Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಮುಸ್ಲೀಂ ವರ್ಲ್ಡ್ ಲೀಗ್‌ ಮಹಾಪ್ರಧಾನ ಕಾರ್ಯದರ್ಶಿಯವರ ಜೊತೆ ಸಮಾಲೋಚಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಸ್ಲೀಂ ವರ್ಲ್ಡ್ ಲೀಗ್‌ ನ ಮಹಾಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಶೇಖ್‌ ಡಾ. ಮೊಹಮದ್‌ ಬಿನ್‌ ಅಬ್ದುಲ್‌ ಕರೀಂ ಅಲ್‌ ಇಸ್ಸಾ ಅವರ ಜೊತೆ ಅಂತರ – ಧರ್ಮ ಸಂವಾದ, ತೀವ್ರಗಾಮಿ ಸಿದ್ಧಾಂತಗಳನ್ನು ಎದುರಿಸುವ, ಜಾಗತಿಕ ಶಾಂತಿಯನ್ನು ಉತ್ತೇಜಿಸುವ, ಭಾರತ – ಸೌದಿ ಅರೆಬಿಯಾ ನಡುವಿನ ಪಾಲುದಾರಿಕೆಯನ್ನು ಗಾಢಗೊಳಿಸುವ ಕುರಿತು ಸಮಾಲೋಚನೆ ನಡೆಸಿದರು.

ಈ ಸಭೆ ಕುರಿತು ಗೌರವಾನ್ವಿತ ಶೇಖ್‌ ಡಾ. ಮೊಹಮದ್‌ ಬಿನ್‌ ಅಬ್ದುಲ್‌ ಕರೀಂ ಅಲ್‌ ಇಸ್ಸಾ ಅವರ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡಿ ಪ್ರಧಾನಮಂತ್ರಿಯವರು  ಟ್ವೀಟ್‌ ಮಾಡಿದ್ದಾರೆ.   

“ಮುಸ್ಲೀಂ ವರ್ಲ್ಡ್ ಲೀಗ್‌ ನ ಮಹಾ ಪ್ರಧಾನ ಕಾರ್ಯದರ್ಶಿ, ಗೌರವಾನ್ವಿತ ಶೇಖ್‌ ಡಾ. ಮೊಹಮದ್‌ ಬಿನ್‌ ಅಬ್ದುಲ್‌ ಕರೀಂ ಅಲ್‌ ಇಸ್ಸಾ ಮತ್ತು ಮುಸ್ಲೀಂ ಚಿಂತಕರ ಸಂಘಟನೆಯ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಸಂತಸ ತಂದಿದೆ. ನಾವು ಅಂತರ – ಧರ್ಮ ಸಂವಾದ, ತೀವ್ರಗಾಮಿ ಸಿದ್ಧಾಂತಗಳನ್ನು ಎದುರಿಸುವ, ಜಾಗತಿಕ ಶಾಂತಿಯನ್ನು ಪ್ರೇರೇಪಿಸುವ, ಭಾರತ – ಸೌದಿ ಅರೆಬಿಯಾ ನಡುವಿನ ಪಾಲುದಾರಿಕೆಯನ್ನು ಗಾಢಗೊಳಿಸುವ ಕುರಿತು ಸಮಾಲೋಚನೆ ನಡೆಸಿದ್ದೇವೆ” ಎಂದು ಹೇಳಿದ್ದಾರೆ.

***