ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 5000 ಕೋಟಿ ರೂ.ಗಳ ಆರಂಭಿಕ ಅಧಿಕೃತ ಷೇರು ಬಂಡವಾಳ ಮತ್ತು 150 ಕೋಟಿ ರೂ. ಪಾವತಿಸಿದ (ಪೇಯ್ಡ್ ಅಪ್) ಷೇರು ಬಂಡವಾಳದೊಂದಿಗೆ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿ ರಾಷ್ಟ್ರೀಯ ಭೂ ನಗದೀಕರಣ ನಿಗಮ (ಎನ್.ಎಲ್.ಎಂ.ಸಿ.) ವನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. ಎನ್.ಎಲ್.ಎಂ.ಸಿ. ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್.ಇ.ಗಳು) ಮತ್ತು ಇತರ ಸರ್ಕಾರಿ ಸಂಸ್ಥೆಗಳ ಹೆಚ್ಚುವರಿ ಭೂಮಿ ಮತ್ತು ಕಟ್ಟಡ ಆಸ್ತಿಗಳ ನಗದೀಕರಣವನ್ನು ಕೈಗೊಳ್ಳುತ್ತದೆ. ಈ ಪ್ರಸ್ತಾವನೆಯು 2021-22ರ ಬಜೆಟ್ ಘೋಷಣೆಯ ಅನುಸಾರವಾಗಿದೆ.
ಪ್ರಮುಖವಲ್ಲದ ಆಸ್ತಿಗಳ ನಗದೀಕರಣದೊಂದಿಗೆ, ಬಳಕೆಯಾಗದ ಮತ್ತು ಕಡಿಮೆ–ಬಳಕೆಯಾಗುತ್ತಿರುವ ಆಸ್ತಿಗಳನ್ನು ನಗದೀಕರಿಸುವ ಮೂಲಕ ಸರ್ಕಾರವು ಗಣನೀಯ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.
ಪ್ರಸ್ತುತ, ಸಿಪಿಎಸ್ಇಗಳು ಭೂಮಿ ಮತ್ತು ಕಟ್ಟಡಗಳ ರೂಪದಲ್ಲಿ ಗಣನೀಯವಾದ ಹೆಚ್ಚುವರಿ ಹಾಗೂ ಬಳಕೆಯಾಗದ ಮತ್ತು ಕಡಿಮೆ ಬಳಕೆಯಾಗುತ್ತಿರುವ ಪ್ರಮುಖವಲ್ಲದ ಆಸ್ತಿಗಳನ್ನು ಹೊಂದಿವೆ. ಕಾರ್ಯತಂತ್ರಾತ್ಮಕ ಹೂಡಿಕೆ ಅಥವಾ ಮುಚ್ಚುತ್ತಿರುವ ಸಿ.ಪಿ.ಎಸ್.ಇ.ಗಳಿಗೆ, ಈ ಹೆಚ್ಚುವರಿ ಭೂಮಿ ಮತ್ತು ಪ್ರಮುಖವಲ್ಲದ ಆಸ್ತಿಗಳ ನಗದೀಕರಣವು ಅವುಗಳ ಮೌಲ್ಯವನ್ನು ಮುಕ್ತಗೊಳಿಸಲು ಪ್ರಮುಖವಾಗಿದೆ. ಎನ್.ಎಲ್.ಎಂ.ಸಿ. ಈ ಸ್ವತ್ತುಗಳ ನಗದೀಕರಣವನ್ನು ಬೆಂಬಲಿಸುತ್ತದೆ ಮತ್ತು ಕೈಗೊಳ್ಳುತ್ತದೆ. ಇದು ಖಾಸಗಿ ವಲಯದ ಹೂಡಿಕೆಗಳು, ಹೊಸ ಆರ್ಥಿಕ ಚಟುವಟಿಕೆಗಳನ್ನು ಪ್ರಚೋದಿಸಲು, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಹಣಕಾಸಿನ ಸಂಪನ್ಮೂಲಗಳನ್ನು ಸೃಷ್ಟಿಸುವುದರ ಜೊತೆಗೆ ಈ ಕಡಿಮೆ ಬಳಕೆಯ ಆಸ್ತಿಗಳ ಉತ್ಪಾದಕತೆಯನ್ನು ಸಕ್ರಿಯಗೊಳಿಸುತ್ತದೆ.
ಎನ್.ಎಲ್.ಎಂ.ಸಿ.ಯು ಮುಚ್ಚುವ ಹಂತದಲ್ಲಿರುವ ಸಿಪಿಎಸ್ಇಗಳ ಹೆಚ್ಚುವರಿ ಭೂಮಿ ಮತ್ತು ಕಟ್ಟಡ ಆಸ್ತಿಗಳನ್ನು ಮತ್ತು ಕಾರ್ಯತಂತ್ರದ ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ಸಿಪಿಎಸ್ಇಗಳ ಹೆಚ್ಚುವರಿ ಪ್ರಮುಖವಲ್ಲದ ಭೂ ಆಸ್ತಿಗಳನ್ನು ಹೊಂದಲು, ಹಿಡಿದಿಟ್ಟುಕೊಳ್ಳಲು, ನಿರ್ವಹಿಸಲು ಮತ್ತು ನಗದೀಕರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸಿಪಿಎಸ್ಇಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಸರ್ಕಾರಿ ಸ್ವಾಮ್ಯದ ಸಿಪಿಎಸ್ಇಗಳ ಕಾರ್ಯತಂತ್ರದ ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳಲು, ನಿರ್ವಹಿಸಲು ಮತ್ತು ನಗದೀಕರಿಸಲು ಎನ್.ಎಲ್.ಎಂ.ಸಿ.ಗೆ ಈ ಸ್ವತ್ತುಗಳನ್ನು ವರ್ಗಾಯಿಸಬಹುದು. ಎನ್.ಎಲ್.ಎಂ.ಸಿ. ಇತರ ಸರ್ಕಾರಿ ಘಟಕಗಳಿಗೆ (ಸಿಪಿಎಸ್.ಇ.ಗಳನ್ನು ಒಳಗೊಂಡಂತೆ) ತಮ್ಮ ಹೆಚ್ಚುವರಿ ಪ್ರಮುಖವಲ್ಲದ ಆಸ್ತಿಗಳನ್ನು ಗುರುತಿಸಲು ಮತ್ತು ಗರಿಷ್ಠ ಮೌಲ್ಯಕ್ಕೆ ಮಾರಾಟ ಮಾಡಲು ವೃತ್ತಿಪರ ಮತ್ತು ಸಮರ್ಥ ರೀತಿಯಲ್ಲಿ ನಗದೀಕರಿಸಲು ಸಲಹೆ ನೀಡುತ್ತದೆ ಮತ್ತು ಬೆಂಬಲಿಸುತ್ತದೆ. ಈ ಸಂದರ್ಭಗಳಲ್ಲಿ (ಉದಾಹರಣೆಗೆ, ನಡೆಯುತ್ತಿರುವ ಸಿಪಿಎಸ್.ಇ.ಗಳು ಮತ್ತು ಕಾರ್ಯತಂತ್ರದ ಹೂಡಿಕೆಯ ಅಡಿಯಲ್ಲಿ ಪಟ್ಟಿ ಮಾಡಲಾದ ಸಿಪಿಎಸ್.ಇ.ಗಳು), ಎನ್.ಎಲ್.ಎಂ.ಸಿ. ಹೆಚ್ಚುವರಿ ಭೂ ಆಸ್ತಿಯ ನಗದೀಕರಣವನ್ನು ಏಜೆನ್ಸಿ ಕಾರ್ಯವಾಗಿ ಕೈಗೊಳ್ಳುತ್ತದೆ. ಎನ್.ಎಲ್.ಎಂ.ಸಿ. ಭೂ ಹಣಗಳಿಕೆಯಲ್ಲಿ ಉತ್ತಮ ರೂಢಿಗಳ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಆಸ್ತಿ ನಗದೀಕರಣ ಕಾರ್ಯಕ್ರಮದ ಅನುಷ್ಠಾನದಲ್ಲಿ ಸರ್ಕಾರಕ್ಕೆ ಸಹಾಯ ಮತ್ತು ತಾಂತ್ರಿಕ ಸಲಹೆಯನ್ನೂ ನೀಡುತ್ತದೆ.
ಸಿಪಿಎಸ್ಇ ಗಳು ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಪರವಾಗಿ ಭೂ ಆಸ್ತಿಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಮತ್ತು ನಗದೀಕರಿಸಲು ಎನ್,ಎಲ್.ಎಂ.ಸಿ. ಅಗತ್ಯವಾದ ತಾಂತ್ರಿಕ ಪರಿಣತಿಯನ್ನು ಹೊಂದಿರುತ್ತದೆ. ಎನ್.ಎಲ್.ಎಂ.ಸಿ.ಯ ನಿರ್ದೇಶಕರ ಮಂಡಳಿಯು ಕಂಪನಿಯ ವೃತ್ತಿಪರ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ಸಕ್ರಿಯಗೊಳಿಸಲು ಹಿರಿಯ ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಪ್ರಖ್ಯಾತ ತಜ್ಞರನ್ನು ಒಳಗೊಂಡಿರುತ್ತದೆ. ಎನ್.ಎಲ್.ಎಂ.ಸಿ..ಯ ಅಧ್ಯಕ್ಷರು, ಸರ್ಕಾರೇತರ ನಿರ್ದೇಶಕರನ್ನು ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ನೇಮಕ ಮಾಡಲಾಗುತ್ತದೆ.
ರಿಯಲ್ ಎಸ್ಟೇಟ್ ಮಾರುಕಟ್ಟೆ ಸಂಶೋಧನೆ, ಕಾನೂನುಬದ್ಧ ಪರಿಶ್ರಮ, ಮೌಲ್ಯಮಾಪನ, ಮಾಸ್ಟರ್ ಪ್ಲಾನಿಂಗ್, ಹೂಡಿಕೆ ಬ್ಯಾಂಕಿಂಗ್, ಭೂ ನಿರ್ವಹಣೆ ಇತ್ಯಾದಿಗಳಲ್ಲಿ ಆಸ್ತಿ ನಗದೀಕರಣ ಅಗತ್ಯವಿರುವ ವ್ಯಾಪಕ ಶ್ರೇಣಿಯ ವಿಶೇಷ ಕೌಶಲ್ಯ ಮತ್ತು ಪರಿಣತಿಯನ್ನು ಗುರುತಿಸಿ, ಖಾಸಗಿ ವಲಯದ ವೃತ್ತಿಪರರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್.ಐ.ಐ.ಎಫ್.) ಮತ್ತು ಇನ್ವೆಸ್ಟ್ ಇಂಡಿಯಾದಂತಹ ವಿಶೇಷ ಸರ್ಕಾರಿ ಕಂಪನಿಗಳು. ಎನ್.ಎಲ್.ಎಂ.ಸಿ ಕನಿಷ್ಠ ಪೂರ್ಣ ಕಾಲಿಕ ಸಿಬ್ಬಂದಿಯನ್ನು ಹೊಂದಿರುವ ನೇರ ಸಂಸ್ಥೆಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ಮಾರುಕಟ್ಟೆಯಿಂದ ನೇರವಾಗಿ ನೇಮಕಗೊಳ್ಳುತ್ತದೆ. ಖಾಸಗಿ ವಲಯದಿಂದ ಅನುಭವಿ ವೃತ್ತಿಪರರನ್ನು ನೇಮಿಸಿಕೊಳ್ಳಲು, ಪಾವತಿಸಲು ಮತ್ತು ಉಳಿಸಿಕೊಳ್ಳಲು ಎನ್.ಎಲ್.ಎಂ.ಸಿ. ಮಂಡಳಿಗೆ ಅವಕಾಶವನ್ನು ಒದಗಿಸಲಾಗುತ್ತದೆ.
ಮುಂದುವರಿದು, ಹಣಕಾಸು ಸಚಿವಾಲಯದ ಸಾರ್ವಜನಿಕ ಉದ್ಯಮ ಇಲಾಖೆ, ಈ ಕಂಪನಿಯನ್ನು ಸ್ಥಾಪಿಸುತ್ತದೆ ಮತ್ತು ಅದರ ಆಡಳಿತ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ.
***