Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

70ನೇ ಸ್ವಾತಂತ್ರ್ಯ ವರ್ಷದ ಆಚರಣೆಯ ಅಂಗವಾಗಿ ತಿರಂಗ ಯಾತ್ರೆಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ

70ನೇ ಸ್ವಾತಂತ್ರ್ಯ ವರ್ಷದ ಆಚರಣೆಯ ಅಂಗವಾಗಿ ತಿರಂಗ ಯಾತ್ರೆಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ


ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮ ಸ್ಥಳ ಮಧ್ಯಪ್ರದೇಶದ ಭಬ್ರಾದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮ ಸ್ಥಳ ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯ ಭಬ್ರಾದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿಯವರು ಹುತಾತ್ಮ ಚಂದ್ರಶೇಖರ ಆಜಾದ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅವರ ಜನ್ಮಸ್ಥಳದಲ್ಲಿರುವ ಸ್ಮಾರಕಕ್ಕೂ ಭೇಟಿ ನೀಡಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿ ಅವರು ಇದೇ ದಿನದಂದು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದ್ದರು ಎಂದು ಹೇಳಿದರು. ತಮ್ಮ ಪ್ರಾಣವನ್ನೇ ಬಲಿಕೊಟ್ಟವರನ್ನು ಸ್ಮರಿಸಿ ಆಗ ನಾವು ಸ್ವಾತಂತ್ರ್ಯದ ಉಸಿರಾಡಲು ಸಾಧ್ಯ ಎಂದು ಜನತೆಗೆ ಪ್ರಧಾನಿ ತಿಳಿಸಿದರು.

ಚಂದ್ರಶೇಖರ ಆಜಾದ್ ಅವರ ಜನ್ಮಸ್ಥಳಕ್ಕೆ ಬರುವುದು ಒಂದು ಗೌರವದ ವಿಚಾರ. ಇಂಥವರು ನಮಗೆ ರಾಷ್ಟ್ರಕ್ಕಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತಾರೆ ಎಂದು ಹೇಳಿದರು.

ರಾಷ್ಟ್ರಕ್ಕಾಗಿ ಪ್ರಾಣವನ್ನು ಕೊಡುವ ಅವಕಾಶ ಯಾರಿಗೆ ಇಲ್ಲವೋ ಅಂತಹ ನಾವೆರೆಲ್ಲರೂ, ನಮ್ಮ ದೇಶಕ್ಕಾಗಿ ಬಾಳುವ ಅವಕಾಶ ಪಡೆಯಬೇಕು ಎಂದು ತಿಳಿಸಿದರು. ದೇಶ ಮುಂದೆ ಸಾಗುವುದು ಅದರ ಜನರ ಶಕ್ತಿಯಿಂದ, ಅವರ ಆಶೋತ್ತರಗಳಿಂದ ಮತ್ತು ಅವರ ಶ್ರಮದಿಂದ ಎಂದು ಪ್ರಧಾನಿ ಪ್ರತಿಪಾದಿಸಿದರು.

ಪ್ರತಿಯೊಬ್ಬ ಭಾರತೀಯರೂ ಕಾಶ್ಮೀರವನ್ನು ಪ್ರೀತಿಸುತ್ತಾರೆ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಬಯಸುತ್ತಾರೆ. ಆದರೆ ಕೆಲವು ತಪ್ಪು ಮಾರ್ಗದರ್ಶನ ಪಡೆದ ಶಕ್ತಿಗಳು ಕಾಶ್ಮೀರದ ಶ್ರೇಷ್ಠ ಪರಂಪರೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಕಾಶ್ಮೀರದ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಬಯಸುತ್ತದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಕಾಶ್ಮೀರವನ್ನು ಭೂಲೋಕದ ಸ್ವರ್ಗ ಮಾಡುವ ಕಲ್ಪನೆಯೊಂದಿಗೆ ಮುಂದೆ ಬರುವಂತೆ ಕಾಶ್ಮೀರದ ಯುವಕರಿಗೆ ಮನವಿ ನೀಡಿದರು. ಕಾಶ್ಮೀರ ಶಾಂತಿ ಬಯಸುತ್ತದೆ ಮತ್ತು ಕಾಶ್ಮೀರದ ಜನರು ಪ್ರವಾಸೋದ್ಯಮದ ಮೂಲಕ ಹೆಚ್ಚು ಗಳಿಸಲು ಇಚ್ಛಿಸುತ್ತಾರೆ ಎಂದರು.

ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಗಳೆರಡೂ ಅಭಿವೃದ್ಧಿಯ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು. ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿತನದ ಕಲ್ಪನೆಯನ್ನು ಮುಂದುವರಿಸುವುದಾಗಿ ಹೇಳಿದರು.

ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಸಮಾನ ಸಂಕಲ್ಪದೊಂದಿಗೆ ನಾವೆಲ್ಲರೂ ಸೇರಿ ಒಗ್ಗೂಡಿ ದುಡಿಯುವ ಅಗತ್ಯ ಈ ಹೊತ್ತಿನಲ್ಲಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಭಾರತದ ನಿರ್ದಿಷ್ಟ ಸ್ಥಾನವನ್ನು ಮರು ಬರೆಯಲು ತ್ರಿವರ್ಣಧ್ವಜ ನಮ್ಮನ್ನು ಒಗ್ಗೂಡಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದರು.

ನಂತರ ಪ್ರಧಾನಮಂತ್ರಿಯವರು 70ನೇ ಸ್ವಾತಂತ್ರ್ಯ ವರ್ಷದ ಆಚರಣೆಯ ಅಂಗವಾಗಿ ತಿರಂಗ ಯಾತ್ರೆಗೆ ಚಾಲನೆ ನೀಡಿದರು.