ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮೊರಕ್ಕೋದ ಮರಕ್ಕೇಶ್ ನಲ್ಲಿ 2016ರ ನವೆಂಬರ್ 7ರಿಂದ 18ರವರೆಗೆ ನಡೆದ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (ಯು.ಎನ್.ಎಫ್.ಸಿ.ಸಿ.) ಕ್ಕಾಗಿ ಹವಾಮಾನ ಬದಲಾವಣೆ ಮಾತುಕತೆ ಕುರಿತಂತೆ ಪಕ್ಷಕಾರರ ಸಮಾವೇಶ (ಕಾಪ್)ದಲ್ಲಿ ಭಾರತದ ಪ್ರಸ್ತಾಪಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
ಕಾಪ್ ನಲ್ಲಿ ಹವಾಮಾನ ಬದಲಾವಣೆ ಮಾತುಕತೆಗಳ ಭಾರತದ ನಿಲುವಿನ ಅನುಮೋದನೆಯು, ಅಭಿವೃದ್ಧಿಯ ಪ್ರದೇಶವನ್ನು ಸಂರಕ್ಷಿಸಿಕೊಂಡು ಮತ್ತು ಪರಿವರ್ತನೆಗೆ ಒತ್ತು ನೀಡಿ, ನಷ್ಟ ಮತ್ತು ಹಾನಿಯ ಪ್ರತಿಪಾದನೆಯೊಂದಿಗೆ ಬಡವರ ಮತ್ತು ಶೋಷಿತ ಗುಂಪುಗಳ ಹಿತವನ್ನು ರಕ್ಷಿಸುವುದಾಗಿದೆ. ಇದು ದೇಶದ ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿ ಸಂಯೋಜಿಸುತ್ತದೆ.
ದೇಶದ ಅಭಿವೃದ್ಧಿ ಮತ್ತು ಪ್ರಗತಿಯು ಹಸಿರುಮನೆ ಅನಿಲದ ಹೊರಸೂಸುವಿಕೆಯೊಂದಿಗೆ ನಂಟು ಹೊಂದಿದೆ. ಹೀಗಾಗಿ ಹವಾಮಾನ ಬದಲಾವಣೆಯ ಪ್ರತೀಕೂಲ ಪರಿಣಾಮದ ವಿರುದ್ಧ ಹೋರಾಟ ನಡೆಸುವುದು, ಭಾರತಕ್ಕೆ ಅಭಿವೃದ್ಧಿಯ ಪ್ರದೇಶ ಹೊಂದುವುದು ಮತ್ತು ಅಭಿವೃದ್ಧಿಶೀಲ ದೇಶಗಳ ಅಗತ್ಯಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ನಿಲುವಿನಲ್ಲಿ ಒತ್ತಿ ಹೇಳಲಾಗಿರುವ ವಿಧಾನ ಟಿಪ್ಪಣಿಯು ಈ ಗುರಿಯನ್ನು ಸಾಧಿಸಲು ಶಕ್ತಗೊಳಿಸುತ್ತದೆ ಮತ್ತು ದೇಶದ ರೂಪಾಂತರ ಅಗತ್ಯಗಳ ಪೂರೈಕೆ ಬಯಸುತ್ತದೆ.
AKT/VBA/SH