ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಉನಾದಲ್ಲಿಂದು ಬಲ್ಕ್ ಡ್ರಗ್ ಪಾರ್ಕ್ಗೆ ಶಂಕುಸ್ಥಾಪನೆ ಮಾಡಿದರು ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಉನಾವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಿದರು. ಇಂದು ಮುಂಜಾನೆ ಪ್ರಧಾನ ಮಂತ್ರಿ ಅವರು ಉನಾದ ಅಂಬ್ ಅಂಡೌರಾದಿಂದ ನವದೆಹಲಿ ಮಾರ್ಗದ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನಾ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಸಿಖ್ ಧರ್ಮ ಗುರು ಗುರುನಾನಕ್ ದೇವ್ ಜಿ ಮತ್ತು ಮಾತೆ ಚಿಂತಪೂರ್ಣಿ ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ಪ್ರಧಾನಿ ತಮ್ಮ ಭಾಷಣ ಆರಂಭಿಸಿದರು. ಧನ್ ತೇರಸ್ ಮತ್ತು ದೀಪಾವಳಿ ಹಬ್ಬಕ್ಕಿಂತ ಮೊದಲು ಹಿಮಾಚಲ ಪ್ರದೇಶಕ್ಕೆ ಅಭಿವೃದ್ಧಿಯ ಉಡುಗೊರೆಗಳನ್ನು ನೀಡಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಹಿಮಾಚಲ ಪ್ರದೇಶದೊಂದಿಗಿನ ತಮ್ಮ ಒಡನಾಟ ಸ್ಮರಿಸಿದ ಪ್ರಧಾನಿ, ಅದರ ಪ್ರಾಕೃತಿಕ ಸೌಂದರ್ಯ ಸದಾ ಹಸಿರಾಗಿದೆ. ಮಾತೆ ಚಿಂತಪೂರ್ಣಿಯ ಮುಂದೆ ತಲೆಬಾಗುವ ಅದೃಷ್ಟ ನನಗೆ ಸಿಕ್ಕಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಕೈಗಾರಿಕೀಕರಣಕ್ಕೆ ಇದು ಒಂದು ದೊಡ್ಡ ದಿನವಾಗಿದೆ ಎಂದು ಪ್ರಧಾನ ಮಂತ್ರಿ, ಹಿಮಾಚಲ ಪ್ರದೇಶ ರಾಜ್ಯಕ್ಕೆ ತಮ್ಮ ಭೇಟಿಯು ಸಂಪರ್ಕ ಮತ್ತು ಶಿಕ್ಷಣ ವಲಯದ ಅಭಿವೃದ್ಧಿಯಾಗಿದೆ ಎಂದು ಪ್ರಸ್ತಾಪಿಸಿದರು. “ಇಂದು ಉನಾದಲ್ಲಿ ದೇಶದ 2ನೇ ಬೃಹತ್ ಡ್ರಗ್ ಪಾರ್ಕ್ನ ಕೆಲಸ ಪ್ರಾರಂಭವಾಗಿದೆ. ಇಂದು ಹಿಮಾಚಲ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವುಗಳಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಲ್ಕ್ ಡ್ರಗ್ ಪಾರ್ಕ್ ಪಡೆಯುವ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. “ಬೃಹತ್ ಡ್ರಗ್ ಪಾರ್ಕ್ಗಾಗಿ ಕೇವಲ 3 ರಾಜ್ಯಗಳಲ್ಲಿ ಒಂದಾಗಿ ಹಿಮಾಚಲ ಆಯ್ಕೆಯಾಗಿರುವುದು ರಾಜ್ಯದ ಪಾಲಿಗೆ ಮಹತ್ವದ ನಿರ್ಧಾರವಾಗಿದೆ. ಇದು ರಾಜ್ಯದ ಮೇಲಿರುವ ನಮ್ಮ ಪ್ರೀತಿ ಮತ್ತು ಸಮರ್ಪಣೆಯ ಭಾಗವಾಗಿದೆ” ಎಂದು ಅವರು ಹೇಳಿದರು. ಅಂತೆಯೇ, ಹಿಮಾಚಲ ಪ್ರದೇಶಕ್ಕೆ ವಂದೇ ಭಾರತ ರೈಲು ತರುವ ನಿರ್ಧಾರವು ರಾಜ್ಯಕ್ಕೆ ಸರ್ಕಾರ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ. ರಾಜ್ಯದ ಹಿಂದಿನ ತಲೆಮಾರುಗಳು ರೈಲನ್ನು ಸಹ ನೋಡಿಲ್ಲ. ಆದರೆ ಇಂದು ಇಲ್ಲಿಂದ ಚಲಿಸುವ ರೈಲು ಅತ್ಯಾಧುನಿಕ ರೈಲುಗಳಲ್ಲಿ ಒಂದಾಗಿದೆ. ಡಬಲ್ ಇಂಜಿನ್ ಸರ್ಕಾರವು ಜನರ ಪ್ರಗತಿಗಾಗಿ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಇದರಿಂದ ತಿಳಿದುಬರುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.
ಹಿಮಾಚಲ ಪ್ರದೇಶ ಮತ್ತು ಕೇಂದ್ರದ ಹಿಂದಿನ ಸರ್ಕಾರಗಳು ಹಿಮಾಚಲ ಪ್ರದೇಶದ ನಾಗರಿಕರ ಅಗತ್ಯಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಗಮನ ಹರಿಸಲಿಲ್ಲ. “ಇಂತಹ ಪರಿಸ್ಥಿತಿಯಿಂದಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಹೆಚ್ಚು ಬಳಲುತ್ತಿದ್ದಾರೆ”. ಸಮಯವು ಈಗ ಉತ್ತಮವಾಗಿ ಬದಲಾಗಿದೆ. ಪ್ರಸ್ತುತ ಸರ್ಕಾರವು ಬರೀ ಜನರ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡದೆ, ಅವರ ಭರವಸೆ ಮತ್ತು ಆಕಾಂಕ್ಷೆಗಳನ್ನು ಅತ್ಯಂತ ಸಮರ್ಪಣೆ ಮತ್ತು ಬಲದಿಂದ ನನಸಾಗಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ತಿಳಿಸಿದರು. “ನಾವು ಹಿಂದಿನ ಸರ್ಕಾರಗಳು ಬಿಟ್ಟುಹೋದ ಅಭಿವೃದ್ಧಿಯ ಕಂದಕವನ್ನು ಮುಚ್ಚುವುದು ಮಾತ್ರವಲ್ಲದೆ ರಾಜ್ಯಕ್ಕೆ ಭದ್ರ ಅಡಿಪಾಯದ ಬಲವಾದ ಆಧಾರಸ್ತಂಭಗಳನ್ನು ನಿರ್ಮಿಸುತ್ತಿದ್ದೇವೆ” ಎಂದು ಹೇಳಿದರು.
ಕಳೆದ ಶತಮಾನದಷ್ಟು ಹಿಂದೆಯೇ ಹಲವು ದೇಶಗಳು ಮತ್ತು ಗುಜರಾತ್ನಂತಹ ಕೆಲವು ರಾಜ್ಯಗಳು ತನ್ನ ನಾಗರಿಕರಿಗೆ ಶೌಚಾಲಯಗಳು, ಗ್ರಾಮೀಣ ರಸ್ತೆಗಳು ಮತ್ತು ಆಧುನಿಕ ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದವು. “ಭಾರತದಲ್ಲಿ ಆದಾಗ್ಯೂ, ಹಿಂದಿನ ಸರ್ಕಾರವು ಸಾಮಾನ್ಯ ಜನರಿಗೆ ಈ ಮೂಲಭೂತ ಆರೈಕೆಯನ್ನು ಕಷ್ಟಕರವಾಗಿಸಿತು. ಗುಡ್ಡಗಾಡು ಪ್ರದೇಶಗಳು ಇದರಿಂದ ಹೆಚ್ಚು ಹಾನಿಗೊಳಗಾಗಿವೆ. ಇಲ್ಲಿ ವಾಸಿಸುತ್ತಿರುವಾಗ ನಾನು ಇದನ್ನು ಹತ್ತಿರದಿಂದ ಅನುಭವಿಸಿದ್ದೆ. “ನವ ಭಾರತವು ಹಿಂದಿನ ಸವಾಲುಗಳನ್ನು ಜಯಿಸುತ್ತಿದೆ ಮತ್ತು ವೇಗವಾಗಿ ಬೆಳೆಯುತ್ತಿದೆ. ಕಳೆದ ಶತಮಾನದಲ್ಲಿ ಜನರಿಗೆ ತಲುಪಬೇಕಾದ ಸೌಕರ್ಯಗಳು ಈಗ ಲಭ್ಯವಾಗುತ್ತಿವೆ. ನಾವು 20ನೇ ಶತಮಾನದ ಸೌಕರ್ಯಗಳನ್ನು ಇದೀಗ ಪಡೆಯುತ್ತಿದ್ದೇವೆ. ಹಿಮಾಚಲ ಪ್ರದೇಶವನ್ನು 21 ನೇ ಶತಮಾನದ ಆಧುನಿಕ ಸೌಲಭ್ಯಗಳೊಂದಿಗೆ ಸಂಪರ್ಕಿಸುತ್ತೇವೆ. ಗ್ರಾಮೀಣ ರಸ್ತೆಗಳನ್ನು ದುಪ್ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದ್ದು, ಗ್ರಾಮ ಪಂಚಾಯತ್ ಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತಿದೆ. ನಮ್ಮ ಸರ್ಕಾರ 21ನೇ ಶತಮಾನದ ನವ ಭಾರತದ ಆಶಯಗಳನ್ನು ಈಡೇರಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಹಿಮಾಚಲ ಪ್ರದೇಶವು ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಥಮ ಔಷಧ ತಯಾರಿಕಾ ತಾಣವನ್ನಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, ಅದರ ಸಾಧ್ಯತೆಗಳು ಇನ್ನೂ ಹೆಚ್ಚಾಗಲಿವೆ ಎಂದು ಪ್ರಧಾನಿ ತಿಳಿಸಿದರು. ಹಿಮಾಚಲ ಪ್ರದೇಶದಲ್ಲಿ ತಯಾರಾದ ಔಷಧಿಗಳ ಶಕ್ತಿ ಸಾಮರ್ಥ್ಯಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ. ಈಗ ಔಷಧ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಹಿಮಾಚಲ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದ್ದು, ಇತರ ರಾಷ್ಟ್ರಗಳ ಮೇಲೆ ಭಾರತದ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು. ಆಯುಷ್ಮಾನ್ ಭಾರತ್ ಯೋಜನೆಯ ಅಡಿ, ಜನೌಷಧಿ ಕೇಂದ್ರದ ಮೂಲಕ ಬಡವರು ಮತ್ತು ನಿರ್ಗತಿಕರಿಗೆ ಸರ್ಕಾರವು 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸಾ ವೆಚ್ಚ ನೀಡುತ್ತಿದೆ. “ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ವೈದ್ಯಕೀಯ ಸೇವೆ ಒದಗಿಸುವ ಸರ್ಕಾರದ ಅಭಿಯಾನಕ್ಕೆ ಬಲ್ಕ್ ಡ್ರಗ್ ಪಾರ್ಕ್ ಮತ್ತಷ್ಟು ಬಲ ನೀಡುತ್ತದೆ” ಎಂದು ಪ್ರಧಾನಿ ತಿಳಿಸಿದರು. “ಅದು ಕೃಷಿಯಾಗಿರಲಿ ಅಥವಾ ಕೈಗಾರಿಕೆಯಾಗಿರಲಿ, ಸಂಪರ್ಕವು ಅಭಿವೃದ್ಧಿಯ ವೇಗಕ್ಕೆ ಪ್ರಚೋದನೆ ಮತ್ತು ಪ್ರೇರಣೆ ನೀಡುತ್ತದೆ”. 40 ವರ್ಷಗಳ ಹಿಂದೆ ಮಂಜೂರಾದ ನಂಗಲ್ ಅಣೆಕಟ್ಟು-ತಳವಾರ ರೈಲು ಮಾರ್ಗದ ಉದಾಹರಣೆ ನೀಡಿದ ಅವರು, ಪ್ರಸ್ತುತ ಸರ್ಕಾರವು ಅದನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳುವ ತನಕ ಕಳೆದ 40 ವರ್ಷಗಳಿಂದ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಿಮಾಚಲ ಪ್ರದೇಶದಾದ್ಯಂತ ರೈಲ್ವೆ ಸಂಪರ್ಕವನ್ನು ಸುಧಾರಿಸಲು ಡಬಲ್ ಇಂಜಿನ್ ಸರ್ಕಾರವು ಬದ್ಧವಾಗಿದೆ. ಇಂದು, ದೇಶವು ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲುಗಳೊಂದಿಗೆ ಸಂಪರ್ಕ ಹೊಂದುತ್ತಿರುವಾಗ, ಹಿಮಾಚಲವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಭರವಸೆಗಳನ್ನು ಈಡೇರಿಸುವ ಮತ್ತು ಸಮಯಕ್ಕಿಂತ ಮುಂಚಿತವಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಇಂದಿನ ಸರ್ಕಾರದ ಹೊಸ ಕಾರ್ಯಶೈಲಿಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಹಿಮಾಚಲ ಪ್ರದೇಶ ಹೊಂದಿರು ನೈಜ ಸಾಮರ್ಥ್ಯಕ್ಕಿಂತ ಅದರ ಮೌಲ್ಯ ಕಡಿಮೆಯಾಗಿತ್ತು. ಆದರೆ ಅದರ ಸಂಸತ್ತಿನ ಸ್ಥಾನಗಳ ಸಂಖ್ಯೆಯ ಆಧಾರದ ಮೇಲೆ ಹೆಚ್ಚು ಮೌಲ್ಯಯುತವಾಗಿತ್ತು” ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಬೇಡಿಕೆಯನ್ನು ತುರ್ತಾಗಿ ನಿಭಾಯಿಸಲಾಗುತ್ತಿದೆ. ಐಐಟಿ, ಐಐಐಟಿ, ಐಐಎಂ ಮತ್ತು ಎಐಐಎಂಎಸ್ ಪಡೆಯಲು ಹಿಮಾಚಲವು ಡಬಲ್ ಇಂಜಿನ್ ಸರ್ಕಾರಕ್ಕಾಗಿ ಕಾಯಬೇಕಾಯಿತು. ಹಿಮಾಚಲ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕ್ರಮಗಳು ವಿದ್ಯಾರ್ಥಿಗಳಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ. ಉನಾದಲ್ಲಿ ಐಐಐಟಿಯ ಶಾಶ್ವತ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದರು. ಐಐಐಟಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಇಂದು ಬದಲಾಗುತ್ತಿರುವ ಕೆಲಸದ ಸಂಸ್ಕೃತಿಯನ್ನು ಮತ್ತಷ್ಟು ಎತ್ತಿ ಹಿಡಿಯಲು ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಸಾಂಕ್ರಾಮಿಕ ರೋಗದ ಸವಾಲಿನ ನಡುವೆಯೂ ಯೋಜನೆಯಲ್ಲಿ ತೊಡಗಿಸಿಕೊಂಡು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ದೇಶಾದ್ಯಂತ ಕೌಶಲ್ಯ ಮತ್ತು ನಾವೀನ್ಯ ಸಂಸ್ಥೆಗಳ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನ ಮಂತ್ರಿ ಅವರು, ಯುವಜನರ ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿಗೊಳಿಸುವುದು ಇಂದು ನಮ್ಮ ಅತಿ ದೊಡ್ಡ ಆದ್ಯತೆಯಾಗಿದೆ ಎಂದು ಹೇಳಿದರು. ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮತ್ತು ದೇಶದ ಭದ್ರತೆಯಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸುವ ಮೂಲಕ ಹಿಮಾಚಲದ ಯುವಕರ ಕೊಡುಗೆಯನ್ನು ಅವರು ಪ್ರಶಂಸಿಸಿದರು. “ಈಗ ವಿವಿಧ ರೀತಿಯ ಕೌಶಲ್ಯಗಳು ಅವರನ್ನು ಸೇನೆಯಲ್ಲಿ ಉನ್ನತ ಸ್ಥಾನಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತಿವೆ” ಎಂದರು.
ಕನಸುಗಳು ಮತ್ತು ನಿರ್ಣಯಗಳು ಅದ್ಭುತವಾದಾಗ, ಪ್ರಯತ್ನಗಳನ್ನು ಸಮಾನವಾಗಿ ಮಾಡಲಾಗುತ್ತದೆ. ಡಬಲ್ ಇಂಜಿನ್ ಸರ್ಕಾರದ ಮಾದರಿಯಲ್ಲಿ ಇಂತಹ ಪ್ರಯತ್ನ ಎಲ್ಲೆಡೆ ಗೋಚರಿಸುತ್ತದೆ, ಇದು ಹೊಸ ಇತಿಹಾಸ ಸೃಷ್ಟಿಸುತ್ತದೆ ಮತ್ತು ಹೊಸ ಪದ್ಧತಿಯೊಂದಿಗೆ ಹೊರಹೊಮ್ಮುತ್ತದೆ. “ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಹಿಮಾಚಲದ ಅಭಿವೃದ್ಧಿಯ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದು ನಾನು ನಂಬುತ್ತೇನೆ. ಈ ಸುವರ್ಣ ಅವಧಿಯು ಹಿಮಾಚಲವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ, ಅದಕ್ಕಾಗಿ ನೀವೆಲ್ಲರೂ ದಶಕಗಳಿಂದ ಕಾಯುತ್ತಿದ್ದಿರಿ, ”ಎಂದು ಪ್ರಧಾನ ಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್, ಹಿಮಾಚಲ ಪ್ರದೇಶ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಸುರೇಶ್ ಕಶ್ಯಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಆತ್ಮನಿರ್ಭರ ಭಾರತಕ್ಕಾಗಿ ಪ್ರಧಾನ ಮಂತ್ರಿ ಅವರ ಸ್ಪಷ್ಟವಾದ ಕರೆಯು ಸರ್ಕಾರದ ವಿವಿಧ ಹೊಸ ಉಪಕ್ರಮಗಳ ಬೆಂಬಲದ ಮೂಲಕ ದೇಶವು ಬಹುವಲಯಗಳಲ್ಲಿ ಸ್ವಾವಲಂಬನೆಯ ಸಾಧನೆಯತ್ತ ವೇಗವಾಗಿ ಚಲಿಸುವಂತೆ ಮಾಡಿದೆ. ಅಂತಹ ಪ್ರಮುಖ ಕ್ಷೇತ್ರವೆಂದರೆ ಔಷಧೀಯ ಕ್ಷೇತ್ರ. ಈ ವಲಯದಲ್ಲಿ ಆತ್ಮನಿರ್ಭರ್ ಆಂದೋಲನವನ್ನು ತರುವ ಸಲುವಾಗಿ, ಉನಾ ಜಿಲ್ಲೆಯ ಹರೋಲಿಯಲ್ಲಿ 1900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಬಲ್ಕ್ ಡ್ರಗ್ ಪಾರ್ಕ್ನ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನೆರವೇರಿಸಿದರು. ಬಲ್ಕ್ ಡ್ರಗ್ ಪಾರ್ಕ್ ಎಪಿಐ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸುಮಾರು 10,000 ಕೋಟಿ ರೂ. ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ. 20,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಜಿಸಲಿದೆ. ಇದು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.
ಪ್ರಧಾನಮಂತ್ರಿ ಅವರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) – ಉನಾವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದಕಕೆ 2017ರಲ್ಲಿ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಸ್ತುತ, 530ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಇಂದು ಮುಂಜಾನೆ, ಪ್ರಧಾನಿ ಅವರು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನಾ ಸಂಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಅಂಬ್ ಅಂಡೌರಾದಿಂದ ನವದೆಹಲಿಗೆ ಈ ರೈಲು ಸಂಚರಿಸಲಿದ್ದು, ಇದು ದೇಶದಲ್ಲಿ ಪರಿಚಯಿಸಲಾದ 4ನೇ ವಂದೇ ಭಾರತ್ ರೈಲು ಆಗಿದೆ. ಹಿಂದಿನದಕ್ಕೆ ಹೋಲಿಸಿದರೆ ಇದು ಸುಧಾರಿತ ರೈಲು ಸಂಚಾರವಾಗಿದೆ. ಈ ರೈಲು ಹೆಚ್ಚು ಹಗುರವಾಗಿರುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತದೆ. ಈ ನೂತನ ರೈಲು ಸಂಚಾರದಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಿಸಲು ಸಹಾಯ ಮಾಡುತ್ತದೆ. ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ಇದು ಒದಗಿಸುತ್ತದೆ.
*****
In Una, launching projects related to pharma, education & railways. These will have positive impact on the region's progress. https://t.co/NafVwqSLJt
— Narendra Modi (@narendramodi) October 13, 2022
PM @narendramodi recalls his association with Himachal Pradesh. pic.twitter.com/XlwOs613bb
— PMO India (@PMOIndia) October 13, 2022
Various projects have been inaugurated or their foundation stone have been laid in Himachal Pradesh today. These will greatly benefit the people. pic.twitter.com/JHWm8SfilD
— PMO India (@PMOIndia) October 13, 2022
New India is overcoming challenges of the past and growing rapidly. pic.twitter.com/kQlwZGTa6X
— PMO India (@PMOIndia) October 13, 2022
Our government is fulfilling the aspirations of 21st century India. pic.twitter.com/c5iZ6ijkGo
— PMO India (@PMOIndia) October 13, 2022
Double engine government is committed to improve railway connectivity across Himachal Pradesh. pic.twitter.com/Lq7nE7bxtB
— PMO India (@PMOIndia) October 13, 2022
Education sector related initiatives in Himachal Pradesh will immensely benefit the students. pic.twitter.com/HxgWtpBy5e
— PMO India (@PMOIndia) October 13, 2022
आज जहां हिमाचल में ड्रोन से जरूरी सामान को दुर्गम क्षेत्रों में पहुंचाया जा रहा है, वहीं वंदे भारत जैसी ट्रेनें भी चलाई जा रही हैं। हम सिर्फ 20वीं सदी की जरूरतें ही पूरी नहीं कर रहे, बल्कि 21वीं सदी की आधुनिक सुविधाएं भी घर-घर ले जा रहे हैं। pic.twitter.com/uPCsLx9OJa
— Narendra Modi (@narendramodi) October 13, 2022
मां वैष्णो देवी के दर्शन के लिए पहले ही वंदे भारत एक्सप्रेस की सुविधा थी, अब नैनादेवी, चिंतपूर्णी, ज्वालादेवी, कांगड़ादेवी जैसे शक्तिपीठों के साथ-साथ आनंदपुर साहिब जाना भी आसान होगा। pic.twitter.com/bz01sYZ2iO
— Narendra Modi (@narendramodi) October 13, 2022