Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

150ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯಗಳ ಬೀಜಗಳನ್ನು ಸಂರಕ್ಷಿಸುತ್ತಿರುವ ಲಹರಿ ಬಾಯಿಯ ಪ್ರಯತ್ನಗಳಿಗೆ ಪ್ರಧಾನ ಮಂತ್ರಿ ಶ್ಲಾಘನೆ


ಮಧ್ಯಪ್ರದೇಶದ ದಿಂಡೋರಿಯ 27 ವರ್ಷದ ಬುಡಕಟ್ಟು ಮಹಿಳೆ ಲಹರಿ ಬಾಯಿ ಸಿರಿಧಾನ್ಯಗಳ ಬ್ರಾಂಡ್ ಅಂಬಾಸಿಡರ್ ಆಗಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಲಹರಿ ಬಾಯಿ ಅವರು 150 ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯ ಬೀಜಗಳನ್ನು ಸಂರಕ್ಷಿಸಿದ್ದಾರೆ.

ಡಿಡಿ ನ್ಯೂಸಿನ ಟ್ವೀಟ್ ಗೆ  ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ;

“ಶ್ರೀ ಅನ್ನ ಬಗ್ಗೆ ಗಮನಾರ್ಹ ಉತ್ಸಾಹವನ್ನು ತೋರಿಸಿರುವ ಲಹರಿ ಬಾಯಿ ಬಗ್ಗೆ ಹೆಮ್ಮೆಯಿದೆ. ಅವರ ಪ್ರಯತ್ನಗಳು ಇನ್ನೂ ಅನೇಕರಿಗೆ ಸ್ಫೂರ್ತಿ ನೀಡುತ್ತವೆ.” ಎಂದು ಹೇಳಿದ್ದಾರೆ.

******