Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿಮಾಚಲ ಪ್ರದೇಶದ ಭಾರತ – ಚೀಣಾ ಗಡಿಯ ಬಳಿ ಯೋಧರು, ಜನರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯ ಭಾರತ – ಚೀಣಾ ಗಡಿಯ ಸುಮ್ಡೋಗೆ ಭೇಟಿ ನೀಡಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು.

ಐಟಿಬಿಪಿ ಮತ್ತು ಭಾರತೀಯ ಸೇನೆಯ ಯೋಧರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ, ಅವರಿಗೆ ಸಿಹಿಯನ್ನೂ ನೀಡಿದರು.
ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ತಾವು 2001ರಿಂದಲೂ ದೀಪಾವಳಿಯಲ್ಲಿ ಸಶಸ್ತ್ರಪಡೆಯ ಸಿಬ್ಬಂದಿಯನ್ನು ಭೇಟಿ ಮಾಡುತ್ತಿರುವುದಾಗಿ ಹೇಳಿದರು.

#Sandesh2Soldiers ಅಭಿಯಾನದ ಭಾಗವಾಗಿ ಯೋಧರಿಗೆ ದೀಪಾವಳಿಯ ಶುಭಾಶಯ ಕಳುಹಿಸಿ ಎಂಬ ತಮ್ಮ ಕರೆಗೆ ದೇಶದಾದ್ಯಂತದಿಂದ ದೊರೆತ ಅತ್ಯದ್ಭುತ ಸ್ಪಂದನೆಯನ್ನು ಅವರು ಪ್ರಸ್ತಾಪಿಸಿದರು.

ಮಾಜಿ ಯೋಧರಿಗೆ ಸಮಾನ ಶ್ರೇಣಿ, ಸಮಾನ ಪಿಂಚಣಿ ತಾವು ನೀಡಿದ ಭರವಸೆಯಾಗಿದ್ದು, ತಾವು ಅದನ್ನು ಪೂರೈಸಿದ ಬಗ್ಗೆ ಸಂತೋಷವಿದೆ ಎಂದು ಹೇಳಿದರು.

ಸೇನಾ ಪಡೆಯ ಮುಖ್ಯಸ್ಥ, ಜನರಲ್ ದಲ್ಬೀರ್ ಸಿಂಗ್, ಈ ಸಂದರ್ಭದಲ್ಲಿ ಹಾಜರಿದ್ದರು.

ಸುಮ್ಡೋನಿಂದ ಮರಳುವಾಗ ಪ್ರಧಾನಮಂತ್ರಿಯವರು ಹತ್ತಿರದ ಚಂಗೋನಲ್ಲಿ ಕೆಲ ಕಾಲ ತಂಗಿದ್ದರು. ಅಲ್ಲಿ ಅವರು ಜನತೆಯೊಂದಿಗೆ ಮಾತುಕತೆ ನಡೆಸಿ, ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಮಕ್ಕಳಿಗೆ ಸಿಹಿಯನ್ನು ನೀಡಿದರು.

AKT/AK