Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣ

​​​​​​​90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣ


ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ಅಮಿತ್ ಶಾ, ಇಂಟರ್‌ಪೋಲ್ ಅಧ್ಯಕ್ಷ ಶ್ರೀ ಅಹ್ಮದ್ ನಾಸರ್ ಅಲ್-ರೈಸಿ, ಇಂಟರ್‌ಪೋಲ್ ಪ್ರಧಾನ ಕಾರ್ಯದರ್ಶಿ ಶ್ರೀ ಜುರ್ಗೆನ್ ಸ್ಟಾಕ್, ಸಿಬಿಐ ನಿರ್ದೇಶಕ ಶ್ರೀ ಎಸ್.ಕೆ. ಜೈಸ್ವಾಲ್ ಆದರಣೀಯ ಪ್ರತಿನಿಧಿಗಳೆ ಮತ್ತು ಇಲ್ಲಿ ಭಾಗವಹಿಸಿರುವವರೇ,

90ನೇ ಇಂಟರ್‌ಪೋಲ್ ಮಹಾಸಭೆಗೆ ನಾನು ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ. ಭಾರತ ಮತ್ತು ಇಂಟರ್ ಪೋಲ್ ಎರಡಕ್ಕೂ ಮಹತ್ವದ  ಸಮಯದಲ್ಲಿ ನೀವು ಇಲ್ಲಿಗೆ ಬಂದಿರುವುದು ಉತ್ತಮವಾಗಿದೆ. ಭಾರತವು 2022 ರಲ್ಲಿ 76ನೇ  ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತಿದೆ. ಇದು ನಮ್ಮ ಜನರು, ಸಂಸ್ಕೃತಿ ಮತ್ತು ಸಾಧನೆಗಳ ಆಚರಣೆಯಾಗಿದೆ. ನಾವು ಎಲ್ಲಿಂದ ಬಂದಿದ್ದೇವೆಂದು ಹಿಂತಿರುಗಿ ನೋಡುವ  ಮತ್ತು ನಾವು ಎಲ್ಲಿಗೆ ಹೋಗಬೇಕೆಂದು ಮುಂದೆ ನೋಡುವ ಸಮಯ ಇದಾಗಿದೆ.  ಇಂಟರ್ ಪೋಲ್  ಕೂಡ ಐತಿಹಾಸಿಕ ಮೈಲಿಗಲ್ಲಿನ ಸನಿಹದಲ್ಲಿದೆ. 2023 ರಲ್ಲಿ ಇಂಟರ್ ಪೋಲ್ ತನ್ನ ಸ್ಥಾಪನೆಯ 100 ವರ್ಷಗಳನ್ನು ಆಚರಿಸಲಿದೆ. ಇದು ಆನಂದಿಸುವ ಮತ್ತು ಪ್ರತಿಬಿಂಬಿಸಲು ಉತ್ತಮ ಮ ಸಮಯವಾಗಿದೆ. ಹಿನ್ನಡೆಗಳಿಂದ ಕಲಿತು, ವಿಜಯಗಳನ್ನು ಆಚರಿಸುವ ಜೊತೆಗೆ ಭವಿಷ್ಯವನ್ನು ಭರವಸೆಯಿಂದ ನೋಡಬೇಕಾಗಿದೆ. 

ಮಿತ್ರರೇ, 
ಇಂಟರ್ ಪೋಲ್ ನ ಪರಿಕಲ್ಪನೆಯು ಭಾರತೀಯ ತತ್ತ್ವಶಾಸ್ತ್ರದ ನಾನಾ ಅಂಶಗಳೊಂದಿಗೆ ಬೆಸೆದುಕೊಂಡಿದೆ. ಇಂಟರ್ ಪೋಲ್ ನ ಧ್ಯೇಯವಾಕ್ಯವೆಂದರೆ: ಸುರಕ್ಷಿತ ಜಗತ್ತಿಗೆ ಪೊಲೀಸರನ್ನು ಸಂಪರ್ಕಿಸುವುದು. ನಿಮ್ಮಲ್ಲಿ ಅನೇಕರು ವೇದಗಳನ್ನು ಪ್ರಪಂಚದ ಅತ್ಯಂತ ಹಳೆಯ ಗ್ರಂಥಗಳಲ್ಲಿ ಒಂದೆಂದು ಕೇಳಿರಬಹುದು. ವೇದಗಳಲ್ಲಿನ ಒಂದು ಶ್ಲೋಕ ಹೇಳುತ್ತದೆ: 

’ಆ ನೋ ಭದ್ರಃ ಕ್ರತವೋ ಯನ್ತು ವಿಶ್ವತಃ’ ಎಂದರೆ ಉದಾತ್ತ ಆಲೋಚನೆಗಳು ಎಲ್ಲ ದಿಕ್ಕುಗಳಿಂದಲೂ ಬರಲಿ ಎಂದು. ಜಗತ್ತನ್ನು ಉತ್ತಮ ಜಾಗವನ್ನಾಗಿ ಮಾಡಲು ಇದು ಸಾರ್ವತ್ರಿಕ ಸಹಕಾರದ ಕರೆಯಾಗಿದೆ. ಭಾರತದ ಆತ್ಮದಲ್ಲಿ ವಿಶಿಷ್ಟವಾದ ಜಾಗತಿಕ ದೂರದೃಷ್ಟಿಯಿದೆ. ಇದಕ್ಕಾಗಿಯೇ, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರನ್ನು ಕಳುಹಿಸುವಲ್ಲಿ ಭಾರತವು ಅಗ್ರ ಕೊಡುಗೆ ನೀಡುವವರಲ್ಲಿ ಒಂದಾಗಿದೆ. ನಾವು ಸ್ವಾತಂತ್ರ್ಯ ಪಡೆಯುವ ಮುಂಚೆಯೇ, ಜಗತ್ತನ್ನು ಉತ್ತಮ ಸ್ಥಳವನ್ನಾಗಿಸಲು ನಾವು ತ್ಯಾಗಗಳನ್ನು ಮಾಡಿದ್ದೇವೆ. ಜಾಗತಿಕ ಮಹಾಯುದ್ಧಗಳಲ್ಲಿ ಸಾವಿರಾರು ಭಾರತೀಯರು ಹೋರಾಡಿ ಸತ್ತರು. ಹವಾಮಾನ ಗುರಿಗಳಿಂದ ಹಿಡಿದು ಕೋವಿಡ್ ಲಸಿಕೆಗಳವರೆಗೆ, ಭಾರತವು ಯಾವುದೇ ರೀತಿಯ ಬಿಕ್ಕಟ್ಟಿನಲ್ಲಿ ಮುಂದಾಳತ್ವ ವಹಿಸುವ ಇಚ್ಛೆಯನ್ನು ತೋರಿಸಿದೆ. ಮತ್ತು ಇದೀಗ, ರಾಷ್ಟ್ರಗಳು ಮತ್ತು ಸಮಾಜಗಳು ಅಂತರ್ ಮುಖಿಯಾಗಿ ಕಾಣುತ್ತಿರುವ ಸಮಯದಲ್ಲಿ, ಭಾರತವು ಕಡಿಮೆಯಲ್ಲ ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡುತ್ತದೆ. ಸ್ಥಳೀಯ ಕಲ್ಯಾಣಕ್ಕಾಗಿ ಜಾಗತಿಕ ಸಹಕಾರ- ಇದು ನಮ್ಮ ಕರೆಯಾಗಿದೆ. 

ಮಿತ್ರರೇ,
ಪ್ರಾಚೀನ ಭಾರತದ ತತ್ವಜ್ಞಾನಿ ಚಾಣಕ್ಯರಿಂದ ಕಾನೂನು ಜಾರಿಯ ತತ್ತ್ವಶಾಸ್ತ್ರವನ್ನು ಉತ್ತಮವಾಗಿ ವಿವರಿಸಿದ್ದಾರೆ. “ಅನ್ವೀಕ್ಷನ ತ್ರಿಕೋನವು ಯೋಗ-ಕ್ಷೇಮ ಸಾಧನೋ ದಂಡದ ಬಗ್ಗೆ ಹೇಳುತ್ತದೆ. ತಸ್ಯ ನೀತಿ: ದಂಡನೀತಿ:; ಅಲಬ್ಧಲಭರ್ತಾ, ಲಬ್ಧಪರಿರಕ್ಷಣೀ, ರಕ್ಷಿತ್ವಿವರ್ಧಿನೀ, ವೃದ್ಧಸ್ಯ ತೀರ್ಥೇಷು ಪ್ರಧಾನಿ. आन्वीक्षकी त्रयी वार्तानां योग-क्षेम साधनो दण्डः। तस्य नीतिः दण्डनीतिः; अलब्धलाभार्था, लब्धपरिरक्षणी, रक्षितविवर्धनी, वृद्धस्य तीर्थेषु प्रतिपादनी च । ಇದರರ್ಥ, ಸಮಾಜದ ವಸ್ತು ಮತ್ತು ಆಧ್ಯಾತ್ಮಿಕ ಕಲ್ಯಾಣವು ಕಾನೂನು ಜಾರಿಯ ಮೂಲಕ ಮಾತ್ರ ಸಾಧ್ಯ ಎಂದು.  ಚಾಣಕ್ಯನ ಪ್ರಕಾರ ಕಾನೂನು ಜಾರಿಯು ನಮ್ಮಲ್ಲಿ ಇಲ್ಲದಿರುವುದನ್ನು ಪಡೆಯಲು, ನಮ್ಮಲ್ಲಿರುವುದನ್ನು ರಕ್ಷಿಸಲು, ನಾವು ರಕ್ಷಿಸಿರುವುದನ್ನು ಹೆಚ್ಚಿಸಲು ಮತ್ತು ಅದನ್ನು ಅತ್ಯಂತ ಅರ್ಹರಿಗೆ ವಿತರಿಸಲು ಸಹಾಯ ಮಾಡುತ್ತದೆ. ಇದು ಎಲ್ಲವನ್ನೂ ಒಳಗೊಂಡ ಕಾನೂನು ಜಾರಿಯ ನೋಟವಾಗಿದೆ. ಪ್ರಪಂಚದಾದ್ಯಂತ ಪೊಲೀಸ್ ಪಡೆಗಳು ಕೇವಲ ಜನರನ್ನು ರಕ್ಷಿಸುತ್ತಿಲ್ಲ, ಆದರೆ ಸಾಮಾಜಿಕ ಕಲ್ಯಾಣವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅವರು ಸಮಾಜದ ಯಾವುದೇ ಬಿಕ್ಕಟ್ಟಿನ ಸಮಯದಲ್ಲೂ ಪ್ರತಿಕ್ರಿಯಿಸಲು ಸದಾ ಮುಂಚೂಣಿಯಲ್ಲಿರುತ್ತಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇದು ಹೆಚ್ಚು ದೃಢಪಟ್ಟಿತು. ಜಗತ್ತಿನಾದ್ಯಂತ, ಪೊಲೀಸ್ ಸಿಬ್ಬಂದಿ ಜನರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಅವರಲ್ಲಿ ಅನೇಕರು ಜನರ ಸೇವೆಯಲ್ಲಿ ಅಂತಿಮ ತ್ಯಾಗವನ್ನೂ ಮಾಡಿದ್ದಾರೆ. ಅವರಿಗೆ ನಾನು ನಮನಗಳನ್ನು ಸಲ್ಲಿಸುತ್ತೇನೆ. ಜಗತ್ತೇ ಸ್ಥಗಿತವಾದರೂ ಸಹ ಅದನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ದೂರವಾಗುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಇಂಟರ್ ಪೋಲ್ ವಾರದ 7ದಿನ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿತ್ತು.

ಮಿತ್ರರೇ, 
ಭಾರತದ ವೈವಿಧ್ಯ ಮತ್ತು ವ್ಯಾಪ್ತಿಯನ್ನು ಅದನ್ನು ಅನುಭವಿಸದವರಿಗೆ ಊಹಿಸಿಕೊಳ್ಳುವುದು ಕಷ್ಟ. ಇದು ಅತಿ ಎತ್ತರದ ಪರ್ವತ ಶ್ರೇಣಿಗಳಿಗೆ ನೆಲೆಯಾಗಿದೆ, ಒಣ ಮರುಭೂಮಿಗಳಲ್ಲಿ ಒಂದಾಗಿದೆ, ಕೆಲವು ದಟ್ಟವಾದ ಕಾಡುಗಳು ಮತ್ತು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಭಾರತದ ಕೇವಲ ಒಂದೇ ದೇಶದಲ್ಲಿ ಎಲ್ಲ ಖಂಡಗಳ ವೈಶಿಷ್ಟ್ಯಗಳು ತುಂಬಿ ಹೋಗಿದೆ. ಉದಾಹರಣೆಗೆ, ಭಾರತದ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶವು ಬ್ರೆಜಿಲ್‌ಗೆ ಸಮನಾದ ಜನಸಂಖ್ಯೆಯನ್ನು ಹೊಂದಿದೆ. ನಮ್ಮ ರಾಜಧಾನಿ ದೆಹಲಿಯಲ್ಲಿ ಇಡೀ ಸ್ವೀಡನ್‌ಗಿಂತ ಅಧಿಕ ಜನರಿದ್ದಾರೆ.

ಮಿತ್ರರೇ, 
ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಭಾರತೀಯ ಪೊಲೀಸರು 900 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಸುಮಾರು ಹತ್ತು ಸಾವಿರ ರಾಜ್ಯ ಕಾನೂನುಗಳನ್ನು ಜಾರಿಗೆ ತರಲು ಸಹಕರಿಸುತ್ತಾರೆ. ಇದಕ್ಕೆ ಭಾರತೀಯ ಸಮಾಜದ ವೈವಿಧ್ಯವನ್ನು ಸೇರಿಸಿದರೆ, ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ನೂರಾರು ಭಾಷೆಗಳು ಮತ್ತು ಉಪಭಾಷೆಗಳನ್ನು ಮಾತನಾಡುತ್ತಾರೆ. ಬೃಹತ್ ಉತ್ಸವಗಳು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತವೆ. ಉದಾಹರಣೆಗೆ, ಕುಂಭಮೇಳ, ವಿಶ್ವದ ಅತಿ ದೊಡ್ಡ ಮತ್ತು ಉದ್ದನೆಯ ಆಧ್ಯಾತ್ಮಿಕ ಸಮೂಹಿಕ ಸಭೆಯಾಗಿದ್ದು, 240 ಮಿಲಿಯನ್ ಯಾತ್ರಾರ್ಥಿಗಳು ಸೇರಿದ್ದರು. ಈ ಎಲ್ಲದರ ಜೊತೆಗೆ, ನಮ್ಮ ಪೊಲೀಸ್ ಪಡೆಗಳು ಸಂವಿಧಾನವು ಖಾತ್ರಿಪಡಿಸಿರುವ  ಜನರ ವೈವಿಧ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಕೆಲಸ ಮಾಡುತ್ತದೆ. ಅವರು ಜನರನ್ನು ರಕ್ಷಿಸುವುದು ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವಕ್ಕೆ ಸೇವೆ ಸಲ್ಲಿಸುತ್ತಾರೆ. ಭಾರತದ ಮುಕ್ತ, ನ್ಯಾಯಸಮ್ಮತ ಮತ್ತು ಬೃಹತ್ ಚುನಾವಣೆಗಳ ಪ್ರಮಾಣವನ್ನು ತೆಗೆದುಕೊಂಡರೆ, ಚುನಾವಣೆಗಳು ಸುಮಾರು 900 ಮಿಲಿಯನ್ ಮತದಾರರಿಗೆ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ. ಇದು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಖಂಡಗಳ ಜನಸಂಖ್ಯೆಗೆ ಹತ್ತಿರದಲ್ಲಿದೆ. ಚುನಾವಣೆಗೆ ಸಹಾಯ ಮಾಡಲು ಸುಮಾರು 2.3 ಮಿಲಿಯನ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೈವಿಧ್ಯ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ, ಭಾರತವು ಜಗತ್ತಿಗೆ ಅಧ್ಯಯನ ವಸ್ತುವಾಗಿದೆ. 

ಮಿತ್ರರೇ, 
ಕಳೆದ 99 ವರ್ಷಗಳಲ್ಲಿ, ಇಂಟರ್ ಪೋಲ್ ಜಾಗತಿಕವಾಗಿ 195 ದೇಶಗಳಲ್ಲಿ ಪೊಲೀಸ್ ಸಂಸ್ಥೆಗಳನ್ನು ಬೆಸೆದಿದೆ.  ಕಾನೂನು ಚೌಕಟ್ಟುಗಳು, ವ್ಯವಸ್ಥೆಗಳು ಮತ್ತು ಭಾಷೆಗಳಲ್ಲಿನ ವ್ಯತ್ಯಾಸಗಳ ಹೊರತಾಗಿಯೂ. ಇದನ್ನು ಗುರುತಿಸಿ ಇಂದು ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಲಾಗಿದೆ.

ಮಿತ್ರರೇ, 
ಹಿಂದಿನ ಎಲ್ಲಾ ಯಶಸ್ಸುಗಳ ಹೊರತಾಗಿಯೂ, ಇಂದು ನಾನು ಕೆಲವು ವಿಷಯಗಳನ್ನು ಜಗತ್ತಿಗೆ ನೆನಪಿಸಲು ಬಯಸುತ್ತೇನೆ. ಜಗತ್ತು ಎದುರಿಸುತ್ತಿರುವ ಅನೇಕ ಹಾನಿಕಾರಕ ಜಾಗತೀಕ ಅಪಾಯಗಳಿವೆ. ಭಯೋತ್ಪಾದನೆ, ಭ್ರಷ್ಟಾಚಾರ, ಮಾದಕವಸ್ತು ಕಳ್ಳಸಾಗಣೆ, ಕಳ್ಳಬೇಟೆ ಮತ್ತು ಸಂಘಟಿತ ಅಪರಾಧ. ಈ ಅಪಾಯಗಳ ಬದಲಾವಣೆಯ ವೇಗವು ಮೊದಲಿಗಿಂತ ಅಧಿಕವಾಗಿದೆ. ಅಪಾಯಗಳು ಜಾಗತಿಕವಾಗಿರುವಾಗ, ಪ್ರತಿಕ್ರಿಯೆ ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ! ಈ ಅಪಾಯಗಳನ್ನು ಮಣಿಸಲು ಜಗತ್ತು ಒಗ್ಗೂಡಲು ಇದು ಸೂಕ್ತ ಕಾಲ.

ಮಿತ್ರರೇ, 
ಭಾರತವು ಹಲವಾರು ದಶಕಗಳಿಂದ ಅಂತರ-ರಾಷ್ಟ್ರೀಯ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಜಗತ್ತು ಅದರ ಬಗ್ಗೆ ಎಚ್ಚೆತ್ತುಕೊಳ್ಳುವ ಮುನ್ನವೇ,  ಸುರಕ್ಷತೆ ಮತ್ತು ಭದ್ರತೆಯ ಬೆಲೆ ನಮಗೆ ತಿಳಿದಿತ್ತು. ನಮ್ಮ ಸಾವಿರಾರು ಜನರು ಈ ಹೋರಾಟದಲ್ಲಿ ಅಂತಿಮ ತ್ಯಾಗ ಮಾಡಿದರು. ಆದರೆ ಭಯೋತ್ಪಾದನೆಯು ಭೌಗೋಳಿಕವಾಗಿ ಮಾತ್ರ ಹೋರಾಡಿದರೆ ಸಾಕಾಗುವುದಿಲ್ಲ. ಇದು ಈಗ ಆನ್‌ಲೈನ್ ರ್‍ಯಾಡಿಕಲೈಜೇಷನ್ ಮತ್ತು ಸೈಬರ್ ಅಪಾಯಗಳ ಮೂಲಕ ತನ್ನ ಅಸ್ತಿತ್ವವನ್ನು ಪಸರಿಸುತ್ತಿವೆ. ಒಂದು ಗುಂಡಿ ಒತ್ತುವರ ಮೂಲಕ ದಾಳಿಯನ್ನು ಕಾರ್ಯಗತಗೊಳಿಸ ಬಹುದು ಅಥವಾ ಸಿಸ್ಟಮ್‌ಗಳನ್ನು ತಮ್ಮ ಕಾಲಕೆಳಗೆ ತರಬಹುದು. ಪ್ರತಿಯೊಂದು ರಾಷ್ಟ್ರವೂ ಅವರ ವಿರುದ್ಧ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಆದರೆ ನಾವು ನಮ್ಮ ಗಡಿಯೊಳಗೆ ಏನು ಮಾಡುತ್ತೇವೆ ಎಂಬುದು ಇನ್ನು ಮುಂದೆ ಸಾಕಾಗುವುದಿಲ್ಲ. ಅಂತಾರಾಷ್ಟ್ರೀಯ ಕಾರ್ಯತಂತ್ರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಮುಂಚಿತವಾಗಿಯೇ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆಗಳ ಸ್ಥಾಪನೆ, ಸಾರಿಗೆ ಸೇವೆಗಳನ್ನು ರಕ್ಷಿಸುವುದು, ಸಂವಹನ ಮೂಲಸೌಕರ್ಯಕ್ಕೆ ಭದ್ರತೆ, ನಿರ್ಣಾಯಕ ಮೂಲಸೌಕರ್ಯಕ್ಕೆ ಭದ್ರತೆ, ತಾಂತ್ರಿಕ ಮತ್ತು ತಾಂತ್ರಿಕ ನೆರವು, ಗುಪ್ತಚರ ವಿನಿಮಯ ಮತ್ತಿತರ ಹಲವು ವಿಷಯಗಳಲ್ಲಿ ಸಹಕಾರ ಸಂಬಂಧಗಳನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ. 

ಮಿತ್ರರೇ, 
ನಾನು ಭ್ರಷ್ಟಾಚಾರವನ್ನು ಅಪಾಯಕಾರಿ ಬೆದರಿಕೆ ಎಂದು ಏಕೆ ಮಾತನಾಡಿದ್ದೇನೆಂದು ನಿಮ್ಮಲ್ಲಿ ಕೆಲವರು ಯೋಚಿಸುತ್ತಿರಬಹುದು. ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳು ಅನೇಕ ದೇಶಗಳ ನಾಗರಿಕರ ಯೋಗಕ್ಷೇಮವನ್ನು ಹಾಳುಮಾಡಿವೆ. ಭ್ರಷ್ಟರು ಜಗತ್ತಿನ ನಾನಾ ಭಾಗಗಳಲ್ಲಿ ಅಪರಾಧದ ಆದಾಯವನ್ನು ಇಡಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಈ ಹಣವು ಅವರು ತೆಗೆದುಕೊಂಡ ದೇಶದ ನಾಗರಿಕರಿಗೆ ಸೇರಿದೆ. ಸಾಮಾನ್ಯವಾಗಿ, ಇದನ್ನು ಜಗತ್ತಿನ ಕೆಲವು ಬಡ ಜನರಿಂದ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಅಂತಹ ಹಣವನ್ನು ದುಷ್ಟ ಚಟುವಟಿಕೆಗಳಿಗೆ ಪೂರೈಸಲಾಗುತ್ತದೆ. ಇದು ಭಯೋತ್ಪಾದಕರಿಗೆ ನಿಧಿಯ ಪ್ರಮುಖ ಆರ್ಥಿಕ ಮೂಲಗಳಲ್ಲಿ ಒಂದಾಗಿದೆ. ಯುವ ಜೀವನವನ್ನು ನಾಶಪಡಿಸುವ ಕಾನೂನುಬಾಹಿರ ಮಾದಕವಸ್ತುಗಳಿಂದ ಹಿಡಿದು ಮಾನವ ಕಳ್ಳಸಾಗಣೆಯವರೆಗೆ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಿಂದ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟದವರೆಗೆ, ಈ ಕೊಳಕು ಹಣವು ಅನೇಕ ವಿನಾಶಕಾರಿ ಕೃತ್ಯಗಳಿಗೆ ಹಣವನ್ನು ನೀಡುತ್ತದೆ. ಹೌದು, ಇಂದು ಅವುಗಳನ್ನು ಎದುರಿಸಲು ವೈವಿಧ್ಯಮಯ ಕಾನೂನು ಮತ್ತು ಕಾರ್ಯವಿಧಾನದ ಚೌಕಟ್ಟುಗಳಿವೆ. ಆದಾಗ್ಯೂ, ಸುರಕ್ಷಿತ ತಾಣಗಳನ್ನು ನಿರ್ಮೂಲನೆ ಮಾಡಲು ಜಾಗತಿಕ ಸಮುದಾಯವು ಇನ್ನೂ ವೇಗವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಭ್ರಷ್ಟರು, ಭಯೋತ್ಪಾದಕರು, ಡ್ರಗ್ ಕಾರ್ಟೆಲ್‌ಗಳು, ಕಳ್ಳಬೇಟೆ ಗ್ಯಾಂಗ್‌ಗಳು ಅಥವಾ ಸಂಘಟಿತ ಅಪರಾಧಗಳಿಗೆ ಯಾವುದೇ ಸುರಕ್ಷಿತ ಆಶ್ರಯವಿಲ್ಲ. ಅಂತಹ ಅಪರಾಧಗಳು ಒಂದೇ ಜಾಗದಲ್ಲಿರುವ ಜನರ ವಿರುದ್ಧವಲ್ಲ, ಎಲ್ಲರ ವಿರುದ್ಧವೂ ಆಗಿರುತ್ತದೆ ಮತ್ತು ಅವು ಮಾನವೀಯತೆಯ ವಿರುದ್ಧದ ಅಪರಾಧಗಳು. ಇದಲ್ಲದೆ, ಇವು ನಮ್ಮ ಭವಿಷ್ಯಕ್ಕೆ  ಹಾನಿ ಮಾಡುವುದಲ್ಲದೆ ನಮ್ಮ ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತವೆ. ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಸಹಕಾರವನ್ನು ಹೆಚ್ಚಿಸಲು ಕಾರ್ಯವಿಧಾನಗಳು ಮತ್ತು ಶಿಷ್ಟಾಚಾರ (ಪ್ರೋಟೋಕಾಲ್)ಗಳನ್ನು ರೂಪಿಸುವ ಅಗತ್ಯವಿದೆ. ಪರಾರಿಯಾದ ಅಪರಾಧಿಗಳಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಯನ್ನು ತ್ವರಿತಗೊಳಿಸುವ ಮೂಲಕ ಇಂಟರ್‌ಪೋಲ್ ಸಹಾಯ ಮಾಡಬಹುದು.

ಮಿತ್ರರೇ, 
ಸುರಕ್ಷಿತ ಮತ್ತು ಸುಭದ್ರ ಜಗತ್ತು ನಮ್ಮ ಸಮಾನ ಜವಾಬ್ದಾರಿಯಾಗಿದೆ. ಒಳ್ಳೆಯ ಶಕ್ತಿಗಳು ಸಹಕರಿಸಿದಾಗ, ಅಪರಾಧದ ಶಕ್ತಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಮಿತ್ರರೇ, 
ನಾನು ಮುಗಿಸುವ ಮೊದಲು, ಎಲ್ಲಾ ಅತಿಥಿಗಳಿಗೆ ನಾನು ಮನವಿ ಮಾಡುತ್ತೇನೆ. ನವದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದನ್ನು ಪರಿಗಣಿಸಿ. ಭಾರತವನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರಿಗೆ ನೀವು ಗೌರವ ಸಲ್ಲಿಸಬಹುದು. ಇವರು ನಿಮ್ಮಲ್ಲಿ ಅನೇಕರಂತೆ ಪುರುಷರು ಮತ್ತು ಮಹಿಳೆಯರು, ತಮ್ಮ ರಾಷ್ಟ್ರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದವರು.

ಮಿತ್ರರೇ, 
ಸಂವಹನ, ಸಹಯೋಗ ಮತ್ತು ಸಹಕಾರವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಸೋಲಿಸಲಿ. 90 ನೇ ಇಂಟರ್‌ಪೋಲ್ ಮಹಾಸಭೆಯು ಇದಕ್ಕೆ ಪರಿಣಾಮಕಾರಿ ಮತ್ತು ಯಶಸ್ವಿ ವೇದಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ, ಈ ಮಹತ್ವದ ಕಾರ್ಯಕ್ರಮಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ.