Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೆಚ್ಚಿನ ಕಲ್ಯಾಣ ಯೋಜನೆಗಳಿಂದ ಮಾಜಿ ಯೋಧರ ಜೀವನದ ಗುಣಮಟ್ಟ ಸುಧಾರಣೆ: ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇತ್ತೀಚಿನ ಸರ್ಕಾರದ ಮಾಜಿ ಯೋಧರ ಕಲ್ಯಾಣ ಯೋಜನೆಗಳ ವಿಸ್ತರಣೆಯ ನಿರ್ಧಾರದಿಂದಾಗಿ ಅವರ ಜೀವನದ ಗುಣಮಟ್ಟವು ಸುಧಾರಣೆಯಾಗಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಶ್ರೀ ರಾಜನಾಥ್ ಸಿಂಗ್, ಮಾಜಿ ಯೋಧರ ಕಲ್ಯಾಣಕ್ಕೆ ಮತ್ತು ಸುಲಭ ಜೀವನೋಪಾಯ ನೀತಿಗೆ ಹೆಚ್ಚಿನ ಆದ್ಯತೆಗೆ ಅನುಗುಣವಾಗಿ ಈ ಕೆಳಗಿನ ಮಾಜಿ ಸೈನಿಕರ ಕಲ್ಯಾಣ ಯೋಜನೆಗಳಡಿ ಅನುದಾನದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.  

1.    ಇಎಸ್ ಎಂ ನಿಂದ ಎಚ್ ಎವಿ/ತತ್ಸಮಾನದವರೆಗಿನ ವಿಧವೆಯರಿಗೆ ವೃತ್ತಿಪರ ತರಬೇತಿ ಅನುದಾನ 20000 ರೂ.ಗಳಿಂದ  50000 ರೂ.ಗಳವರೆಗೆ 

2.    ಪಿಂಚಿಣಿಯೇತರರು, ಇಎಸ್ ಎಂ ನಿಂದ ಎಚ್ ಎವಿ/ತತ್ಸಮಾನದವರೆಗಿನ ವಿಧವೆಯರಿಗೆ ವೈದ್ಯಕೀಯ  ಅನುದಾನ  30000 ರೂ.ಗಳಿಂದ  50000 ರೂ.ಗಳವರೆಗೆ.

3.    ಪಿಂಚಿಣಿಯೇತರರು, ಇಎಸ್ ಎಂ ನಿಂದ ಎಲ್ಲಾ ಶ್ರೇಣಿಯವರಿಗೆ ಗಂಭೀರ ಕಾಯಿಲೆಗಳಿಗೆ ಅನುದಾನ  1.25 ಲಕ್ಷ ರೂ.ಗಳಿಂದ  1.50 ಲಕ್ಷ  ರೂ.ಗಳವರೆಗೆ.

ಇದಕ್ಕೆ ಪ್ರತಿಯಾಗಿ ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ 

“ ನಮ್ಮ ರಾಷ್ಟ್ರವನ್ನು ರಕ್ಷಿಸಿದ ಮಾಜಿ ವೀರ ಸೈನಿಕರ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಅವರಿಗಾಗಿ ವಿಸ್ತರಿಸಲಾಗಿರುವ ಕಲ್ಯಾಣ ಯೋಜನೆಗಳಿಂದ ಅವರ ಜೀವನದ ಗುಣಮಟ್ಟ ಹೆಚ್ಚು ಸುಧಾರಿಸಲಿದೆ’’ ಎಂದು ಹೇಳಿದ್ದಾರೆ.  

******