ಗೌರವಾನ್ವಿತರೇ,
ನೀವೆಲ್ಲರೂ ನೀಡಿದ ಅಮೂಲ್ಯ ಸಲಹೆಗಳು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನಾನು ಸ್ವಾಗತಿಸುತ್ತೇನೆ. ಭಾರತದ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ, ನನ್ನ ತಂಡವು ನಿಮ್ಮೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳುತ್ತದೆ ಮತ್ತು ನಾವು ಎಲ್ಲಾ ವಿಷಯಗಳ ಬಗ್ಗೆ ಕಾಲಮಿತಿಯೊಳಗೆ ಮುಂದುವರಿಯುತ್ತೇವೆ.
ಗೌರವಾನ್ವಿತರೇ,
ಭಾರತ ಮತ್ತು ಕ್ಯಾರಿಕಾಮ್ ದೇಶಗಳ ನಡುವಿನ ಸಂಬಂಧಗಳು ನಮ್ಮ ಹಂಚಿಕೊಂಡ ಹಿಂದಿನ ಅನುಭವಗಳು, ನಮ್ಮ ಹಂಚಿಕೆಯ ಇಂದಿನ ಅಗತ್ಯಗಳು ಮತ್ತು ಭವಿಷ್ಯಕ್ಕಾಗಿ ನಮ್ಮ ಹಂಚಿಕೆಯ ಆಕಾಂಕ್ಷೆಗಳನ್ನು ಆಧರಿಸಿವೆ.
ಈ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳಲ್ಲಿ, ನಾವು ಜಾಗತಿಕ ದಕ್ಷಿಣದ ಕಾಳಜಿಗಳು ಮತ್ತು ಅದರ ಆದ್ಯತೆಗಳ ಮೇಲೆ ಕೇಂದ್ರೀಕರಿಸಿದ್ದೇವೆ.
ಭಾರತದ ಅಧ್ಯಕ್ಷತೆಯಲ್ಲಿ, ಕಳೆದ ವರ್ಷ, ಜಿ-20 ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಿತು. ನಿನ್ನೆ, ಬ್ರೆಜಿಲ್ ನಲ್ಲಿಯೂ, ಜಾಗತಿಕ ದಕ್ಷಿಣದ ದೇಶಗಳಿಗೆ ಆದ್ಯತೆ ನೀಡುವಂತೆ ನಾನು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದೇನೆ.
ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯ ಎಂಬುದನ್ನು ಭಾರತ ಮತ್ತು ನಮ್ಮ ಎಲ್ಲ ಕ್ಯಾರಿಕಾಮ್ ಸ್ನೇಹಿತರು ಒಪ್ಪುತ್ತಾರೆ ಎಂದು ನನಗೆ ಸಂತೋಷವಾಗಿದೆ.
ಅವರು ಇಂದಿನ ಜಗತ್ತಿಗೆ ಮತ್ತು ಇಂದಿನ ಸಮಾಜಕ್ಕೆ ತಮ್ಮನ್ನು ತಾವು ರೂಪಿಸಿಕೊಳ್ಳಬೇಕು. ಇದು ಸಮಯದ ಅಗತ್ಯವಾಗಿದೆ. ಇದನ್ನು ನಿಜವಾಗಿಸಲು, ಕ್ಯಾರಿಕಾಮ್ ಮತ್ತು ಕ್ಯಾರಿಕಾಮ್ ನ ಬೆಂಬಲದೊಂದಿಗೆ ನಿಕಟ ಸಹಕಾರ ಬಹಳ ಮುಖ್ಯ.
ಗೌರವಾನ್ವಿತರೇ,
ಇಂದು ನಮ್ಮ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಹಕಾರಕ್ಕೆ ಹೊಸ ಆಯಾಮಗಳನ್ನು ಸೇರಿಸುತ್ತವೆ. ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಭಾರತ-ಕ್ಯಾರಿಕಾಮ್ ಜಂಟಿ ಆಯೋಗ ಮತ್ತು ಜಂಟಿ ಕಾರ್ಯ ಗುಂಪುಗಳು ಪ್ರಮುಖ ಪಾತ್ರ ವಹಿಸಲಿವೆ.
ನಮ್ಮ ಸಕಾರಾತ್ಮಕ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ, 3ನೇ ಕ್ಯಾರಿಕಾಮ್ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ.
ಮತ್ತೊಮ್ಮೆ ನಾನು ಅಧ್ಯಕ್ಷ ಇರ್ಫಾನ್ ಅಲಿ, ಪ್ರಧಾನಿ ಡಿಕಾನ್ ಮಿಚೆಲ್, ಕ್ಯಾರಿಕಾಮ್ ಸಚಿವಾಲಯ ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
*****
Addressing the India-CARICOM Summit in Guyana. https://t.co/29dUSNYvuC
— Narendra Modi (@narendramodi) November 20, 2024
With CARICOM leaders at the 2nd India-CARICOM Summit in Guyana.
— Narendra Modi (@narendramodi) November 20, 2024
This Summit reflects our shared commitment to strengthening ties with the Caribbean nations, fostering cooperation across diverse sectors.
Together, we are working to build a bright future for the coming… pic.twitter.com/5ZLRkzjdJn