Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

130 ವರ್ಷಗಳ ಹಿಂದೆ ಇದೇ ದಿನ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನ ಮಂತ್ರಿ


ಸ್ವಾಮಿ ವಿವೇಕಾನಂದರು 130 ವರ್ಷಗಳ ಹಿಂದೆ ಇದೇ ದಿನದಂದು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣ ಇಂದಿಗೂ ಜಾಗತಿಕ ಏಕತೆ ಮತ್ತು ಸೌಹಾರ್ದತೆಯ ಸ್ಪಷ್ಟ ಕರೆಯಾಗಿ ಪ್ರತಿಧ್ವನಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:

“130 ವರ್ಷಗಳ ಹಿಂದೆ ಇದೇ ದಿನದಂದು ಸ್ವಾಮಿ ವಿವೇಕಾನಂದರು ಮಾಡಿದ  ಚಿಕಾಗೋ ಭಾಷಣವು ಇಂದಿಗೂ ಕೂಡಾ ಜಾಗತಿಕ ಏಕತೆ ಮತ್ತು ಸಾಮರಸ್ಯದ ಸ್ಪಷ್ಟ ಕರೆಯಾಗಿ ಪ್ರತಿಧ್ವನಿಸುತ್ತದೆ. ಮಾನವೀಯತೆಯ ವಿಶ್ವ ಭ್ರಾತೃತ್ವವನ್ನು ಒತ್ತಿಹೇಳುವ ಅವರ ಕಾಲಾತೀತ ಸಂದೇಶವು ನಮಗೆ ಮಾರ್ಗದರ್ಶಿ ಬೆಳಕಾಗಿ ಉಳಿದಿದೆ.” ಎಂದವರು ಹೇಳಿದ್ದಾರೆ.

 

***