Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2023-24 ರಲ್ಲಿ ಈವರೆಗೆ ಅತ್ಯಧಿಕ ಸಂಖ್ಯೆಯ ಪೇಟೆಂಟ್ ಪಡೆದುಕೊಂಡಿರುವುದಕ್ಕಾಗಿ ಅನುಮೋದಿಸಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023-24 ರಲ್ಲಿ ಈವರೆಗೆ ಅತ್ಯಧಿಕ ಸಂಖ್ಯೆಯ ಪೇಟೆಂಟ್ ಪಡೆದುಕೊಂಡಿರುವುದಕ್ಕಾಗಿ ಅನುಮೋದಿಸಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ  ಸಾಮಾಜಿಕ ಜಾಲತಾಣ ಪೋಸ್ಟ್ X ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ತಮ್ಮ X ಖಾತೆಯಲ್ಲಿ ಹೀಗೆ ಹೇಳಿದ್ದಾರೆ. 

“ಇದು ಗಮನಾರ್ಹ ಸಾಧನೆಯಾಗಿದ್ದು, ನಾವೀನ್ಯತೆ ಆಧರಿಸಿದ ಜ್ಞಾನ ಆರ್ಥಿಕತೆಯ ನಿಟ್ಟಿನಲ್ಲಿ ನಮ್ಮ ಪ್ರಯಾಣದಲ್ಲಿ ಇದೊಂದು ಮೈಲಿಗಲ್ಲು. ಭಾರತದ ಯುವಕರು ಇಂತಹ ದಾಪುಗಾಲುಗಳ ದೊಡ್ಡ  ಫಲಾನುಭವಿಗಳಾಗುತ್ತಾರೆ’’ 

***