Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಕಾಂಬೋಡಿಯಾದ ದೊರೆ ಘನತೆವೆತ್ತ ನೊರೊಡೊಮ್ ಸಿಹಮೋನಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

​​​​​​​ಕಾಂಬೋಡಿಯಾದ ದೊರೆ ಘನತೆವೆತ್ತ ನೊರೊಡೊಮ್ ಸಿಹಮೋನಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ನಿಕಟ ಸಾಂಸ್ಕೃತಿಕ ಸಂಬಂಧಗಳು ಮತ್ತು ಅಭಿವೃದ್ಧಿ ಪಾಲುದಾರಿಕೆಯ ಬಗ್ಗೆ ಅಭಿಪ್ರಾಯ ವಿನಿಮಯ

ಘನತೆವೆತ್ತರಿಂದ ಜಿ 20 ರ ಭಾರತದ ಅಧ್ಯಕ್ಷತೆಗೆ  ಶ್ಲಾಘನೆ  ಮತ್ತು ಶುಭ  ಹಾರೈಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು,  2023ರ ಮೇ 29-31ರವರೆಗೆ ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡುತ್ತಿರುವ ಕಾಂಬೋಡಿಯಾ ದೊರೆ ಘನತೆವೆತ್ತ ನೊರೊಡೊಮ್ ಸಿಹಮೋನಿ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು.

ಪ್ರಧಾನಮಂತ್ರಿ ಮತ್ತು ಘನತೆವೆತ್ತ ದೊರೆ ಸಿಹಮೋನಿ ಅವರು ಎರಡೂ ದೇಶಗಳ ನಡುವಿನ ಆಳವಾದ ನಾಗರಿಕ ಸಂಬಂಧಗಳು, ಬಲವಾದ ಸಾಂಸ್ಕೃತಿಕ ಮತ್ತು ಉಭಯ ದೇಶಗಳ ಜನತೆಯ ನಡುವಣ ಸಂಪರ್ಕವನ್ನು ಒತ್ತಿ ಹೇಳಿದರು.

ಸಾಮರ್ಥ್ಯ ವರ್ಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾಂಬೋಡಿಯಾದೊಂದಿಗೆ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ಭಾರತದ ಸಂಕಲ್ಪದ ಬಗ್ಗೆ ಪ್ರಧಾನಮಂತ್ರಿಯವರು ಘನತೆವೆತ್ತ ದೊರೆಗಳಿಗೆ ಭರವಸೆ ನೀಡಿದರು. ಅಭಿವೃದ್ಧಿ ಸಹಕಾರದಲ್ಲಿ ಭಾರತದ ಪ್ರಸ್ತುತ ಚಾಲ್ತಿಯಲ್ಲಿರುವ ಉಪಕ್ರಮಗಳಿಗಾಗಿ ಘನತೆವೆತ್ತ ದೊರೆಗಳು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಜಿ-20ರ ಭಾರತದ ಅಧ್ಯಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಶುಭ ಹಾರೈಕೆಗಳನ್ನು ತಿಳಿಸಿದರು.