Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹ್ಯಾಂಬರ್ಗ್ ನಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆ

ಹ್ಯಾಂಬರ್ಗ್ ನಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆ

ಹ್ಯಾಂಬರ್ಗ್ ನಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆ


ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಜಿ 20 ಶೃಂಗಸಭೆಯ ವೇಳೆ ಐದು ಬ್ರಿಕ್ಸ್ ರಾಷ್ಟ್ರಗಳ ನಾಯಕರು ಅನೌಪಚಾರಿಕ ಸಭೆ ನಡೆಸಿದರು. ಇದು ಚೀನಾದ ಕ್ಸಿಯಾಮೆನ್ ನಲ್ಲಿ ಮುಂಬರುವ ಸೆಪ್ಟೆಂಬರ್ ನಲ್ಲಿ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಗೆ ಪೂರ್ವತಾಲೀಮಾಗಿದೆ. ಚೀನಾ ಅಧ್ಯಕ್ಷ ಕ್ಸಿ ಅವರು ಬ್ರಿಕ್ಸ್ ನಾಯಕರನ್ನು ತಮ್ಮ ದೇಶಕ್ಕೆ ಸ್ವಾಗತಿಸಲು ಎದಿರು ನೋಡುತ್ತಿರುವುದಾಗಿ ತಿಳಿಸಿದರು.

ಈ ಸಭೆಯ ವೇಳೆ ನಾಯಕರು, ಮುಂಬರುವ ಕ್ಸಿಯಾಮೆನ್ ಬ್ರಿಕ್ಸ್ ಶೃಂಗಸಭೆಯ ಆದ್ಯತೆಗಳು ಮತ್ತು ಸಿದ್ಧತೆಗಳ ಬಗ್ಗೆ ಚರ್ಚಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಬ್ರಿಕ್ಸ್ ಗೆ ಜಾಗತಿಕ ಆರ್ಥಿಕತೆ ಮತ್ತು ಭಯೋತ್ಪಾದನೆ ನಿಗ್ರಹ ಕುರಿತಂತೆ ನಾಯಕತ್ವ ಪ್ರದರ್ಶಿಸಲು ಅವಕಾಶ ಮತ್ತು ದ್ವನಿ ಇದೆ ಎಂದು ಹೇಳಿದರು. ಭಯೋತ್ಪಾದನೆಗೆ ಆರ್ಥಿಕ ನೆರವು, ಇಂಬು ನೀಡುವುದು, ಸುರಕ್ಷಿತ ತಾಣ ಒದಗಿಸುವುದನ್ನು ಮತ್ತು ಬೆಂಬಲ ಹಾಗೂ ಪ್ರಾಯೋಜಕತ್ವ ನೀಡುವುದನ್ನು ಜಿ 20 ಸಂಘಟಿತವಾಗಿ ವಿರೋಧಿಸಬೇಕು ಎಂದು ಪ್ರತಿಪಾದಿಸಿದರು. ಇತ್ತೀಚಿನ ಜಿಎಸ್ಟಿ ಸೇರಿದಂತೆ ಭಾರತದಲ್ಲಿನ ಸುಧಾರಣೆಗಳ ಪ್ರಸ್ತಾಪ ಮಾಡಿದ, ಪ್ರಧಾನಮಂತ್ರಿಯವರು, ಸುಸ್ಥಿರ ಜಾಗತಿಕ ಆರ್ಥಿಕತೆಯ ಪುನಶ್ಚೇತನಕ್ಕೆ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ ಎಂದರು.

ರಕ್ಷಣಾ ನೀತಿಯ ರೂಢಿಗಳ ವಿರುದ್ಧ ಅದರಲ್ಲೂ ವಿಶೇಷವಾಗಿ ವ್ಯಾಪಾರದ ಮತ್ತು ಜ್ಞಾನ ಚಲನೆ ಹಾಗೂ ವೃತ್ತಿಪರತೆಯ ಕ್ಷೇತ್ರಗಳಲ್ಲಿ ಸಾಮೂಹಿಕ ಧ್ವನಿಯ ಪ್ರತಿಪಾದನೆ ಮಾಡಿದರು. ಪ್ಯಾರಿಸ್ ಒಪ್ಪಂದವನ್ನು ಸ್ಫೂರ್ತಿಯೊಂದಿಗೆ ಅನುಷ್ಠಾನಗೊಳಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಇದರ ಜಾಗತಿಕ ಅನುಷ್ಠಾನ ಅಗತ್ಯವಾಗಿದೆ ಎಂದು ಪುನರುಚ್ಚರಿಸಿದರು. ಬ್ರಿಕ್ಸ್ ಶ್ರೇಣೀಕರಣ ಸಂಸ್ಥೆಯನ್ನು ಶೀಘ್ರ ಸ್ಥಾಪಿಸುವಂತೆಯೂ ಅವರು ಕರೆ ನೀಡಿದರು ಮತ್ತು ಆಫ್ರಿಕಾದ ಅಭಿವೃದ್ಧಿ ಕುರಿತ ಸಹಕಾರ ಆದ್ಯತೆ ಆಗಬೇಕು ಎಂದರು. ಜನರೊಂದಿಗಿನ ಹೆಚ್ಚಿನ ಸಂಪರ್ಕಕ್ಕೂ ಅವರು ಕರೆ ನೀಡಿದರು.

ಕ್ಸಿ ಅವರ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಗೆ ದೊರೆತಿರುವ ಚಾಲನೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕ್ಸಿಯಾಮೆನ್ ಶೃಂಗಸಭೆಗೆ ಶುಭ ಕೋರಿದ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಧಾನಿಯವರ ಹೇಳಿಕೆಯ ಬಳಿಕ ಸಭೆಯನ್ನು ಸಮಾರೋಪಗೊಳಿಸಿದ ಅಧ್ಯಕ್ಷ ಕ್ಸಿ, ಭಯೋತ್ಪಾದನೆಯ ವಿರುದ್ಧ ಭಾರತದ ಬಲವಾದ ಸಂಕಲ್ಪ ಮತ್ತು 2016ರ ಗೋವಾ ಶೃಂಗಸಭೆಯ ಫಲಶ್ರುತಿಯ ಮೂಲಕ ಹಾಗೂ ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಗೆ ನೀಡಿದ ವೇಗವನ್ನು ಪ್ರಶಂಸಿಸಿದರು. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಭಾರತದ ಯಶಸ್ಸನ್ನು ಪ್ರಶಂಸಿಸಿದ ಅವರು ಭಾರತದ ಇನ್ನೂ ಹೆಚ್ಚಿನ ಯಶಸ್ಸಿಗೆ ಶುಭ ಕೋರಿದರು.

***

AKT/AK