Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018ರ ಕಾಮನ್ವೆಲ್ತ್ ಕ್ರೀಡಾಕೂಟದ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ಅಭಿನಂದನೆ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018ರ ಕಾಮನ್ವೆಲ್ತ್ ಕ್ರೀಡಾಕೂಟದ ಭಾರತದ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಪ್ರತಿಯೊಬ್ಬ ಭಾರತೀಯ ಅತೀವ ಹೆಮ್ಮೆಪಡುವಂತೆ ಮಾಡಿದ್ದಾರೆ. ನಮ್ಮ ಎಲ್ಲ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ, ಉತ್ತಮವಾಗಿ ಆಡಿದ್ದಾರೆ. ಪದಕಗಳೊಂದಿಗೆ ಮರಳುತ್ತಿರುವ ಎಲ್ಲ ಅಥ್ಲೀಟ್ ಗಳನ್ನೂ ನಾನು ಅಭಿನಂದಿಸುತ್ತೇನೆ.

 

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಅಥ್ಲೀಟ್ ಗಳು ನಮಗೆ ಸ್ಫೂರ್ತಿ ನೀಡಿದ್ದಾರೆ. ಅವರ ಜೀವನಗಾಥೆ ಅವರ ಸಮರ್ಪಣಾ ಶಕ್ತಿ ಮತ್ತು ಎಂದಿಗೂ ಕೈಚೆಲ್ಲದ ಅವರ ಸ್ವಭಾವ ಮತ್ತು ಅಸಂಖ್ಯಾತ ಅಡೆತಡೆಗಳನ್ನು ಮೀರಿ ಬೆಳೆದು ಸಿಡ್ಬ್ಲ್ಯುಜಿಯಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದನ್ನು ಚಿತ್ರಿಸುತ್ತದೆ.

 

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿನ ಭಾರತದ ಯಶಸ್ಸು ಹೆಚ್ಚಿನ ಯುವಕರಿಗೆ ಕ್ರೀಡೆಯಲ್ಲಿ ಮುಂದೆ ಸಾಗಲು ಉತ್ತೇಜಿಸುತ್ತದೆ ಎಂಬ ವಿಶ್ವಾಸ ನನಗಿದೆ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಸದೃಢರಾಗಿರಬೇಕಾದ ಮಹತ್ವದ ಬಗ್ಗೆ ದೀರ್ಘ ಜಾಗೃತಿ ಮೂಡಿಸುತ್ತದೆ.

 

ಸರ್ಕಾರದಲ್ಲಿರುವ ನಾವು, ಸದೃಢ ಭಾರತ ಚಳವಳಿಯನ್ನು ಬಲಪಡಿಸಲು ಎಲ್ಲ ಸಾಧ್ಯ ಕಾರ್ಯಗಳನ್ನು ಮಾಡುತ್ತಿದ್ದೇವೆ”,  ಎಂದು ಪ್ರಧಾನಮಂತ್ರಿಯವರು ತಮ್ಮ ಸರಣಿ ಟ್ವೀಟ್ ನಲ್ಲಿ ಹೇಳಿದ್ದಾರೆ.