Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ವೇಟ್ಲಿಫ್ಟರ್ ಅಚಿಂತಾ  ಶೆಯುಲಿ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು


ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೇಟ್ಲಿಫ್ಟರ್ ಅಚಿಂತಾ ಶೆಯಲಿ ಅವರನ್ನು ಅಭಿನಂದಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತೀಯ ತಂಡ ತೆರಳಿದಾಗ ಅಚಿಂತಾ ಶೆಯುಲಿ ಅವರೊಂದಿಗಿನ ಇತ್ತೀಚಿನ ಸಂವಾದವನ್ನು ಶ್ರೀ ಮೋದಿ ಅವರು ಹಂಚಿಕೊಂಡಿದ್ದಾರೆ.

ಟ್ವೀಟ್ನಲ್ಲಿ ಪ್ರಧಾನಮಂತ್ರಿಯವರು ಹೀಗೆ  ಹೇಳಿದ್ದಾರೆ:

“ಪ್ರತಿಭಾನ್ವಿತ ಅಚಿಂತಾ ಶೆಯುಲಿ ಕಾಮನ್ವೆಲ್ತ್ ಕ್ರೀಡಾಕೂಟ ಚಿನ್ನದ ಪದಕವನ್ನು ಗೆದ್ದಿರುವುದಕ್ಕೆ ಸಂತೋಷವಾಗಿದೆ. ಅವರು ಶಾಂತ ಸ್ವಭಾವ ಮತ್ತು ದೃಢತೆಗೆ ಹೆಸರಾಗಿದ್ದಾರೆ. ಅವರು ಈ ವಿಶೇಷ ಸಾಧನೆಗಾಗಿ ಬಹಳಷ್ಟು  ಶ್ರಮ ಪಟ್ಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.”

“ನಮ್ಮ ತಂಡವು ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊರಡುವ ಮೊದಲು, ನಾನು ಅಚಿಂತಾ ಶೆಯುಲಿ ಅವರೊಂದಿಗೆ  ಮಾತನಾಡಿದ್ದೆ. ಅವರ ತಾಯಿ ಮತ್ತು ಸಹೋದರರಿಂದ ಅವರು ಪಡೆದ ಬೆಂಬಲದ ಬಗ್ಗೆ ನಾವು ಚರ್ಚಿಸಿದೆವು. ಪದಕ ಗೆದ್ದಿರುವ ಅವರಿಗೆ ಈಗ ಸಿನೆಮಾ ನೋಡಲು ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ.”

 

***********