Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ ಯುಎಸ್ಎ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ

​​​​​​​ ಯುಎಸ್ಎ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದು, ಅವರು ಇಂದು ಬೆಳಿಗ್ಗೆ ಶ್ವೇತಭವನಕ್ಕೆ ಭೇಟಿ ನೀಡಿದರು, ಅಲ್ಲಿ ಗೌರವಾನ್ವಿತ ಶ್ರೀ ಜೋಸೆಫ್ ಬೈಡೆನ್ ಮತ್ತು ಪ್ರಥಮ ಮಹಿಳೆ ಡಾ.ಜಿಲ್ ಬೈಡೆನ್ ಅವರು ಸಂಭ್ರಮದ ಔಪಚಾರಿಕ ಸ್ವಾಗತವನ್ನು ನೀಡಿದರು. ಪ್ರಧಾನಮಂತ್ರಿಯವರನ್ನು ಸ್ವಾಗತಿಸಲು ಸಾವಿರಾರು ಭಾರತೀಯ-ಅಮೆರಿಕನ್ನರು ಈ ಸಂದರ್ಭದಲ್ಲಿ ಹಾಜರಿದ್ದರು.

ನಂತರ, ಪ್ರಧಾನ ಮಂತ್ರಿ ಅವರು  ಅಧ್ಯಕ್ಷ ಬೈಡೆನ್ ಅವರೊಂದಿಗೆ ವೈಯಕ್ತಿಕ (ನಿರ್ಬಂಧಿತ)  ಮತ್ತು ನಿಯೋಗ ಮಟ್ಟದ ಸ್ವರೂಪಗಳಲ್ಲಿ ಫಲಪ್ರದ ಮಾತುಕತೆ ನಡೆಸಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಇಂಧನ, ಹವಾಮಾನ ಬದಲಾವಣೆ ಮತ್ತು ಜನತೆ-ಜನತೆಯ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಉಭಯ ದೇಶಗಳ ನಡುವಿನ ದೀರ್ಘಕಾಲೀನ ಸ್ನೇಹ ಮತ್ತು ಬೆಳೆಯುತ್ತಿರುವ ಸಹಕಾರವನ್ನು ನಾಯಕರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಇಬ್ಬರೂ ನಾಯಕರು ಪರಸ್ಪರ ನಂಬಿಕೆ ಮತ್ತು ತಿಳುವಳಿಕೆ ಹಾಗು ಉಭಯ ದೇಶಗಳ ನಡುವಿನ ಪರಸ್ಪರ ಹಂಚಿಕೆಯ ಮೌಲ್ಯಗಳನ್ನು ಒತ್ತಿಹೇಳಿದರು, ಇದು ಸಂಬಂಧವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಬಲವಾದ ಅಡಿಪಾಯವನ್ನು ಒದಗಿಸುತ್ತದೆ. ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ನಂತಹ ಉಪಕ್ರಮಗಳ ಮೂಲಕ ಸಾಧಿಸಿದ ತ್ವರಿತ ಪ್ರಗತಿಯನ್ನು ಮತ್ತು ಸ್ಥಿತಿಸ್ಥಾಪಕತ್ವವುಳ್ಳ  ಪೂರೈಕೆ ಸರಪಳಿಗಳನ್ನು ನಿರ್ಮಿಸಲು ವ್ಯೂಹಾತ್ಮಕ  ತಂತ್ರಜ್ಞಾನ ಸಹಯೋಗವನ್ನು ಹೆಚ್ಚಿಸುವ ಕುರಿತ ನಿಟ್ಟಿನಲ್ಲಿ ತೀವ್ರ ಆಶಯವನ್ನು ಅವರು ಶ್ಲಾಘಿಸಿದರು. ನಿರ್ಣಾಯಕ ಖನಿಜಗಳು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಆಳವಾದ ಸಹಕಾರವನ್ನು ಅವರು ಸ್ವಾಗತಿಸಿದರು.

ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ಸಾಧಿಸಲು ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಶುದ್ಧ ಮತ್ತು ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುವ ಬಗ್ಗೆ ಮತ್ತು ಹವಾಮಾನ ಉಪಕ್ರಮಗಳಲ್ಲಿ ಸಹಯೋಗದ ಉಪಕ್ರಮಗಳ  ಬಗ್ಗೆ ಅವರು ಚರ್ಚಿಸಿದರು.

ಉಭಯ ನಾಯಕರು ತಮ್ಮ ಜನತೆ  ಮತ್ತು ಜಾಗತಿಕ ಸಮುದಾಯದ ಪ್ರಯೋಜನಕ್ಕಾಗಿ ಭಾರತ ಮತ್ತು ಯುಎಸ್ಎ ನಡುವಿನ ಬಹುಮುಖಿ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸುವ ದೃಢ ನಿಶ್ಚಯವನ್ನು ವ್ಯಕ್ತಪಡಿಸಿದರು. ಚರ್ಚೆಗಳು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನೂ ಒಳಗೊಂಡಿದ್ದವು.

ಅಧ್ಯಕ್ಷ ಬೈಡೆನ್ ಮತ್ತು ಪ್ರಥಮ ಮಹಿಳೆ ನೀಡಿದ ಆತ್ಮೀಯ ಸ್ವಾಗತಕ್ಕೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. 2023ರ ಸೆಪ್ಟೆಂಬರ್ ನಲ್ಲಿ  ನಡೆಯಲಿರುವ ಜಿ 20 ನಾಯಕರ ಶೃಂಗಸಭೆಗಾಗಿ ಹೊಸದಿಲ್ಲಿಯಲ್ಲಿ ಅಧ್ಯಕ್ಷ ಬೈಡೆನ್ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿಯೂ ಅವರು ಹೇಳಿದರು. 

****