Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2016ರ ರಿಯೋ ಪ್ಯಾರಾಲಂಪಿಕ್ಸ್ ಗಾಗಿ ಭಾರತೀಯ ಅಥ್ಲೀಟ್ ಗಳಿಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ ರಿಯೋ 2016 ಪ್ಯಾರಾಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಥ್ಲೀಟ್ ಗಳಿಗೆ ಶುಭ ಕೋರಿದ್ದಾರೆ.

“ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ ರಿಯೋ 2016 ಪ್ಯಾರಾಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನಮ್ಮ ಅಥ್ಲೀಟ್ ಗಳನ್ನು ಹುರಿದುಂಬಿಸಲು ಭಾರತದ ಜನತೆ ಕಾತರಿಸುತ್ತಿದ್ದಾರೆ.

ರಿಯೋ ಪ್ಯಾರಾಲಂಪಿಕ್ಸ್ 2016ರ ನಮ್ಮ ಎಲ್ಲ ಸಂಭವನೀಯ ಆಟಗಾರರಿಗೂ ನಾವು ಶುಭ ಕೋರುತ್ತೇವೆ. ನಮ್ಮ ಅಥ್ಲೀಟ್ ಗಳು ಶಕ್ತಿಮೀರಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ”, ಎಂದು ಪ್ರಧಾನಿ ಹೇಳಿದ್ದಾರೆ.