ದೇಶೀಯವಾಗಿ ಉತ್ಪಾದಿಸಿದ ಎವಿಜಿಎಎಸ್ 10 ಎಲ್ಎಲ್ ನ ಮೊದಲ ಹಂತದ ಉತ್ಪನ್ನಗಳನ್ನು ಪಪುವಾ ನ್ಯೂ ಗಿನಿಯಾಗೆ ಯಶಸ್ವಿಯಾಗಿ ರಫ್ತು ಮಾಡುವ ಮೂಲಕ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಭಾರತೀಯ ತೈಲ ನಿಗಮದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟ್ ಅನ್ನು ಪ್ರಧಾನಮಂತ್ರಿ ಅವರು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
“ಇದನ್ನು ನೋಡಿ ಸಂತಸವಾಯಿತು. ಇದು ಸ್ವಾವಲಂಬಿ ಭಾರತದ ಪ್ರಯತ್ನಗಳಿಗೆ ಬಲ ನೀಡುತ್ತದೆ” ಎಂದು ಹೇಳಿದ್ದಾರೆ.
*****
Glad to see this. It adds strength to our Aatmanirbhar Bharat efforts. https://t.co/P5ttymSRxA
— Narendra Modi (@narendramodi) January 31, 2023