ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಎಲ್ಲಾ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಇಂದು ಅಭಿನಂದಿಸಿದ್ದಾರೆ. ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರೂ ಅಸಂಖ್ಯಾತ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಅವರು ಕಠಿಣ ಪರಿಶ್ರಮ, ಒಲವು ಮತ್ತು ನಾವಿನ್ಯತೆಗೆ ಸಮಾನಾರ್ಥಕರಾಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಎಲ್ಲ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು! ಅವರ ಅಪ್ರತಿಮ ಸಾಧನೆಗಳನ್ನು ಗೌರವಿಸಲು ಮತ್ತು ಸಂಭ್ರಮಿಸಲು ಭಾರತ ಹೆಮ್ಮೆಪಡುತ್ತದೆ. ಅವರ ಸಮರ್ಪಣೆ ಮತ್ತು ಪರಿಶ್ರಮ ನಿಜಕ್ಕೂ ಪ್ರೇರಣಾದಾಯಕ. ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರೂ ಅಸಂಖ್ಯಾತ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಅವರು ಕಠಿಣ ಪರಿಶ್ರಮ, ಒಲವು ಮತ್ತು ನಾವಿನ್ಯತೆಗೆ ಸಮಾನಾರ್ಥಕರು. ಶ್ರೇಷ್ಠತೆಗಾಗಿ ಶ್ರಮಿಸುವ ಮತ್ತು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಮೌಲ್ಯವನ್ನು ಅವರು ನಮಗೆ ಕಲಿಸುತ್ತಾರೆ.”
https://www.padmaawards.gov.in/Document/pdf/notifications/PadmaAwards/2025.pdf”
*****