Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

10ನೇ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟ 2024ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತೀಯ ತಂಡಕ್ಕೆ ಪ್ರಧಾನಿಯವರಿಂದ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೌಲಾಲಂಪುರದಲ್ಲಿ ನಡೆದ 10ನೇ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟ 2024ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು Xನ ಪೋಸ್ಟ್ ನಲ್ಲಿ: 

“ಕೌಲಾಲಂಪುರದಲ್ಲಿ ನಡೆದ 10ನೇ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟ 2024ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ನಮ್ಮ ಭಾರತೀಯ ತಂಡಕ್ಕೆ ಅಭಿನಂದನೆಗಳು! ನಮ್ಮ ಪ್ರತಿಭಾವಂತ ಕ್ರೀಡಾಪಟುಗಳು ಅಸಾಧಾರಣವಾದ 55 ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ. ಇದು ಈ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಗಮನಾರ್ಹ ಸಾಧನೆಯು ಇಡೀ ರಾಷ್ಟ್ರವನ್ನು, ವಿಶೇಷವಾಗಿ ಕ್ರೀಡಾಸಕ್ತರು ಹಾಗೂ ಕ್ರೀಡೆಯ ಬಗ್ಗೆ ಉತ್ಸಾಹ ಹೊಂದಿರುವವರನ್ನು ಪ್ರೇರೇಪಿಸಿದೆ” ಎಂದು ಬರೆದಿದ್ದಾರೆ.

 

 

*****