Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹರದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ ಉದ್ಘಾಟನೆಯ ಸಂಧರ್ಭದಲ್ಲಿ ಪ್ರಧಾನಿಯವರ ಭಾಷಣ

ಹರದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ ಉದ್ಘಾಟನೆಯ ಸಂಧರ್ಭದಲ್ಲಿ ಪ್ರಧಾನಿಯವರ ಭಾಷಣ

ಹರದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ ಉದ್ಘಾಟನೆಯ ಸಂಧರ್ಭದಲ್ಲಿ ಪ್ರಧಾನಿಯವರ ಭಾಷಣ

ಹರದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ ಉದ್ಘಾಟನೆಯ ಸಂಧರ್ಭದಲ್ಲಿ ಪ್ರಧಾನಿಯವರ ಭಾಷಣ


            ಬಹುಸಂಖ್ಯೆಯಲ್ಲಿ ಆಗಮಿಸಿರುವ ಪ್ರಿಯ ಸಹೋದರ ಸಹೋದರಿಯರೇ,ಇಂದು ಕೇದಾರನಾಥಕ್ಕೆ ತೆರಳಿ ಬಾಬಾರ ದರ್ಶನಮಾಡುವ ಸೌಭಾಗ್ಯ,ಹಾಗೂ ನಿಮ್ಮಗಳನಡುವೆ ಆಗಮಿಸಿ ತಮ್ಮೆಲ್ಲರ ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ದೊರಕಿದೆ. ಬಾಬಾರವರು ಇಂದು ನನಗೆ surpriseಕೊಟ್ಟಿದ್ದಾರೆ,ಭಾವುಕತೆಯಿಂದ ನನ್ನನ್ನು ಸನ್ಮಾನಿಸಿದ್ದಾರೆ, ನಾನು ಸ್ವಾಮೀಜಿಯವರಿಗೆ ಹಾಗೂ ಸಮಸ್ತ ಪತಂಜಲಿ ಪರಿವಾರಕ್ಕೆ ಈ ಮೂಲಕ ನನ್ನ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ.

          ನನ್ನನ್ನು ಸಾಕಿ ಸಲಹಿದ, ನನ್ನನ್ನು ರೂಪಿಸಿದ,ನನಗೆ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿ ಪೋಷಿಸಿದವರ ಕೃಪೆಯಿಂದ ಯಾರಾದರೂ ನಿನ್ನನ್ನುಸನ್ಮಾನಿಸಿದರೆ ಅವರಿಗೆ ನಿನ್ನಿಂದ ಇಂಥಿಂಥ ಅಪೇಕ್ಷೆಗಳಿರುತ್ತವೆ, ಅವನ್ನು ಹಿಂದುಮುಂದು ಆಲೋಚಿಸದೆ ಪೂರೈಸು ಎನ್ನುವ ಸಾಮಾನ್ಯ ಜ್ಞಾನ ನನಗಿದೆ.ಅಂದರೆ ಒಂದು ರೀತಿಯಲ್ಲಿ ನಾನು ಏನು ಮಾಡಬೇಕು,ಹೇಗೆ ಬದುಕಬೇಕೆನ್ನುವ ಒಂದು ದೊಡ್ಡ ಬೇಕು-ಬೇಡಗಳ(do’s and don’ts)ನ್ನು ಗುರೂಜಿ ನನ್ನ ಮುಂದಿರಿಸಿದ್ದಾರೆ.

            ಆದರೆ ಈ ಸನ್ಮಾನದೊಡನಿರುವ ತಮ್ಮ ಆಶೀರ್ವಾದ,125 ಕೋಟಿ ದೇಶವಾಸಿಗಳ ಆಶೀರ್ವಾದಗಳ ಶಕ್ತಿಯ ಮೇಲೆ ನನಗೆ ಸಂಪೂರ್ಣ ಭರವಸೆಯಿದೆ.ನನಗೆ ನನ್ನ  ಮೇಲಿರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ತಮ್ಮ ಹಾಗೂ ದೇಶವಾಸಿಗಳ ಆಶೀರ್ವಾದದ ಸಾಮರ್ಥ್ಯದ ಮೇಲಿದೆ.ಈ  ಆಶೀರ್ವಾದಗಳು ನಮ್ಮ ಸಂಸ್ಕಾರವನ್ನು ಅದರದ್ದೇ ಮರ್ಯಾದೆಯ ಚೌಕಟ್ಟಿನೊಳಗೆ ಕಟ್ಟಿ ಹಾಕಿಬಿಡುತ್ತವೆ ಹಾಗೂ ರಾಷ್ಟ್ರಕ್ಕಾಗಿ ಸಮರ್ಪಿತ ಜೀವನವನ್ನು ಜೀವಿಸಲು ದಿನನಿತ್ಯ ನವ ಪ್ರೇರಣೆಗಳನ್ನು ನೀಡುತ್ತಿರುತ್ತವೆ.

        ನಾನಿಂದು ನಿಮ್ಮ ನಡುವೆ ಇದ್ದೇನೆ. ನಿಮ್ಮ ಕುಟುಂಬದ ಸದಸ್ಯನೊಬ್ಬ ನಿಮ್ಮೊಂದಿಗಿದ್ದಾನೆಂದು ನಿಮಗೆ ಅನ್ನಿಸುತ್ತಿರಬಹುದು, ನಾನು ಇಲ್ಲಿಗೆ ಮೊಟ್ಟಮೊದಲ ಬಾರಿಗೆ ಬಂದವನೇನಲ್ಲ, ತಮ್ಮಗಳ ನಡುವೆ ಮತ್ತೆ- ಮತ್ತೆ ಬರುವ ಸೌಭಾಗ್ಯ ನನಗೆ ದೊರಕಿದೆ. ಒಬ್ಬ ಕೌಟುಂಬಿಕ ಸದಸ್ಯನಂತೆ ಇಲ್ಲಿಗೆ ಬರುತ್ತಿರುವ ಸೌಭಾಗ್ಯ ನನಗೆ ದೊರಕಿದೆ.ರಾಮದೇವಜೀ ವಿಶ್ವದ ಮುಂದೆ ಹೇಗೆ ಬೆಳೆಯುತ್ತಾ ಬಂದರೆನ್ನುವುದನ್ನು ಸಮೀಪದಿಂದ ಕಂಡ ಸೌಭಾಗ್ಯವಂತ ನಾನು. ಅವರ ಶ್ರದ್ದಾಪೂರ್ವಕ ಸಮರ್ಪಣೆಯೇ ಅವರ ಗಿಡಮೂಲಿಕೆಗಳು. ಈ ಗಿಡಮೂಲಿಕೆಗಳು ಬಾಲಕೃಷ್ಣಆಚಾರ್ಯರು ಹೆಕ್ಕಿತೆಗೆದ ಗಿಡಮೂಲಿಕೆಗಳಲ್ಲ, ಇವು ಸ್ವಾಮೀಜಿ ಕಂಡುಕೊಂಡ ಗಿಡಮೂಲಿಕೆಗಳು. ಬಾಲಕೃಷ್ಣರ

ಗಿಡಮೂಲಿಕೆಗಳು ದೇಹವನ್ನುಆರೋಗ್ಯವಾಗಿಡಲು ಉಪಕಾರಿ, ಆದರೆ ಸ್ವಾಮೀಜಿವರ ಗಿಡಮೂಲಿಕೆಗಳು ಕಷ್ಟಕಾರ್ಪಣ್ಯಗಳನ್ನು ನೀಗಿಸಿ ಜೀವನ ನೌಕೆಯನ್ನು ಮುಂದೆ ಸಾಗಿಸಬಲ್ಲ ತಾಕತ್ತು ಹೊಂದಿವೆ.

       ಇಂದು ನನಗೆ ಸಂಶೋಧನಾ ಕೇಂದ್ರವನ್ನು(Research Centre) ಉದ್ಘಾಟಿಸುವ ಸೌಭಾಗ್ಯ ದೊರಕಿದೆ. ನಮ್ಮ ದೇಶದ ಗತಕಾಲಕ್ಕೆ ದೃಷ್ಟಿ ಹರಿಸಿದರೆ ನಾವು ಎಷ್ಟೊಂದು ವ್ಯಾಪಕವಾಗಿ, ಎಷ್ಟು ಎತ್ತರಕ್ಕೆ ಏರಿದ್ದೇವಂಬುದರ ಅರಿವಾಗುತ್ತದೆ, ಇಡೀ ವಿಶ್ವಕ್ಕೆ ನಾವೇರಿರುವ ಎತ್ತರಕ್ಕೆ ಏರುವುದು ಅಸಾದ್ಯ ಹಾಗೂ ಅಸಂಬವವೆನಿಸಿದ ಕಾಲವೊಂದಿತ್ತು, ಹೀಗಾಗಿ ನಮ್ಮ ಹಿರಿಮೆಯನ್ನು ಹಾಳುಮಾಡುವ, ನಾಶಮಾಡುವ ಹಾಗೂ ಧ್ವಂಸಮಾಡುವ ದಾರಿಯನ್ನು ಇತರರು ಕಂಡುಕೊಂಡರು. ಗುಲಾಮಗಿರಿಯ ಆಂಧಕಾರಕ್ಕೆ ನಮ್ಮನ್ನು ತಳ್ಳಿದರು. ನಮ್ಮ ಸಂತ, ಆಚಾರ್ಯ, ರೈತ,ವಿಜ್ಞಾನಿ ಹೀಗೆ ಪ್ರತಿಯೊಬ್ಬರನ್ನೂ 1000,1200 ವರ್ಷಗಳ ಗುಲಾಮಗಿರಿಯು ನಾಶಮಾಡಿತು.

ಸ್ವತಂತ್ರ್ಯಾನಂತರ ಏನು ಅಳಿದುಳಿದೆವೆಯೋ ಅದನ್ನೇ ಕಾಪಾಡುತ್ತಾ,ಬೆಳೆಸುತ್ತಾ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಜುತ್ತಾ ಹೊಸ ಬಣ್ಣ ವಿನ್ಯಾಸದೊಡನೆ ಅಲಂಕರಿಸಿ ಸ್ವತಂತ್ರ ಭಾರತದ ಉಸಿರಿನೊಡನೆ ಇವನ್ನೆಲ್ಲಾ ಜಗತ್ತಿನ ಮುಂದಿರಿಸಬಹುದಿತ್ತು, ಆದರೆ ಹಾಗಾಗಲಿಲ್ಲ. ಗುಲಾಮಗಿರಿಯ ಕಾಲದಲ್ಲಿ ನಡೆದ ನಾಶದ ಹುನ್ನಾರದಂತೆಯೇ ಸ್ವತಂತ್ರ್ಯಾನಂತರದ ಅನೇಕ ವರ್ಷಗಳು ಆ  ಹಿರಿಮೆಗಳನ್ನು ಮರೆಸುವ ಪ್ರಯತ್ನವನ್ನೇ ಮುಂದುವರೆಸಲಾಯಿತು. ಶತ್ರುಗಳು ಮಾಡಿದ ಸರ್ವನಾಶದೊಡನೆ ಹೋರಾಟನಡೆಸಿ ಅದರಿಂದ ಹೊರಬಂದು ಅಸ್ಥಿತ್ವವನ್ನು ಉಳಿಸಿಕೊಳ್ಶುವ ಪ್ರಯತ್ನವನ್ನೇನೊ ಮಾಡಿದೆವು, ಆದರೆ ನಮ್ಮವರೇ ಯಾಮಾರಿಸಿದ್ದರ ಫಲವಾಗಿ ಮೂರು ತಲೆಮಾರುಗಳು ಕರಾಳ ಜೀವನವನ್ನು ನಡೆಸಬೇಕಾಯಿತು.

.        ಇಂದು ಬಹಳ ಹೆಮ್ಮೆ ಮತ್ತು ಗರ್ವದಿಂದ ನಾನು ಹೇಳುವುದೇನಂದರೆ ಈಗ ಉದಾಸೀನಮಾಡುವ ಸಮಯವಲ್ಲ,ಯಾವುದು ಶ್ರೇಷ್ಠವೋ ಅದನ್ನು ಗೌರವಿಸುವ ಸಮಯ ಹಾಗೂ ಭಾರತದ ಗೌರವ-ಅಭಿಮಾನಗಳನ್ನು ,ವೈಭವವನ್ನು ಜಗತ್ತಿಗೆ ಪರಿಚಯಿಸುವ ಕಾಲ ಕೂಡಿ ಬಂದಿದೆ.ನಾವು ಭಾರತ ಜಗತ್ತಿನಲ್ಲಿ ಅತಿ ಉಚ್ಚ ಸ್ಥಾನದಲ್ಲಿದ್ದ ದೇಶ ಎಂಬುದನ್ನು ಮರೆಯಬಾರದು. ನಮ್ಮ ದೇಶ ಅಷ್ಟು ಎತ್ತರಕ್ಕೆ ಹೇಗೆ ಏರಿತೆಂದರೆ ನಮ್ಮ ಪೂರ್ವಿಕರು ಸದಾ ಅನ್ವೇಷಣೆಗಾಗಿ(innovation)ತಮ್ಮ ಜೀವನವನ್ನೇ ತೊಡಗಿಸಿಕೊಂಡಿದ್ದರು. ಹೊಸ ಹೊಸ ಆವಿಷ್ಕಾರಗಳು, ಹೊಸ ಹೊಸ ವಸ್ತುಗಳ ಪ್ರಾಪ್ತಿ ಆಗೂ ಮಾನವ ಜನಾಂಗದ ಒಳಿತಿಗಾಗಿ ಅವುಗಳ ಬಳಕೆ ನಮ್ಮವರ ಗುರಿಯಾಗಿತ್ತು. ಎಂದಿನಿಂದ ಆವಿಷ್ಕಾರ ಹಾಗೂಅನ್ವೇಷಣೆ(research )ಗಳಿಂದ ದೂರವಾಗಿ ಉದಾಸೀನತೆ ನಮ್ಮಲ್ಲಿ ಬೀಡುಬಿಟ್ಟಿತೋ ಅಂದಿನಿಂದ ಜಗತ್ತಿನ ಮುಂದೆ ಪ್ರಭಾವ ಬೀರುವಲ್ಲಿ ನಾವು ಅಸಮರ್ಥರಾಗತೊಡಗಿದೆವು.

        ಅನೇಕ ವರ್ಷಗಳ ನಂತರ IT Revaluation ಬಂತು, ನಮ್ಮ ದೇಶದ 18,20,22ರ ಹರೆಯದ ಮಕ್ಕಳು mouse ನೊಡನೆ ಆಟವಾಡುತ್ತಾ ಯಾವಾಗ ಇಡೀ ವಿಶ್ವವನ್ನೇ ಚಕಿತಗೊಳಿಸಿದರೋ  ಆಗ ವಿಶ್ವದ ಗಮನ ಮತ್ತೆ ನಮ್ಮ ಕಡೆಗೆ ಹರಿಯಿತು. ಸಂಶೋಧನೆ ,ಅನ್ವೇಷಣೆ( Research Innovation,)ಗಳಿಗೆ ಇರುವ ಸಾಮರ್ಥ್ಯವನ್ನುನಾವು ಕಣ್ಣಾರೆ ಕಂಡಿದ್ದೇವೆ. ಇಂದು ಇಡೀ ಜಗತ್ತೇHolistic Health Care, ಬಗೆಗೆ ಬಹಳ ಸಂವೇದನಾಶೀಲವಾಗಿದೆ, ಜಾಗೃತವಾಗಿದೆ, ಆದರೆ ಅದಕ್ಕೆ ಹಾದಿ ದೊರೆಯುತ್ತಿಲ್ಲ. ಭಾರತದಲ್ಲಿ ಋಷಿಮುನಿಗಳ ಪರಂಪರೆ,ಯೋಗ ಇವುಗಳ ಮೇಲೆ ಆಸಕ್ತಿ ಹೆಚ್ಚಾಗಿದೆ. ಎಲ್ಲರೂ ಶಾಂತಿಯನ್ನರಸುತ್ತಿದ್ದಾರೆ, ಹೊರಪ್ರಪಂಚದಿಂದ ರೋಸಿಹೋಗಿ ತಮ್ಮ ಅಂತರಂಗವನ್ನು ಅರಿಯಲು, ಪರೀಕ್ಷಿಸಲು ಉತ್ಸುಕರಾಗಿದ್ದಾರೆ.

     ಇಂತಹ ಸಮಯದಲ್ಲಿ ಆಧುನಿಕ ಪರಿಪೇಕ್ಷ್ದದಲ್ಲಿ ಯೋಗವು ತನು-ಮನದ ಆರೋಗ್ಯಕ್ಕಾಗಿ, ಆತ್ಮದ ಚೇತನಕ್ಕಾಗಿ ಇರುವ ಒಂದು ವಿಜ್ಞಾನವೆಂದು  ಸಂಶೋಧನೆ ಮತ್ತು ವಿಶ್ಲೇಷಣೆಗಳ ಣೂಲಕ       (Research&Analysis ) ಧೃಢೀಕರಿಸುವುದು ನಮ್ಮೆಲ್ಲರ ಕರ್ತವ್ಯ. ಯೋಗವನ್ನೇ ಒಂದು ಆಂದೋಲನವನ್ನಾಗಿ ಮಾಡಿ, ಜನಸಾಮಾನ್ಯರಲ್ಲಿ ವಿಶ್ವಾಸಮೂಡಿಸಬೇಕು. ಯೋಗಮಾಡುವವರೆಲ್ಲ ಹಿಮಾಲಯಕ್ಕೆ ಹೋಗಿ ಗುಹೆಯಲ್ಲಿ ವಾಸಿಸುವ ಅಗತ್ಯವಿಲ್ಲ , ತಂತಮ್ಮ ಅಡುಗೆಕೋಣೆಯಲ್ಲೂ, ಫುಟ್ಪಾತಿನಲ್ಲೂ ,ಆಟದಮೈದಾನದಲ್ಲೂ, ತೋಟದಲ್ಲಿ, ದೇವಾಲಯದ ಪ್ರಾಂಗಣದಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ಯೋಗ ಮಾಡಬಹುದೆಂಬ ಸಂದೇಶವನ್ನು ಯಶಸ್ನಿಯಾಗಿ ಜಗತ್ತಿನ ಎಲ್ಲರಿಗೂ ತಲುಪಿಸಿದ್ದಕ್ಕಾಗಿ ನಾನು ಬಾಬಾ ರಾಮದೇವರನ್ನು ಅಭಿನಂದಿಸುತ್ತೇನೆ. ಇದರಿಂದ ಅದ್ಭುತ ಪರಿವರ್ತನೆಗಳುಂಟಾಗಿವೆ. ಇವೆಲ್ಲದರ ಪರಿಣಾಮವಾಗಿ ಇಂದು ಜೂನ್ 21 ನ್ನು ಅಂತರ್ ರಾಷ್ಟ್ರೀಯ ಯೋಗದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ವಿಶ್ವದ ಪ್ರತಿಯೊಂದು ದೇಶವೂ ಯೋಗ ಉತ್ಸವವನ್ನು ಆಚರಿಸುತ್ತಿವೆ.  ನಾನು ಜಗತ್ತಿನ ಅನೇಕ ಮಂದಿಯನ್ನು ಭೇಟಿಯಾಗುತ್ತಿರುತ್ತೇನೆ. ಆಗ ಅವರು ದೇಶದ ಬಗ್ಗೆ, ,ವಿಕಾಸದ ಬಗ್ಗೆ, ಬಂಡವಾಳ ಹೂಡಿಕೆಯ ಬಗ್ಗೆ , ರಾಜನೈತಿಕ ಪರಿಸ್ಥಿತಿಯ ಬಗ್ಗೆ ನನ್ನೊಡನೆ ಚರ್ಚಿಸುತ್ತಾರೆ. ನನ್ನ ಗಮನಕ್ಕೆ ಬಂದ ಅಂಶವೆಂದರೆ ಯೋಗದ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಖಂಡಿತಾ ಕೇಳಿಯೇ ಕೇಳುತ್ತಾರೆ. ಇಷ್ಟರಮಚ್ಚಿಗೆ ಈ ವಿಷಯದ ಬಗ್ಗೆ ಕುತೂಹಲ ಮೂಡಿದೆಯೆನ್ನಬಹುದು.

       ನಮ್ಮ ಆಯುರ್ವೇದದ ಸಾಮರ್ಥ್ಯ ಅಷ್ಟಿಷ್ಟಲ್ಲ. ಆದರೆ ಅದಕ್ಕೆ ನಮ್ಮಿಂದಲೇ ಬಹಳ ಹಾನಿ ಉಂಟಾಗಿದೆ. ಆಧುನಿಕ ವಿಜ್ಞಾನದ medical scienceಗೆಆಯುರ್ವೇದ ಔಷಧಗಳು ಶಾಸ್ತ್ರಾಧಾರಿತವಲ್ಲವೆನ್ನಿಸಿದಂತೆಯೇ  ಆಯುರ್ವೇದದವರಿಗೂ ಇವರ ಬಗ್ಗೆ ಅಂತಹದ್ದೇ ಭಾವನೆ. ಹೀಗಾಗಿ ನಾನು ಹೆಚ್ಚು ತಾನು ಹೆಚ್ಚು ಎಂಬ ಪೈಪೋಟಿಯಲ್ಲಿ ಕಾಲ ಮಿಂಚಿತು. ಒಂದುವೇಳೆ ನಾವು ನಮ್ಮ ಎಲ್ಲಾ ಪಾರಂಪರಿಕ ಜ್ಞಾನವನ್ನೂ ಆಧುನಿಕ ಜ್ಞಾನದೊಂದಿಗೆ ಸೇರಿಸಿ ಮುಂದುವರೆದಿದ್ದರೆ ಮಾನವತೆಗೆ ಅತಿ ದೊಡ್ಡ ಕೊಡುಗೆಯ ರೂಪದಲ್ಲಿ ಸೇವೆ ಸಲ್ಲಿಸ ಬಹುದಿತ್ತು.

        ಪತಂಜಲಿ ಯೋಗ ವಿಧ್ಯಾಪೀಠದ ಮಾಧ್ಯಮದಿಂದ ಬಾಬಾ ರಾಮದೇವರು ನಡೆಸಿದ ಆಂದೋಲನ, ಅಬಿಯಾನಗಳಲ್ಲಿ ಆಯುರ್ವೇದದ ಮಹಿಮೆಯ ಮಂಡನೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸದೆ ಜಗತ್ತಿಗೆ ತಿಳಿಯುವ ಭಾಷೆಯಲ್ಲಿ ಅಂದರೆ , researchನ ಆಧಾರದಿಂದmedical scienceನಲ್ಲಿ ಮಂಡಿಸಿರುವ ರೀತಿ, ಜಗತ್ತಿನ ರೀತಿನೀತಿಗಳಿಗೆ ಅನುರೂಪವಾಗಿ ಅರ್ಥೈಸಿದ್ದಕ್ಕಾಗಿ ನಾನು ತುಂಬಾ ಹರ್ಷ ವ್ಯಕ್ತಪಡಿಸುತ್ತೇನೆ. ಬಾಬಾ ರಾಮದೇವರು ಜಗತ್ತಿನ ಭಾಷೆಯಲ್ಲೇ ಆಯುರ್ವೇದವನ್ನು ಮುಂದೆತಂದು ಜಗತ್ತನ್ನು ಪ್ರೇರೆಪಿಸುವೆನಂಬ ಸಂಕಲ್ಪ ಮಾಡಿದ್ದಾರೆ, ಇವರು ಒಂದುರೀತಿ ಹಿಂದೂಸ್ಥಾನದ ಸೇವೆ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಹಿಂದೆ ಋಷಿಮುನಿಗಳು ತಪಸ್ಸು ಮಾಡಿ ಪಡೆದ ಫಲವನ್ನುಜಗತ್ತಿಗೆ ಹಂಚಲು ಹೊರಟಿದ್ದಾರೆ.ವೈಜ್ಞಾನಿಕ ಅಧಿಷ್ಟಾನ ನಡೆಸಲು ಹೊರಟಿದ್ದಾರೆ

.             ನಾನು ಇಂದು ನೋಡಿದ Research Centre ಯಾವುದೇ ಆಧುನಿಕ Research Centreಗೆ ಕಡಿಮೆಯಿಲ್ಲದಂತೆ ಎದ್ದುನಿಂತಿದೆ. ಗಂಗಾತೀರದಲ್ಲಿ ನದೆಯುತ್ತಿರುವ  ಈ ಕಾರ್ಯಕ್ಕಾಗಿ ಬಾಬಾರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಸರ್ಕಾರದಲ್ಲಿ ಅಟಲಜೀಯವರ ಸರ್ಕಾರವಿದ್ದಾಗ ನಮ್ಮ ದೇಶದಲ್ಲಿHealth Policy ತರಲಾಗಿತ್ತು, ಇಷ್ಟೊಂದು ವರ್ಷಗಳನಂತರ ನಮ್ಮ ಸರ್ಕಾರ ಬಂದನಂತರ ನಾವು ದೇಶಕ್ಕಾಗಿ ಒಂದುHealth Policyಯನ್ನು ತಂದಿದ್ದೇವೆ. ಇದರೊಂದಿಗೆHolistic Health Care ನview ತೆಗೆದುಕೊಂಡು ಬಂದಿದ್ದೇವೆ. ಇಂದಿನ ಪ್ರಪಂಚ Healthy ಯಾಗಿರ ಬಯಸುತ್ತದೆ ಅಂದರೆ ಖಾಯಿಲೆಗಳಿಲ್ಲದೆ ಬದುಕಬೇಕೆನ್ನುತ್ತದೆ,ಜನತೆಗೆ Wellness ಬೇಕು.ಇದರsolution ಸಹholistic ಆಗಿರಬೇಕು.Preventive Health Care ಗೆ ಒತ್ತು ನೀಡಬೇಕಾಗಿದೆ. ಇದಲ್ಲದೆPreventive Health Care ನೆಡೆಗೆ ಹೋಗುವ ಸರ್ವೋತ್ತಮ ಹಾದಿ ಅತಿ ಅಗ್ಗದ ಹಾದಿ. ಅದ್ಯಾವುದು ನಿಮಗೆ ಗೊತ್ತೇ? ಅದೇ ಸ್ವಚ್ಛತೆ, ಸ್ವಚ್ಛತೆಗಾಗಿ ಯಾರುಯಾರು ಏನೇನು ಮಾಡುವರೆಂಬುದು ನಮಗಿರಲಿ, ಅದನ್ನು ನಾವು ಆನಂತರ ನೋಡೋಣ. ಮೊದಲಿಗೆ 125 ಕೋಟಿ ದೇಶವಾಸಿಗಳು ನಾವು ಕೊಳಕು ಮಾಡುವುದಿಲ್ಲ ಎಂದು ತೀರ್ಮಾನಿಸಬೇಕು. ಇದಕ್ಕಾಗಿ ದೊಡ್ಡ ಪ್ರತಿಜ್ಞೆ ಮಾಡುವ, ಜೈಲಿಗೆ ಹೋಗುವ ಅಗತ್ಯವಿಲ್ಲ, ನೇಣುಗಂಬವನ್ನು ಏರಬೇಕಾಗಿಯೂ ಇಲ್ಲ, ದೇಶದ ಗಡಿಗೆ ಹೋಗಿ ಸೈನಿಕರಂತೆ ಸಾಯುವ ಆಗತ್ಯವೂ ಇಲ್ಲ. ಚಿಕ್ಕದೊಂದು ಕೆಲಸ – ನಾನು ಕೊಳಕು ಮಾಡುವುದಿಲ್ಲವೆಂಬ ಸಂಕಲ್ಪ.

ಒಬ್ಬ ಡಾಕ್ಟರು ಎಷ್ಟು ಜೀವಗಳನ್ನು ಕಾಪಾಡಿದ್ದಾನೋ ಅದಕ್ಕಿಂತ ಹೆಚ್ಚು ಮಕ್ಕಳ ಜೀವಗಳನ್ನು ನೀವು ಕಾಪಾಡಬಹುದೆಂದು ನೀವಂದಾದರೂ ಅಂದುಕೊಂಡಿದ್ದೀರಾ?  ಒಬ್ಬ  ಬಡವನಿಗೆ ದಾನ-ಧರ್ಮಮಾಡಿ ನೀವು ಎಷ್ಟು ಪುಣ್ಯಸಂಪಾದಿಸುವಿರೋ ಅದಕ್ಕಿಂತ ಹೆಚ್ಚು ಪುಣ್ಯವನ್ನು ಪರಿಸರವನ್ನು ಕೊಳಕುಮಾಡದೆ ರೋಗಬರದಂತಾಗಿ ಅವನು ಆರೋಗ್ಯವಾಗಿ ಬದುಕಲು ಅನುಕೊಲಕರವಾಗಿಟ್ಟರೆ ಸಂಪಾದಿಸುವಿರಿ.        ನನಗೆ ಸಂತಸ ತಂದಿರುವ ವಿಷಯವೆಂದರೆ ದೇಶದ ಭವಿಷ್ಯವಾದ ಸಣ್ಣ- ಸಣ್ಣಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿದೆ, ಈ ವಿಷಯದ ಬಗ್ಗೆ ಮಕ್ಕಳು ಮನೆ- ಮನೆಯಲ್ಲಿ ಹೋರಾಟನಡೆಸಲು ಹೊರಟಿದ್ದಾರೆ. ಒಬ್ಬ ವೃದ್ದರು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಖಾಲಿ ನೀರಿನ ಬಾಟಲಿಯನ್ನು ಬೀದಿಗೆಸೆದರೆ ಮಗ ಕಾರು ನಿಲ್ಲಿಸುತ್ತಾನೆ, ಐದು ವರ್ಷದ ಮೊಮ್ಮಗ ಕಾರು ನಿಲ್ಲಿಸಿರಿ, ಮೋದಿದಾದ ಹೇಳಿಲ್ವೇ ಬಾಟಲಿ ವಾಪಸ್ಸು ತೊಗೋ ಎನ್ನುವ ಮಟ್ಟಿಗೆ ಮೂಡಿದೆ. ಚಿಣ್ಣರು ನನ್ನ ಈ ಸ್ವಚ್ಛತೆಯ ಅಭಿಯಾನದ ಸೈನಿಕಾರಾಗಿಬಿಟ್ಟಿದ್ದಾರೆ. ಆದ್ದರಿಂದ Preventive Health Careಗೆ ನಾವು ಎಷ್ಟರಮಟ್ಟಿಗೆ ಒತ್ತು ಕೊಡುವೆವೋ ಅಷ್ಟರಮಟ್ಟಿಗೆ ಬಡವರ ಸೇವೆ ಮಾಡಿದೆವು ಎಂದುಕೊಳ್ಳಬಹುದು.

        ಯಾರೋ ಬಂದು ನಮ್ಮ ದೇಶವನ್ನು ಕೊಳಚೆಮಾಡುವುದಿಲ್ಲ, ಕೊಳಚೆಮಾಡುವವರು ನಾವೇ.ಆಮೇಲೆ ನಾವೇ ಕೊಳಚೆಯ ಬಗ್ಗೆ ಭಾಷಣ ಮಾಡುತ್ತೇವೆ. ಪ್ರತಿಯೊಬ್ಬ ದೇಶವಾಸಿಯೂ ನಾನು ಕೊಳಚೆಮಾಡುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡರೆ ಈ ದೇಶವನ್ನು ಯಾವ ಅಡ್ಡಿ ಆತಂಕಗಳೂ ಇಲ್ಲದೆ ಆರೋಗ್ಯವಂತ ದೇಶವನ್ನಾಗಿ ಮಾಡಬಲ್ಲೆವು.

         ಉದಾಸೀನವೆಂಬುದು ನಮ್ಮೊಳಗೆ ಎಷ್ಟರಮಟ್ಟಿಗೆ ಬೇರುಬಿಟ್ಟಿದೆಯೆಂದರೆ, ಇಷ್ಟು ದೊಡ್ಡ ಹಿಮಾಲಯ, ಹಿಮಾಲಯದ ಗಿಡಮೂಲಿಕೆಗಳು ನಮ್ಮ ಗಮನಕ್ಕೆ ಬರಲಿಲ್ಲ, ಶ್ರೀ ರಾಮಚಂದ್ರ ಹಾಗೂ ಲಕ್ಷ್ಮಣರ ಪ್ರಸಂಗದ ಪರಿಚಯವಿದ್ದರೂ, ಹನುಮಂತನು ಗಿಡಮೂಲಿಕೆಗಾಗಿ ಏನೆಲ್ಲ ಮಾಡಿದನೆಂಬುದು ತಿಳಿದಿದ್ದ ನಾವು ನಿರ್ಲಿಪ್ತರಾಗಿದ್ದುಬಿಟ್ಟೆವು. ಜಗತ್ತಿನ ಇತರ ದೇಶಗಳಿಗೆ ಗಿಡಮೂಲಿಕೆ ಎಂದರೆ ಏನಂಬುದೇ ಗೊತ್ತಿಲ್ಲ ಆದರೂ ಇವಕ್ಕೆ ಏನೋ commercial value ಇದೆಯೆಂಬ ಅನುಮಾನಬಂದ ಕೂಡಲೇ ಇವಕ್ಕೆpatentಮಾಡಿದಬಿಟ್ಟವು. ನಮ್ಮ ಅರಿಶಿನದ patent ಒಂದು ದೇಶದ ಬಳಿ ಇದ್ದರೆ ಹುಣಸೆಹಣ್ಣು ಇನ್ನೊಂದು ದೇಶದ ಬಳಿpatent ಆಗಿದೆ. ನಮ್ಮಉದಾಸೀನತೆ ನಮ್ಮ ಸಾಮರ್ಥ್ಯವನ್ನು ಮರೆಯುವ ಸ್ವಭಾವಗಳು ನಮಗೆ ಬಹಳ ನಷ್ಟವನ್ನುಂಟುಮಾಡಿವೆ.

        ಇಂದು ವಿಶ್ವದಲ್ಲಿ Herbal Medicineಎಂಬ ಬೃಹತ್ ಮಾರುಕಟ್ಟೆ ತಲೆಯೆತ್ತಿದೆ. ಆದರೆ Herbal Medicineನ್ನು ವಿಶ್ವಕ್ಕೆ ತಲುಪಿಸುವಲ್ಲಿ ಭಾರತಕ್ಕಿರುವ ಸಾಮರ್ಥ್ಯವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಕೆಲಸ ನಡೆಯಬೇಕಾಗಿದೆ.

         ಈ ಪತಂಜಲಿ ಸಂಸ್ಥಾನದ ಮೂಲಕ ನಡೆಯುತ್ತಿರುವ Research ಮತ್ತುInnovation ಜಗತ್ತಿನಲ್ಲಿHolistic ಮತ್ತುWellness ಗಾಗಿರುವstructureಗೆ ರೂಪಕವಾಗಿವೆ. ಭವಿಷ್ಯದಲ್ಲಿ ಇಲ್ಲಿ ತಯಾರಾದ ಔಷಧಿಗಳು ಜಗತ್ತಿನ ಜನರಿಗೆ ಉಪಯೋಗವಾಗಲಿವೆ. ಅನೇಕ ವರ್ಷಗಳ ಹಿಂದೆಯೇ ಭಾರತ ಸರ್ಕಾರವು ಆಯುರ್ವೇದದ ಪ್ರಚಾರಕ್ಕಾಗಿ ಹಾಥಿಕಮಿಷನ್ನೊಂದನ್ನು ರಚಿಸಿತ್ತು. ಜಯಸುಖಲಾಲ್ ಹಾಥಿ ಇದರ ಅಧ್ಯಕ್ಷರಾಗಿದ್ದರು. ಆ ಕಮಿಷನ್ನು ನೀಡಿರುವ ರಿಪೋರ್ಟ ಬಹಳ interesting ಆಗಿತ್ತು. ಆ ರಿಪೋರ್ಟಿನ ಆರಂಭದಲ್ಲಿ ನಮ್ಮ ಆಯುರ್ವೇದವು ಜನರಿಗೆ ತಲುಪದಿರಲು ಕಾರಣ ಅದರ ಪದ್ಧತಿ ಪ್ರಸ್ತುತ ಯುಗಕ್ಕೆ ಅನುಕೂಲಕರವಲ್ಲದಿರುವುದು, ಇವರು ಚೀಲದ ತುಂಬಾ ನಾರು-ಬೇರುಗಳನ್ನು ಕೊಡುತ್ತಾರೆ,ನಂತರ ಇದನ್ನು ಕುದಿಸಿ,ಇಷ್ಟು ನೀರಿನಲ್ಲಿ ಕುದಿಸಿ, ಇದರ ರಸವನ್ನು ಟಮಟದಲ್ಲಿ ತೆಗೆದುಕೊಳ್ಳಿ ಅದಕ್ಕೆ ಇನ್ನೊಂದೇನನ್ನೋ ಸೇರಿಸಿ ನಂತರ ಕುಡಿಯಿರಿ , ಎಂದೆಲ್ಲಾ ಹೇಳುತ್ತಾರೆ. ಒಬ್ಬ ಜನಸಾಮಾನ್ಯನು ಯಾರು ಈ ಕಸವನ್ನು ರಸವನ್ನಾಗಿ ಮಾಡುವವರು ?  ಯಾಕಪ್ಪಾ ಇಷ್ಟೊಂದು ರೇಜಿಗೆ ? ನಡಿ ಸುಮ್ಮನೆ ಒಂದು ಮಾತ್ರೆ ತೆಗೊಂಡ್ರೆ ನಮ್ಮ ಕೆಲಸ ಸುಸೂತ್ರವಾಗಿ ನಡೆಯುತ್ತೆ ಎಂದು ಭಾವಿಸುತ್ತಾನೆ. ಇದು ಬಹಳ ಹಳೆಯ ರಿಪೋರ್ಟ. ಈ ರಿಪೋರ್ಟನಲ್ಲಿ  ಆಯುರ್ವೇದದ ಮೊಟ್ಟಮೊದಲ ಅವಶ್ಯಕತೆ  ಔಷಧಗಳ packaging, ಇದರpackagingmodernಔಷಧಗಳ ಹಂತಕ್ಕೆ ಬಂದಾಗ ಜನತೆHolistic Health Careನೆಡೆಗೆ ತಿರುಗಿನೋಡುವರೆಂದು ಬರೆಯಲಾಗಿದೆ. ಆದರೆ ಇಂದು ನಾವು ಇಲ್ಲಿ ಕುದಿಯುತ್ತಿರುವ ನಾರು-ಬೇರುಗಳನ್ನು ನೋಡುತ್ತಿಲ್ಲ. ಪ್ರತಿಯೊಂದೂ ready-made ದೊರೆಯುತ್ತಿದೆ.

        ಆಚಾರ್ಯರು ತಮ್ಮನ್ನು ತಾವು ಇದರಲ್ಲಿ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ.ಬಾಬಾ ರಾಮದೇವರವರ ಇಂದು ನಾನು ಲೋಕಾರ್ಪಣೆ ಮಾಡುತ್ತಿರುವ ಈ ಗ್ರಂಥವು ಜಗತ್ತಿನ ಗಮನ ಸೆಳೆಯಲಿದೆ.Medical Scienceನೊಡನೆ ಸಂಬಂಧಿಸಿದವರ ಗಮನ ಸೆಳೆಯಲಿದೆ. ಪ್ರಕೃತಿದತ್ತವಾದ ವ್ಯವಸ್ಥೆಯಲ್ಲಿ ಎಷ್ಟು ಸಾಮರ್ಥ್ಯವಿದೆ, ಆ ಸಾಮರ್ಥ್ಯದ ಅರಿವು ನಮಗಾದರೆ ಜೀವನ ಎಷ್ಟು ಉಜ್ವಲವಾಗಬಲ್ಲದು ಎಂಬ ಜ್ಞಾನ ನೀಡುತ್ತದೆ. ಇದರಿಂದ ವ್ಯಕ್ತಿಗೆ ಒಂದು ಕಿಟಕಿ ತೆರೆದುಕೊಂಡರೆ ಈ ದಿಕ್ಕಿನಲ್ಲಿ ಮುಂದುವರೆಯಲು ಆಗುವಷ್ಟು ಬೆಳಕು ಮೂಡಬಹುದು.

       ಬಾಲಕೃಷ್ಣರ ಈ ಸಾಧನೆ ಬಾಬಾ ರಾಮದೇವರ mission modeಗೆ ಸಮರ್ಪಣೆಗೊಂಡ ಈ ಕಾರ್ಯ ಮತ್ತು ಭಾರತದ ಮಹಾನ್ ಉಜ್ವಲ ಪರಂಪರೆ, ಆಧುನಿಕ ರೂಪ-ವಿನ್ಯಾಸದೊಡನೆ.ವೈಜ್ಞಾನಿಕ ಆಧಾರದೊಡನೆ ಇದನ್ನು ಮುಂದುವರೆಸುವ ಪ್ರಯತ್ನವು ಜಾಗತಿಕ ಮಟ್ಟದಲ್ಲಿ ಭಾರತವು ಈ ಕ್ಷೇತ್ರದಲ್ಲಿ ಒಂದು ಸ್ಥಾನಪಡೆದುಕೊಳ್ಳುವುದಕ್ಕೆ ಆಧಾರವಾಗಬಲ್ಲದು. ವಿಶ್ವದ ಒಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಜನತೆ ಯೋಗದೊಡನೆ ತಮ್ಮನ್ನು ಬೆಸೆದುಕೊಂಡಿದ್ದಾರೆ. ಆಯುರ್ವೇದದೊಡನೆಯೂ ಬೆಸೆದುಕೊಳ್ಳಲು ಬಯಸುತ್ಡಿದ್ದಾರೆ ನಾವು ಆ ದಿಕ್ಕಿನಲ್ಲಿ ಕೆಲಸ ಮಾಡೋಣ.

           ನಾನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಬರುವ ಸೌಭಾಗ್ಯ ನನಗೆ ದೊರೆತ್ತದ್ದಕ್ಕಾಗಿ, ನನಗೆ ಸನ್ಮಾನ ಮಾಡಿದ್ದಕ್ಕೆ ತಮಗೆಲ್ಲರಿಗೂ ಅಭಿನಂದನೆಗಳನ್ನು ಕೋರುತ್ತೇನೆ. ಎಲ್ಲರಿಗೂ ನನ್ನ ಹೃದಯಪೂರ್ವಕ ಹಾರೈಕೆಗಳು.