Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

18ನೇ ಭಾರತ – ಆಸಿಯಾನ್ ಶೃಂಗ ಸಭೆಯ ಸಹ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

18ನೇ ಭಾರತ – ಆಸಿಯಾನ್ ಶೃಂಗ ಸಭೆಯ ಸಹ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 18 ನೇ ಭಾರತ – ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಆಸಿಯಾನ್ ನ ಹಾಲಿ ಅಧ್ಯಕ್ಷರಾದ ಬ್ರೂನಿಯಾದ ಗೌರವಾನ್ವಿತ ಸುಲ್ತಾನ್ ಹಾಜಿ ಹಸನಲ್ ಬೋಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಅವರು ಭಾಗವಹಿಸಿದ್ದರು. ಶೃಂಗ ಸಭೆ ವರ್ಚುವಲ್ ಮೂಲಕ ನಡೆಯಿತು ಮತ್ತು ಆಸಿಯಾನ್ ರಾಷ್ಟ್ರಗಳ ಸದಸ್ಯರು ಪಾಲ್ಗೊಂಡಿದ್ದರು.

ಭಾರತ – ಆಸಿಯಾನ್ ರಾಷ್ಟ್ರಗಳ ಸಹಭಾಗಿತ್ವದ 30 ನೇ ವಾರ್ಷಿಕೋತ್ಸವದ ಮೈಲಿಗಲ್ಲು ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದ ಆಸಿಯಾನ್ ರಾಷ್ಟ್ರಗಳ ನಾಯಕರು, 2022 ನೇ ವರ್ಷವನ್ನು ಭಾರತ – ಆಸಿಯಾನ್ ದೇಶಗಳ ನಡುವಿನ “ಸ್ನೇಹದ ವರ್ಷ” ಎಂದು ಪ್ರಕಟಿಸಿದರು.

ಪೂರ್ವದತ್ತ ನೋಡು ಕುರಿತ ಭಾರತದ ನೀತಿ ಮತ್ತು ಫೆಸಿಫಿಕ್ ವಲಯದಲ್ಲಿ ಆಸಿಯಾನ್ ಕೇಂದ್ರಿತ ಭಾರತದ ದೃಷ್ಟಿಕೋನದ ಬಗ್ಗೆ ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. 

ಆಸಿಯಾನ್ ಹೊರನೋಟವಾದ ಭಾರತ ಫೆಸಿಪಿಕ್ [ಎ.ಒ.ಐ.ಪಿ] ಮತ್ತು ಭಾರತ ಫೆಸಿಫಿಕ್ ಕಡಲು ವಲಯದ ಉಪಕ್ರಮಗಳ [ಐ.ಪಿ.ಒ.ಐ] ನಡುವೆ ಸಮನ್ವಯತೆಯನ್ನು ಸಾಧಿಸುವ ಕ್ರಮವನ್ನು ಪ್ರಧಾನಮಂತ್ರಿ ಅವರು ಮತ್ತು ಆಸಿಯಾನ್ ದೇಶಗಳ ನಾಯಕರು ಸ್ವಾಗತಿಸಿದರು. ಭಾರತ – ಆಸಿಯಾನ್ ನಡುವೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧತೆ ತರುವ ಕುರಿತಂತೆ ಜಂಟಿ ಹೇಳಿಕೆಯನ್ನು ಇದೇ ಸಂದರ್ಭದಲ್ಲಿ ಅಡಕಗೊಳಿಸಲಾಯಿತು.

ಈ ವಲಯದಲ್ಲಿ ಕೋವಿಡ್ – 19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನಗಳ ಕುರಿತು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು ಮತ್ತು ಈ ನಿಟ್ಟಿನಲ್ಲಿ ಆಸಿಯಾನ್ ಉಪಕ್ರಮಗಳಿಗೆ ಬೆಂಬಲ ನೀಡುವುದಾಗಿಯೂ ಪುನರುಚ್ಚರಿಸಿದರು. ಮ್ಯಾನ್ಮಾರ್ ಗೆ ಆಸಿಯಾನ್ ಕೊಡುಗೆಯ ಭಾಗವಾಗಿ ಭಾರತ 200,000 ಅಮೆರಿಕನ್ ಡಾಲರ್ ಮೊತ್ತದ ವೈದ್ಯಕೀಯ ಪರಿಕರಗಳನ್ನು ಮತ್ತು ಆಸಿಯಾನ್ ಕೋವಿಡ್ – 19 ಪ್ರತಿಕ್ರಿಯೆ ನಿಧಿಗೆ 1 ದಶಲಕ್ಷ ಅಮೆರಿಕನ್ ಡಾಲರ್ ಕೊಡುಗೆಯನ್ನು ಪ್ರಕಟಿಸಿತು.

ಭಾರತ – ಆಸಿಯಾನ್ ನಡುವೆ ಭೌತಿಕ, ಡಿಜಿಟಲ್ ಮತ್ತು ಜನರಿಂದ ಜನರ ನಡುವೆ ಸಂಪರ್ಕವನ್ನು ವಿಸ್ತರಿಸುವ ಕುರಿತಂತೆ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ – ಆಸಿಯಾನ್ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಪ್ರಧಾನಮಂತ್ರಿ ಅವರು, ಆಸಿಯಾನ್ ಸಾಂಸ್ಕೃತಿಕ ಪರಂಪರೆ ಪಟ್ಟಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ವ್ಯಾಪಾರ ಮತ್ತು ಹೂಡಿಕೆ ಕುರಿತು ಕೋವಿಡ್ ನಂತರದ ಆರ್ಥಿಕ ಚೇತರಿಕೆಗಾಗಿ ಪೂರೈಕೆ ಸರಪಳಿಗಳ ವಲಯವನ್ನು ವೈವಿದ್ಯಮಯಗೊಳಿಸುವುದು ಹಾಗು ಸ್ಥಿತಿ ಸ್ಥಾಪಕತ್ವ ಸ್ಥಾಪಿಸುವ ಕುರಿತು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಭಾರತ – ಆಸಿಯಾನ್ ಎಫ್.ಟಿ.ಎ ಅನ್ನು ನವೀಕರಿಸುವ ಅಗತ್ಯವನ್ನು ಪ್ರತಿಪಾದಿಸಿದರು. 

ಆಸಿಯಾನ್ ನಾಯಕರು ಈ ಪ್ರದೇಶದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ ಭಾರತದ ಪಾತ್ರವನ್ನು ವಿಶೇಷವಾಗಿ ಕೋವಿಡ್ – 19 ಸಂದರ್ಭದಲ್ಲಿ ಲಸಿಕೆ ಪೂರೈಕೆ ಕ್ರಮಗಳನ್ನು ಶ‍್ಲಾಘಿಸಿದರು. ಭಾರತ – ಫೆಸಿಫಿಕ್ ವಲಯದಲ್ಲಿ ಆಸಿಯಾನ್ ಕೇಂದ್ರಿತ ಬೆಂಬಲವನ್ನು ಸ್ವಾಗತಿಸಿದರು ಮತ್ತು ಈ ಪ್ರದೇಶದಲ್ಲಿ ಭಾರತ – ಆಸಿಯಾನ್ ಸಹಕಾರವನ್ನು ಎದುರು ನೋಡುತ್ತಿರುವುದಾಗಿ ಈ ನಾಯಕರು ಜಂಟಿ ಹೇಳಿಕೆ ಮೂಲಕ ತಿಳಿಸಿದ್ದಾರೆ. 

ಭಯೋತ್ಪಾದನೆ ಮತ್ತು ದಕ್ಷಿಣ ಚೈನಾ ಕಡಲು ಪ್ರದೇಶದಲ್ಲಿನ ಪರಿಸ್ಥಿತಿ ಒಳಗೊಂಡಂತೆ ಕಳವಳ ಹಾಗೂ ಪರಸ್ಪರ ಹಿತಾಸಕ್ತಿಯ ವಿಷಯಗಳು ಸಹ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪವಾದವು. ಅಂತರರಾಷ್ಟ್ರೀಯ ಕಾನೂನಿಗೆ ವಿಶೇಷವಾಗಿ ಯು.ಎನ್.ಸಿ.ಎಲ್.ಒ.ಎಸ್ ಅನ್ನು ಎತ್ತಿ ಹಿಡಿಯುವ ಮೂಲಕ ಈ ಪ್ರದೇಶದಲ್ಲಿ ನಿಯಮಗಳ ಆಧಾರಿತ ಆದೇಶವನ್ನು ಜಾರಿಗೊಳಿಸುವ ಪ್ರಾಮುಖ್ಯದ ಬಗೆಗೂ ಚರ್ಚಿಸಲಾಯಿತು.  ದಕ್ಷಿಣ ಚೈನಾ ಕಡಲು ಭಾಗದಲ್ಲಿ ಶಾಂತಿ, ಸ್ಥಿರತೆ, ರಕ್ಷಣೆ ಮತ್ತು ಭದ್ರತೆಯನ್ನು ಮುಂದುವರಿಸುವ ಮತ್ತು ಉತ್ತೇಜಿಸುವ ಪ್ರಾಮುಖ್ಯವನ್ನು ಈ ನಾಯಕರು ದೃಢಪಡಿಸಿದರು ಹಾಗೂ ವಾಯು ಮಾರ್ಗ ಮತ್ತು ನೌಕಾಯಾನ ವಲಯದ ಸ್ವಾತಂತ್ರ್ಯವನ್ನು ಖಾತರಿಪಡಿಸಿದರು.

ಆಳವಾದ, ದೃಢವಾದ ಮತ್ತು ಬಹುಮುಖಿ ಸಂಬಂಧವನ್ನು ಭಾರತ – ಆಸಿಯಾನ್ ಹೊಂದಿದೆ ಹಾಗೂ 18 ನೇ ಭಾರತ – ಆಸಿಯಾನ್ ಶೃಂಗ ಸಭೆಯು ಈ ಬಾಂಧವ್ಯದ ವಿವಿಧ ಅಂಶಗಳನ್ನು ಪರಿಶೀಲಿಸಲು ಅವಕಾಶ ಒದಗಿಸಿತು. ಉನ್ನತ ಮಟ್ಟದಲ್ಲಿ ಭಾರತ – ಆಸಿಯಾನ್ ಕಾರ್ಯತಂತ್ರದ ಸಹಭಾಗಿತ್ವದ ಭವಿಷ್ಯಕ್ಕೆ ಶೃಂಗ ಸಭೆ ನಿರ್ದೇಶನ ನೀಡಿತು.

***