ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ(ಡಿಆರ್)ಗಳ ಹೆಚ್ಚುವರಿ ಕಂತುಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. 01.07.2023 ರಂತೆ ಬೆಲೆ ಏರಿಕೆಯ ವಿರುದ್ಧ ಜೀವನ ವ್ಯವಸ್ಥೆ ಸರಿದೂಗಿಸಲು ಮೂಲ ವೇತನ/ಪಿಂಚಣಿಯ 42% ಅಸ್ತಿತ್ವದಲ್ಲಿರುವ ದರಕ್ಕಿಂತ 4% ರಷ್ಟು ಹೆಚ್ಚಳ ಇದರಲ್ಲಿ ಸೇರಿದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ಸ್ವೀಕೃತ ಪದ್ಧತಿಯ ಸೂತ್ರಕ್ಕೆ ಅನುಗುಣವಾಗಿ ರೂಪಿಸಲಾಗಿದೆ.
ತುಟ್ಟಿ ಭತ್ಯೆ(ಡಿಎ) ಮತ್ತು ತುಟ್ಟಿ ಪರಿಹಾರ(ಡಿಆರ್)ಗಳೆರಡರ ಹೆಚ್ಚುವರಿ ಕಂತುಗಳ ವಿತರಣೆಗಾಗಿ ಸರಕಾರದ ಬೊಕ್ಕಸಕ್ಕಾಗುವ ಸಂಯೋಜಿತ ಪರಿಣಾಮವು (ಹೆಚ್ಚುವರಿ ಹೊರೆ) ವಾರ್ಷಿಕ ರೂ.12,857 ಕೋಟಿಗಳಾಗಿರುತ್ತದೆ. ಇದರಿಂದ ಸುಮಾರು 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
*****