Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2022 ರ ಸಹಾಯಕ ಕಾರ್ಯದರ್ಶಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ 2020 ರ ಬ್ಯಾಚ್ ನ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಇಂದು 2022 ರ ಸಹಾಯಕ ಕಾರ್ಯದರ್ಶಿ ಕಾರ್ಯಕ್ರಮದಲ್ಲಿ 2020 ರ ಬ್ಯಾಚ್ ನ ಐಎಎಸ್ ಅಧಿಕಾರಿಗಳನ್ನುದ್ದೇಶಿಸಿ  ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಮೃತ ಕಾಲದಲ್ಲಿ ದೇಶ ಸೇವೆ ಮಾಡಲು ಅಧಿಕಾರಿಗಳು ಅವಕಾಶ ಪಡೆದಿದ್ದಾರೆ ಮತ್ತು ಪಂಚ ಪ್ರಾಣವನ್ನು ಅರಿತು ಸಹಾಯ ಮಾಡಬೇಕು. ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಯನ್ನು ಖಚಿತಪಡಿಸಿಕೊಂಡು ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ. ಆವರಣದ ಹೊರಗಡೆ ಆಲೋಚಿಸುವ ಮಹತ್ವವನ್ನು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು ಮತ್ತು ತಮ್ಮ ಪ್ರಯತ್ನಗಳಲ್ಲಿ ಸಮಗ್ರ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಸಮಗ್ರ ವಿಧಾನದ ಮಹತ್ವವನ್ನು ಪ್ರದರ್ಶಿಸಲು ಗತಿಶಕ್ತಿಯಂತಹ ಮೇರು ಯೋಜನೆಗಳು ಉದಾಹರಣೆಯಾಗಿವೆ ಎಂದು  ಉಲ್ಲೇಖಿಸಿದರು.

ನಾವೀನ್ಯದ ಮಹತ್ವದ ಬಗ್ಗೆ ಪ್ರಧಾನಮಂತ್ರಿ ಅವರು ಚರ್ಚಿಸಿದರು ಮತ್ತು ಇದು ಹೇಗೆ ಸಾಮೂಹಿಕ ಪ್ರಯತ್ನವಾಗುತ್ತದೆ ಹಾಗೂ ಇದು ದೇಶದ ಕೆಲಸದ ಸಂಸ್ಕೃತಿಯ ಭಾಗವಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.  ಭಾರತದ ನವೋದ್ಯಮ ಯೋಜನೆ ಬಗ್ಗೆ ಅವರು ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ನವೋದ್ಯಮಗಳ ಸಂಖ್ಯೆ ಹೇಗೆ ಏರಿಕೆಯಾಗಿದೆ ಎಂಬ ಬಗ್ಗೆ ವಿವರಿಸಿದರು. ಇಡೀ ಸರ್ಕಾರದಲ್ಲಿ ಹಲವಾರು ಸಚಿವಾಲಯಗಳು ಒಂದೇ ವಿಧಾನದಡಿ ಒಗ್ಗೂಡಿ ತಂಡವಾಗಿ ಕೆಲಸ ಮಾಡುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.   

ದೆಹಲಿಯಿಂದ ಹೊರಗಡೆ ದೇಶದ ಎಲ್ಲಾ ವಲಯಗಳನ್ನು ಕೇಂದ್ರೀಕರಿಸಿ ಸರ್ಕಾರ ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. ದೆಹಲಿಯಿಂದ ಹೊರ ಭಾಗದಲ್ಲಿ ಪ್ರಮುಖ ಯೋಜನೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವ ಕುರಿತು ಉದಾಹರಣೆ ನೀಡಿದರು. ಅಧಿಕಾರಿಗಳು ತಾವು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸ್ಥಳೀಯ ಜನರೊಂದಿಗೆ ಸಂಪರ್ಕವನ್ನು ಬಲಗೊಳಿಸಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಸಲಹೆ ಮಾಡಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದತ್ತ ಲಕ್ಷ್ಯವನ್ನು ಕೇಂದ್ರೀಕರಿಸಬೇಕು ಮತ್ತು ತಮ್ಮ ಜಿಲ್ಲೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಇರುವ ಅವಕಾಶಗಳನ್ನು ಪರಿಶೋಧಿಸುವಂತೆ ಅವರು ಸೂಚಿಸಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಮನ್ರೇಗಾ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಮಾಡಬೇಕು. ಅಲ್ಲದೇ ಜನರ ಸಹಭಾಗಿತ್ವದ ಮಹತ್ವವನ್ನು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು ಮತ್ತು ಈ ವಿಧಾನ ಅಪೌಷ್ಟಿಕತೆಯನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜನ್ ಧನ್ ಯೋಜನೆ ಯಶಸ್ವಿಯಾಗಿದ್ದು, ಡಿಜಿಟಲ್ ಆರ್ಥಿಕತೆ ಮಹತ್ವದ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು ಮತ್ತು ಹಳ್ಳಿಗಳ ಜನರನ್ನು ಡಿಜಿಟಲ್ ಆರ್ಥಿಕತೆ ಮತ್ತು ಯುಪಿಐ ನೊಂದಿಗೆ ಜೋಡಣೆ ಮಾಡುವ ಬಗ್ಗೆ ಪ್ರಯತ್ನಿಸುವಂತೆ ಸಲಹೆ ಮಾಡಿದರು. ರಾಷ್ಟ್ರ ಸೇವೆ, ಕರ್ವವ್ಯ ನಿರ್ವಹಿಸುವ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ‘ರಾಜಪಥ’ದ ಮನಸ್ಥಿತಿ ಇದೀಗ ‘ಕರ್ತವ್ಯಪಥ’ದ ಭಾವನೆಗೆ ಬದಲಾಗಿದೆ ಎಂದು ಹೇಳಿದರು.     

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರಿಗೆ ಸಹಾಯಕ ಕಾರ್ಯದರ್ಶಿಗಳು ಎಂಟು ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಪೋಷನ್ ಅನ್ವೇಷಕರು, ಪೋಷಣ್ ಅಭಿಯಾನದ ಮೇಲೆ ಸುಧಾರಿತ ನಿಗಾ ಉಪಕರಣ, ಭಾಷಿಣಿ ಮೂಲಕ ಬಹು-ಭಾಷಾ ಧ್ವನಿ ಆಧಾರಿತ ಡಿಜಿಟಲ್ ಪ್ರವೇಶವನ್ನು ಸಕ್ರಿಯಗೊಳಿಸುವುದು, ಸಾಂಸ್ಥಿಕ ದತ್ತಾಂಶ ನಿರ್ವಹಣೆ, ಮಾತೃಭೂಮಿ ಜಿಯೋ ಪೋರ್ಟಲ್ – ಭಾರತದ ಆಡಳಿತಕ್ಕೆ ಸಮಗ್ರ ರಾಷ್ಟ್ರೀಯ ಜಿಯೋ ಪೋರ್ಟಲ್, ಗಡಿ ರಸ್ತೆ ಸಂಘಟನೆ [ಬಿ.ಆರ್.ಒ] ವಲಯದಲ್ಲಿ ಪ್ರವಾಸೋದ್ಯಮ ಅವಕಾಶಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ [ಐಪಿಪಿಬಿ] ಗಳ ಮೂಲಕ ಅಂಚೆ ಕಚೇರಿಗಳ ಬದಲಾವಣೆ, ಬಂಡೆಗಳಂತಹ ಕೃತಕ ರಚನೆಗಳ ಮೂಲಕ ಕರಾವಳಿ ಮೀನುಗಾರಿಕೆಯ ಅಭಿವೃದ್ಧಿ ಮತ್ತು ಜೈವಿಕ ಅನಿಲ – ಭವಿಷ್ಯದ ಇಂಧನ ಕುರಿತು ಕಾರ್ಯಕ್ರಮದಲ್ಲಿ ಎಂಟು ಪ್ರತ್ಯೇಕ್ಷಿಕೆಗಳನ್ನು ನೀಡಿದರು. ಈ ವರ್ಷ 2020 ರ ಬ್ಯಾಚ್ ನ 175 ಐಎಎಸ್ ಅಧಿಕಾರಿಗಳನ್ನು 11.07.2022 ದಿಂದ 07.10.2022 ರ ಅವಧಿಯಲ್ಲಿ ಭಾರತ ಸರ್ಕಾರದ 63 ಸಚಿವಾಲಯಗಳು/ಇಲಾಖೆಗಳಿಗೆ ನೇಮಿಸಲಾಗಿದೆ.    

*****