ಹಸಿರು ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
FAME ll ಯೋಜನೆಯಡಿಯಲ್ಲಿ ವಿದ್ಯುನ್ಮಾನ ವಾಹನಗಳು 22.9 ಕೋಟಿ ಲೀಟರ್ ಇಂಧನವನ್ನು ಉಳಿಸಿವೆ ಮತ್ತು 33.9 ಕೋಟಿ ಕೆಜಿ ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಮಾಡಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಡಾ ಮಹೇಂದ್ರ ನಾಥ್ ಪಾಂಡೆ ಅವರ ಟ್ವೀಟ್ಗೆ ಶ್ರೀ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
“ನಮ್ಮ ಸರ್ಕಾರವು ಹಸಿರು ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಮಾಡಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
****
ग्रीन एनर्जी के क्षेत्र में सतत विकास के लिए हमारी सरकार पूरी तरह से प्रतिबद्ध है। https://t.co/Kx9oDa5CL7
— Narendra Modi (@narendramodi) February 23, 2023