Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

130 ಕೋಟಿ ಭಾರತೀಯರು ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಭಾರತ ಹೊಸ ಎತ್ತರ ತಲುಪುವುದನ್ನು ಖಾತ್ರಿಪಡಿಸಲು ಕಠಿಣವಾಗಿ ಶ್ರಮಿಸುತ್ತದೆ ಎಂಬ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 130 ಕೋಟಿ ಭಾರತೀಯರು ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಭಾರತ ಹೊಸ ಎತ್ತರ ತಲುಪುವುದನ್ನು ಖಚಿತಪಡಿಸಲು, ಕಠಿಣವಾಗಿ ಶ್ರಮಿಸುತ್ತದೆ ಎಂಬ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

ಭಾರತ ಆಗಸ್ಟ್ ಮಾಸವನ್ನು ಪ್ರವೇಶಿಸಿದ್ದು, ಅಮೃತ ಮಹೋತ್ಸವದ ಆರಂಭಕ್ಕೆ ನಾಂದಿ ಹಾಡಿದೆ, ಪ್ರತಿಯೊಬ್ಬ ಭಾರತೀಯರಿಗೂ ಹೃದಯಸ್ಪರ್ಶಿಯಾದ ಅನೇಕ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ದಾಖಲೆಯ ಲಸಿಕೆ ಹಾಕಿರುವುದು ಮತ್ತು ಅತಿ ಹೆಚ್ಚಿನ ಜಿಎಸ್ಟಿ ಸಂಖ್ಯೆ ಚೈತನ್ಯದಾಯಕ ಆರ್ಥಿಕ ಚಟುವಟಿಕೆಯ ಸಂಕೇತ ನೀಡಿದೆ.

ಪಿ.ವಿ. ಸಿಂಧು ಅವರು, ಅರ್ಹ ಗೆಲುವಿನೊಂದಿಗೆ ಪದಕ ಪಡೆದಿರುವುದಷ್ಟೇ ಅಲ್ಲ, ಒಲಿಂಪಿಕ್ಸ್ ನಲ್ಲಿ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಐತಿಹಾಸಿಕ ಪ್ರಯತ್ನವನ್ನೂ ನಾವು ನೋಡುತ್ತಿದ್ದೇವೆ. 130 ಕೋಟಿ ಭಾರತೀಯರೂ ಭಾರತ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಹೊಸ ಎತ್ತರವನ್ನು ತಲುಪಲು ಕಠಿಣವಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ ಎಂಬ ಆಶಾವಾದ ನನ್ನದಾಗಿದೆಎಂದು ತಿಳಿಸಿದ್ದಾರೆ.

***