2022ರಲ್ಲಿ ಅಸ್ಸಾಂ ರಾಜ್ಯದಲ್ಲಿ ಘೇಂಡಾಮೃಗಗಳ ಶೂನ್ಯ ಬೇಟೆ ಘಟನೆಗಳು ವರದಿಯಾದ ನಂತರ, ಆ ರಾಜ್ಯದಲ್ಲಿ ಘೇಂಡಾಮೃಗಗಳ ಸಂರಕ್ಷಣೆಗೆ ಅಸ್ಸಾಂ ಕೈಗೊಂಡಿರುವ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಲ್ಲಿನ ಜನರನ್ನು ಶ್ಲಾಘಿಸಿದ್ದಾರೆ.
ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:
“ಇದು ದೊಡ್ಡ ಸುದ್ದಿ! ಘೇಂಡಾಮೃಗಗಳನ್ನು ರಕ್ಷಿಸುವ ತಮ್ಮ ಪ್ರಯತ್ನಗಳಲ್ಲಿ ಹೊಸ ಆಯಾಮವನ್ನು ತೋರಿಸಿದ ಮತ್ತು ಅದರಲ್ಲಿ ಸಕ್ರಿಯವಾಗಿರುವ ಅಸ್ಸಾಂನ ಜನರಿಗೆ ಅಭಿನಂದನೆಗಳು.” ಎಂದು ಟ್ವೀಟ್ ಮಾಡಿದ್ದಾರೆ.
*****
This is great news! Compliments to the people of Assam, who have shown the way and been proactive in their efforts to protect the rhinos.