Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

10ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 –  ಸಂದರ್ಭದಲ್ಲಿ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

10ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 –  ಸಂದರ್ಭದಲ್ಲಿ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಫಿಲಿಪ್ ಜೆಸಿಂಟೊ ನ್ಯೂಸಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ಜನವರಿ 2024 ರಂದು ಗಾಂಧಿನಗರದಲ್ಲಿ ಭೇಟಿ ಮಾಡಿದರು.
 
ಮೊಜಾಂಬಿಕ್ ನ ಅಭಿವೃದ್ಧಿ ಆದ್ಯತೆಗಳನ್ನು ಬೆಂಬಲಿಸಲು ತಮ್ಮ ಬಲವಾದ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದರು. ರಕ್ಷಣೆ, ಭಯೋತ್ಪಾದನೆ ನಿಗ್ರಹ, ಶಕ್ತಿ, ಆರೋಗ್ಯ, ವ್ಯಾಪಾರ ಮತ್ತು ಹೂಡಿಕೆ, ಕೃಷಿ, ಜಲ ಭದ್ರತೆ, ಗಣಿಗಾರಿಕೆ, ಸಾಮರ್ಥ್ಯ ವೃದ್ಧಿ , ಕಡಲು ಮತ್ತು ಕಡಲತಡಿಯ ಸಹಕಾರ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಪ್ರಯೋಜನಾತ್ಮಕ ಚರ್ಚೆ ನಡೆಸಿದರು. ವ್ಯಾಪಾರ, ಸಂಸ್ಕೃತಿ ಮತ್ತು ಜನರ ಸಂಬಂಧಗಳಿಗೆ ಉತ್ತೇಜನ ನೀಡಲು ಉಭಯ ದೇಶಗಳು ವಾಯು ಸಂಪರ್ಕವನ್ನು ಹೆಚ್ಚಿಸಲು ಕೆಲಸ ಮಾಡಬಹುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಲಹೆ ನೀಡಿದರು.

ಆಫ್ರಿಕನ್ ಒಕ್ಕೂಟ (ಎ.ಯು.) ಅನ್ನು ಜಿ-20 ನಲ್ಲಿ ಸೇರ್ಪಡೆಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಶ್ರೀ ಫಿಲಿಪ್ ಜೆಸಿಂಟೊ ನ್ಯೂಸಿ ಅವರು ಧನ್ಯವಾದ ಅರ್ಪಿಸಿದರು. ಆಫ್ರಿಕನ್ ಒಕ್ಕೂಟ (ಎ.ಯು.) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

2023 ರ ಜನವರಿ ಮತ್ತು ನವೆಂಬರ್ನಲ್ಲಿ ನಡೆದ “ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆ”ಯಲ್ಲಿ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಶ್ರೀ ಫಿಲಿಪ್ ಜೆಸಿಂಟೊ ನ್ಯೂಸಿ ಅವರ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳಿಗಾಗಿ, ಮತ್ತು ಕಡಲ ಭದ್ರತೆಯ ಕ್ಷೇತ್ರದ ಬೆಂಬಲ ಹಾಗೂ ಸಹಕಾರಕ್ಕಾಗಿ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಶ್ರೀ ಫಿಲಿಪ್ ಜೆಸಿಂಟೊ ನ್ಯೂಸಿ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು 

ಸದಾ ಸಂಪರ್ಕದಲ್ಲಿರಲು ಮತ್ತು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳ ವೇಗವನ್ನು ಕಾಪಾಡಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡರು.

***