Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹವಾಮಾನ ಬದಲಾವಣೆ ಕುರಿತಂತೆ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (ಯು.ಎನ್.ಎಫ್.ಸಿ.ಸಿ.ಸಿ.)ಕ್ಕೆ ಭಾರತದ ಎರಡನೇ ದ್ವೈವಾರ್ಷಿಕ ನವೀಕೃತ ವರದಿ (ಬಿ.ಯು.ಆರ್.) ಸಲ್ಲಿಕೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಮಾವೇಶದ ಅಡಿಯಲ್ಲಿ ವರದಿಗಾರಿಕೆಯ ಹೊಣೆಗಾರಿಕೆಯನ್ನು ಪೂರೈಸುವ ಸಲುವಾಗಿಹವಾಮಾನ ಬದಲಾವಣೆ ಕುರಿತಂತೆ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (ಯು.ಎನ್.ಎಫ್.ಸಿ.ಸಿ.ಸಿ.)ಕ್ಕೆ ಭಾರತದ ಎರಡನೇ ದ್ವೈವಾರ್ಷಿಕ ನವೀಕೃತ ವರದಿ (ಬಿ.ಯು.ಆರ್.) ಸಲ್ಲಿಕೆಗೆ ಸಂಪುಟ ತನ್ನ ಅನುಮೋದನೆ ನೀಡಿದೆ.

ಪ್ರಮುಖ ಅಂಶಗಳು:

  1. ಬಿ.ಯು.ಆರ್.ನ ಧ್ಯೇಯ ಯು.ಎನ್.ಎಫ್.ಸಿ.ಸಿ.ಸಿ.ಗೆ ಭಾರತದ ಮೊದಲ ಬಿ.ಯು.ಆರ್.ಗೆ ನವೀಕರಣೆಯನ್ನು ಒದಗಿಸುವುದಾಗಿದೆ. ಬಿ.ಯು.ಆರ್. ಪ್ರಮುಖ ಐದು ಅಂಶಗಳನ್ನು ಒಳಗೊಂಡಿದೆ – ರಾಷ್ಟ್ರೀಯ ಸಂದರ್ಭಗಳು;ರಾಷ್ಟ್ರೀಯ ಹಸಿರುಮನೆ ಅನಿಲ ತಪಶೀಲು ಯಾದಿ; ತಗ್ಗಿಸುವಿಕೆ ಕ್ರಮಗಳು; ಹಣಕಾಸು,ತಂತ್ರಜ್ಞಾನ ಮತ್ತು ಸಾಮರ್ಥ್ಯವರ್ಧನೆ ಅಗತ್ಯಗಳು ಮತ್ತು ಸ್ವೀಕೃತ ಬೆಂಬಲ ಮತ್ತು ದೇಶೀಯ ನಿಗಾ, ವರದಿಗಾರಿಕೆ ಮತ್ತು ಪರಿಶೀಲನೆ (ಎಮ್ಆರ್.ವಿ) ವ್ಯವಸ್ಥೆಗಳು.
  2. ಬಿ.ಯು.ಆರ್. ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾದ ಅಧ್ಯಯನಗಳ ಶ್ರೇಣಿಯ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ.

iii.              ಬಿ.ಯು.ಆರ್. ಬಹು ಹಂತದ ಪೀರ್ ಪರಾಮರ್ಶೆ,ಹೆಚ್ಚುವರಿ ಕಾರ್ಯದರ್ಶಿ (ಹವಾಮಾನ ಬದಲಾವಣೆಯ) ನೇತೃತ್ವದ ತಜ್ಞರ ತಾಂತ್ರಿಕ ಸಲಹಾ ಸಮಿತಿಯ ಪರಾಮರ್ಶೆ ಮತ್ತು ಕಾರ್ಯದರ್ಶಿ (ಇ.ಎಫ್.ಮತ್ತು ಸಿಸಿ) ಅಧ್ಯಕ್ಷತೆಯ ರಾಷ್ಟ್ರೀಯ ಚುಕ್ಕಾಣಿ (ಸ್ಟೀರಿಂಗ್) ಸಮಿತಿಯ.ಪರಾಮರ್ಶೆ ಪ್ರಕ್ರಿಯೆಯ ಮೂಲಕ ಸಾಗುತ್ತದೆ, ರಾಷ್ಟ್ರೀಯ ಸ್ಟೀರಿಂಗ್ ಸಮಿತಿ ಅಂತರ ಸಚಿವಾಲಯ ಕಾಯವಾಗಿದ್ದು, ನೀತಿ ಆಯೋಗ, ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ, ಆರ್ಥಿಕ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲ್ಲಿದ್ದಲು, ಇಂಧನ, ರೈಲ್ವೆ ಮಂಡಳಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ, ಆರೋಗ್ಯ ಮತ್ತು ಕುಟಂಬ ಕಲ್ಯಾಣ, ಭೂ ವಿಜ್ಞಾನಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳು, ಕೈಗಾರಿಕಾ ನೀತಿ ಮತ್ತು ಉತ್ತೇಜನ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಉಕ್ಕು, ನಾಗರಿಕ ವಿಮಾನಯಾನ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮತ್ತು ಭಾರತೀಯ ಹವಾಮಾನ ಇಲಾಖೆಯನ್ನು ಒಳಗೊಂಡಿದೆ. ಬಿ.ಯು.ಆರ್. ಅನ್ನು ಎಲ್ಲ ಸೂಕ್ತ ಟೀಕೆಗಳನ್ನು ಸರಿಪಡಿಸಿದ ಮತ್ತು ಬಹುಸ್ತರದ ಪರಾಮರ್ಶೆ ಪ್ರಕ್ರಿಯೆಯನ್ವಯ ಮಾರ್ಪಾಡುಗಳ ತರುವಾಯ ಆಖೈರು ಮಾಡಲಾಗಿದೆ.

  1. ಭಾರತದಲ್ಲಿ 2014ರಲ್ಲಿ, ಒಟ್ಟು 26,07,488ಗಿಗಾಗ್ರಾಂ (ಗಿ.ಗ್ರಾಂ) ಸಿಸಿ-2ಗೆ ಸಮಾನವಾದ* (ಸುಮಾರು2.607ಶತಕೋಟಿ ಟನ್ ಸಿಸಿ-2ಗೆ ಸಮಾನವಾದ) ಜಿಎಚ್.ಜಿ.ಗಳು (ಎಲ್.ಯು.ಎಲ್.ಯು.ಸಿ.ಎಫ್. ಹೊರತುಪಡಿಸಿ) ಎಲ್ಲ ಚಟುವಟಿಕೆಗಳಿಂದ ಹೊರಹೊಮ್ಮಿವೆ. ಎಲ್.ಯು.ಎಲ್.ಯು.ಸಿ.ಎಫ್. ಸೇರಿದ ತರುವಾಯ ನಿವ್ವಳ ರಾಷ್ಟ್ರೀಯ ಜಿಎಚ್.ಜಿ. ತ್ಯಾಜ್ಯ23,06,295 ಗಿ.ಗ್ರಾಂ ಸಿಓಎ ಸಮಾನವಾದ (ಸುಮಾರು 2.306ಶತಕೋಟಿ ಟನ್ ಸಿಓ2 ಸಮಾನವಾದ)ಆಗಿದೆ. ಒಟ್ಟಾರೆ ತ್ಯಾಜ್ಯಹೊರಸೂಸುವಿಕೆ ಪೈಕಿ, ಇಂಧನ ವಲಯದ ಪಾಲು ಶೇ.73, ಐಪಿಪಿಯು ಶೇ.8, ಕೃಷಿ ಶೇ.16 ಮತ್ತು ತ್ಯಾಜ್ಯ ವಲಯ ಶೇ.3 ಆಗಿದೆ. ಸುಮಾರು ಶೇ.12ರಷ್ಟು ಹೊಸಸೂಸುವಿಕೆ  ಅರಣ್ಯ ಭೂಮಿ, ಬೆಳೆ ಭೂಮಿ ಮತ್ತು ವಸಾಹತುಗಳ ಇಂಗಾಲ ಸಿಂಕ್ ಕ್ರಿಯೆಯಿಂದ ಹೊರಬಂದವಾಗಿರುತ್ತದೆ. 2014 ರ ಭಾರತೀಯ ರಾಷ್ಟ್ರೀಯ ಜಿಎಚ್ಜಿ ಯಾದಿಯ ಸಾರಾಂಶವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ::

ಇಂಧನ

19,09,765.74

ಕೈಗಾರಿಕಾ ಪ್ರಕ್ರಿಯೆ ಮತ್ತು ಉತ್ಪನ್ನದ ಬಳಕೆ

2,02,277.69

ಕೃಷಿ

4,17,217.54

ತ್ಯಾಜ್ಯ

78,227.15

ಭೂಮಿಯ ಬಳಕೆ, ಭೂ ಬಳಕೆಯ ಬದಲಾವಣೆ ಮತ್ತು ಅರಣ್ಯ (ಎಲ್.ಯು.ಎಲ್.ಯು.ಸಿ.ಎಫ್.)**

-3,01,192.69

ಎಲ್.ಯು.ಎಲ್.ಯು.ಸಿ.ಎಫ್ ಹೊರತಾದ ಮೊತ್ತ

26,07,488.12

ಎಲ್.ಯು.ಎಲ್.ಯು.ಸಿ.ಎಫ್ ಸಹಿತವಾದ ಮೊತ್ತ

23,06,295.43

ಪ್ರವರ್ಗ ಸಿಒ2ಸಮಾನವಾದ(ಗಿ.ಗ್ರಾಂ)

**ನೇತ್ಯಾತ್ಮಕ ಹೊರಸೂಸುವಿಕೆ ಮೌಲ್ಯ ಸಿಂಕ್ ಕ್ರಿಯೆಯನ್ನು ಸೂಸುತ್ತವೆ. ಅಂದರೆ ವಾತಾವರಣದಿಂದ ನಿವ್ವಳ ಇಂಗಾಲ ತೆಗೆಯುವುದಾಗಿದೆ

* 1 ಗಿಗಾಗ್ರಾಂ (ಗಿಗ್ರಾಂ) = 109 ಗ್ರಾಂಗಳು;ಹಸಿರು ಮನೆ ಅನಿಲಗಳು ಸಿ.ಓ.2 ಸಮಾನವಾಗಿ ಪರಿವರ್ತಿತವಾಗುತ್ತವೆ(ಸಿಓ2ಇ ಅಥವಾ ಸಿಓ2ಇಕ್ಯು) ಅವುಗಳ ಆಯಾ ಜಾಗತಿಕ ತಾಪಮಾನ  ಹೆಚ್ಚಳ ಸಾಮರ್ಥ್ಯ ಬಳಸಿ.

ಪ್ರಮುಖ ಪರಿಣಾಮ:

ಭಾರತದ ಎರಡನೇ ಬಿ.ಯು.ಆರ್. ಸಲ್ಲಿಕೆ, ಸಮಾವೇಶದ ಪಕ್ಷಕಾರನಾಗಿ ಅನುಷ್ಠಾನ ಕುರಿತಂತೆ ಮಾಹಿತಿಯನ್ನು ಒದಗಿಸುವ ಭಾರತದ ಹೊಣೆಗಾರಿಕೆಯನ್ನು ಪೂರೈಸುತ್ತದೆ.

ಹಿನ್ನೆಲೆ:

ಭಾರತವು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ(ಯು.ಎನ್.ಎಫ್.ಸಿ.ಸಿ.ಸಿ.)ದ ಪಕ್ಷಕಾರನಾಗಿದೆ. ಈ ಸಮಾವೇಶ ಅದರ ವಿಧಿ 4.1 ಮತ್ತು 12.1ರ ಅನುಗುಣವಾಗಿದ್ದು, ಸಮಾವೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಕ್ಷಕಾರರ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪಕ್ಷಕಾರರಿಬ್ಬರೂ ಸೇರಿ ಎಲ್ಲಾ ಪಕ್ಷಕಾರರಿಗೆ ರಾಷ್ಟ್ರೀಯ ಸಂವಹನ ರೀತಿಯಲ್ಲಿ ಮಾಹಿತಿಯನ್ನು ಒದಗಿಸುವಂತೆ ಮಾಡುತ್ತವೆ. ಯು.ಎನ್.ಎಫ್.ಸಿ.ಸಿ.ಸಿ.ಯ ಪಕ್ಷಕಾರರ ಸಮಾವೇಶ ತನ್ನ 16ನೇ ಅಧಿವೇಶನದ ನಿರ್ಣಯ 1ರ ಪ್ಯಾರಾ 60 (ಸಿ)ಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು, ತಮ್ಮ ಸಾಮರ್ಥ್ಯಗಳು ಮತ್ತು ವರದಿಗಾಗಿ ಒದಗಿಸಲಾದ ಬೆಂಬಲದ ಮಟ್ಟಕ್ಕೆ ಅನುಗುಣವಾಗಿ, ರಾಷ್ಟ್ರೀಯ ಹಸಿರುಮನೆ ಅನಿಲ ತಪಶೀಲುಗಳ ನವೀಕರಣಗಳು ಮತ್ತು ತಗ್ಗಿಸುವ ಕ್ರಮಗಳು, ಅಗತ್ಯತೆಗಳು ಮತ್ತು ಬೆಂಬಲವನ್ನು ಪಡೆಯುವ ಮಾಹಿತಿಯನ್ನು ಹೊಂದಿರುವ ದ್ವೈವಾರ್ಷಿಕ ನವೀಕೃತ ವರದಿಗಳನ್ನು ಸಹ ಸಲ್ಲಿಸಬೇಕು. ಸಿ.ಓ.ಪಿ. 17ರ ನಿರ್ಣಯ 2ರ ಪ್ಯಾರಾ 41 (ಎಫ್) ದ್ವೈವಾರ್ಷಿಕ ನವೀಕೃತ ವರದಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಸಲ್ಲಿಸುವಂತೆ ಸೂಚಿಸುತ್ತದೆ.

*****