Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20 ಮೇ 2023 ರಂದು ಜಪಾನಿನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಪ್ರಧಾನಮಂತ್ರಿಯವರ ವಿಶೇಷ ಸಲಹೆಗಾರರು ಮತ್ತು ಸಂಸದರಾದ ಶ್ರೀ ನಕಟಾನಿ ಜನರಲ್, ಹಿರೋಷಿಮಾ ನಗರದ ಮೇಯರ್ ಶ್ರೀ ಕಝುಮಿ ಮಾತ್ಸುಯಿ, ಹಿರೋಷಿಮಾ ನಗರ ಅಸೆಂಬ್ಲಿಯ ಸ್ಪೀಕರ್ ಶ್ರೀ ತತ್ಸುನೋರಿ ಮೊಟಾನಿ, ಹಿರೋಷಿಮಾದ ಸಂಸತ್ ಸದಸ್ಯರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು, ಭಾರತೀಯ ಸಮುದಾಯದ ಸದಸ್ಯರು ಮತ್ತು ಜಪಾನ್‌ನಲ್ಲಿ ಮಹಾತ್ಮ ಗಾಂಧಿಯವರ ಅನುಯಾಯಿಗಳು ಪ್ರತಿಮೆ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮೇ 19 ರಿಂದ 21 ರವರೆಗೆ ನಡೆಯುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿಯವರು ಭೇಟಿ ನೀಡಿರುವ ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸ್ನೇಹ ಮತ್ತು ಸೌಹಾರ್ದತೆಯ ಸಂಕೇತವಾಗಿ ಭಾರತ ಸರ್ಕಾರವು ಹಿರೋಷಿಮಾ ನಗರಕ್ಕೆ ಮಹಾತ್ಮ ಗಾಂಧಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ.

42 ಇಂಚು ಎತ್ತರದ ಕಂಚಿನ ಪ್ರತಿಮೆಯನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ರಾಮ್ ವಾಂಜಿ ಸುತಾರ್ ಅವರು ಕೆತ್ತಿದ್ದಾರೆ. ಮೊಟೊಯಾಸು ನದಿಯ ಪಕ್ಕದಲ್ಲಿರುವ ಪ್ರತಿಮೆಯ ತಾಣವು ಐಕಾನಿಕ್ ಎ-ಬಾಂಬ್ ಡೋಮ್‌ಗೆ ಸಮೀಪದಲ್ಲಿದೆ, ಇಲ್ಲಿಗೆ ಪ್ರತಿದಿನ ಸ್ಥಳೀಯರು ಮತ್ತು ಪ್ರವಾಸಿಗರು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.

ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವರು ತಮ್ಮ ಜೀವನವನ್ನು ಶಾಂತಿ ಮತ್ತು ಅಹಿಂಸೆಗೆ ಮುಡಿಪಾಗಿಟ್ಟವರು. ಈ ಸ್ಥಳವು ನಿಜವಾಗಿಯೂ ಜಗತ್ತು ಮತ್ತು ಅದರ ನಾಯಕರನ್ನು ಪ್ರೇರೇಪಿಸುವ ಗಾಂಧೀಜಿಯವರ ತತ್ವಗಳು ಮತ್ತು ಜೀವನವನ್ನು ಪ್ರತಿಧ್ವನಿಸುತ್ತದೆ.

*****