Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೆಸರಾಂತ ಪರಮಾಣು ಭೌತಶಾಸ್ತ್ರಜ್ಞ ಶ್ರೀ ಬಿಕಾಶ್‌ ಸಿನ್ಹಾ ನಿಧನಕ್ಕೆ ಪ್ರಧಾನಿ ಸಂತಾಪ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಸರಾಂತ ಪರಮಾಣು ಭೌತಶಾಸ್ತ್ರಜ್ಞ ಶ್ರೀ ಬಿಕಾಶ್‌ ಸಿನ್ಹಾ ನಿಧನಕ್ಕೆ ತೀವ್ರ ಸಂತಾಪ  ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ ಶ್ರೀ ಬಿಕಾಸ್ ಸಿನ್ಹಾಜಿ ಅವರು ವಿಜ್ಞಾನಕ್ಕೆ, ವಿಶೇಷವಾಗಿ ಪರಮಾಣು ಭೌತಶಾಸ್ತ್ರ ಮತ್ತು ಅಧಿಕ ಶಕ್ತಿಯ ಭೌತಶಾಸ್ತ್ರ ಕ್ಷೇತ್ರದಲ್ಲಿ ನೀಡಿರುವ ಮಹತ್ವದ ಕೊಡುಗೆಗಾಗಿ ಸ್ಮರಿಸಲ್ಪಡುತ್ತಾರೆ. ಕ್ರಿಯಾಶೀಲ ಸಂಶೋಧನಾ ವ್ಯವಸ್ಥೆಯನ್ನು ಮುಂದುವರಿಸುವ ಅವರ ಉತ್ಸಾಹವು ಉಲ್ಲೇಖಾರ್ಹ. ಅವರ ನಿಧನದಿಂದ ನೋವಾಗಿದೆ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು, ಓಂ ಶಾಂತಿ. 

*******