ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ದೌಸಾದಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು ‘ಸೀಮಂತ’ (ಗಾಡ್ ಭರೈ) ಸಮಾರಂಭವನ್ನಾಗಿ ಆಚರಿಸುವ ಹೊಸ ಉಪಕ್ರಮವನ್ನು ಶ್ಲಾಘಿಸಿದ್ದಾರೆ.
ಟ್ವೀಟ್ ನ ಎಳೆಯೊಂದರಲ್ಲಿ ರಾಜಸ್ಥಾನದ ದೌಸಾದ ಸಂಸದೆ ಶ್ರೀಮತಿ ಜಸ್ಕೌರ್ ಮೀನಾ ಅವರು, ರಾಜಸ್ಥಾನದ ದೌಸಾದಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು ‘ಸೀಮಂತ’ (ಗಾಡ್ ಭರೈ) ಸಮಾರಂಭವನ್ನಾಗಿ ಆಚರಿಸುತ್ತಾರೆ. ಅಲ್ಲಿ ಎಲ್ಲ ಗರ್ಭಿಣಿಯರು ಒಗ್ಗೂಡುತ್ತಾರೆ ಮತ್ತು ಅವರ ಮಕ್ಕಳ ಆರೋಗ್ಯಕ್ಕಾಗಿ ಪೋಷಣ್ ಕಿಟ್’ ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ರಾಜಸ್ಥಾನವೊಂದರಲ್ಲೇ ಈ ಯೋಜನೆಯಡಿ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೌಸಾದ ಸಂಸದೆ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ.
“ದೌಸಾ ಜನರ ಈ ವಿಶಿಷ್ಟ ಉಪಕ್ರಮವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ಹೊಸ ಶಕ್ತಿಯನ್ನು ನೀಡಲಿದೆ ಮತ್ತು ಇದು ತಾಯಂದಿರು ಮತ್ತು ಶಿಶುಗಳ ಆರೋಗ್ಯ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ’’ – ನರೇಂದ್ರ ಮೋದಿ (@narendramodi) June 12, 2023
*******
दौसा की यह अनूठी पहल प्रधानमंत्री मातृ वंदना योजना को नई ऊर्जा देने वाली है। इससे माताओं के साथ-साथ शिशुओं की स्वास्थ्य सुरक्षा भी सुनिश्चित हो रही है। https://t.co/A6uxbh7o60
— Narendra Modi (@narendramodi) June 12, 2023