Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೂಸ್ಟನ್‌ನಲ್ಲಿ ಪ್ರಧಾನಿಯವರಿಂದ ಶ್ರೀ ಸಿದ್ಧ ವಿನಾಯಕ ದೇವಾಲಯ ಉದ್ಘಾಟನೆ


ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಾಲಯ ಮತ್ತು ಹೂಸ್ಟನ್ ಈವೆಂಟ್ಸೆಂ ಟರ್‌ನ ಗುಜರಾತಿ ಸಮಾಜವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ‘ಹೌಡಿ ಮೋದಿ’ ಕಾರ್ಯಕ್ರಮದ ನಂತರ ಟೆಕ್ಸಾಸ್ ಇಂಡಿಯನ್ ಫೋರಂ ಆಯೋಜಿಸಿದ್ದ ಭಾರತೀಯ ಸಮುದಾಯ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

ಹೂಸ್ಟನ್‌ನಲ್ಲಿರುವ ಶಾಶ್ವತ ಗಾಂಧಿ ವಸ್ತುಸಂಗ್ರಹಾಲಯದ ಶಿಲಾನ್ಯಾಸ ಸಮಾರಂಭದ ಫಲಕವನ್ನು ಪ್ರಧಾನಿಯವರು ಅನಾವರಣಗೊಳಿಸಿದರು.

ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. “ಭಾರತ-ಅಮೆರಿಕಾ ಸಂಬಂಧಗಳಿಗೆ ಸಂಬಂಧಿಸಿದಂತೆ ನೀವೆಲ್ಲರೂ ಅದ್ಭುತ ಭವಿಷ್ಯಕ್ಕಾಗಿ ವೇದಿಕೆ ಸಿದ್ಧಪಡಿಸಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು ” ಎಂದು ಅವರು ಹೇಳಿದರು.

ಶಾಶ್ವತ ಗಾಂಧಿ ವಸ್ತುಸಂಗ್ರಹಾಲಯದ ಕುರಿತು ಮಾತನಾಡಿದ ಪ್ರಧಾನಿಯವರು, ವಸ್ತುಸಂಗ್ರಹಾಲಯವು ಹೂಸ್ಟನ್‌ನಲ್ಲಿ ಸಾಂಸ್ಕೃತಿಕ ಹೆಗ್ಗುರುತಾಗಲಿದೆ ಎಂದರು. “ನಾನು ಈ ಪ್ರಯತ್ನದಲ್ಲಿ ಸ್ವಲ್ಪ ಸಮಯದಿಂದ ಸಂಬಂಧ ಹೊಂದಿದ್ದೇನೆ. ಇದು ಖಂಡಿತವಾಗಿಯೂ ಮಹಾತ್ಮ ಗಾಂಧಿಯವರ ಆಲೋಚನೆಗಳನ್ನು ಯುವಕರಲ್ಲಿ ಜನಪ್ರಿಯಗೊಳಿಸುತ್ತದೆ ”ಎಂದು ಪ್ರಧಾನಿ ಹೇಳಿದರು.

ಭಾರತಕ್ಕೆ ಪ್ರವಾಸಿಗರಾಗಿ ಭೇಟಿ ನೀಡಲು ವರ್ಷಕ್ಕೆ ಕನಿಷ್ಠ ಐದು ಕುಟುಂಬಗಳನ್ನು ಸಜ್ಜುಗೊಳಿಸಬೇಕು ಎಂದು ಪ್ರಧಾನಿ ಭಾರತೀಯ ಸಮುದಾಯಕ್ಕೆ ಮನವಿ ಮಾಡಿದರು. ಭಾರತೀಯ-ಅಮೆರಿಕನ್ಸ ಮುದಾಯವು ಎಲ್ಲಿ ಹೋದರೂ ತಮ್ಮ ಮಾತೃಭಾಷೆಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಅವರು ಒತ್ತಾಯಿಸಿದರು.

******