Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

17ನೇ ಭಾರತ – ಆಸಿಯಾನ್ ವರ್ಚುವಲ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ಭಾಷಾಂತರ

17ನೇ ಭಾರತ – ಆಸಿಯಾನ್ ವರ್ಚುವಲ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ಭಾಷಾಂತರ


ನಮಸ್ತೆ,

ಘನತೆವೆತ್ತ ಪ್ರಧಾನಮಂತ್ರಿ ಎಂಗುಯೇನ್ ಸುವಾನ್ ಫುಕ್ ಅವರೇ,

ಮಾನ್ಯರೇ,
ಪ್ರತಿವರ್ಷದಂತೆ, ನಾವು ಒಬ್ಬರ ಕೈ ಒಬ್ಬರು ಹಿಡಿದು ಸಾಂಪ್ರದಾಯಿಕ ಕೌಟುಂಬಿಕ ಚಿತ್ರ ತೆಗೆಸಿಕೊಳ್ಳಲು ಸಾಧ್ಯವಿಲ್ಲ.! ಆದರೂ ನಾವೆಲ್ಲರೂ ವರ್ಚುವಲ್ ಮಾಧ್ಯಮದ ಮೂಲಕ ಭೇಟಿ ಆಗುತ್ತಿರುವುದು ನನಗೆ ಸಂತೋಷ ತಂದಿದೆ.

ಮೊದಲನೆಯದಾಗಿ, ಪ್ರಸ್ತುತ ಆಸಿಯಾನ್ ಅಧ್ಯಕ್ಷತೆ ವಹಿಸಿರುವ ವಿಯೆಟ್ನಾಂ ಮತ್ತು ಆಸಿಯಾನ್ನಲ್ಲಿ ಪ್ರಸ್ತುತ ಭಾರತ ದೇಶದ ಸಂಯೋಜಕವಾಗಿರುವ ಥೈಲ್ಯಾಂಡ್ ಗೆ ನನ್ನ ಎಲ್ಲ ಪ್ರಶಂಸೆಗಳನ್ನು ಸಲ್ಲಿಸುತ್ತೇನೆ. ಕೋವಿಡ್ ನಿಂದಾದ ಸಂಕಷ್ಟದ ನಡುವೆಯೂ, ನೀವು ನಿಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಯಿಸಿದ್ದೀರಿ.

ಘನತೆವೆತ್ತರೇ,
ಭಾರತ ಮತ್ತು ಆಸಿಯಾನ್ ವ್ಯೂಹಾತ್ಮಕ ಪಾಲುದಾರಿಕೆ ನಮ್ಮ ಹಂಚಿಕೆಯ ಶ್ರೀಮಂತ ಐತಿಹಾಸಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಆಧಾರದಲ್ಲಿದೆ. ಆಸಿಯಾನ್ ಗುಂಪು ಆರಂಭದಿಂದಲೂ ನಮ್ಮ ಪೂರ್ವದತ್ತ ಕ್ರಮದ ನೀತಿಯ ನೋಡಲ್ ಕೇಂದ್ರವಾಗಿದೆ.

ಭಾರತದಇಂಡೋಪೆಸಿಫಿಕ್ ಸಾಗರಗಳ ಉಪಕ್ರಮಮತ್ತು ಆಸಿಯಾನ್ಇಂಡೋ ಪೆಸಿಫಿಕ್ ದೃಷ್ಟಿಕೋನ ನಡುವೆ ಸಾಕಷ್ಟು ಆಪ್ತತೆ ಇದೆ. “ವಲಯದ ಎಲ್ಲರಿಗೂ ಸುರಕ್ಷತೆ ಮತ್ತು ಪ್ರಗತಿಗೆಒಗ್ಗೂಡಿಸುವ ಮತ್ತು ಸ್ಪಂದನಾತ್ಮಕ ಆಸಿಯಾನ್ಅವಶ್ಯಕವಾಗಿದೆ ಎಂದು ನಾವು ದೃಢವಾಗಿ ನಂಬುತ್ತೇವೆ.

ಭಾರತ ಮತ್ತು ಆಸಿಯಾನ್ ನಡುವೆ ಭೌತಿಕ, ಆರ್ಥಿಕ, ಸಾಮಾಜಿಕ, ಡಿಜಿಟಲ್, ಹಣಕಾಸು, ಸಾಗರಎಲ್ಲ ಸ್ವರೂಪದ ಸಂಪರ್ಕ ಉಪಕ್ರಮಗಳನ್ನು ತ್ವರಿತಗೊಳಿಸುವುದು ನಮಗೆ ಉನ್ನತ ಆದ್ಯತೆಯಾಗಿದೆ.

ನಾವು ಕಳೆದ ಕೆಲವು ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತೀರಾ ಹತ್ತಿರಕ್ಕೆ ಬಂದಿದ್ದೇವೆ. ಇಂದಿನ ಸಂವಾದ, ವರ್ಚುವಲ್ ಮಾಧ್ಯಮದ ಮೂಲಕ ನಡೆಯುತ್ತಿದ್ದರೂ, ನಮ್ಮ ಅಂತರವನ್ನು ಮತ್ತಷ್ಟು ತಗ್ಗಿಸಲು ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ.
ಇಂದಿನ ಸಂವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.

***

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ