ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡಿರುವ ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನಕ್ಕಾಗಿ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆಯಾದ ಪ್ರಗತಿಯ 45ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ, ಎಂಟು ಮಹತ್ವದ ಯೋಜನೆಗಳನ್ನು ಪರಿಶೀಲಿಸಲಾಯಿತು, ಇದರಲ್ಲಿ ನಗರ ಸಾರಿಗೆಯ ಆರು ಮೆಟ್ರೋ ಯೋಜನೆಗಳು ಮತ್ತು ರಸ್ತೆ ಸಂಪರ್ಕ ಮತ್ತು ಉಷ್ಣ ವಿದ್ಯುತ್ ಗಳಿಗೆ ಸಂಬಂಧಿಸಿದ ತಲಾ ಒಂದು ಯೋಜನೆಗಳು ಸೇರಿವೆ. ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನ ಆಗಲಿರುವ ಈ ಯೋಜನೆಗಳ ಸಂಯೋಜಿತ ವೆಚ್ಚವು ರೂ. 1.೦೦ ಲಕ್ಷ ಕೋಟಿ ಆಗಿರುತ್ತದೆ
ಯೋಜನೆಯ ಅನುಷ್ಠಾನದಲ್ಲಿ ಆಗುವ ವಿಳಂಬವು ವೆಚ್ಚವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸಾರ್ವಜನಿಕರಿಗೆ ಉದ್ದೇಶಿತ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುತ್ತದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳು ಮೊತ್ತ ಮೊದಲು ಗುರುತಿಸಬೇಕು ಎಂದು ವಿಷಯದ ಪ್ರಾಮುಖ್ಯತೆ ಕುರಿತು ಪ್ರಧಾನಮಂತ್ರಿಯವರು ಹೇಳಿದರು.
ಸಂವಾದದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಶೀಲಿಸಿದರು. ವಿಲೇವಾರಿಗೆ ತೆಗೆದುಕೊಂಡ ಸಮಯದ ಕಡಿತವನ್ನು ಪ್ರಧಾನಮಂತ್ರಿಯವರು ಗಮನಿಸಿದರು ಹಾಗೂ ಕುಂದುಕೊರತೆಗಳ ವಿಲೇವಾರಿಯ ಗುಣಮಟ್ಟಕ್ಕೂ ಅಧಿಕ ಒತ್ತು ನೀಡಿಲು ಪ್ರಧಾನಮಂತ್ರಿಯವರು ಸೂಚನೆ ನೀಡಿದರು
ಹೆಚ್ಚು ಹೆಚ್ಚು ನಗರಗಳು ಮೆಟ್ರೋ ಯೋಜನೆಗಳನ್ನು ಆದ್ಯತೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿ ಪರಿಗಣಿಸಿ, ಒಂದಡೆಯ ಯಶಸ್ಸುಗಳ ಅನುಭವಗಳಿಂದ ಉತ್ತಮ ಅಭ್ಯಾಸಕ್ರಮಗಳು ಮತ್ತು ಕಲಿಕೆಗಳನ್ನು ಆ ಯೋಜನೆಗಳು ಅನುಷ್ಠಾನದಲ್ಲಿರುವ ಅಥವಾ ಮುಖ್ಯ ಧಾರೆಯಲ್ಲಿರುವ ಇತರೇ ನಗರಗಳಿಗೆ ಅನುಭವ ಹಂಚಿಕೆಗಾಗಿ ಕಾರ್ಯಾಗಾರಗಳನ್ನು ನಡೆಸಲು ಪ್ರಧಾನಮಂತ್ರಿಯವರು ಸಲಹೆ ನೀಡಿದರು.
ಪರಿಶೀಲನೆಯ ಸಂದರ್ಭದಲ್ಲಿ, ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಯೋಜನೆ ಬಾಧಿತ ಕುಟುಂಬಗಳ ಸಮಯೋಚಿತ ಪುನರ್ವಸತಿ ಮತ್ತು ಪುನರ್ ನಿಯೋಜನೆಯ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಹೊಸ ಸ್ಥಳದಲ್ಲಿ ಗುಣಮಟ್ಟದ ಸೌಕರ್ಯಗಳನ್ನು ಒದಗಿಸುವ ಮೂಲಕ ಅಂತಹ ಕುಟುಂಬಗಳಿಗೆ ವಾಸಿಸಲು ಅನುಕೂಲವಾಗುವಂತೆ ನೋಡಿಕೊಳ್ಳಲು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನೂ ಕೂಡ ಸಭೆಯಲ್ಲಿ ಪರಿಶೀಲಿಸಿದರು. ಗುಣಮಟ್ಟದ ಮಾರಾಟಗಾರರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇಲ್ಛಾವಣಿಯ ಸ್ಥಾಪನೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಅವರು ಸೂಕ್ತ ನಿರ್ದೇಶನ ನೀಡಿದರು. ಸಾರ್ವಜನಿಕರಿಂದ ಹೆಚ್ಚು ಹೆಚ್ಚು ಬೇಡಿಕೆ ಉತ್ಪಾದನೆಯಿಂದ ಆರಂಭಗೊಂಡು ಮೇಲ್ಛಾವಣಿ ಸೌರಶಕ್ತಿಯ ಅನುಷ್ಠಾನ ಕಾರ್ಯಾಚರಣೆಯವರೆಗಿನ ಸಂಪೂರ್ಣ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಸಮಯವನ್ನು ಇನ್ನೂ ಕಡಿಮೆ ಮಾಡಲು ಅವರು ನಿರ್ದೇಶನ ನೀಡಿದರು. ಹಂತ ಹಂತವಾಗಿ ಗ್ರಾಮಗಳು, ಪಟ್ಟಣಗಳು ಮತ್ತು ನಗರಗಳಿಗೆ ಸಾಂದ್ರತೆ ಹೊಂದುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅವರು ರಾಜ್ಯಗಳಿಗೆ ನಿರ್ದೇಶನ ನೀಡಿದರು.
ಈ ತನಕದ ಒಟ್ಟು ಪ್ರಗತಿ ಸಭೆಗಳ 45ನೇ ಆವೃತ್ತಿಯವರೆಗೆ, ಒಟ್ಟಾಗಿ ಸುಮಾರು 363 ಯೋಜನೆಗಳು ಹಾಗೂ ಸುಮಾರು ರೂ. 19.12 ಲಕ್ಷ ಕೋಟಿ ಮೊತ್ತವನ್ನು ಪರಿಶೀಲಿಸಲಾಗಿದೆ.
*****