದರ ಜಾರಿಯು ಸರಿ ಎಂದು ಉದ್ದೇಶಿತ ಸಮಿತಿ ವರದಿಯನ್ನು 4 ತಿಂಗಳ ಒಳಗೆ ನೀಡಿದಲ್ಲಿ ಪ್ರಥಮ ಸೂತ್ರೀಕರಣವನ್ನು ಒಪ್ಪಿಕೊಳ್ಳಲಾಗುತ್ತದೆ.
11.ಆಯೋಗವು ಹಾಲಿ ಇರುವ ಒಟ್ಟು 196 ಭತ್ಯೆಗಳನ್ನು ಪರಿಶೀಲಿಸಿದೆ ಮತ್ತು ಅದನ್ನು ತರ್ಕಬದ್ದಗೊಳಿಸಲು 51 ಭತ್ಯೆಗಳನ್ನು ರದ್ದುಪಡಿಸಲು ಮತ್ತು 37 ಭತ್ಯೆಗಳನ್ನು ಬೇರೆಯದರಲ್ಲಿ ಸೇರಿಸಲು ಶಿಫಾರಸು ಮಾಡಿದೆ. ವಿಸ್ತೃತವಾದ ಶ್ರೇಣಿಯ ಪರಿಣಾಮ ಬೀರಬಲ್ಲಂಥ ಭತ್ಯೆಗಳಿಗೆ ಹಾಲಿ ಇರುವ ನಿಬಂಧನೆಗಳಲ್ಲಿ ಗಣನೀಯ ಬದಲಾವಣೆ ನೀಡಲಾಗಿದೆ. ಹೀಗಾಗಿ ಸಂಪುಟವು 7ನೇ ವೇತನ ಆಯೋಗ ಭತ್ಯೆಗೆ ಸಂಬಂಧಿಸಿದಂತೆ ನೀಡಿರುವ ಶಿಫಾರಸುಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಹಣಕಾಸು ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಿದೆ. ಈ ಸಮಿತಿಯು ಕಾಲಮಿತಿಯೊಳಗೆ ತನ್ನ ಕಾರ್ಯ ಮಾಡಲಿದೆ ಮತ್ತು 4 ತಿಂಗಳುಗಳ ಅವಧಿಯೊಳಗೆ ತನ್ನ ವರದಿಯನ್ನು ನೀಡಲಿದೆ. ಅಂತಿಮ ನಿರ್ಧಾರ ಕೈಗೊಳ್ಳುವರೆಗೆ ಎಲ್ಲ ಭತ್ಯೆಗಳನ್ನು ಹಾಲಿ ಇರುವ ದರದಲ್ಲಿಯೇ ನೀಡಲಾಗುತ್ತದೆ.
12. ಅಲ್ಲದೆ ಸಂಪುಟವು ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ (i) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್.) ಯ ಜಾರಿಯನ್ನು ಮುಖ್ಯವಾಹಿನಿಗೆ ತರಲು ಕ್ರಮಗಳ ಕುರಿತ ಸಲಹೆ ನೀಡಲು, ಮತ್ತು (ii) ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದರಿಂದ ಉಂಟಾಗಬಹುದಾದ ವೇತನ ತಾರತಮ್ಯಗಳ ಬಗ್ಗೆ ಗಮನ ಹರಿಸಲು.
13. ವೇತನದ ಹೊರತಾಗಿ, ಪಿಂಚಣಿ ಮತ್ತು ಇತರ ಶಿಫಾರಸುಗಳಿಗೆ ಸಂಪುಟ ಸಮ್ಮತಿ ನೀಡಿದೆ. ವೈಯಕ್ತಿಕ ಹುದ್ದೆ/ನಿರ್ದಿಷ್ಟ ಕಾಡರ್ ಮತ್ತು ಆಯೋಗವು ಒಮ್ಮತಕ್ಕೆ ಬರಲಾಗದ ಕೆಲವು ವಿಷಯಗಳನ್ನು ಮತ್ತು ಆಡಳಿತಾತ್ಮಕ ಸ್ವರೂಪದ ಸಮಸ್ಯೆಗಳನ್ನು ಸಂಬಂಧಿತ ಸಚಿವಾಲಯಗಳೇ ಪರಿಶೀಲಿಸಬೇಕು ಎಂದು ನಿರ್ಧರಿಸಲಾಗಿದೆ.
14. ಏಳನೇ ವೇತನ ಆಯೋಗವು ಅಂದಾಜು ಮಾಡಿರುವಂತೆ ಈ ಶಿಫಾರಸುಗಳನ್ನು ಅನುಷ್ಠಾನ ಮಾಡುವುದರಿಂದ 2016-17ರಲ್ಲಿ ರೂ.
1,02,100 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. 2015-16ನೇ ಸಾಲಿನ ಎರಡು ತಿಂಗಳುಗಳ ವೇತನ ಮತ್ತು ಪಿಂಚಣಿ ಬಾಕಿ ಪಾವತಿಯ ಕಾರಣದಿಂದಾಗಿ ರೂ. 12,133 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆಯೂ ಆಗಲಿದೆ.