Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

5 ನೇ ಭಾರತ-ಯುರೋಪಿಯನ್ ಒಕ್ಕೂಟ (ವರ್ಚುವಲ್) ಶೃಂಗಸಭೆ: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆರಂಭಿಕ ನುಡಿಗಳು


 

ಗೌರವಾನ್ವಿತರೇನಮಸ್ಕಾರ.

ಕೋವಿಡ್-19 ಕಾರಣದಿಂದಾಗಿ ಮಾರ್ಚ್ನಲ್ಲಿ ನಡೆಯಬೇಕಿದ್ದ ಭಾರತಯುರೋಪಿಯನ್ ಒಕ್ಕೂಟ (ಇಯುಶೃಂಗಸಭೆಯನ್ನು ನಾವು ಮುಂದೂಡಬೇಕಾಯಿತುಒಳ್ಳೆಯ ವಿಷಯವೆಂದರೆ ನಾವು ಇಂದು ವರ್ಚುವಲ್ ಮಾಧ್ಯಮದ ಮೂಲಕ ಭೇಟಿಯಾಗುತ್ತಿದ್ದೇವೆಮೊದಲನೆಯದಾಗಿಯುರೋಪಿನಲ್ಲಿ ಕೊರೊನಾ ವೈರಸ್ನಿಂದ ಉಂಟಾಗಿರುವ ನಷ್ಟಕ್ಕೆ ನನ್ನ ಸಂತಾಪಗಳುನಿಮ್ಮ ಆರಂಭಿಕ ನುಡಿಗಳಿಗೆ ಧನ್ಯವಾದಗಳುನಿಮ್ಮಂತೆಯೇನಾನು ಕೂಡ ಭಾರತ ಮತ್ತು ಇಯು ನಡುವಿನ ಸಂಬಂಧವನ್ನು ಗಾಢವಾಗಿಸಲು ಮತ್ತು ಬಲಪಡಿಸಲು ಬದ್ಧನಾಗಿದ್ದೇನೆಇದಕ್ಕಾಗಿ ನಾವು ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು.

ಇದಲ್ಲದೆನಿಗದಿತ ಸಮಯದಲ್ಲಿ ಕಾರ್ಯಗತಗೊಳಿಸಬಹುದಾದ ಕ್ರಿಯೆಆಧಾರಿತ ಕಾರ್ಯಸೂಚಿಯನ್ನು ರೂಪಿಸಬೇಕುಭಾರತ ಮತ್ತು ಇಯು ಸಹಜ ಸಹಯೋಗಿಗಳುನಮ್ಮ ಪಾಲುದಾರಿಕೆ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಉಪಯುಕ್ತವಾಗಿದೆಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ  ವಾಸ್ತವವು ಇನ್ನಷ್ಟು ಸ್ಪಷ್ಟವಾಗಿದೆ.

ಎರಡೂ ಕಡೆಯವರು ಪ್ರಜಾಪ್ರಭುತ್ವಬಹುತ್ವಒಳಗೊಳ್ಳುವಿಕೆಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಗೌರವಬಹುಪಕ್ಷೀಯತೆಸ್ವಾತಂತ್ರ್ಯ ಮತ್ತು ಪಾರದರ್ಶಕತೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆಕೋವಿಡ್-19 ನಂತರಆರ್ಥಿಕ ಕ್ಷೇತ್ರದಲ್ಲಿ ಜಾಗತಿಕವಾಗಿ ಹೊಸ ಸಮಸ್ಯೆಗಳು ಉದ್ಭವಿಸಿವೆಇದಕ್ಕಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರ ಅಗತ್ಯವಾಗಿದೆ.

ಇಂದುನಮ್ಮ ನಾಗರಿಕರ ಆರೋಗ್ಯ ಮತ್ತು ಸಮೃದ್ಧಿ ಎರಡೂ ಸವಾಲುಗಳನ್ನು ಎದುರಿಸುತ್ತಿವೆನಿಯಮ ಆಧಾರಿತ ಅಂತರರಾಷ್ಟ್ರೀಯ ಸಮುದಾಯದ ಮೇಲೆ ಅನೇಕ ರೀತಿಯ ಒತ್ತಡಗಳಿವೆಇಂತಹ ಸಂದರ್ಭದಲ್ಲಿಭಾರತಇಯು ಸಹಭಾಗಿತ್ವವು ಆರ್ಥಿಕ ಪುನರ್ನಿರ್ಮಾಣದಲ್ಲಿ ಮತ್ತು ಮಾನವ ಕೇಂದ್ರಿತ ಹಾಗೂ ಮಾನವೀಯತೆ ಕೇಂದ್ರಿತ ಜಾಗತೀಕರಣವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆಪ್ರಸ್ತುತ ಸವಾಲುಗಳ ಹೊರತಾಗಿಹವಾಮಾನ ಬದಲಾವಣೆಯಂತಹ ದೀರ್ಘಕಾಲೀನ ಸವಾಲುಗಳು ಭಾರತ ಮತ್ತು ಇಯು ಎರಡಕ್ಕೂ ಆದ್ಯತೆಯ ವಿಷಯಗಳಾಗಿವೆ.

ಭಾರತದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲುನಾವು ಯುರೋಪಿನಿಂದ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಹ್ವಾನಿಸುತ್ತೇವೆ ವರ್ಚುವಲ್ ಶೃಂಗಸಭೆಯ ಮೂಲಕ ನಮ್ಮ ಸಂಬಂಧಗಳು ವೇಗವನ್ನು ಪಡೆಯುತ್ತವೆ ಎಂದು ನಾನು ಭಾವಿಸುತ್ತೇನೆ.

  ಗೌರವಾನ್ವಿತರೇನಿಮ್ಮೊಂದಿಗೆ ಮಾತನಾಡಲು  ಅವಕಾಶ ದೊರಕಿದ್ದಕ್ಕೆ ಮತ್ತೊಮ್ಮೆ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೇನೆ.

***