ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಮತ್ತು ಅವರ ಪತ್ನಿ ಪೂಜಾ ಇಂದು ದೆಹಲಿಯ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ 100 ನೇ ಟೆಸ್ಟ್ ಪಂದ್ಯ ಆಡುವ ಮೊದಲು ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿಯವರು ಚೇತೇಶ್ವರ ಪೂಜಾರ ಅವರಿಗೆ ಶುಭ ಹಾರೈಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮಂತ್ರಿಗಳು,
“ಇಂದು ಪೂಜ ಮತ್ತು ನಿಮ್ಮನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಯಿತು. ನಿಮ್ಮ 100 ನೇ ಟೆಸ್ಟ್ ಮತ್ತು ಮುಂದಿನ ನಿಮ್ಮ ವೃತ್ತಿಜೀವನಕ್ಕೆ ಶುಭಾಶಯಗಳು.”ಎಂದು ಬರೆದುಕೊಂಡಿದ್ದಾರೆ.
@cheteshwar1”
Delighted to have met Puja and you today. Best wishes for your 100th Test and your career.@cheteshwar1 https://t.co/Ecnv7XWLfv
— Narendra Modi (@narendramodi) February 14, 2023