ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರಅಧ್ಯಕ್ಷತೆಯಲ್ಲಿಂದುನಡೆದಕೇಂದ್ರಸಚಿವಸಂಪುಟಸಭೆ, ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆ (ಐಐಸಿಎ)ಯ ಕುರಿತ ಯೋಜನೆಯನ್ನು ಮತ್ತೆ ಮೂರು ಆರ್ಥಿಕ ವರ್ಷಗಳ ಕಾಲ (2017-18ರಿಂದ 2019-20ರ ವಿತ್ತೀಯ ವರ್ಷ) ಮುಂದುವರಿಸಲು ಮತ್ತು ಸಂಸ್ಥೆಗೆ 18 ಕೋಟಿ ರೂಪಾಯಿಗಳ ಅನುದಾನ ಒದಗಿಸಲು ತನ್ನ ಅನುಮೋದನೆ ನೀಡಿದೆ. ಇದು 2019-20ರ ಆರ್ಥಿಕ ವರ್ಷದ ಹೊತ್ತಿಗೆ ಸಂಸ್ಥೆಯನ್ನು ಸ್ವಾವಲಂಬಿಯನ್ನಾಗಿಸಲಿದೆ.
ಪರಿಣಾಮ:
ಹಿನ್ನೆಲೆ:
ಐಐಸಿಎಯಲ್ಲಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕುರಿತ ರಾಷ್ಟ್ರೀಯ ಪ್ರತಿಷ್ಠಾನ (ಎನ್.ಎಫ್.ಸಿ.ಎಸ್.ಆರ್.)ವು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಸಿಎಸ್.ಆರ್) ಉಪಕ್ರಮಗಳಿಗೆ ಜವಾಬ್ದಾರಿಯಾಗಿರುತ್ತದೆ. ಈ ಪ್ರತಿಷ್ಠಾನವನ್ನು ಕಂಪನಿಗಳ ಕಾಯಿದೆ 2013ರ ಹೊಸ ನಿಯಮಾವಳಿಗಳ ರೀತ್ಯ ರೂಪಿಸಲಾಗಿದೆ. ಎನ್.ಎಫ್.ಸಿ.ಎಸ್.ಆರ್. ಸಾಮಾಜಿಕ ಸೇರ್ಪಡೆಗಾಗಿ ಸಾಂಸ್ಥಿಕ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಸಿ.ಎಸ್.ಆರ್. ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತದೆ.
ಐಐಸಿಎ, ಸಾಂಸ್ಥಿಕ ವಲಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ನೀತಿ ನಿರೂಪಕರು, ನಿಯಂತ್ರಕರು ಮತ್ತು ಇತರ ಬಾಧ್ಯಸ್ಥರಿಗೆ ವಿಚಾರಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲು ಬೆಂಬಲ ನೀಡುವ ಚಿಂತಕರ ಚಾವಡಿ ಮತ್ತು ದತ್ತಾಂಶ ಹಾಗೂ ಜ್ಞಾನದ ಭಂಡಾರವಾಗಿದೆ. ಸಾಂಸ್ಥಿಕ ಕಾನೂನು, ಸಾಂಸ್ಥಿಕ ಆಡಳಿತ, ಸಿಎಸ್.ಆರ್, ಲೆಕ್ಕದ ಗುಣಮಟ್ಟ, ಹೂಡಿಕೆದಾರರ ಶಿಕ್ಷಣ ಇತ್ಯಾದಿ ರಂಗದಲ್ಲಿನ ಬಾಧ್ಯಸ್ಥರಿಗೆ ಇದು ಸೇವೆಯನ್ನು ಒದಗಿಸುತ್ತದೆ. ವ್ಯವಸ್ಥಾಪನೆ, ಕಾನೂನು, ಲೆಕ್ಕಪತ್ರ ಇತ್ಯಾದಿಯಲ್ಲಿ ತಾವೇ ಸ್ವಯಂ ಪ್ರತ್ಯೇಕ ತಜ್ಞರನ್ನು ನೇಮಿಸಿಕೊಳ್ಳಲು ಶಕ್ತರಲ್ಲದ ಮೊದಲ ಪೀಳಿಗೆಯ ಉದ್ದಿಮೆದಾರರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಐಐಸಿಎಯ ವಿವಿಧ ಚಟುವಟಿಕೆಗಳು ಬಹುಶ್ರುತವಾದ ಕೌಶಲವನ್ನು ಪಡೆದುಕೊಳ್ಳಲು ನೆರವಾಗುತ್ತವೆ.
***