ನಾನು ಆಫ್ಘಾನಿಸ್ತಾನಕ್ಕೆ ಮತ್ತೆ ಬಂದಿದ್ದಕ್ಕೆ ಹರ್ಷಭರರಿತನಾಗಿದ್ದೇನೆ; ನಮ್ಮ ಕಾಲದಲ್ಲಿ ಧೈರ್ಯದ ಗುಣಮಟ್ಟ ನಿರ್ಧರಿಸಿದ ಜನರಲ್ಲಿ ಒಬ್ಬನಾಗಿದ್ದು ಗೌವರ ಎನಿಸಿದೆ; ಭಾರತದ ಬಗ್ಗೆ ಇರುವ ವಿಸ್ತಾರವಾದ ಸಾಗರದಂಥ ಪ್ರೀತಿಯಲ್ಲಿ ಸ್ನೇಹದ ಎತ್ತರದ ಅಲೆಗಳನ್ನು ಮತ್ತೆ ಕಾಣುವ ಗೌರವ ಪಡೆದಿದ್ದೇನೆ. ಇದು ಆಫ್ಘಾನಿಸ್ತಾನದ ಪ್ರಗತಿಯ ನಡಿಗೆಯಲ್ಲಿ ಅತಿದೊಡ್ಡ ಹೆಜ್ಜೆಯಾಗಿದೆ ಮತ್ತು ಇದು ಭಾವನೆಗಳ ಐತಿಹಾಸಿಕ ಮತ್ತು ಭಾರತ ಮತ್ತು ಆಫ್ಘಾನಿಸ್ತಾನಗಳ ನಡುವಿನ ಬಾಂಧವ್ಯದ ಹೆಮ್ಮೆಯ ಕ್ಷಣವಾಗಿದೆ.
ಅಧ್ಯಕ್ಷರೇ ನಿಮ್ಮ ಆಹ್ವಾನಕ್ಕೆ ಮತ್ತು ಈ ಜಲಾಶಯಕ್ಕೆ ಆಫ್ಘಾನಿಸ್ತಾನ – ಭಾರತ ಬಾಂಧವ್ಯದ ಜಲಾಶಯ ಎಂದು ಹೆಸರಿಸಿರುವುದಕ್ಕೆ ಧನ್ಯವಾದಗಳು. ನಾವು ಆಫ್ಘಾನಿಸ್ತಾನದ ಔದಾರ್ಯದ ಸ್ಫೂರ್ತಿಯಿಂದ ನಿಜಕ್ಕೂ ಸಂತುಷ್ಟರಾಗಿದ್ದೇವೆ. ನದಿಗಳು ವಿಶ್ವದ ಶ್ರೇಷ್ಠ ನಾಗರಿಕತೆಯ ಆಧಾರವಾಗಿವೆ. ನದಿಗಳ ಹರಿವಿನ ಜೊತೆಯೇ ಮಾನವನ ಪ್ರಗತಿಯೂ ಹರಿದಿದೆ. ಪವಿತ್ರ ಕುರಾನ್ ನಲ್ಲಿ, ಸ್ವರ್ಗದ ಚಿತ್ರಣದಲ್ಲಿ ನದಿ ಕೇಂದ್ರವಾಗಿದೆ. ಭಾರತದ ಪುರಾತನ ಗ್ರಂಥಗಳಲ್ಲಿ ನದಿಗಳು ನಮ್ಮ ದೇಶವನ್ನು ವ್ಯಾಖ್ಯಾನಿಸುತ್ತವೆ ಮತ್ತು ಜೀವ ಧಾತೆ ಎಂದು ಗೌರವಿಸಲ್ಪಡುತ್ತವೆ ಮತ್ತು ಆಫ್ಘನ್ ನ ಗಾದೆಯೊಂದು, ಕಾಬೂಲ್ ಬಿ ಜರ್ ಭಾಷಾ ಬಿ ಬರ್ಫ್ ನೆ ಎಂದು ಹೇಳುತ್ತದೆ. ಅಂದರೆ ಕಾಬೂಲ್ ನಲ್ಲಿ ಹಿಮದಷ್ಟು ಚಿನ್ನ ಇಲ್ಲದಿರಬಹುದು. ಹಿಮ ಕೃಷಿ ಮತ್ತು ಜೀವ ಉಳಿಸುವ ನದಿಗಳಿಗೆ ನೀರು ಹರಿಸುತ್ತವೆ. ಹೀಗಾಗಿ ನಾವಿಂದು ಕೇವಲ ಭೂಮಿಗೆ ನೀರೊದಗಿಸುವ ಮತ್ತು ಮನೆಗಳಲ್ಲಿ ದೀಪ ಬೆಳಗಿಸುವ ಯೋಜನೆಗಷ್ಟೇ ಚಾಲನೆ ನೀಡುತ್ತಿಲ್ಲ. ನಾವು ಒಂದು ವಲಯವನ್ನು ಪುನಶ್ಚೇತನಗೊಳಿಸುತ್ತಿದ್ದು, ಭರವಸೆಯನ್ನು ಮರು ಸ್ಥಾಪಿಸುತ್ತಿದ್ದೇವೆ, ಬದುಕನ್ನು ನವೀಕರಿಸುತ್ತಿದ್ದೇವೆ ಮತ್ತು ಆಫ್ಘಾನಿಸ್ತಾನದ ಭವಿಷ್ಯವನ್ನು ಮರು ರೂಪಿಸುತ್ತಿದ್ದೇವೆ. ಈ ಜಲಾಶಯ ಕೇವಲ ವಿದ್ಯುತ್ ಮಾತ್ರ ಉತ್ಪಾದಿಸುವುದಿಲ್ಲ ಆದರೆ ಅದರ ಜೊತೆಗೆ ಆಶಾಭಾವನೆ ಮತ್ತು ಆಫ್ಘಾನಿಸ್ತಾನದ ಭವಿಷ್ಯದ ನಂಬಿಕೆಯನ್ನೂ ಸೃಷ್ಟಿಸುತ್ತಿದೆ.
ಈ ಯೋಜನೆ ಚಿಸ್ತೆ, ಒಬೆ, ಪಶ್ತುನ್ ಝರ್ಗುನ್, ಕರೋಕ್, ಗೊಜಾರ, ಇನ್ಜಿಲ್, ಜಿಂದ್ಜನ್, ಖೋಸನ್ ಮತ್ತು ಘೋರ್ಯನ್ ನ ಕೇವಲ 640 ಗ್ರಾಮಗಳ ಜಮೀನಿಗೆ ಮಾತ್ರವೇ ನೀರುಣಿಸುವುದಿಲ್ಲ ಜೊತೆಗೆ ಈ ಪ್ರದೇಶದಲ್ಲಿರುವ ಸುಮಾರು 250 ಸಾವಿರ ಮನೆಗಳಿಗೆ ಜ್ಯೋತಿ ತರಲಿದೆ. ಕಾಬೂಲ್ ನಲ್ಲಿ ಕಳೆದ ಡಿಸೆಂಬರ್ ನಲ್ಲಿ ನನಗೆ ಆಫ್ಘನ್ ಸಂಸತ್ ಭವನ ಉದ್ಘಾಟಿಸುವ ಗೌರವ ಸಿಕ್ಕಿತ್ತು. ಆಫ್ಘನ್ ನ ಜನತೆ ತಮ್ಮ ಭವಿಷ್ಯವನ್ನು ಬಂದೂಕು ಮತ್ತು ಹಿಂಸೆಯ ಹೊರತಾಗಿ ಮತ ಮತ್ತು ಚರ್ಚೆಯ ಮೂಲಕ ರೂಪಿಸಿಕೊಳ್ಳಲು ಬಯಸಿ ನಡೆಸಿದ ಮಹಾ ಹೋರಾಟಕ್ಕೆ ಸಂದ ಗೌರವ. ಈ ಬಿಸಿಲ ದಿನದಲ್ಲಿ, ಹೆರಾತ್ ನಲ್ಲಿ ನಾವು ಸಮೃದ್ಧ ಭವಿಷ್ಯದ ನಿರ್ಮಾಣದ ಆಫ್ಘನ್ ದೃಢ ನಿರ್ಧಾರವನ್ನು ಆಚರಿಸಲು ಸೇರಿದ್ದೇವೆ. ಆಫ್ಘನ್ನರು ಮತ್ತು ಭಾರತೀಯರು 1970ರಲ್ಲೇ ಈ ಯೋಜನೆಯ ಕನಸು ಕಂಡಿದ್ದರು. ಕಳೆದ ದಶಕಗಳು ದೀರ್ಘಕಾಲದ ಯುದ್ಧದ ಪರಿಣಾಮಗಳ ಬಗ್ಗೆ ಮಾತನಾಡುತ್ತವೆ. ಈ ಯುದ್ಧ ಆಫ್ಘನ್ ನಿರ್ಮಿತವಲ್ಲ, ಆದರೆ, ಆಫ್ಘನ್ನರ ಒಂದು ಪೀಳಿಗೆಯ ಭವಿಷ್ಯವನ್ನೇ ಕಸಿದುಕೊಂಡಿದೆ. 2001ರಲ್ಲಿ ಆಫ್ಘಾನಿಸ್ತಾನದಲ್ಲಿ ನವೋದಯವಾದಾಗ ನಾವು ಯೋಜನೆಯನ್ನು ಪುನಾರಂಭಿಸಿದೆವು.
ನಾವು ನಿರ್ಧಾರ ಮತ್ತು ತಾಳ್ಮೆ, ಧೈರ್ಯ ಮತ್ತು ನಂಬಿಕೆಯೊಂದಿಗೆ ಅಂತರ ಮತ್ತು ತೊಡಕು, ಭಯ ಮತ್ತು ಹಿಂಸೆಯನ್ನು ಮೆಟ್ಟಿ ನಿಂತಿದ್ದೇವೆ. ಇಂದು, ಧೈರ್ಯಶಾಲಿ ಆಫ್ಘನ್ ಜನತೆ ನಾಶ ಮತ್ತು ಸಾವು, ನಿರಾಕರಣೆ ಮತ್ತು ಪ್ರಾಬಲ್ಯ ಮೆಟ್ಟಿ ಮೇಲುಗೈ ಸಾಧಿಸುವ ಸಂದೇಶ ರವಾನಿಸುತ್ತಿದ್ದಾರೆ.ಈಗ ಅವುಗಳು ಆಫ್ಘನ್ ಜನತೆಯ ಆಶಯ ಮತ್ತು ಕನಸುಗಳಿಗೆ ಅಡ್ಡಿಬರುತ್ತಿಲ್ಲ. ಅತ್ಯುತ್ತಮವಾದ ಹಣ್ಣುಗಳನ್ನು ಬೆಳೆಯುವ ಜಮೀನು ಮತ್ತು ಶುದ್ಧ ನದಿ ನೀರಿನೊಂದಿಗೆ ಮತ್ತೊಮ್ಮೆ ಕೇಸರಿ ಜೀವಂತಿಕೆ ಪಡೆಯಲಿ. ಕತ್ತಲಲ್ಲೇ ರಾತ್ರಿಯನ್ನು ಕಳೆದ ಮನೆಗಳಲ್ಲಿ ಇನ್ನು ಮುಂದೆ ಭರವಸೆಯ ಜ್ಯೋತಿ ಬೆಳಗಲಿ. ಪುರುಷರು ಮತ್ತು ಮಹಿಳೆಯರು ಜಮೀನಿನಲ್ಲಿ ಮತ್ತೆ ದುಡಿಯಲಿ ಮತ್ತು ಶ್ರಮ ಹಾಗೂ ಸಂತಸದೊಂದಿಗೆ, ಶಾಂತಿ ಮತ್ತು ಭದ್ರತೆಯೊಂದಿಗೆ ತಮ್ಮ ವ್ಯಾಪಾರ ಮಾಡಲಿ, ಒಂದು ಕಾಲದಲ್ಲಿ ಬಂದೂಕುಗಳನ್ನು ಹೊತ್ತ ಹೆಗಲುಗಳು ಈಗ ಭೂಮಿಯನ್ನು ಹಸಿರು ಮಾಡಲು ನೇಗಿಲುಗಳನ್ನು ಹೊತ್ತೊಯ್ಯಲಿ. ಮಕ್ಕಳು ಮತ್ತೆ ಭವಿಷ್ಯದ ಶಿಕ್ಷಣ ಮತ್ತು ಅವಕಾಶಗಳ ಸಾಧ್ಯತೆಯ ನಂಬಿಕೆ ಪಡೆಯಲಿ. ಮತ್ತು ಮತ್ತೊಬ್ಬಳು ಯುವ ಬಾಲ ಕವಯಿತ್ರಿಯ ಬದುಕು ನೋವಿನಿಂದ ಕೂಡದಿರಲಿ, ನಿರಾಕರಣೆ ಮತ್ತು ಹಾತೊರೆಯುವ ಅಥವಾ ಮೊಟುಕಾದ ಭರವಸೆಯ ಜೀವನ ನೋಡದಿರಲಿ. ಹೆರಾತ್ ಪದೇ ಪದೆ ಭವ್ಯ ವೈಭವ ಮತ್ತು ದುರಂತ, ಅವಶೇಷಗಳನ್ನು ನೋಡಿದೆ. ಮತ್ತು ಒಂದು ಕಾಲದಲ್ಲಿ ಜಲಾಲುದ್ದೀನ್ ರುಮಿ ಅತ್ಯುತ್ತಮ ಎಂದು ಹೇಳಿದ್ದ ನಗರ ಮತ್ತೆ ಉದಯಿಸಲಿ. ಪಶ್ಚಿಮ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಹೆಬ್ಬಾಗಿಲಾದ ನಗರ, ಮತ್ತೊಮ್ಮೆ ಈ ವಲಯವನ್ನು ಶಾಂತಿಯುತ ಪ್ರಗತಿಯೊಂದಿಗೆ ಒಗ್ಗೂಡಿಸಲಿ. ಹೀಗಾಗಿ, ಜನರು ಮತ್ತು ಹೇರಾತ್ ಸರ್ಕಾರಕ್ಕೆ ಮತ್ತು ಆಫ್ಘಾನಿಸ್ತಾನದ ಸರ್ಕಾರಕ್ಕೆ ನಿಮ್ಮಗಳ ಬೆಂಬಲ, ತಾಳ್ಮೆ ಮತ್ತು ತಿಳಿವು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮಗೆ ನಮ್ಮ ಮೇಲಿರುವ ನಂಬಿಕೆಗೆ ನಾನು ಅಂತರಾಳದ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.
ಈ ಜಲಾಶಯವನ್ನು ಇಟ್ಟಿಗೆ ಮತ್ತು ಗಾರೆಯಿಂದಷ್ಟೇ ಕಟ್ಟಿಲ್ಲ, ಆದರೆ ನಮ್ಮ ಸ್ನೇಹದ ನಂಬಿಕೆ ಮತ್ತು ಭಾರತೀಯರು ಹಾಗೂ ಆಫ್ಘನ್ನರ ಶೌರ್ಯದಿಂದ ನಿರ್ಮಿಸಲಾಗಿದೆ. ಮತ್ತು ಹೆಮ್ಮೆಯ ಈ ಕ್ಷಣದಲ್ಲಿ, ಆಫ್ಘನ್ ಜನರ ಭವಿಷ್ಯಕ್ಕೆ ತಮ್ಮ ಜೀವವನ್ನೇ ಬಲಿಕೊಟ್ಟವರಿಗೆ ದುಃಖ ಮತ್ತು ಕೃತಜ್ಞತೆ ಅರ್ಪಿಸಬೇಕು ಅದಕ್ಕೆ ಅವರು ಅರ್ಹರು. ನಮ್ಮ ಜನರ ರಕ್ತ, ಬೆವರು ಮತ್ತು ಕಣ್ಣೀರು ಈ ಮಣ್ಣಿನಲ್ಲಿ ಬೆರೆತಿದೆ ಮತ್ತು ಈ ಭೂಮಿ ಮಣ್ಣಿನಲ್ಲಿ ಬರೆದ ಒಂದು ಶಾಶ್ವತ ಬಂಧ, ನಮಗೆ ನಡುವೆ ರಚಿಸಿವೆ. ಈ ಬಾಂಧವ್ಯ ನಮಗೆ ಈ ವಲಯ ಮತ್ತು ಭಾರತದ ನಡುವಿನ ನಂಟನ್ನು ನೆನಪಿಸುತ್ತವೆ. ವೇದದ ಕಾಲದಿಂದಲೂ ನಮ್ಮ ಸಂಪರ್ಕಿತ ಇತಿಹಾಸಗಳು ಹರಿರುದ್ ನದಿಯೊಂದಿಗೆ ಒಂದು ಘಟಕವಾಗಿದೆ. ಇಂದು ಜಗತ್ತು ಹರಿರುದ್ ನದಿಯನ್ನು ಲಾಂಛನ ಪಾಲನೆಯ ನಮ್ಮ ಬದ್ಧತೆಯ ವಿನಿಮಯಿತ ಪ್ರಗತಿಯ ಭವಿಷ್ಯವಾಗಿ ಕಾಣುತ್ತಿವೆ. ಮತ್ತು ಈ ಸ್ನೇಹದ ಜಲಾಶಯ ನಮ್ಮನ್ನು ಚಸ್ತಿ ಶರೀಫ್ ಅವರು ಶತಮಾನಗಳ ಹಿಂದೆಯೇ ಬೆಸೆದಂತೆ ಐಕ್ಯಮತ್ಯದಿಂದ ಒಟ್ಟುಗೂಡಿಸಿದೆ. ಸೂಫಿಸಂನ ಚಿಸ್ತಿ ಸಿಲ್ಸಿಲಾ ಅಥವಾ ಚಿಸ್ತಿ ಚಿಸ್ತಿ ಸಂಪ್ರದಾಯ ಇಲ್ಲಿಂದಲೇ ಭಾರತಕ್ಕೆ ಬಂದಿದೆ. ಅದರ ವೈಭವದ ಸಂಪ್ರದಾಯ ಮತ್ತು ಬೋಧನೆಗಳು ಅಜ್ಮೀರ್, ದೆಹಲಿ ಮತ್ತು ಫತೇಪುರ್ ಸಿಕ್ರಿ ದರ್ಗಾದ ಮೂಲಕ ಲಭ್ಯವಿದೆ. ಇದು ಪ್ರೀತಿ, ಶಾಂತಿ, ಸಹಾನುಭೂತಿಯ ಸಂದೇಶದ ಮೂಲಕ ಇದು ಎಲ್ಲಾ ಧರ್ಮಗಳ ಜನರನ್ನು ಸೆಳೆಯುತ್ತಿದೆ. ಸೌಹಾರ್ದತೆ ಜನರ ಎಲ್ಲ ನಂಬಿಕೆಗಳಲ್ಲಿ ಇದೆ., ದೇವರ ಎಲ್ಲ ಸೃಷ್ಟಿಯ ಬಗ್ಗೆ ಗೌರವ ಇದೆ, ಜೊತೆಗೆ ಮಾನವತೆಯ ಸೇವೆಯೂ ಕಾಣುತ್ತದೆ. ಭಾರತೀಯರು ಮತ್ತು ಆಫ್ಘನ್ನರು ಈ ಮೌಲ್ಯಗಳನ್ನು ತಿಳಿದಿದ್ದಾರೆ, ಅದು ವಿಧ್ವಂಸಕತೆ ಮತ್ತು ಹಿಂಸಾಚಾರವಲ್ಲ, ಆಫ್ಘಾನಿಸ್ತಾನವನ್ನು ವ್ಯಾಖ್ಯಾನಿಸುವುದಾದರೆ – ಕಾವ್ಯದ ಪ್ರೀತಿ ಮತ್ತು ಶಾಂತಿ ಮತ್ತು ಸೌಹಾರ್ದತೆಯ ಆಧ್ಯಾತ್ಮಿಕ ಸಂಪ್ರದಾಯದಿಂದ ತುಂಬಿ ತುಳುಕುತ್ತಿರುವ ರಾಷ್ಟ್ರ ಎನ್ನಬಹುದು. ಮತ್ತು ಈ ಎಲ್ಲ ಮೌಲ್ಯಗಳು ಆಫ್ಘನ್ ನ ಶ್ರೇಷ್ಠ ಜನತೆಗೆ ತಾಳ್ಮೆ ಮತ್ತು ಹಿಂಸಾಚಾರದ ಮಾರ್ಗ ತುಳಿದ ತಮ್ಮೊಂದಿಗಿರುವವರೊಂದಿಗೆ ಮತ್ತು ಅವರಿಗೆ ಬೆಂಬಲ ವ್ಯಕ್ತಪಡಿಸುವವರಿಂದ ಶಾಂತಿ ಬಯಸುವಂತೆ ಮಾಡಿದೆ.
ಆಫ್ಘನ್ನರು ತಮ್ಮ ನಂಬಿಕೆ, ಶಕ್ತಿ ಹೊರತಾಗಿಯೂ, ಈ ಭೂಮಿಯ ಮೇಲೆ ಇತರ ಯಾವುದೇ ಜನರಿಗಿಂತ ತಮ್ಮ ಸ್ವಾತಂತ್ರ್ಯ ರಕ್ಷಿಸಿಕೊಳ್ಳಲು ಈ ಮಾರ್ಗವನ್ನು ಅನುಸರಿಸಿದ್ದಾರೆ. ಮತ್ತು . ಭಾರತ ಮತ್ತು ಆಫ್ಘಾನಿಸ್ತಾನ ಪರಸ್ಪರ ಬಯಸುವುದು ಈ ತತ್ವಗಳ ತಳಹದಿಯ ಮೇಲೆ ರೂಪಿತವಾದ ಮೌಲ್ಯಗಳನ್ನೇ ಹೊರತು ಇದು ಪರಸ್ಪರ ಎದುರಾಳಿಯ ವಿರುದ್ದದ ಆಶ್ರಯ ಎಂದಲ್ಲ. ಖ್ಯಾಜಾ ಮೊಯಿನುದ್ದೀನ್ ಚಿಸ್ತಿ, ಭಾರತದ ಮೊದಲ ಚಿಸ್ತಿ ಸಂತ, ಮಾನವರಿಗೆ ಸೂರ್ಯನ ಮಮಕಾರ ಇರಬೇಕು, ನದಿಗಳ ಔದಾರ್ಯ ಮತ್ತು ಭೂಮಿಯ ಔದಾರ್ಯ ಇರಬೇಕು ಎಂದು ಹೇಳುತ್ತಾರೆ. ಅವರು ಕೇವಲ ತಮ್ಮ ಪೂರ್ವಿಕರ ನೆಲದ ಅದ್ಭುತ ಭೂದೃಶ್ಯವನ್ನಷ್ಟೇ ತಮ್ಮ ಮನಸ್ಸಿನಲ್ಲಿ ಹೊಂದಿರಲಿಲ್ಲ, ಅವರು ಆಪ್ಘನ್ ಜನತೆಯನ್ನೂ ವ್ಯಾಖ್ಯಾನಿಸಿದ್ದರು. ಹೀಗಾಗಿ ನಾನು ಡಿಸೆಂಬರ್ ನಲ್ಲಿ ನಿಮ್ಮ ಆತ್ಮೀಯ ಆಹ್ವಾನದ ಮೇರೆಗೆ ಕಾಬೂಲ್ ಗೆ ಬಂದಾಗ, ನಾನು ನಿಮ್ಮ ಹೃದಯದಲ್ಲಿನ ಔದಾರ್ಯವನ್ನು ಕಂಡೆ. ನಿಮ್ಮ ನಿರ್ಮಲವಾದ ಕಣ್ಣುಗಳಲ್ಲಿ ನಾನು ಭಾರತದ ಬಗ್ಗೆ ನಿಮಗಿರುವ ಆಳವಾದ ಮಮಕಾರವನ್ನು ಕಂಡೆ, ನಿಮ್ಮ ನಗುವಿನಲ್ಲಿ, ನಾನು ಬಾಂಧವ್ಯದ ಸಂತಸವನ್ನು ಕಂಡೆ. ನಿಮ್ಮ ದೃಢ ಆಲಿಂಗನದಲ್ಲಿ, ನಾನು ನಮ್ಮ ಗೆಳೆತನದ ನಂಬಿಕೆಯನ್ನು ಅನುಭವಿಸಿದೆ. ಮತ್ತು ಆ ಸ್ಮರಣೀಯ ಸಮಯದಲ್ಲಿ, ಭಾರತವು ಮತ್ತೊಮ್ಮೆ ನಿಮ್ಮ ಜನತೆಯ ದಯೆಯಿಂದ ಈ ನೆಲದ ಸೌಂದರ್ಯ ಮತ್ತು ದೇಶದ ಸ್ನೇಹವನ್ನು ಕಂಡೆ. ಇಂದು ಇಂದು 1.25 ಶತಕೋಟಿ ಭಾರತೀಯರ ಕೃತಜ್ಞತೆ ಮತ್ತು ಮೆಚ್ಚುಗೆಯೊಂದಿಗೆ ಮತ್ತು ನಮ್ಮ ಪಾಲುದಾರಿಕೆಯನ್ನು ನವೀಕರಿಸುವ ಸಂಕಲ್ಪದೊಂದಿಗೆ ಇಲ್ಲಿಗೆ ಮತ್ತೆ ಬಂದಿದ್ದೇನೆ.
ನಮ್ಮ ಪಾಲುದಾರಿಕೆಯಲ್ಲಿ ಶಾಲೆ, ಆರೋಗ್ಯ ಕೇಂದ್ರ ಮತ್ತು ಗ್ರಾಮೀಣ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒಟ್ಟಿಗೆ ನಿರ್ಮಿಸಿದ್ದೇವೆ. ಇದು ಮಹಿಳೆಯರನ್ನು ಕೌಶಲದೊಂದಿಗೆ ಸಬಲೀಕರಿಸಿದೆ ಮತ್ತು ಆಫ್ಘಾನಿಸ್ತಾನದ ಭವಿಷ್ಯದ ಹೊಣೆ ಹೊರಲು ಯುವಕರನ್ನು ಶಿಕ್ಷಿತರನ್ನಾಗಿ ಮಾಡಿದೆ. ನಾವು ನಿಮ್ಮ ದೇಶದ ದೂರದ ಊರುಗಳಾದ ಜರಂಜ್ ನಿಂದ ದೆಲರಾಮ್ ಸಂಪರ್ಕಿಸುವ ದೂರವನ್ನು ಬೆಸೆಯುವ ರಸ್ತೆ ನಿರ್ಮಾಣಕ್ಕೆ ಕೈಜೋಡಿಸಿದ್ದೇವೆ ಮತ್ತು ನಿಮ್ಮ ಮನೆಗಳಿಗೆ ವಿದ್ಯುತ್ ತರುವ ಸರಬರಾಜು ಮಾರ್ಗಗಳನ್ನು ನಿರ್ಮಿಸಿದ್ದೇವೆ. ಈಗ ಭಾರತದ ಇರಾನ್ ನ ಚಹಾಬರ್ ಬಂದರಿಗೆ ಹೂಡಿಕೆ ಮಾಡಿದ್ದು, ಇದು ಆಫ್ಘಾನಿಸ್ತಾನಕ್ಕೆ ಪ್ರಗತಿಯ ಹೊಸ ಮಾರ್ಗ ಮತ್ತು ವಿಶ್ವಕ್ಕೆ ಹೊಸ ಮಾರ್ಗ ತೋರಲಿದೆ.
ಈ ನೋಟವನ್ನು ಸಾಕಾರಗೊಳಿಸಲು ಕಳೆದ ತಿಂಗಳು, ಅಧ್ಯಕ್ಷ ಘನಿ ಅವರು ಇರಾನ್ ನ ಅಧ್ಯಕ್ಷ ರೌಹಾನಿ ಮತ್ತು ನಾನೊಂದಿಗೆ ಆಫ್ಘಾನಿಸ್ತಾನ, ಇರಾನ್ ಮತ್ತು ಭಾರತದ ನಡುವೆ ಚಹಾಬರ್ ವ್ಯಾಪಾರ ಮತ್ತು ಸಾಗಣೆ ಒಪ್ಪಂದಕ್ಕೆ ಅಂಕಿತ ಹಾಕಿದ್ದಕ್ಕೆ ಸಾಕ್ಷಿಯಾದರು.
ನಮ್ಮ ಗೆಳೆತನದ ಫಲ ಕೇವಲ ಕಾಬೂಲ್, ಕಂದಹಾರ್, ಮಜರ್ ಮತ್ತು ಹೆರಾತ್ ಗೆ ಮಾತ್ರವೇ ಸೀಮಿತವಾಗಿಲ್ಲ. ಅದೂ ಹಾಗಾಗುವುದೂ ಇಲ್ಲ. ನಮ್ಮ ಸಹಕಾರ ಆಫ್ಘಾನಿಸ್ತಾನದ ಇತರ ಎಲ್ಲ ಭಾಗಕ್ಕೂ ವಿಸ್ತರಿಸಲಿದೆ. ನಮ್ಮ ಪಾಲುದಾರಿಕೆ ಆಫ್ಘನ್ ಸಮಾಜದ ಎಲ್ಲ ವರ್ಗಕ್ಕೂ ಲಾಭ ತರಲಿದೆ. ಕಾರಣ ಇದರ ಕ್ಲಿಷ್ಟಕರ ಭೌಗೋಳಿಕತೆ ಮತ್ತು ಅದರ ವೈವಿಧ್ಯತೆ. ಹೀಗಾಗಿ ಪಸ್ತುನಿಯರು, ತಜಕಿಗಳು, ಉಜ್ಬೇಕಿಗಳು ಮತ್ತು ಹಜಾರಾಗಳು ಎಂಬ ಗುರುತುಗಳ ಮೀರಿ, ಅಫ್ಘಾನಿಸ್ಥಾನದವರು ನಾವು ಒಂದು ಎಂಬಂತೆ ಬಾಳಿ ಪ್ರಗತಿ ಹೊಂದಬೇಕು. ಆಫ್ಘನ್ ಜನರ ನಡುವಿನ ಈ ಬೇಧ ಕೇವಲ ದೇಶವನ್ನು ಹೊರಗಿನಿಂದ ಹಿಡಿತದಲ್ಲಿಟ್ಟುಕೊಳ್ಳ ಬಯಸುವವರಿಗೆ ಮಾತ್ರ ಸಹಾಯ ಮಾಡುತ್ತದೆ. ನಾವು ಒಟ್ಟಾಗಿ ಕೆಲಸ ಮಾಡಿದರೆ, ನಾವು, ನಮ್ಮ ಪಾಲುದಾರಿಕೆಯನ್ನು ಇತರರ ವಿನ್ಯಾಸದಿಂದ ರಕ್ಷಿಸಬೇಕೆಂಬ ನಿಮ್ಮ ಆಳವಾದ ಬದ್ಧತೆಯಿಂದ ಬಲ ಮತ್ತು ವಿಶ್ವಾಸ ತರುತ್ತದೆ.
ಯಾವಾಗ ನಮ್ಮ ಜನರು ದಾಳಿಗೆ ಒಳಗಾಗಿದ್ದರೋ, ಆಗ ಧೈರ್ಯಶಾಲಿ ಆಫ್ಘನ್ನರು ಸ್ವಂತದ್ದೆಂಬಂತೆ ನಮ್ಮನ್ನು ಕಾಯ್ದರು. ಅವರು ತಮ್ಮನ್ನು ತಾವು ಅಗ್ನಿಯ ಮಾರ್ಗದಲ್ಲಿ ನಿಲ್ಲಿಸಿದರು, ಹೀಗಾಗಿ ಅವರ ಭಾರತೀಯ ಸ್ನೇಹಿತರು ಸುರಕ್ಷಿತವಾಗಿದ್ದಾರೆ. ಇದು ನಿಮ್ಮ ಹೃದಯದ ಉದಾತ್ತ ಮನೋಭಾವ ಮತ್ತು ನಿಮ್ಮ ಗೆಳೆತನದ ಬಲ. ನಾನು ಈ ಕ್ಷಣವನ್ನು ಪ್ರಧಾನಮಂತ್ರಿಯಾದ ಕ್ಷಣದಿಂದಲೂ ನೋಡುತ್ತಿದ್ದೇನೆ. ಆ ದಿನ, ಭಯೋತ್ಪಾದಕರು ಹೆರಾತ್ ನಗರದ ನಮ್ಮ ದೂತಾವಾಸದ ಮೇಲೆ ಭಾರಿ ದಾಳಿ ನಡೆಸಿದಾಗ, ಆಫ್ಘಾನಿಸ್ತಾನದ ವೀರ ಯೋಧರ ಪ್ರರಾಕ್ರಮದ ಪ್ರಯತ್ನ ನಮ್ಮ ಸಿಬ್ಬಂದಿಯನ್ನು ಮತ್ತು ಅನೇಕ ಜೀವಗಳನ್ನು ಉಳಿಸಿತು ಹಾಗೂ ದೊಡ್ಡ ದುರಂತವೊಂದನ್ನು ತಪ್ಪಿಸಿತು.
ಮಾನ್ಯ ಅಧ್ಯಕ್ಷರೇ, ಸ್ನೇಹಿತರೇ,
ಆಫ್ಘಾನಿಸ್ತಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಲ್ಲಿ ವಿಶ್ವಾಸ ಮತ್ತು ಆಶಯ ತುಂಬಿದೆ. ಇದು ಆಫ್ಘನ್ನರ ಬಗ್ಗೆ ನಮ್ಮ ಹೃದಯದಲ್ಲಿರುವ ಪ್ರೀತಿ ಮತ್ತು ಮೆಚ್ಚುಗೆಯಿಂದ ಬಂದಿದೆ. ನಾವು ನಿಮ್ಮ ಪ್ರಜಾಪ್ರಭುತ್ವ ಆಳವಾದ ಬೇರು ಬಿಡುವುದನ್ನು, ನಿಮ್ಮ ಜನತೆ ಒಗ್ಗೂಡುವುದನ್ನುಮತ್ತು ನಿಮ್ಮ ಆರ್ಥಿಕತೆ ಪ್ರಗತಿ ಸಾಧಿಸುವುದನ್ನು ನೋಡಲು ಬಯಸುತ್ತೇವೆ. ನಾವು ನಿಮ್ಮ ಕಲೆ, ಸಂಸ್ಕೃತಿ ಮತ್ತು ಕವಿತ್ವದ ಏಳಿಗೆಯನ್ನು ಕಾಣ ಬಯಸುತ್ತೇವೆ ಮತ್ತು ನಿಮ್ಮ ಕ್ರಿಕೆಟ್ ಪಟುಗಳು ಟೆಸ್ಟ್ ಆಟಗಾರರ ಶ್ರೇಣಿಯಲ್ಲಿ ಸೇರುವುದನ್ನು ಮತ್ತು ಐ.ಪಿ.ಎಲ್.ನಲ್ಲಿ ವಿಜೃಂಭಿಸುವುದನ್ನು ನೋಡ ಬಯಸುತ್ತೇವೆ.
ಆದರೆ, ಇದು ಆಫ್ಘಾನಿಸ್ತಾನ ಯಶಸ್ಸು ಸಾಧಿಸಿದಾಗ ಮಾತ್ರ ಸಾಧ್ಯವಾಗುತ್ತದೆ, ವಿಶ್ವ ಸುರಕ್ಷಿತ ಮತ್ತು ಹೆಚ್ಚು ಸುಂದರವಾಗುತ್ತದೆ. ಆಫ್ಘನ್ನರು ವ್ಯಾಖ್ಯಾನಿಸಿದ ಮೌಲ್ಯಗಳು ಮೇಲುಗೈ ಸಾಧಿಸಿದಾಗ, ಭಯೋತ್ಪಾದನೆ ಮತ್ತು ವಿದ್ವಂಸಕತೆಯು ಹಿಮ್ಮೆಟ್ಟಬೇಕಾಗುತ್ತದೆ. ಕಾರಣ ಭಯೋತ್ಪಾದನೆ ಮತ್ತು ವಿದ್ವಂಸಕತೆ ನಿಮ್ಮ ಗಡಿಯಲ್ಲಿ ನಿಲ್ಲುವುದಿಲ್ಲ ಮತ್ತು ನಮ್ಮ ವಲಯದ ಗಡಿಯಲ್ಲಿ ಕೊನೆಗೊಳ್ಳುವುದಿಲ್ಲ ಎಂಬುದನ್ನು ನಾವು ಅರಿತಿದ್ದೇವೆ.
ಆದ್ದರಿಂದ, ಅಶಾಂತಿ ಹಬ್ಬಿಸುತ್ತಿರುವ ನಮ್ಮೀ ಕಾಲದಲ್ಲಿ, ವಿಶ್ವವು ಆಫ್ಘನ್ ಜನರು ನಡೆಸಿದ ಕೆಚ್ಚೆದೆಯ ಹೋರಾಟವನ್ನು ವಿಶ್ವ ಮರೆಯಲು ಸಾಧ್ಯವಿಲ್ಲ. ಭಾರತ ಕೂಡ ಇದನ್ನು ಮರೆಯುವುದಿಲ್ಲ ಮತ್ತು ದೂರ ಹೋಗುವುದಿಲ್ಲ.
ಆಗ ನಾನು ಹೇಳಿದ್ದೆ ಮತ್ತು ಈಗಲೂ ಮತ್ತೆ ಹೇಳುತ್ತೇನೆ, ನಿಮ್ಮ ಗೆಳೆತನ ನಮಗೆ ಗೌರವ. ನಿಮ್ಮ ಕನಸುಗಳು ನಮ್ಮ ಕರ್ತವ್ಯ, ಭಾರತದ ಸಾಮರ್ಥ್ಯ ಸೀಮಿತವಾಗಿರಬಹುದು, ಆದರೆ ನಮ್ಮ ಬದ್ಧತೆಗೆ ಮಿತಿ ಎಂಬುದಿಲ್ಲ. ನಮ್ಮ ಸಂಪನ್ಮೂಲಗಳು ಸಾಧಾರಣವೇ ಇರಬಹುದು, ಆದರೆ ನಮ್ಮ ಸಂಕಲ್ಪಶಕ್ತಿ ಅಗಾಧವಾದ್ದು. ಇತರರಿಗೆ ಅವರ ಬದ್ಧತೆ ಸೂರ್ಯ ಮುಳುಗುವ ವರ್ಗದ್ದಿರಬಹುದು. ಆದರೆ ನಮ್ಮ ಬಾಂಧವ್ಯ ಕಾಲಾತೀತವಾದ್ದು. ನಾವು ಭೌಗೋಳಿಕ ಮತ್ತು ರಾಜಕೀಯ ಅಡೆತಡೆಗಳನ್ನು ಎದುರಿಸಿದ್ದೇವೆ, ಆದರೆ ನಾವು ನಮ್ಮ ಉದ್ದೇಶಕ್ಕಾಗಿ ನಮ್ಮ ಹಾದಿಯನ್ನು ಸ್ಪಷ್ಟವಾಗಿ ನಮೂದಿಸಿದ್ದೇವೆ. ನಾವು ಇತರರ ಪ್ರತಿರೋಧ ಮತ್ತು ಅನುಮಾನಗಳನ್ನು ನೋಡಿದ್ದೇವೆ, ಆದರೆ, ನಮ್ಮ ಸಂಕಲ್ಪ ಬಲವಾಗಿದೆ ಮತ್ತು ನಿಮ್ಮ ನಂಬಿಕೆ ಮತ್ತು ವಿಶ್ವಾಸ ನಮ್ಮನ್ನು ಮುಂದೆ ಸಾಗಲು ಮಾರ್ಗದರ್ಶನ ಮಾಡುತ್ತಿದೆ.
ಕೆಲವರು ನಿಮ್ಮ ಭವಿಷ್ಯದ ಬಗ್ಗೆ ಅನುಮಾನ ಪಡುತ್ತಾರೆ, ಆದರೆ ನಾವು ಸಾಗುವ ಪಯಣ ಎಷ್ಟೇ ಕಠಿಣವಾಗಿದ್ದರೂ ಯಾವುದೇ ಶಕ್ತಿ ಆಫ್ಘನ್ ಜನರು ಆಯ್ಕೆ ಮಾಡಿಕೊಂಡಿರುವ ನೆಲೆಯನ್ನು ನಿರಾಕರಿಸಲು, ಸಾಧ್ಯವಿಲ್ಲ ಎಂದು ನಿಶ್ಚಿತವಾಗಿ ಹೇಳುತ್ತೇವೆ.ಆದ್ದರಿಂದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ದೇಶೀಯ ವೇದಿಕೆಗಳಲ್ಲಿ ನಾವು ಆಫ್ಘನ್ ನ ಶಾಂತಿಯುತ, ಪ್ರಗತಿಪರ, ಸಂಘಟಿತ, ಎಲ್ಲರನ್ನೂ ಒಳಗೊಂಡ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಮಾತನಾಡುತ್ತೇವೆ. ಮತ್ತು ಆಫ್ಘಾನಿಸ್ತಾನದ ಜಮೀನುಗಳಲ್ಲಿ, ಗ್ರಾಮದಲ್ಲಿ ಮತ್ತು ನಗರದಲ್ಲಿ ನಾವು ಭವಿಷ್ಯಕ್ಕಾಗಿ ಒಗ್ಗೂಡಿ ದುಡಿಯುತ್ತೇವೆ.
ಮತ್ತು ಬೆಳಕು ಮತ್ತು ಕತ್ತಲಲ್ಲಿ ಘಟಿಸಿದ ಯಾವುದೇ ಕ್ಷಣವಿರಲಿ, ನಾವು ಸದಾ ಅನುಭವಿಗಳಾಗಿದ್ದೇವೆ, ಹೆರಾತ್ ನ ಶ್ರೇಷ್ಠ ಸೂಫಿ ಕವಿ, ಹಕೀಂ ಜಾಮಿ ಹೇಳುವಂತೆ ಗೆಳೆತನದ ತಂಗಾಳಿ ಸದಾ ತಾಜಾ ಆಗಿರುತ್ತದೆ ಮತ್ತು ಸಂತಸ ತರುತ್ತದೆ ಎಂದು.
ಈ ಪ್ರೀತಿ, ಗೌರವ ಹಾಗೂ ಗೆಳೆತನಕ್ಕೆ ಧನ್ಯವಾದಗಳು.
ಧನ್ಯವಾದಗಳು.
Inauguration of the Afghan India Friendship Dam is a historic moment of emotion & pride in the relations between Afghanistan and India.
— Narendra Modi (@narendramodi) June 4, 2016
This is a project that will irrigate lands & light up homes. The dam is a generator of optimism & belief in the future of Afghanistan.
— Narendra Modi (@narendramodi) June 4, 2016
The brave Afghan people are sending a strong message that the forces of destruction & death, denial and domination, shall not prevail.
— Narendra Modi (@narendramodi) June 4, 2016
India cherishes the friendship with Afghanistan. In Afghanistan, we want to see democracy strike deep roots, people unite & economy prosper.
— Narendra Modi (@narendramodi) June 4, 2016
Today, we are reviving a region, restoring hope, renewing life and redefining Afghanistan’s future. https://t.co/GKy6K7JeK8
— Narendra Modi (@narendramodi) June 4, 2016