Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ನಾಗ್ಪುರ ಎ.ಐ.ಐ.ಎಂ.ಎಸ್. ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

​​​​​​​ನಾಗ್ಪುರ ಎ.ಐ.ಐ.ಎಂ.ಎಸ್. ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಗ್ಪುರದ ಎ.ಐ.ಐ.ಎಂ.ಎಸ್.ಸಂಸ್ಥೆಯನ್ನು (ಏಮ್ಸ್) ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿ ಅವರು ನಾಗ್ಪುರ ಏಮ್ಸ್ ಯೋಜನಾ ಮಾದರಿಯ ವೀಕ್ಷಣೆಯನ್ನು ನಡೆಸಿದರು ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಮೈಲುಗಲ್ಲು ಪ್ರದರ್ಶನ ಗ್ಯಾಲರಿಯನ್ನೂ ವೀಕ್ಷಿಸಿದರು.

ನಾಗ್ಪುರದ ಏಮ್ಸ್ ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದರಿಂದ  ದೇಶಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನ ಮಂತ್ರಿಯವರ ಬದ್ಧತೆಗೆ ಇನ್ನಷ್ಟು ಬಲ ಲಭಿಸಿದೆ. 2017ರ ಜುಲೈನಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ ಈ ಆಸ್ಪತ್ರೆಯನ್ನು ಕೇಂದ್ರ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಸ್ಥಾಪಿಸಲಾಗಿದೆ.

ನಾಗ್ಪುರದ  ಏಮ್ಸ್ ಸಂಸ್ಥೆಯನ್ನು  1575 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಒಪಿಡಿ, ಐಪಿಡಿ, ಡಯಾಗ್ನೋಸ್ಟಿಕ್ ಸೇವೆಗಳು, ಆಪರೇಷನ್ ಥಿಯೇಟರ್ ಗಳು ಮತ್ತು ವೈದ್ಯಕೀಯ ವಿಜ್ಞಾನದ ಎಲ್ಲಾ ಪ್ರಮುಖ ವಿಶೇಷ ಮತ್ತು ಸೂಪರ್ ಸ್ಪೆಷಾಲಿಟಿ ವಿಷಯಗಳನ್ನು ಒಳಗೊಂಡ 38 ವಿಭಾಗಗಳನ್ನು ಹೊಂದಿರುವ ಹಾಗು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯು ಮಹಾರಾಷ್ಟ್ರದ ವಿದರ್ಭ ವಲಯಕ್ಕೆ  ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಾದ ಗಡ್ಚಿರೋಲಿ, ಗೊಂಡಿಯಾ ಮತ್ತು ಮೆಲ್ಘಾಟ್ ಗಳಿಗೆ ವರದಾನವಾಗಿದೆ.

ಪ್ರಧಾನಮಂತ್ರಿಯವರೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ ಶಿಂಧೆ, ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.

*****