Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

28-01-2018ರಂದು ಮಾಡಿದ‘ಮನ್ ಕಿ ಬಾತ್’ – 40 ನೇ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ

ಇದು 2018 ರ ಮೊದಲ ಮನದ ಮಾತು.

2 ದಿನಗಳ ಹಿಂದೆಯಷ್ಟೇ ನಾವು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಇತಿಹಾಸದಲ್ಲೇ ಮೊದಲ ಬಾರಿಗೆ 10 ರಾಷ್ಟ್ರಗಳ ಮುಖ್ಯಸ್ಥüರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನನ್ನ ಪ್ರಿಯ ದೇಶವಾಸಿಗಳೇ, ಶ್ರಿಯುತ ಪ್ರಕಾಶ್ ತ್ರಿಪಾಠಿ ಅವರು ಓಚಿಡಿeಟಿಜಡಿಚಿಒoಜiಂಠಿಠಿ ನಲ್ಲಿ ಒಂದು ವಿಸ್ತøತವಾದ ಪತ್ರವನ್ನು ಬರೆದು, ತಮ್ಮ ಪತ್ರದಲ್ಲಿ ಬರೆದ ವಿಷಯಗಳನ್ನು ನಾನು ಅವಗಾಹನೆಗೆ ತೆಗೆದುಕೊಳ್ಳಲು ತುಂಬಾ ಒತ್ತಾಯಿಸಿದ್ದಾರೆ. ಅವರು ಹೀಗೆ ಬರೆದಿದ್ದಾರೆ, ಫೆಬ್ರವರಿ 1 ರಂದು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಪುಣ್ಯ ತಿಥಿ ಇದೆ. ಕೊಲಂಬಿಯಾದ ಗಗಯಾತ್ರೆಯ ದುರ್ಘಟನೆಯಲ್ಲಿ ಅವರು ನಮ್ಮನ್ನಗಲಿದರು. ಆದರೆ ವಿಶ್ವಾದ್ಯಂತ ಲಕ್ಷಾಂತರ ಯುವಜನತೆಗೆ ಪ್ರೇರಣೆಯನ್ನಿತ್ತರು. ಪ್ರಕಾಶ್ ತ್ರಿಪಾಠಿ ಅವರು ತಮ್ಮ ಪತ್ರವನ್ನು ಕಲ್ಪನಾ ಚಾವ್ಲಾ ಅವರ ಅಗಲುವಿಕೆಯಿಂದ ಪ್ರಾರಂಭಿಸಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಕಲ್ಪನಾ ಚಾವ್ಲಾ ಅವರನ್ನು ನಾವು ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡೆವು ಎಂಬುದು ತುಂಬಾ ದುಖಃದ ವಿಷಯ. ಆದರೆ ಅವರು ತಮ್ಮ ಜೀವನದ ಮೂಲಕ ವಿಶ್ವಕ್ಕೆ ಅದರಲ್ಲೂ ವಿಶೇಷವಾಗಿ ಭಾರತೀಯ ಯುವತಿಯರಿಗೆ ‘ಸ್ತ್ರೀ ಶಕ್ತಿಗೆ’ ಯಾವ ಎಲ್ಲೆಯೂ ಇಲ್ಲ ಎಂಬ ಸಂದೇಶವನ್ನು ನೀಡಿದರು. ಇಚ್ಛೆ ಮತ್ತು ಧೃಡವಾದ ಸಂಕಲ್ಪವಿದ್ದರೆ, ಸಾಧಿಸುವ ಛಲವಿದ್ದರೆ ಯಾವುದೂ ಅಸಂಭವವಲ್ಲ. ಇಂದು ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಯನ್ನು ಮೆರೆಯುತ್ತಿದ್ದಾರೆ ಮತ್ತು ದೇಶಕ್ಕೆ ಗೌರವ ತರುತ್ತಿದ್ದಾರೆ ಎಂಬುದನ್ನು ಕಂಡು ಬಹಳ ಸಂತೋಷವಾಗುತ್ತದೆ.

ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುವ ಗೌರವ, ಸಮಾಜದಲ್ಲಿ ಅವರ ಸ್ಥಾನಮಾನ ಮತ್ತು ಕೊಡುಗೆ, ವಿಶ್ವವೇ ಆಶ್ಚರ್ಯಚಕಿತವಾಗುವಂತೆ ಮಾಡಿದೆ. ಭಾರತದ ಮಹಿಳಾ ವಿದ್ವಾಂಸರ ಬಹು ದೊಡ್ಡ ಪರಂಪರೆಯಿದೆ. ವೇದಗಳ ರಚನೆ ಮತ್ತು ವಿಶ್ಲೇಷಣೆಯಲ್ಲಿ ಭಾರತದ ಬಹಳಷ್ಟು ಮಹಿಳಾ ವಿದ್ವಾಂಸರ ಕೊಡುಗೆ ಇದೆ. ಲೋಪಾಮುದ್ರಾ, ಗಾರ್ಗಿ, ಮೈತ್ರೆಯೀ ಹೀಗೆ ಹಲವಾರು ಹೆಸರುಗಳನ್ನು ಸ್ಮರಿಸಬಹುದು. ಇಂದು ನಾವು ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಎಂದು ಮಾತನಾಡುತ್ತೇವೆ, ಆದರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ಶಾಸ್ತ್ರ್ರಗಳಲ್ಲಿ, ಸ್ಕಂದ ಪುರಾಣದಲ್ಲಿ ಹೀಗೆ ಹೇಳಿದ್ದಾರೆ :-

ದಶಪುತ್ರ, ಸಮಾಕನ್ಯಾ, ದಶಪುತ್ರಾನ್ ಪ್ರವರ್ಧಯನ್

ಯತ್ ಫಲಂ ಲಭತೆ ಮತ್ರ್ಯ, ತತ್ ಲಭ್ಯಂ ಕನ್ಯಕೈಕಯಾ.

ಇದರರ್ಥ ಒಬ್ಬ ಮಗಳು 10 ಗಂಡು ಮಕ್ಕಳಿಗೆ ಸಮಾನ. 10 ಜನ ಸುಪುತ್ರರಿಂದ ದೊರೆಯುವ ಪುಣ್ಯ ಒಬ್ಬಳು ಮಗಳಿಂದ ಲಭ್ಯವಾಗುತ್ತದೆ ಎಂದು. ಇದು ನಮ್ಮ ಸಮಾಜದಲ್ಲಿ ಮಹಿಳೆಯ ಮಹತ್ವದ ಕುರಿತು ಅರಿವು ಮೂಡಿಸುತ್ತದೆ. ಆದ್ದರಿಂದಲೇ ನಮ್ಮ ಸಮಾಜದಲ್ಲಿ

ಸ್ತ್ರೀ ಗೆ ಶಕ್ತಿಯ ರೂಪ ಎನ್ನಲಾಗುತ್ತದೆ. ಈ ನಾರಿ ಶಕ್ತಿ, ಸಂಪೂರ್ಣ ದೇಶವನ್ನು, ಸಮಾಜವನ್ನು, ಕುಟುಂಬವನ್ನು ಏಕತೆಯ ಸೂತ್ರದಲ್ಲಿ ಬಂಧಿಸುತ್ತದೆ. ಅದು ವೈದಿಕ ಕಾಲದ ಪ್ರಾಜ್ಞರಾದ ಲೋಪಾಮುದ್ರಾ, ಗಾರ್ಗಿ, ಮೈತ್ರೇಯಿ ಅವರ ವಿದ್ವತ್ ಆಗಿರಲಿ ಅಥವಾ ಅಕ್ಕ ಮಹಾದೇವಿ ಮತ್ತು ಮೀರಾಬಾಯಿ ಅವರ ಜ್ಞಾನ ಮತ್ತು ಭಕ್ತಿಯಾಗಿರಲಿ, ಹಾಗೆಯೇ ಅಹಲ್ಯಾಬಾಯಿ ಹೋಳ್ಕರ್ ಅವರ ಶಾಸನ ವ್ಯವಸ್ಥೆಯಾಗಿರಲಿ ಅಥವಾ ರಾಣಿ ಲಕ್ಷ್ಮೀಬಾಯಿಯ ಶೌರ್ಯವೇ ಆಗಿರಲಿ, ದೇಶದ ಗೌರವವನ್ನು ಹೆಚ್ಚಿಸುತ್ತಲೇ ಬಂದಿದೆ.

ಶ್ರೀಯುತ ಪ್ರಕಾಶ್ ತ್ರಿಪಾಠಿ ಅವರು ಹೀಗೆ ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. ನಮ್ಮ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಯುದ್ಧ ವಿಮಾನ ಸುಖೋಯ್ 30 ರಲ್ಲಿ ಹಾರಾಟ ಮಾಡಿದ್ದು ತಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಬರೆದಿದ್ದಾರೆ. ಹಾಗೆಯೇ ವರ್ತಿಕಾ ಜೋಷಿ ಅವರ ನೇತೃತ್ವದಲ್ಲಿ ಭಾರತೀಯ ನೌಕಾ ಪಡೆಯ ಮಹಿಳಾ ತಂಡದ ಸದಸ್ಯರು IಓSಗಿ ಖಿಚಿಡಿiಟಿi ಯಲ್ಲಿ ವಿಶ್ವ ಪರ್ಯಟನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ, ಭಾವನಾ ಕಂಠ್, ಮೊಹನ್ ಸಿಂಗ್ ಮತ್ತು ಆವನಿ ಚತುರ್ವೆದಿ ಎಂಬ ಮೂವರು ವೀರ ವನಿತೆಯರು ಈighಣeಡಿ Piಟoಣs ಆಗಿದ್ದಾರೆ ಮತ್ತು Suಞhoi-30 ರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ಷಮತಾ ವಾಜಪೇಯಿ ಅವರ ನಾಯಕತ್ವದಲ್ಲಿ ಸರ್ವ ಮಹಿಳಾ ತಂಡ ದಿಲ್ಲಿಯಿಂದ ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಮರಳಿ ದಿಲ್ಲಿವರೆಗೆ ಂiಡಿ Iಟಿಜiಚಿ ಃoeiಟಿg ಎeಣ ನಲ್ಲಿ ಹಾರಾಟ ಕೈಗೊಂಡಿತು. ಈ ತಂಡದಲ್ಲಿ ಎಲ್ಲರೂ ಮಹಿಳೆಯರೇ. ಹೌದು ನೀವು ಸರಿಯಾಗಿ ಕೇಳಿಸಿಕೊಂಡಿರಿ, ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುವುದು ಮಾತ್ರವಲ್ಲ ನಾಯಕತ್ವವನ್ನೂ ವಹಿಸುತ್ತಿದ್ದಾರೆ. ಇಂದು ಸ್ತ್ರೀ ಶಕ್ತಿ ಎಲ್ಲರಿಗಿಂತ ಮೊದಲು ಸಾಧನೆಗೈದು ತೋರಿಸಿದ ಹಲವಾರು ಕ್ಷೇತ್ರಗಳಿವೆ. ಒಂದು ಮೈಲಿಗಲ್ಲನ್ನು ಅವರು ಸ್ಥಾಪಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾನ್ಯ ರಾಷ್ಟ್ರ್ರಪತಿಗಳು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ.

ರಾಷ್ಟ್ರ್ರಪತಿಯವರು ತಮ್ಮ ತಮ್ಮ ಕ್ಷೇತ್ರದಲ್ಲಿ ಏನನ್ನಾದರೂ ಪ್ರಥಮ ಬಾರಿಯ ಸಾಧನೆಗೈದ ಅಸಾಧಾರಣ ಮಹಿಳೆಯರ ಒಂದು ಸಮೂಹವನ್ನು ಭೇಟಿಯಾದರು. ದೇಶದ ಈ ತಿomeಟಿ ಚಿಛಿhieveಡಿs , ಈiಡಿsಣ ಜಿemಚಿಟe ಒeಡಿಛಿhಚಿಟಿಣ ಓಚಿvಥಿ ಅಚಿಠಿಣಚಿiಟಿ , ಠಿಚಿsseಟಿgeಡಿ ಣಡಿಚಿiಟಿ ನ ಪ್ರಥಮ ಮಹಿಳಾ ಖಿಡಿಚಿiಟಿ ಆಡಿiveಡಿ, ಅಗ್ನಿ ಶಾಮಕ ದಳದ ಪ್ರಥಮ ಮಹಿಳೆ, ಪ್ರಥಮ ಮಹಿಳಾ ಃus ಆಡಿiveಡಿ, ಂಟಿಣಚಿಡಿಛಿಣiಛಿಚಿ ತಲುಪಿದ ಪ್ರಥಮ ಮಹಿಳೆ, ಎವರೆಸ್ಟ್ ಏರಿದ ಪ್ರಥಮ ಮಹಿಳೆ, ಹೀಗೆ ಪ್ರತಿ ಕ್ಷೇತ್ರದ ಪ್ರಥಮ ಮಹಿಳೆಯರು – ನಮ್ಮ ಸ್ತ್ರೀ ಶಕ್ತಿ ಸಮಾಜದ ಕಟ್ಟುಪಾಡುಗಳನ್ನು ತೊಡೆದು, ಅಸಾಧಾರಣ ಸಾಧನೆ ಮೆರೆದಿದ್ದಾರೆ, ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಕಠಿಣ ಪರಿಶ್ರಮ, ಛಲ ಮತ್ತು ಧೃಡ ಸಂಕಲ್ಪದ ಶಕ್ತಿಯೊಂದಿಗೆ ಎಲ್ಲ ಅಡತಡೆಗಳು ಮತ್ತು ಸವಾಲುಗಳನ್ನು ಮೆಟ್ಟಿ ಹೊಸ ಹಾದಿಯನ್ನು ನಿರ್ಮಿಸಬಹುದಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಸಮಕಾಲೀನರನ್ನು ಮಾತ್ರವಲ್ಲದೆ ಮುಂಬರುವ ಪೀಳಿಗೆಗೂ ಪ್ರೇರಣಾದಾಯಕವಾದ ಮಾರ್ಗವದು. ಅವರಲ್ಲಿ ಹೊಸ ಹುರುಪು ಮತ್ತು ಉತ್ಸಾಹ ತುಂಬುವಂಥ ಮಾರ್ಗ. ಈ ತಿomeಟಿ ಚಿಛಿhieveಡಿs, ಜಿiಡಿsಣ ಟಚಿಜies ಕುರಿತ ಒಂದು ಪುಸ್ತಕವನ್ನೂ ಸಿದ್ಧಪಡಿಸಲಾಗಿದೆ. ಸಂಪೂರ್ಣ ರಾಷ್ಟ್ರಕ್ಕೆ ಸ್ತ್ರೀ ಶಕ್ತಿ ಬಗ್ಗೆ ಅರಿವು ಮೂಡಲಿ, ಅವರ ಜೀವನ ಮತ್ತು ಸಾಧನೆಗಳಿಂದ ಪ್ರೇರಣೆ ದೊರೆಯಲಿ ಎಂಬುದು ಇದರ ಉದ್ದೇಶ. ಇದು ಓಚಿಡಿeಟಿಜಡಿಚಿಒoಜi ತಿebsiಣe ನಲ್ಲಿ e-booಞ ರೂಪದಲ್ಲಿ ಲಭ್ಯವಿದೆ.

ಇಂದು ದೇಶ ಮತ್ತು ಸಮಾಜದಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆಗಳ ಹಿಂದೆ ಸ್ತ್ರೀ ಶಕ್ತಿಯ ಮಹತ್ವಪೂರ್ಣ ಪಾತ್ರವಿದೆ. ಇಂದು ನಾವು ಮಹಿಳಾ ಸಶಕ್ತೀಕರಣದ ಬಗ್ಗೆ ಮಾತನಾಡುತ್ತಿರುವಾಗ ಒಂದು ರೈಲು ನಿಲ್ದಾಣದ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ಒಂದು ರೈಲು ನಿಲ್ದಾಣ ಮತ್ತು ಮಹಿಳಾ ಸಶಕ್ತೀಕರಣದ ಮಧ್ಯೆ ಏನು ಸಂಬಂಧ ಎಂದು ನೀವು ಆಲೋಚಿಸುತ್ತಿರಬಹುದು. ಮುಂಬೈಯ ಮಾತುಂಗಾ ರೈಲು ನಿಲ್ದಾಣದಲ್ಲಿ, ಭಾರತದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಸಂಪೂರ್ಣ ಮಹಿಳಾ ಕೆಲಸಗಾರರಿದ್ದಾರೆ. ಅದು ಅommeಡಿಛಿiಚಿಟ ಆeಠಿಚಿಡಿಣmeಟಿಣ ಆಗಿರಲಿ, ಖಚಿiಟತಿಚಿಥಿ Poಟiಛಿe ಆಗಿರಲಿ, ಖಿiಛಿಞeಣ ಅheಛಿಞiಟಿg ಆಗಿರಲಿ, ಂಟಿಟಿouಟಿಛಿiಟಿg ಆಗಿರಲಿ, Poiಟಿಣ Peಡಿsoಟಿ ಆಗಿರಲಿ- ಎಲ್ಲ ವಿಭಾಗಗಳಲ್ಲಿ ಮಹಿಳಾ ಸಿಬ್ಬಂದಿ ಪೂರ್ತಿ 40 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಇದ್ದಾರೆ. ಈ ಬಾರಿ ಗಣರಾಜ್ಯೋತ್ಸವದ ಪೆರೇಡ್ ನೋಡಿದ ನಂತರ ಬಹಳಷ್ಟು ಜನರು ಟ್ವಿಟ್ಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಃSಈ ಃiಞeಡಿ ಅoಟಿಣiಟಿgeಟಿಣ ನಲ್ಲಿ ಎಲ್ಲ ಮಹಿಳೆಯರು ಭಾಗವಹಿಸಿದ ವಿಶೇಷತೆ ಬಗ್ಗೆ ಬರೆದಿದ್ದಾರೆ. ಮಹಿಳೆಯರೇ ಸಾಹಸಮಯ ಪ್ರದರ್ಶನ ನೀಡುತ್ತಿದ್ದರು ಮತ್ತು ಆ ದೃಶ್ಯ ವಿದೇಶದಿಂದ ಬಂದ ಅತಿಥಿಗಳೂ ಆಶ್ಚರ್ಯಗೊಳ್ಳುವಂತೆ ಮಾಡಿತು. ಸಶಕ್ತೀಕರಣ ಸ್ವಾವಲಂಬನೆಯ ಒಂದು ರೂಪವಾಗಿದೆ. ಇಂದು ನಮ್ಮ ಸ್ತ್ರೀಶಕ್ತಿ ನಾಯಕತ್ವ ವಹಿಸುತ್ತಿದೆ.

ಸ್ವಾವಲಂಬಿಗಳಾಗುತ್ತಿದ್ದಾರೆ. ಇದೇ ರೀತಿ ಛತ್ತೀಸ್‍ಘಡದ ಬುಡಕಟ್ಟು ಜನಾಂಗದ ಮಹಿಳೆಯರೂ ಅದ್ಭುತ ಸಾಧನೆ ಮಾಡಿರುವುದು ನನಗೆ ನೆನಪಾಗುತ್ತಿದೆ. ಅವರು ಒಂದು ಹೊಸ ಉದಾಹರಣೆಯನ್ನು ಮುಂದಿಟ್ಟಿದ್ದಾರೆ. ಬುಡಕಟ್ಟು ಜನಾಂಗದವರ ಬಗ್ಗೆ ಮಾತಾಡಿದಾಗ ಎಲ್ಲರ ಮನದಲ್ಲಿ ಒಂದು ಸ್ಪಷ್ಟ ಚಿತ್ರ ಮೂಡಿಬರುತ್ತದೆ. ಅದರಲ್ಲಿ ಕಾಡು, ಬೆಟ್ಟ, ಅಲ್ಲಿ ತಲೆಯ ಮೇಲೆ ಭಾರ ಹೊತ್ತು ನಡೆಯುತ್ತಿರುವ ಮಹಿಳೆಯರು ಕಂಡು ಬರುತ್ತಾರೆ. ಆದರೆ ಛತ್ತೀಸ್‍ಘಡದ ಈ ಬುಡಕಟ್ಟು ಜನಾಂಗದ ಮಹಿಳೆಯರು, ಸ್ತ್ರೀ ಶಕ್ತಿ, ಒಂದು ಹೊಸ ಚಿತ್ರ ಮೂಡುವಂತೆ ಮಾಡಿದ್ದಾರೆ. ಛತ್ತೀಸ್‍ಘಡದ ಮಾವೋವಾದಿ ಪ್ರಭಾವವಿರುವಂಥ ದಾಂತೇವಾಡ ಪ್ರದೇಶದಲ್ಲಿ ಹಿಂಸೆ, ಅತ್ಯಾಚಾರ, ಬಂದೂಕು, ಪಿಸ್ತೂಲು, ಬಾಂಬ್ ಮುಂತಾದವುಗಳ ಮೂಲಕ ಮಾವೋವಾದಿಗಳು ಒಂದು ಭಯಾನಕ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇಂಥ ಭಯಾನಕ ವಾತಾವರಣದಲ್ಲೂ ಬುಡಕಟ್ಟು ಮಹಿಳೆಯರು ಇ-ಖiಛಿಞshಚಿತಿ ಚಾಲನೆ ಮೂಲಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಬಹಳಷ್ಟು ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ 3 ಲಾಭಗಳಾಗುತ್ತಿವೆ. ಒಂದೆಡೆ ಸ್ವ ಉದ್ಯೋಗ ಅವರನ್ನು ಸಶಕ್ತರನ್ನಾಗಿಸಿದರೆ, ಇನ್ನೊಂದೆಡೆ ಮಾವೋವಾದಿ ಪ್ರಭಾವವಿರುವ ಪ್ರದೇಶದ ಚಿತ್ರಣ ಕೂಡಾ ಬದಲಾಗುತ್ತಿದೆ. ಇದೆಲ್ಲದರ ಜೊತೆಗೆ ಪರಿಸರ ಸಂರಕ್ಷಣೆ ಕೆಲಸಕ್ಕೂ ಇಲ್ಲಿ ಶಕ್ತಿ ಲಭಿಸುತ್ತಿದೆ. ಇಲ್ಲಿಯ ಜಿಲ್ಲಾಡಳಿತಕ್ಕೂ ಅಭಿನಂದಿಸಬಯಸುತ್ತೇನೆ. ಅನ್ಮದಾನ ಮಂಜೂರು ಮಾಡುವುದರಿಂದ ಹಿಡಿದು ತರಬೇತಿ ನೀಡುವವರೆಗೂ ಜಿಲ್ಲಾಡಳಿತ ಈ ಮಹಿಳೆಯರ ಸಫಲತೆಯಲ್ಲಿ ಮಹತ್ವ ಪೂರ್ಣ ಪಾತ್ರ ನಿರ್ವಹಿಸಿದೆ.

ಏನೋ ಒಂದು ವಿಶೇಷ ಅಂಶ ಇದೆ, ನಮ್ಮ ವ್ಯಕ್ತಿತ್ವ ನಶಿಸಿಹೋಗುವುದಿಲ್ಲ ಎಂದು ಜನರು ಮಾತನಾಡುವುದನ್ನು ಯಾವಾಗಲೂ ನಾವು ಕೇಳುತ್ತಾ ಬಂದಿದ್ದೇವೆ. ಅದು ಏನು? ಅದೇನೆಂದರೆ ಈಟexibiಟiಣಥಿ ಹೊಂದಿಕೊಳ್ಳ್ಳುವಿಕೆ – ಖಿಡಿಚಿಟಿsಜಿoಡಿmಚಿಣioಟಿ ಪರಿವರ್ತನೆ. ಯಾವುದು ಸಮಕಾಲೀನವಲ್ಲವೋ ಅದನ್ನು ಬಿಟ್ಟು ಬಿಡುವುದು, ಯಾವುದು ಅವಶ್ಯಕವೋ ಅದರ ಸುಧಾರಣೆಯನ್ನು ಸ್ವೀಕರಿಸುವುದು. ಸ್ವಯಂ ಸುಧಾರಣೆಯ ನಿರಂತರ ಪ್ರಯತ್ನ, Seಟಜಿ-ಅoಡಿಡಿeಛಿಣioಟಿ ಎಂಬುದು ಭಾರತೀಯ ಪರಂಪರೆಯಾಗಿದೆ, ಇಂಥ ಸಂಸ್ಕøತಿ ನಮಗೆ ಬಳುವಳಿಯಾಗಿ ಲಭಿಸಿದೆ. Seಟಜಿ ಅoಡಿಡಿeಛಿಣiಟಿg ಒeಛಿhಚಿಟಿism ಯಾವುದೇ ಸಮಾಜದ ಮತ್ತು ಅದರ ಜೀವನಶೈಲಿಯ ಹೆಗ್ಗುರುತಾಗಿದೆ. ನಮ್ಮ ದೇಶದಲ್ಲಿ ಸಮಾಜದ ಅನಿಷ್ಟ ಪದ್ಧತಿಗಳು ಮತ್ತು ರೀತಿ ನೀತಿಗಳ ವಿರುದ್ಧ ಸಹಸ್ರಾರು ವರ್ಷಗಳಿಂದ ವ್ಯಕ್ತಿಗತವಾಗಿ ಸಾಮಾಜಿಕವಾಗಿ ಪ್ರಯತ್ನಗಳು ನಡೆದೇ ಇವೆ. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಒಂದು ರೋಚಕ ಘಟನೆ ನಡೆಯಿತು. ರಾಜ್ಯದ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಬೇರು ಸಹಿತ ಕಿತ್ತೊಗೆಯಲು 13 ಸಾವಿರ ಕ್ಕೂ ಹೆಚ್ಚು ಕಿಲೊ ಮೀಟರ್ ಉದ್ದದ ವಿಶ್ವದಲ್ಲೇ ಅತಿ ದೊಡ್ಡ ಮಾನವ ಸರಪಳಿ ಊumಚಿಟಿ ಅhಚಿiಟಿ ಅನ್ನು ನಿರ್ಮಿಸಲಾಗಿತ್ತು. ಈ ಆಂದೋಲನದ ಮೂಲಕ ಜನರಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು. ಬಾಲ್ಯ ವಿವಾಹ ಮತ್ತು ವರದಕ್ಷಿಣೆಯಂಥ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಲು ಸಂಪೂರ್ಣ ರಾಜ್ಯ ಪಣ ತೊಟ್ಟಿತು. ಮಕ್ಕಳು, ವೃದ್ಧರು, ಹುಮ್ಮಸ್ಸಿನ ನವ ಯುವಕರು, ಮಾತೆಯರು, ಸೋದರಿಯರು ಹೀಗೆ ಎಲ್ಲರೂ ಈ ಯುದ್ಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಟ್ನಾದ ಐತಿಹಾಸಿಕ ಗಾಂಧೀ ಮೈದಾನದಿಂದ ಆರಂಭವಾದ ಮಾನವ ಸರಪಳಿ ರಾಜ್ಯದ ಗಡಿಗಳವರೆಗೆ ತುಂಡರಿಸದೇ ಬೆಸೆಯುತ್ತಾ ಹೋಯಿತು.

ಸಮಾಜದ ಎಲ್ಲರಿಗೂ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯ ಲಾಭವಾಗಬೇಕೆಂದಲ್ಲಿ ನಮ್ಮ ಸಮಾಜ ಅನಿಷ್ಟ ಪದ್ಧತಿಗಳಿಂದ ಮುಕ್ತಗೊಳ್ಳಬೇಕು. ಬನ್ನಿ ನಾವೆಲ್ಲ ಸೇರಿ ಈ ಅನಿಷ್ಟ ಪದ್ಧತಿಗಳಿಂದ ಸಮಾಜವನ್ನು ಮುಕ್ತಗೊಳಿಸೋಣ ಎಂದು ಪಣ ತೊಡೋಣ. ಅಲ್ಲದೆ, ಒಂದು ನವ ಭಾರತ ಹಾಗೂ ಸಶಕ್ತ, ಸಮರ್ಥ ಭಾರತದ ನಿರ್ಮಾಣ ಮಾಡೋಣ. ನಾನು ಬಿಹಾರದ ಜನತೆ, ಆ ರಾಜ್ಯದ ಮುಖ್ಯಮಂತ್ರಿಗಳು, ಅಲ್ಲಿಯ ಅಧಿಕಾರೀ ವರ್ಗ ಮತ್ತು ಮಾನವ ಸರಪಳಿಯಲ್ಲಿ ಪಾಲ್ಗೊಂಡ ಪ್ರತಿ ವ್ಯಕ್ತಿಯನ್ನು ಅವರು ಸಮಾಜ ಕಲ್ಯಾಣಕ್ಕಾಗಿ ಇಂಥ ವಿಶೇಷ ಮತ್ತು ವ್ಯಾಪಕವಾದ ಕಾರ್ಯಕ್ಕೆ ಮುಂದಡಿ ಇರಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕರ್ನಾಟಕದ ಮೈಸೂರಿನ ಶ್ರೀಯುತ ದರ್ಶನ್ ಅವರು – ಅವರ ತಂದೆಯ ಚಿಕಿತ್ಸೆಗಾಗಿ ತಿಂಗಳಿಗೆ ಔಷಧಿಯ ಖರ್ಚು 6 ಸಾವಿರ ರೂಪಾಯಿಗಳಾಗುತ್ತಿತ್ತು, ಅವರಿಗೆ ಮೊದಲು ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಈಗ ಅವರಿಗೆ ಜನೌಷಧಿ ಕೇಂದ್ರದ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಅವರು ಅಲ್ಲಿಂದ ಔಷಧಿಗಳನ್ನು ಖರೀದಿ ಮಾಡಿದ್ದರಿಂದ ಅವರ ಔಷಧಿಯ ಖರ್ಚು ಶೇಕಡಾ 75 ರಷ್ಟು ಕಡಿಮೆಯಾಗಿದೆ ಎಂದು ಒಥಿಉov ನಲ್ಲಿ ಬರೆದಿದ್ದಾರೆ. ನಾನು ಇದರ ಬಗ್ಗೆ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಬೇಕು ಮತ್ತು ಅದರಿಂದ ಹೆಚ್ಚು ಹೆಚ್ಚು ಜನರಿಗೆ ಇದರ ಬಗ್ಗೆ ಮಾಹಿತಿ ದೊರಕಿ ಇದರ ಲಾಭವನ್ನು ಅವರು ಪಡೆದುಕೊಳ್ಳುವಂತಾಗಬೇಕು ಎನ್ನುವ ಇಚ್ಚೆಯನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಕೆಲವು ಸಮಯದಿಂದ ಬಹಳ ಜನ ನನಗೆ ಈ ವಿಷಯದ ಬಗ್ಗೆ ಬರೆಯುತ್ತಿದ್ದರು ಮತ್ತು ಹೇಳುತ್ತಿದ್ದರು. ನಾನು ಈ ಯೋಜನೆಯ ಲಾಭ ಪಡೆದ ಕೆಲವು ಜನರ ವೀಡಿಯೊಗಳನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ ಮತ್ತು ಇಂತಹ ಮಾಹಿತಿ ಸಿಕ್ಕಾಗ ತುಂಬಾ ಸಂತೋಷವಾಗುತ್ತದೆ ಮತ್ತು ಸಾಕಷ್ಟು ತೃಪ್ತಿ ಸಿಗುತ್ತದೆ. ಯಾವುದು ಅವರಿಗೆ ಸಿಕ್ಕಿದೆಯೋ ಅದು ಬೇರೆಯವರಿಗೂ ಸಹ ಸಿಗಲಿ ಎನ್ನುವ ವಿಚಾರ ಶ್ರೀಯುತ ದರ್ಶನ್ ರವರ ಮನದಲ್ಲಿ ಮೂಡಿರುವುದು ಕೂಡ ನನಗೆ ತುಂಬಾ ಇಷ್ಟವಾಯಿತು. ಈ ಯೋಜನೆಯ ಹಿಂದೆ ಇರುವ ಉದ್ದೇಶ – ಅರೋಗ್ಯ ರಕ್ಷಣೆಯನ್ನು ಕೈಗೆಟುಕುವಂತೆ ಮಾಡುವುದು ಮತ್ತು ಸುಲಭವಾಗಿ ಜೀವನ ಮಾಡುವಂತೆ ಪ್ರೋತ್ಸಾಹಿಸುವುದು. ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಿಗಳು ಮಾರುಕಟ್ಟೆಯಲ್ಲಿ ಮಾರಲ್ಪಡುವ bಡಿಚಿಟಿಜeಜ ಔಷಧಿಗಳಿಗಿಂತ ಸುಮಾರು ಶೇಕಡಾ 50 ರಿಂದ 90 ರಷ್ಟು ಅಗ್ಗವಾಗಿವೆ. ಇದರಿಂದ ಜನ ಸಾಮಾನ್ಯರು, ವಿಶೇಷವಾಗಿ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳುವ ಹಿರಿಯ ನಾಗರೀಕರಿಗೆ ಅರ್ಥಿಕವಾಗಿ ತುಂಬಾ ಸಹಾಯವಾಗುತ್ತದೆ ಮತ್ತು ಬಹಳಷ್ಟು ಉಳಿತಾಯವಾಗುತ್ತದೆ. ಇಲ್ಲಿ ಖರೀದಿಸಲ್ಪಡುವ geಟಿeಡಿiಛಿ ಔಷಧಿಗಳು ವಿಶ್ವ ಆರೋಗ್ಯ ಸಂಸ್ಥೆ ವಿಧಿಸುವ ಮಾನದಂಡಗಳಿಗೆ ಅನುಗುಣವಾಗಿರುತ್ತವೆ. ಇದೇ ಕಾರಣದಿಂದಾಗಿ ಒಳ್ಳೆಯ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇಂದು ದೇಶದೆಲ್ಲೆಡೆ 3 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಸ್ಥಾಪಿಸಲ್ಪಟ್ಟಿವೆ. ಇದರಿಂದ ಔಷಧಿಗಳು ಬರೀ ಕಡಿಮೆ ಬೆಲೆಯಲ್ಲಿ ದೊರೆಯುವುದಷ್ಟೇ ಅಲ್ಲ, ಸ್ವಯಂ ಉದ್ಯಮಿಗಳಿಗೆ ಕೂಡ ಉದ್ಯೋಗದ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ. ಕಡಿಮೆ ದರದ ಔಷಧಿಗಳು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳ ‘ಅಮೃತ್ sಣoಡಿes’ ಗಳಲ್ಲಿ ದೊರೆಯುತ್ತವೆ. ಇದೆಲ್ಲದರೆ ಹಿಂದಿನ ಒಂದೇ ಉದ್ದೇಶ – ದೇಶದ ಬಡವರಲ್ಲಿ ಬಡವನಾದ ವ್ಯಕ್ತಿಗೆ ಸಹ ಗುಣಮಟ್ಟದ ಮತ್ತು ಕೈಗೆಟುಕುವ ಅರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡುವುದು ಮತ್ತು ಅದರಿಂದ ಒಂದು ಸ್ವಸ್ಥ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವುದು.

ನನ್ನ ಪ್ರೀತಿಯ ದೇಶವಾಸಿಗಳೇ, ಮಹಾರಾಷ್ಟ್ರದ ಶ್ರೀಯುತ ಮಂಗೇಶ್ ಅವರು ಓಚಿಡಿeಟಿಜಡಿಚಿ ಒoಜi ಒobiಟe ಂಠಿಠಿ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಆ ಫೋಟೋ ಹೇಗಿತ್ತೆಂದರೆ ನನ್ನ ಗಮನ ಆ ಕಡೆಗೆ ಸೆಳೆಯುತ್ತಿತ್ತು. ಆ ಫೋಟೋ ಹೇಗಿತ್ತೆಂದರೆ, ಅದರಲ್ಲಿ ಒಬ್ಬ ಮೊಮ್ಮಗ ತನ್ನ ಅಜ್ಜನ ಜೊತೆ ‘ಅಟeಚಿಟಿ ಒoಡಿಟಿಚಿ ಖiveಡಿ’ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುತ್ತಿದ್ದ. ಅಕೋಲಾದ ನಾಗರೀಕರು ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಮೋರ್ನಾ ನದಿಯನ್ನು ಶುಚಿಗೊಳಿಸಲು ಸ್ವಚ್ಚತಾ ಅಭಿಯಾನವನ್ನು ಆಯೋಜಿಸಿದ್ದರು ಎಂದು ನನಗೆ ತಿಳಿದು ಬಂತು. ಮೋರ್ನಾ ನದಿಯು ಮೊದಲು 12 ತಿಂಗಳೂ ಹರಿಯುತ್ತಿತ್ತು. ಆದರೆ ಈಗ ಅದು ಕೆಲ ಕಾಲ ಮಾತ್ರವಾಗಿದೆ. ಇನ್ನೊಂದು ನೋವಿನ ಸಮಾಚಾರವೆಂದರೆ ನದಿಯು ಸಂಪೂರ್ಣವಾಗಿ ನೀರಿನ ಕಳೆ, ಕಾಡಿನ ಹುಲ್ಲಿನಿಂದ ತುಂಬಿಹೋಗಿತ್ತು. ನದಿ ಮತ್ತು ಅದರ ದಡದಲ್ಲಿ ಸಾಕಷ್ಟು ಕಸವನ್ನು ಎಸೆಯಲಾಗುತ್ತಿತ್ತು. ಒಂದು ಕಾರ್ಯತಂತ್ರ ರೂಪಿಸಿ ಅದರಂತೆ ಮಕರ ಸಂಕ್ರಾಂತಿಗೆ ಒಂದು ದಿನ ಮುಂಚೆ ಜನವರಿ 13 ರಂದು ‘ಒissioಟಿ ಅಟeಚಿಟಿ ಒoಡಿಟಿಚಿ’ ದ ಮೊದಲ ಹಂತದ ಅಂಗವಾಗಿ, 4 ಕಿಲೋಮೀಟರ್ ಗಳಷ್ಟು ಜಾಗದಲ್ಲಿ 14 ಸ್ಥಳಗಳಲ್ಲಿ ಮೋರ್ನಾ ನದಿಯ ದಡದ ಎರಡೂ ದಂಡೆಗಳ ಸ್ವಚ್ಚತೆಯನ್ನು ಮಾಡಲಾಯಿತು. ‘ಒissioಟಿ ಅಟeಚಿಟಿ ಒoಡಿಟಿಚಿ’ ಎಂಬ ಈ ಅತ್ಯುತ್ತಮ ಕಾರ್ಯದಲ್ಲಿ ಅಕೋಲಾದ 6 ಸಾವಿರಕ್ಕೂ ಅಧಿಕ ನಾಗರೀಕರು, ನೂರಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು, ಕಾಲೇಜುಗಳು, ವಿದ್ಯಾರ್ಥಿಗಳು, ಮಕ್ಕಳು, ಹಿರಿಯರು, ತಾಯಿಯರು, ಸೋದರಿಯರು – ಹೀಗೆ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಿದರು. 20 ಜನವರಿ 2018 ರಂದು ಸಹ ಈ ಸ್ವಚ್ಚತಾ ಅಭಿಯಾನವು ಅದೇ ರೀತಿ ಮುಂದುವರೆಯಿತು ಮತ್ತು ಮೋರ್ನಾ ನದಿಯು ಸಂಪೂರ್ಣವಾಗಿ ಸ್ವಚ್ಚವಾಗುವವರೆಗೆ ಈ ಅಭಿಯಾನವು ಪ್ರತಿ ಶನಿವಾರದ ಬೆಳಗ್ಗೆ ನಡೆಯುತ್ತದೆ ಎಂದು ನನಗೆ ತಿಳಿಸಲಾಗಿದೆ. ಇದು, ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂಬುವುದನ್ನು ತೋರಿಸುತ್ತದೆ. ಜನಾಂದೋಲನದ ಮುಖಾಂತರ ದೊಡ್ದ ದೊಡ್ಡ ಬದಲಾವಣೆಗಳನ್ನು ತರಬಹುದು. ನಾನು ಅಕೋಲಾದ ಜನರಿಗೆ, ಅಲ್ಲಿಯ ಜಿಲ್ಲೆ ಮತ್ತು ನಗರ-ನಿಗಮದ ಆಡಳಿತಕ್ಕೆ, ಈ ಕಾರ್ಯಕ್ರಮವನ್ನು ಜನಾಂದೋಲನವನ್ನಾಗಿ ಮಾಡಲು ಕೈಜೋಡಿಸಿದ ಎಲ್ಲಾ ನಾಗರೀಕರಿಗೂ ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ನಿಮ್ಮ ಈ ಪ್ರಯತ್ನವು ದೇಶದ ಬೇರೆ ಜನರನ್ನು ಸಹ ಪ್ರೇರೇಪಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ದಿನಗಳಲ್ಲಿ ಪದ್ಮ ಪುರಸ್ಕಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ನೀವೂ ಕೊಡ ಕೇಳಿರಬಹುದು. ಈ ವಿಷಯವು ದಿನಪತ್ರಿಕೆಗಳಲ್ಲಿ, ಖಿಗಿ ಯಲ್ಲಿ ಕೂಡ ಗಮನವನ್ನು ಸೆಳೆದಿರುತ್ತದೆ. ಆದರೆ ನೀವು ಸ್ವಲ್ಪ ಗಮನವಿಟ್ಟು ನೋಡಿದರೆ ಹೆಮ್ಮೆಪಡುತ್ತೀರಿ. ಎಂತೆಂಥಹ ಮಹಾನ್ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ ಎಂದು ಹೆಮ್ಮೆ ಪಡುತ್ತೀರಿ. ಇಂದು ನಮ್ಮ ದೇಶದಲ್ಲಿ ಸಾಮಾನ್ಯ ವ್ಯಕ್ತಿಯೂ ಸಹ ಯಾವುದೇ ಶಿಫಾರಸು ಇಲ್ಲದೆ ಅಷ್ಟು ಎತ್ತರಕ್ಕೆ ತಲುಪುತ್ತಿದ್ದಾರೆ ಎನ್ನುವ ಬಗ್ಗೆ ಕೂಡ ಹೆಮ್ಮೆ ಮೂಡುತ್ತದೆ. ಪ್ರತಿ ವರ್ಷವೂ ಪದ್ಮ ಪುರಸ್ಕಾರ ನೀಡುವ ಪರಂಪರೆ ಇದೆ, ಆದರೆ ಹಿಂದಿನ 3 ವರ್ಷಗಳಿಂದ ಇದರ ಪ್ರಕ್ರಿಯೆಯು ಬದಲಾಗಿದೆ. ಈಗ ಯಾವುದೇ ನಾಗರೀಕನೂ ಯಾರನ್ನೇ ಅದರೂ ನಾಮನಿರ್ದೇಶನ ಮಾಡಬಹುದು. ಸಂಪೂರ್ಣ ಪ್ರಕ್ರಿಯೆ oಟಿಟiಟಿe ಆಗಿರುವುದರಿಂದ ಪಾರದರ್ಶಕತೆ ಬಂದಿದೆ. ಒಂದು ರೀತಿಯಲ್ಲಿ ಈ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆಯು ಪೂರ್ಣವಾಗಿ ರೂಪಾಂತರ ಹೊಂದಿದೆ. ತುಂಬಾ ಸಾಮಾನ್ಯ ಜನರಿಗೆ ಸಹ ಪದ್ಮ ಪುರಸ್ಕಾರಗಳು ಬರುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ, ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ಸಭೆ ಸಮಾರಂಭಗಳಲ್ಲಿ ಕಾಣಿಸಿ ಕೊಳ್ಳದೇ ಇರುವ ಜನರಿಗೆ ಕೂಡ ಪದ್ಮ ಪುರಸ್ಕಾರಗಳನ್ನು ನೀಡಲಾಗಿದೆ. ಈಗ ಪುರಸ್ಕಾರ ಕೊಡುವುದಕ್ಕೆ ವ್ಯಕ್ತಿಯ ಪರಿಚಯವಲ್ಲ, ಅವರ ಕೆಲಸದ ಮಹತ್ವ ಹೆಚ್ಚಾಗುತ್ತಾ ಹೋಗುತ್ತಿದೆ. ಶ್ರೀಯುತ ಅರವಿಂದ ಗುಪ್ತ ಅವರ ಬಗ್ಗೆ ನೀವು ಕೇಳಿರಬಹುದು. ಅವರು IIಖಿ ಕಾನ್ಪುರ್ ನ ವಿದ್ಯಾರ್ಥಿಯಾಗಿದ್ದರು ಮತ್ತು ಮಕ್ಕಳಿಗಾಗಿ ಆಟಿಕೆಗಳನ್ನು ಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಎಂದು ಕೇಳಿ ನಿಮಗೆ ಸಂತೋಷವಾಗಬಹುದು. ಅವರು 4 ದಶಕಗಳಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ವೈಚಾರಿಕತೆ ಬೆಳೆಯಲಿ ಎಂಬ ಉದ್ದೇಶದಿಂದ ತ್ಯಾಜ್ಯ ವಸ್ತುಗಳಿಂದ ಆಟಿಕೆಗಳನ್ನು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳಿಂದ ವೈಜ್ಞಾನಿಕ ಪ್ರಯೋಗಗಳ ಕಡೆ ಮಕ್ಕಳು ಪ್ರೇರಿತರಾಗಲಿ ಎಂಬುದು ಅವರ ಪ್ರಯತ್ನ. ಇದಕ್ಕಾಗಿ ದೇಶದೆಲ್ಲೆಡೆ 3 ಸಾವಿರ ಶಾಲೆಗಳಿಗೆ ಹೋಗಿ 18 ಭಾಷೆಗಳಲ್ಲಿ ತಯಾರಿಸಿರುವ ಫಿಲಂ ತೋರಿಸಿ ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆ. ಎಂತಹ ಅದ್ಭುತ ಜೀವನ, ಎಂತಹ ಅದ್ಭುತ ಸಮರ್ಪಣೆ!! ಇದೇ ರೀತಿಯ ಒಂದು ಕಥೆ ಕರ್ನಾಟಕದ ಸೀತವ್ವ ಜೋಡಟ್ಟಿಯವರದು. ಇವರನ್ನು ‘ಮಹಿಳಾ ಸಬಲೀಕರಣದ ದೇವಿ’ ಎಂದು ಸುಮ್ಮನೆ ಕರೆದಿಲ್ಲ. ಕಳೆದ 3 ದಶಕಗಳಿಂದ ಬೆಳಗಾವಿಯಲ್ಲಿ ಲೆಕ್ಕವಿಲ್ಲದಷ್ಟು ಮಹಿಳೆಯರ ಜೀವನ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರನ್ನು ಅವರ 7 ನೇ ವರ್ಷ ವಯಸ್ಸಿನಲ್ಲಿಯೇ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಅವರು ದೇವದಾಸಿಯರ ಕಲ್ಯಾಣಕ್ಕೋಸ್ಕರ ತಮ್ಮ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟರು. ಇಷ್ಟೇ ಅಲ್ಲ, ಇವರು ದಲಿತ ಮಹಿಳೆಯರ ಕಲ್ಯಾಣಕ್ಕಾಗಿ ಸಹಾ ಅತ್ಯದ್ಭುತ ಕಾರ್ಯವನ್ನು ಮಾಡಿದ್ದಾರೆ. ಮಧ್ಯ ಪ್ರದೇಶದ ಭಜ್ಜೂ ಶ್ಯಾಮ್ ಅವರ ಹೆಸರನ್ನು ನೀವು ಕೇಳಿರಬಹುದು. ಶ್ರೀಯುತ ಭಜ್ಜೂ ಶ್ಯಾಮ್ ಅವರು ಹುಟ್ಟಿದ್ದು ಒಂದು ಬಡ, ಬುಡಕಟ್ಟು ಕುಂಟುಂಬದಲ್ಲಿ. ಅವರು ಜೀವನೋಪಾಯಕ್ಕಾಗಿ ಸಾಮಾನ್ಯವಾದ ಕೆಲಸ ಮಾಡುತ್ತಿದ್ದರು, ಆದರೆ ಅವರಿಗೆ ಪಾರಂಪರಿಕ ಬುಡಕಟ್ಟು ವರ್ಣಚಿತ್ರ ಬಿಡಿಸುವ ಒಂದು ಹವ್ಯಾಸವಿತ್ತು. ಇಂದು ಅದೇ ಹವ್ಯಾಸದ ಕಾರಣದಿಂದ ಬರೀ ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಅವರಿಗೆ ಗೌರವವಿದೆ. ನೆದರ್ಲ್ಯಾಂಡ್, ಜರ್ಮನಿ, ಇಂಗ್ಲೆಂಡ್, ಇಟಲಿ ಯಂತಹ ಅನೇಕ ದೇಶಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಆಗಿದೆ. ವಿದೇಶಗಳಲ್ಲಿ ಭಾರತದ ಹೆಸರನ್ನು ಪ್ರಕಾಶಿಸುವಂತೆ ಮಾಡಿದ ಭಜ್ಜೂ ಶ್ಯಾಮ್ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.

ಕೇರಳದ ಆದಿವಾಸಿ ಮಹಿಳೆ ಲಕ್ಷ್ಮಿ ಕುಟ್ಟಿ ಯವರ ಕಥೆ ಕೇಳಿ ನೀವು ಆಶ್ಚರ್ಯಚಕಿತರಾಗುತ್ತೀರಿ. ಲಕ್ಷ್ಮಿಕುಟ್ಟಿ ಕಲ್ಲಾರ್ ನಲ್ಲಿ ಶಿಕ್ಷಕಿಯಾಗಿದ್ದಾರೆ ಮತ್ತು ಈಗಲೂ ಕೂಡ ದಟ್ಟ ಅರಣ್ಯದ ಮಧ್ಯದಲ್ಲಿ ಆದಿವಾಸಿ ಹಾಡಿಯಲ್ಲಿ ತಾಳೆ ಗರಿಗಳಿಂದ ಮಾಡಿದ ಗುಡಿಸಲಿನಲ್ಲಿ ವಾಸಿಸುತ್ತಾರೆ. ಅವರು ತಮ್ಮ ನೆನಪಿನ ಶಕ್ತಿಯಿಂದಲೇ 5 ನೂರು ಆಯುರ್ವೇದ ಔಷಧಿಗಳನ್ನು ಮಾಡಿದ್ದಾರೆ. ಗಿಡ ಮೂಲಿಕೆಗಳಿಂದ ಔಷಧಿ ಮಾಡಿದ್ದಾರೆ. ಹಾವಿನ ಕಡಿತಕ್ಕೆ ಬಳಸುವ ಔಷಧಿಯನ್ನು ತಯಾರಿಸುವುದರಲ್ಲಿ ಅವರು ಸಿದ್ಧಹಸ್ತರು. ಲಕ್ಷ್ಮಿಯವರು ತಮ್ಮ ಆಯುರ್ವೇದ ಔಷಧಗಳ ಜ್ಞಾನದಿಂದಾಗಿ ನಿರಂತರ ಸಮಾಜಸೇವೆ ಮಾಡುತ್ತಿದ್ದಾರೆ. ಈ ಅನಾಮಧೇಯ ಖ್ಯಾತರನ್ನು ಗುರುತಿಸಿ ಅವರ ಸಮಾಜಸೇವೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಇಂದು ಮತ್ತೊಂದು ಹೆಸರನ್ನು ಕೂಡ ಹೇಳಲು ನನಗೆ ಮನಸ್ಸಾಗಿದೆ. ಪಶ್ಚಿಮ ಬಂಗಾಳದ 75 ವರ್ಷದ ಸುಭಾಷಿಣಿ ಮಿಸ್ತ್ರಿ. ಅವರನ್ನೂ ಸಹ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸುಭಾಷಿಣಿ ಮಿಸ್ತ್ರಿ ಎಂತಹ ಮಹಿಳೆ ಎಂದರೆ, ಆಸ್ಪತ್ರೆ ಕಟ್ಟಲು ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದರು, ತರಕಾರಿ ಮಾರಿದರು. ಅವರು 23 ವರ್ಷದವರಾಗಿದ್ದಾಗ ಸರಿಯಾದ ಚಿಕಿತ್ಸೆ ದೊರೆಯದೆ ಅವರ ಪತಿಯ ಮರಣವಾಗಿತ್ತು. ಇದೇ ಘಟನೆಯು ಅವರನ್ನು ಬಡವರಿಗಾಗಿ ಆಸ್ಪತ್ರೆ ಕಟ್ಟಿಸುವಂತೆ ಪ್ರೇರೇಪಿಸಿತು. ಇಂದು ಇವರು ಕಠಿಣ ಪರಿಶ್ರಮದಿಂದ ಕಟ್ಟಿರುವ ಆಸ್ಪತ್ರೆಯಲ್ಲಿ ಸಾವಿರಾರು ಬಡವರಿಗೆ ಯಾವುದೇ ಶುಲ್ಕವಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಈ ಭೂಗರ್ಭದಲ್ಲಿ ಇಂತಹ ಎಷ್ಟೋ ವ್ಯಕ್ತಿಗಳಿದ್ದಾರೆ, ನಾರೀಮಣಿಗಳಿದ್ದಾರೆ, ಅವರು ಯಾರಿಗೂ ಗೊತ್ತಿಲ್ಲ, ಅವರನ್ನು ಯಾರೂ ಗುರುತು ಹಿಡಿಯುವುದಿಲ್ಲ ಎಂದು ನನಗೆ ಗೊತ್ತಿದೆ. ಇಂತಹ ವ್ಯಕ್ತಿಗಳನ್ನು ಗುರುತಿಸದೇ ಹೋದರೆ ಅದು ಸಮಾಜಕ್ಕೆ ಆಗುವ ನಷ್ಟ. ಪದ್ಮ ಪುರಸ್ಕಾರ ಒಂದು ಮಾಧ್ಯಮ; ಆದರೆ ನಮ್ಮ ಸುತ್ತ ಮುತ್ತ ಸಮಾಜಕ್ಕಾಗಿ ಜೀವಿಸುವವರು, ಸಮಾಜಕ್ಕಾಗಿ ಮುಡಿಪಾದವರು, ಒಂದಿಲ್ಲೊಂದು ವಿಶೇಷತೆಯನ್ನು ಗುರಿಯಾಗಿಸಿಕೊಂಡು ಜೀವನ ಪೂರ್ತಿ ಕೆಲಸ ಮಾಡುವವರು ಲಕ್ಷಾಂತರ ಜನರಿದ್ದಾರೆ ಎಂದು ನಾನು ದೇಶವಾಸಿಗಳಲ್ಲಿ ಹೇಳಬಯಸುತ್ತೇನೆ. ಕೆಲವೊಮ್ಮೆ ಅವರನ್ನು ಸಮಾಜದ ಮಧ್ಯದಲ್ಲಿ ತರಬೇಕು. ಅವರು ಪ್ರಶಸ್ತಿ, ಪುರಸ್ಕಾರಗಳಿಗೆ ಕೆಲಸ ಮಾಡುವವರಲ್ಲ ಆದರೆ ಅವರ ಕೆಲಸಗಳಿಂದ ನಮಗೆ ಪ್ರೇರಣೆ ಸಿಗುತ್ತದೆ. ಕೆಲವೊಮ್ಮೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಇಂತಹ ಜನರನ್ನು ಕರೆಸಿ ಅವರ ಅನುಭವಗಳನ್ನು ಕೇಳಿಸಿಕೊಳ್ಳಬೇಕು. ಪುರಸ್ಕಾರಗಳಿಗಿಂತ ಮಿಗಿಲಾಗಿ ಸಮಾಜಮುಖಿಯಾಗಿ ಕೂಡ ಸ್ವಲ್ಪ ಪ್ರಯತ್ನ ಇರಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿವರ್ಷ ಜನವರಿ 9 ನ್ನು ನಾವು ಭಾರತೀಯ ಪ್ರವಾಸಿ ದಿನವನ್ನಾಗಿ ಆಚರಿಸುತ್ತೇವೆ. ಪೂಜ್ಯ ಮಹಾತ್ಮಾ ಗಾಂಧಿಯವರು ಜನವರಿ 9 ರಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ್ದು. ಈ ದಿನವನ್ನು ನಾವು ಭಾರತ ಮತ್ತು ವಿಶ್ವದೆಲ್ಲೆಡೆ ಇರುವ ಭಾರತೀಯರ ಮಧ್ಯೆ ಬಿಡಿಸಲಾರದ ಬಂಧದ ಉತ್ಸವ ಆಚರಿಸುತ್ತೇವೆ. ಈ ವರ್ಷ ಭಾರತೀಯ ಪ್ರವಾಸೀ ದಿನದಂದು ನಾವು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದಕ್ಕೆ ವಿಶ್ವದೆಲ್ಲೆಡೆ ಇರುವ ಭಾರತೀಯ ಮೂಲದ ಎಲ್ಲಾ ಸಂಸದರು ಮತ್ತು ಮೇಯರ್ ಗಳನ್ನು ಆಹ್ವಾನಿಸಿದ್ದೆವು. ಆ ಕಾರ್ಯಕ್ರಮದಲ್ಲಿ ಮಲೇಷ್ಯಾ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಪೋರ್ಚುಗಲ್, ಮಾರಿಷಸ್, ಫಿಜಿ, ಟಾಂಜಾನಿಯಾ, ಕೀನ್ಯಾ, ಕೆನಡಾ, ಬ್ರಿಟನ್, ಸುರಿನಾಮ್, ದಕ್ಷಿಣ ಆಫ್ರಿಕಾ, ಅಮೇರಿಕಾ, ಇನ್ನೂ ಬಹಳಷ್ಟು ದೇಶಗಳಿಂದ ಎಲ್ಲೆಲ್ಲಿ ನಮ್ಮ ಭಾರತೀಯ ಮೂಲದ ಮೇಯರ್ ಗಳಿದ್ದಾರೆ, ಎಲ್ಲೆಲ್ಲಿ ಸಂಸದರಿದ್ದಾರೆ ಅವರೆಲ್ಲರೂ ಭಾಗವಹಿಸಿದ್ದರು ಎಂದು ತಿಳಿದು ನಿಮಗೂ ಸಂತೋಷವಾಗಬಹುದು. ವಿಭಿನ್ನ ದೇಶಗಳಲ್ಲಿ ಜೀವಿಸಿರುವ ಭಾರತೀಯ ಮೂಲದ ಜನರು ಆ ದೇಶದ ಸೇವೆಯನ್ನು ಮಾಡುತ್ತಲೇ ಇದ್ದಾರೆ ಜೊತೆ ಜೊತೆಗೆ ಅವರು ಭಾರತದ ಜೊತೆಗೆ ಕೂಡ ತಮ್ಮ ಬಲವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ನನಗೆ ಸಂತಸವಿದೆ. ಈ ಬಾರಿ ಯುರೋಪಿಯಾ ಸಂಘ, ಯುರೋಪಿಯನ್ ಯೂನಿಯನ್ ನನಗೆ ಕಳುಹಿಸಿಕೊಟ್ಟಿರುವ ಕ್ಯಾಲೆಂಡರ್ ನಲ್ಲಿ ಯುರೋಪ್ ನ ವಿಭಿನ್ನ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಉತ್ತಮ ರೀತಿಯಲ್ಲಿ ತೋರಿಸಿದ್ದಾರೆ. ಯುರೋಪ್ ನ ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಮೂಲ ಭಾರತೀಯರು – ಯಾರೋ ಸೈಬರ್ ಸೆಕ್ಯೂರಿಟಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ಯಾರೋ ಆಯುರ್ವೇದಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ, ಮಗದೊಬ್ಬರು ತಮ್ಮ ಸಂಗೀತದಿಂದ ಸಮಾಜದ ಮನಸ್ಸಿಗೆ ಮುದ ನೀಡುತ್ತಿದ್ದಾರೆ, ಮತ್ತಿನ್ಯಾರೋ ತಮ್ಮ ಕವಿತೆಗಳಿಂದ ಮುದ ನೀಡುತ್ತಿದ್ದಾರೆ. ಯಾರೋ ಹವಾಮಾನ ಬದಲಾವಣೆಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ, ಮತ್ಯಾರೋ ಭಾರತೀಯ ಗ್ರಂಥಗಳ ಮೇಲೆ ಕೆಲಸಮಾಡುತ್ತಿದ್ದಾರೆ. ಯಾರೋ ಟ್ರಕ್ ಚಲಾಯಿಸಿ ಗುರುದ್ವಾರಾ ಕಟ್ಟಿದರೆ, ಇನ್ಯಾರೋ ಮಸೀದಿ ಕಟ್ಟಿದ್ದಾರೆ. ಅಂದರೆ ನಮ್ಮ ಜನರು ಎಲ್ಲೇ ಇರಲಿ, ಅವರು ಅಲ್ಲಿಯ ಭೂಮಿಯನ್ನು ಏನಾದರೊಂದು ರೀತಿಯಲ್ಲಿ ಸುಸಜ್ಜಿತಗೊಳಿಸಿದ್ದಾರೆ. ಯುರೋಪಿಯನ್ ಯೂನಿಯನ್ ನ ಈ ಉಲ್ಲೇಖನೀಯ ಕಾರ್ಯಕ್ಕಾಗಿ, ಭಾರತೀಯ ಮೂಲದ ಜನರನ್ನು ಗುರುತಿಸಿ, ಅವರ ಮಾಧ್ಯಮದ ಮೂಲಕ ಜಗತ್ತಿನ ಎಲ್ಲ ಜನರಿಗೆ ಇದರ ಮಾಹಿತಿ ಕೊಟ್ಟಿದ್ದಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ.

ಜನವರಿ 30 ರಂದು ನಮಗೆಲ್ಲರಿಗೂ ಒಂದು ಹೊಸ ದಾರಿಯನ್ನು ತೋರಿಸಿದ ಪೂಜ್ಯ ಬಾಪೂ ರವರ ಪುಣ್ಯ ತಿಥಿ. ಆ ದಿನವನ್ನು ನಾವು ಹುತಾತ್ಮರ ದಿವಸವನ್ನಾಗಿ ಆಚರಿಸುತ್ತೇವೆ. ಆ ದಿನದಂದು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಮಹಾನ್ ಹುತಾತ್ಮರಿಗೆ 11 ಘಂಟೆಗೆ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಶಾಂತಿ ಮತ್ತು ಅಹಿಂಸೆಯ ಮಾರ್ಗ; ಇದೇ ಬಾಪೂ ರವರ ದಾರಿ. ಪೂಜ್ಯ ಬಾಪೂ ರವರು ಯಾವ ಆದರ್ಶಗಳನ್ನು ಪಾಲಿಸಿಕೊಂಡು ಬಾಳಿದರೋ, ಅವರು ಯಾವ ಮಾತುಗಳನ್ನು ನಮಗೆ ಹೇಳಿದರೋ, ಅದು ಭಾರತಕ್ಕೇ ಅಗಲಿ ಅಥವಾ ವಿಶ್ವಕ್ಕೇ ಅಗಲಿ, ವ್ಯಕ್ತಿಗೇ ಆಗಲಿ, ಅಥವಾ ಪರಿವಾರಕ್ಕೆ, ಸಮಾಜಕ್ಕೇ ಅಗಲಿ, ಇಂದಿಗೂ ಕೂಡ ಅತ್ಯಂತ ಪ್ರಸ್ತುತವಾಗಿದೆ. ಅವು ಬರೀ ಸಿದ್ಧಾಂತಗಳಾಗಿರಲಿಲ್ಲ. ವರ್ತಮಾನದಲ್ಲಿ ಕೂಡ ಬಾಪೂರವರ ಮಾತುಗಳು ಎಷ್ಟೊಂದು ಸತ್ಯವಾದವುಗಳು ಎಂದು ನಾವು ಪ್ರತಿ ಹಂತದಲ್ಲಿಯೂ ನೋಡುತ್ತಿದ್ದೇವೆ. ನಾವು ಬಾಪೂರವರ ದಾರಿಯಲ್ಲಿ ನಡೆಯೋಣ, ಎಷ್ಟು ಸಾಧ್ಯವೋ ಅಷ್ಟು ನಡೆಯೋಣ ಎಂದು ಸಂಕಲ್ಪ ಮಾಡಿದರೆ ಅದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಏನಿರಲು ಸಾಧ್ಯ?

ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ 2018 ರ ಶುಭಾಷಯಗಳನ್ನು ತಿಳಿಸುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ಅನಂತಾನಂತ ಧನ್ಯವಾದಗಳು.

ನಮಸ್ಕಾರ.