ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಶ್ರೀಲಂಕಾದ ಕೊಲಂಬೊದಲ್ಲಿ 1996ರ ಶ್ರೀಲಂಕಾ ಕ್ರಿಕೆಟ್ ತಂಡದೊಂದಿಗೆ ಸಂವಾದ ನಡೆಸಿದರು. ಈ ಸಂವಾದ ಸಂದರ್ಭದಲ್ಲಿ, ಕ್ರಿಕೆಟ್ ಆಟಗಾರರು ಗೌರವಾನ್ವಿತ ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗುತ್ತಿರುವುದಕ್ಕೆ ಅಪಾರ ಸಂತೋಷ ಮತ್ತು ಕೃತಜ್ಞತೆ ಸಲ್ಲಿಸಿದರು. ಭಾರತೀಯರು ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಭಾವಶಾಲಿ ಪ್ರದರ್ಶನವನ್ನು, ವಿಶೇಷವಾಗಿ ಶಾಶ್ವತ ಪ್ರಭಾವ ಬೀರಿದ ಸ್ಮರಣೀಯ ವಿಜಯವನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಅವರು ನೆನಪಿಸಿಕೊಂಡರು. ಅವರ ಸಾಧನೆಯು ರಾಷ್ಟ್ರದೊಂದಿಗೆ ಪ್ರತಿಧ್ವನಿಸುತ್ತಿದೆ ಎಂದು ಅವರು ಹೇಳಿದರು.
2010ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಭಾಗವಹಿಸಿದ್ದನ್ನು ಶ್ರೀ ಮೋದಿ ನೆನಪಿಸಿಕೊಂಡರು, ಅಲ್ಲಿ ಶ್ರೀಲಂಕಾದ ಕ್ರಿಕೆಟಿಗರೊಬ್ಬರು ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದನ್ನು ಅವರು ನೆನಪು ಮಾಡಿದರು. ಭಾರತದ 1983ರ ವಿಶ್ವಕಪ್ ಗೆಲುವು ಮತ್ತು ಶ್ರೀಲಂಕಾ ತಂಡದ 1996ರ ವಿಶ್ವಕಪ್ ಗೆಲುವಿನ ಪರಿವರ್ತನೀಯ ಪರಿಣಾಮವನ್ನು ಅವರು ಪ್ರಸ್ತಾಪಿಸಿದರು, ಈ ಸಾಧನೆಗಳು ಕ್ರಿಕೆಟ್ ಜಗತ್ತನ್ನು ಹೇಗೆ ಮರುರೂಪಿಸಿದವು ಎಂಬುದನ್ನು ಪ್ರಸ್ತಾಪಿಸಿದರು. ಟಿ-20 ಕ್ರಿಕೆಟ್‌ನ ವಿಕಸನವನ್ನು 1996ರ ಪಂದ್ಯಗಳಲ್ಲಿ ಅಂದಿನ ಶ್ರೀಲಂಕಾ ಕ್ರಿಕೆಟ್ ತಂಡ ಪ್ರದರ್ಶಿಸಿದ ನವೀನ ಆಟದ ಶೈಲಿಯಿಂದ ಗುರುತಿಸಬಹುದು ಎಂದು ಪ್ರಧಾನ ಮಂತ್ರಿ ಹೇಳಿದರು. ಇತರೆ ಆಟಗಾರರರ ಪ್ರಸ್ತುತ ಪ್ರಯತ್ನಗಳ ಬಗ್ಗೆ ಕೇಳಲು ಅವರು ಆಸಕ್ತಿ ವ್ಯಕ್ತಪಡಿಸಿದರು, ಅವರು ಇನ್ನೂ ಕ್ರಿಕೆಟ್ ಮತ್ತು ತರಬೇತಿ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ವಿಚಾರಿಸಿದರು.
1996ರ ಬಾಂಬ್ ಸ್ಫೋಟಗಳ ನಂತರ ಇತರೆ ತಂಡಗಳು ಹಿಂದೆ ಸರಿದ ಹೊರತಾಗಿಯೂ ಶ್ರೀಲಂಕಾದಲ್ಲಿ ಭಾಗವಹಿಸುವ ಭಾರತದ ನಿರ್ಧಾರವನ್ನು ನೆನಪಿಸಿಕೊಂಡ ಶ್ರೀ ಮೋದಿ, ಶ್ರೀಲಂಕಾದ ಆಟಗಾರರು ತಮ್ಮ ಕಷ್ಟದ ಸಮಯದಲ್ಲಿ ಭಾರತದ ಒಗ್ಗಟ್ಟಿಗೆ ತೋರಿಸಿದ ಮೆಚ್ಚುಗೆಯನ್ನು ಶ್ಲಾಘಿಸಿದರು. ಭಾರತ ಪ್ರದರ್ಶಿಸಿದ ನಿರಂತರ ಕ್ರೀಡಾ ಮನೋಭಾವದ ಬಗ್ಗೆ ಅವರು ಮಾತನಾಡಿದರು, ಶ್ರೀಲಂಕಾವನ್ನು ಬೆಚ್ಚಿಬೀಳಿಸಿದ 1996ರ ಬಾಂಬ್ ಸ್ಫೋಟ ಸೇರಿದಂತೆ ಪ್ರತಿಕೂಲ ಪರಿಸ್ಥಿತಿಯನ್ನು ಅದು ಹೇಗೆ ಜಯಿಸಿತು ಎಂಬುದನ್ನು ಪ್ರಸ್ತಾಪಿಸಿದರು. 2019ರ ಚರ್ಚ್ ಬಾಂಬ್ ಸ್ಫೋಟಗಳ ನಂತರ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದರು, ಇದು ಅವರನ್ನು ಹಾಗೆ ಮಾಡಿದ ಮೊದಲ ಜಾಗತಿಕ ನಾಯಕರನ್ನಾಗಿ ಮಾಡಿತು. 2019ರಲ್ಲಿ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡ ಪ್ರವಾಸ ಮಾಡಿತು. ದೇಶದ ಶಾಶ್ವತ ಮೌಲ್ಯಗಳನ್ನು ಪ್ರತಿಬಿಂಬಿಸುವ ಮೂಲಕ ಸಂತೋಷ ಮತ್ತು ದುಃಖ ಎರಡರಲ್ಲೂ ಶ್ರೀಲಂಕಾದೊಂದಿಗೆ ನಿಲ್ಲುವ ಭಾರತದ ಅಚಲ ಮನೋಭಾವ ಮತ್ತು ಬದ್ಧತೆಯನ್ನು ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು.
ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಪ್ರಸ್ತುತ ತರಬೇತುದಾರರಾಗಿರುವ ಶ್ರೀ ಸನತ್ ಜಯಸೂರ್ಯ ಅವರು, ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಶ್ರೀಲಂಕಾಕ್ಕೆ ನೀಡಿದ ಅಚಲ ಬೆಂಬಲಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಶ್ರೀಲಂಕಾದ ಜಾಫ್ನಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಕ್ರಿಕೆಟ್ ಮೈದಾನ ನಿರ್ಮಿಸಲು ಭಾರತವು ಕಾರ್ಯಸಾಧ್ಯತೆಯನ್ನು ಅನ್ವೇಷಿಸಬಹುದೇ ಎಂದು ಅವರು ಪ್ರಧಾನಿ ಅವರಿಗೆ ಮನವಿ ಮಾಡಿದರು, ಇದು ಶ್ರೀಲಂಕಾದ ಈಶಾನ್ಯ ಪ್ರದೇಶದ ಮಹತ್ವಾಕಾಂಕ್ಷಿ ಕ್ರಿಕೆಟಿಗರು ಮತ್ತು ಜನರಿಗೆ ಸಹಾಯ ಮಾಡುತ್ತದೆ ಎಂದರು.
ಶ್ರೀ ಜಯಸೂರ್ಯ ಅವರ ಹೇಳಿಕೆಗಳಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. “ಭಾರತವು ‘ನೆರೆಹೊರೆಯವರು ಮೊದಲು’ ನೀತಿಗೆ ಬದ್ಧವಾಗಿದೆ”. ಇತ್ತೀಚೆಗೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಭಾರತ ಮೊದಲ ಸ್ಪಂದನೆ ನೀಡಿತು ಎಂದು ಉಲ್ಲೇಖಿಸಿ, ನೆರೆ ರಾಷ್ಟ್ರಗಳಲ್ಲಿನ ಬಿಕ್ಕಟ್ಟುಗಳಿಗೆ ಭಾರತವು ತ್ವರಿತವಾಗಿ ಸ್ಪಂದಿಸುತ್ತಿದೆ. ನೆರೆಯ ಮತ್ತು ಸ್ನೇಹಪರ ರಾಷ್ಟ್ರಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ರಾಷ್ಟ್ರವಾಗಿ ಭಾರತವು ಜವಾಬ್ದಾರಿಯುತ ಪ್ರಜ್ಞೆ ಹೊಂದಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ಭಾರತವು ಸ್ಥಿರವಾದ ಬೆಂಬಲ ನೀಡಿದೆ. ಸವಾಲುಗಳನ್ನು ನಿವಾರಿಸುವಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡುವುದು ಭಾರತವು ಒಂದು ಜವಾಬ್ದಾರಿಯಾಗಿ ನೋಡುತ್ತದೆ. ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಜಾಫ್ನಾ ಬಗ್ಗೆ ಶ್ರೀ ಜಯಸೂರ್ಯ ಅವರ ಕಾಳಜಿಯನ್ನು ಶ್ಲಾಘಿಸಿದರು, ಅಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮಹತ್ವವಿದೆ. ತಮ್ಮ ತಂಡವು ಈ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿ, ಅದರ ಕಾರ್ಯಸಾಧ್ಯತೆಯನ್ನು ಅನ್ವೇಷಿಸುತ್ತದೆ ಎಂದು ಅವರು ಭರವಸೆ ನೀಡಿದರು.
ಎಲ್ಲರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತು ಪರಿಚಿತ ಮುಖಗಳನ್ನು ನೋಡಲು ಸಿಕ್ಕ ಅವಕಾಶಕ್ಕಾಗಿ ಪ್ರಧಾನಮಂತ್ರಿ ಅವರು ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ಶ್ರೀಲಂಕಾದೊಂದಿಗೆ ಭಾರತದ ಶಾಶ್ವತ ಸಂಬಂಧವನ್ನು ಪುನರುಚ್ಚರಿಸುವ ಮೂಲಕ ಅವರು ಸಂವಾದ ಮುಕ್ತಾಯಗೊಳಿಸಿದರು, ಶ್ರೀಲಂಕಾ ಕ್ರಿಕೆಟ್ ಸಮುದಾಯವು ಕೈಗೊಂಡ ಯಾವುದೇ ಉಪಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
*****
Cricket connect!
— Narendra Modi (@narendramodi) April 5, 2025
Delighted to interact with members of the 1996 Sri Lankan cricket team, which won the World Cup that year. This team captured the imagination of countless sports lovers! pic.twitter.com/2ZprMmOtz6
A wonderful conversation with members of the Sri Lankan cricket team that won the 1996 World Cup. Do watch… pic.twitter.com/3cOD0rBZjA
— Narendra Modi (@narendramodi) April 6, 2025