ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹವಾಮಾನ ಬದಲಾವಣೆ ಮತ್ತು ಪರಿಸರ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತು ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯದ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 2019 ರ ಸೆಪ್ಟೆಂಬರ್ 13 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲಾಗಿತ್ತು.
ಪ್ರಮುಖ ಪರಿಣಾಮ:
ಪರಿಸರ ನಾಶವು ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿರುವವರಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಮೇಲೆ ಪರಿಣಾಮ ಬೀರುತ್ತದೆ. ಪರಿಸರ ನಾಶವನ್ನು ತಡೆಯುವ ಯಾವುದೇ ಪ್ರಯತ್ನವು ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಪರಿಸರ ಸಂಪನ್ಮೂಲಗಳ ಲಭ್ಯತೆಯ ಅರ್ಥದಲ್ಲಿ ಪರಿಸರ ಸಮಾನತೆಗೆ ಕಾರಣವಾಗುತ್ತದೆ.
ಪ್ರಯೋಜನಗಳು:
ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕ್ಷೇತ್ರದಲ್ಲಿ ಈಕ್ವಿಟಿ, ಕೊಡುಕೊಳ್ಳುವಿಕೆ ಮತ್ತು ಪರಸ್ಪರ ಪ್ರಯೋಜನಗಳ ಆಧಾರದ ಮೇಲೆ ಅನ್ವಯವಾಗುವ ಕಾನೂನುಗಳು ಮತ್ತು ಕಾನೂನು ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು ಉಭಯ ದೇಶಗಳ ನಡುವೆ ನಿಕಟ ಮತ್ತು ದೀರ್ಘಕಾಲೀನ ಸಹಕಾರವನ್ನು ಸ್ಥಾಪಿಸಲು ಮತ್ತು ಉತ್ತೇಜಿಸಲು ಈ ಒಪ್ಪಂದವು ಅನುವು ಮಾಡಿಕೊಡುತ್ತದೆ. ಇದು ಉಭಯ ದೇಶಗಳ ನಡುವೆ ಮಾಹಿತಿ ಮತ್ತು ತಂತ್ರಜ್ಞಾನದ ವಿನಿಮಯದ ಮೂಲಕ ಸಾರ್ವಜನಿಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಉತ್ತಮ ಪರಿಸರ ಸಂರಕ್ಷಣೆ, ಉತ್ತಮ ಸಂರಕ್ಷಣೆ, ಹವಾಮಾನ ಬದಲಾವಣೆಯ ಉತ್ತಮ ನಿರ್ವಹಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಸೂಕ್ತವಾದ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ತರಲು ನಿರೀಕ್ಷಿಸಲಾಗಿದೆ.
ಪ್ರಮುಖ ಅಂಶಗಳು:
ಎ. ಹವಾಮಾನ ಬದಲಾವಣೆ ಮತ್ತು ಸುಸ್ಥಿರ ನೀರಿನ ನಿರ್ವಹಣೆಯ ಸಾಮರ್ಥ್ಯ ನಿರ್ಮಾಣ
ಬಿ. ಸುಸ್ಥಿರ ಅರಣ್ಯ ನಿರ್ವಹಣೆ
ಸಿ. ಪರ್ವತ ಪ್ರದೇಶಗಳ ಸುಸ್ಥಿರ ಅಭಿವೃದ್ಧಿ;
ಡಿ. ಪರಿಸರ ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನಗರಾಭಿವೃದ್ಧಿ
ಇ. ಗಾಳಿ, ಭೂಮಿ ಮತ್ತು ನೀರಿನ ಮಾಲಿನ್ಯದ ಸಮಸ್ಯೆಗಳನ್ನು ಬಗೆಹರಿಸುವುದು
ಎಫ್. ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಮೇಲೆ ಗಮನ ಕೇಂದ್ರೀಕರಿಸುವುದು
ಜಿ. ಹವಾಮಾನ ಬದಲಾವಣೆಯ ಅಪಾಯದ ನಿರ್ವಹಣೆ