Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

10 ವರ್ಷಗಳ ಮುದ್ರಾ ಯೋಜನೆ- ಸಬಲೀಕರಣ ಮತ್ತು ಉದ್ಯಮಶೀಲತೆಯ ಗಾಥೆ : ಪ್ರಧಾನಮಂತ್ರಿ


ಪ್ರಧಾನಮಂತ್ರಿ ಮುದ್ರಾ ಯೋಜನೆಯು 10 ವರ್ಷಗಳನ್ನು ಪೂರ್ಣಗೊಳಿಸಿದ್ದು, ಇದು “ಸಬಲೀಕರಣ ಮತ್ತು ಉದ್ಯಮಶೀಲತೆಯ” ಪಯಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ. ಭಾರತದ ಜನರು ಸೂಕ್ತ ಬೆಂಬಲದೊಂದಿಗೆ ಅದ್ಭುತಗಳನ್ನು ಸೃಷ್ಟಿಸಬಲ್ಲರು ಎಂದು ಅವರು ಹೇಳಿದ್ದಾರೆ.

ಮುದ್ರಾ ಯೋಜನೆಯು ಆರಂಭವಾದಾಗಿನಿಂದ ಸುಮಾರು 33 ಲಕ್ಷ ಕೋಟಿ ರೂಪಾಯಿ ಮೌಲ್ಯದ 52 ಕೋಟಿಗೂ ಹೆಚ್ಚು ಅಡಮಾನ ರಹಿತ ಸಾಲಗಳನ್ನು ವಿತರಿಸಲಾಗಿದೆ. ಈ ಪೈಕಿ ಸುಮಾರು ಶೇಕಡ 70 ರಷ್ಟು ಸಾಲಗಳನ್ನು ಮಹಿಳೆಯರಿಗೆ ಮತ್ತು ಶೇಕಡ 50 ರಷ್ಟು ಸಾಲವನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರ ಹಿಂದುಳಿದ ವರ್ಗಗಳ ಉದ್ಯಮಿಗಳಿಗೆ ವಿತರಿಸಲಾಗಿದೆ. ಮೊದಲ ಬಾರಿಗೆ ಉದ್ಯಮ ಆರಂಭಿಸುವವರಿಗೆ ₹10 ಲಕ್ಷ ಕೋಟಿ ಸಾಲ ನೀಡುತ್ತಾ ಅವರನ್ನು ಸಬಲೀಕರಣಗೊಳಿಸಿದೆ ಮತ್ತು ಮೊದಲ ಮೂರು ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಬಿಹಾರದಂತಹ ರಾಜ್ಯಗಳಲ್ಲಿ ಸುಮಾರು 6 ಕೋಟಿ ಸಾಲಗಳು ಮಂಜೂರಾಗಿದ್ದು, ಬಿಹಾರವು ನಾಯಕ ರಾಜ್ಯವಾಗಿ ಹೊರಹೊಮ್ಮಿದೆ.  ಇದು ಭಾರತದಾದ್ಯಂತ ಉದ್ಯಮಶೀಲತೆಯ ಸದೃಢ ಮನೋಭಾವವನ್ನು ಪ್ರದರ್ಶಿಸಿದೆ.

ಮುದ್ರಾ ಯೋಜನೆಯು ಜನರ ಜೀವನವನ್ನು ಪರಿವರ್ತಿಸುವಲ್ಲಿ ವಹಿಸಿರುವ ಮಹತ್ವದ ಪಾತ್ರದ ಕುರಿತು MyGovIndia ನ ಎಕ್ಸ್ ಥ್ರೆಡ್ ಗಳಿಗೆ ಪ್ರಧಾನಮಂತ್ರಿಗಳು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

“#10YearsofMUDRA ಸಬಲೀಕರಣ ಮತ್ತು ಉದ್ಯಮಶೀಲತೆಯ ಗಾಥೆಯಾಗಿದೆ. ಸೂಕ್ತ ಬೆಂಬಲದೊಂದಿಗೆ ಭಾರತದ ಜನರು ಅದ್ಭುತಗಳನ್ನು ಮಾಡಬಲ್ಲರು ಎಂಬುದನ್ನು ಅದು ತೋರಿಸಿದೆ!”

 

 

*****