ತೆರಿಗೆ ವಂಚನೆ, “ರೌಂಡ್ ಟ್ರಿಪ್ಪಿಂಗ್” ಮತ್ತು “ಮೂಲ ಸವೆತ / ಲಾಭ ಬದಲಾಯಿಸುವುದರ” ವಿರುದ್ಧ ಹೋರಾಟದಲ್ಲಿ ಭಾರತ ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೈಪ್ರಸ್ ನಡುವೆ ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಯಲ್ಲಿ ಆರ್ಥಿಕ ವಂಚನೆ ತಡೆಯಲು ಒಪ್ಪಂದ ಮತ್ತು ಶಿಷ್ಟಾಚಾರಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಕ್ರಮವು ದ್ವಿತೆರಿಗೆ ತಡೆ ಸಲುವಾಗಿ ಮಾರಿಷಸ್ ನೊಂದಿಗೆ ಆದ ಇತ್ತೀಚಿನ ತಿದ್ದುಪಡಿಯ ಅನುಸರಣೆಯಾಗಿದೆ. ಮಾರಿಷಸ್ ಪ್ರಕರಣದಂತೆಯೇ ಸೈಪ್ರಸ್ ನೊಂದಿಗಿನ ಒಪ್ಪಂದ ಕೂಡ ಬಂಡವಾಳದ ಮೇಲಿನ ಲಾಭಕ್ಕೆ ಸಂಬಂಧಿಸಿದಂತೆ ನಿವಾಸಿ ಆಧಾರಿತ ತೆರಿಗೆಗೆ ಅವಕಾಶ ನೀಡುತ್ತದೆ. ಸಂಪುಟ ಅನುಮೋದಿಸಿದ ಒಪ್ಪಂದದ ಈ ಪರಿಷ್ಕರಣೆಯೊಂದಿಗೆ ಈಗ, ದ್ವಿತೆರಿಗೆ ಪರಿಹಾರದೊಂದಿಗೆ ಸೈಪ್ರಸ್ ನ ನಿವಾಸಿ ಘಟಕಗಳ ಬಂಡವಾಳದ ಮೇಲಿನ ಲಾಭಕ್ಕೆ ಭಾರತದಲ್ಲಿ ತೆರಿಗೆ ಹಾಕಲಾಗುತ್ತದೆ. ಅಂದರೆ, ಭಾರತದಲ್ಲಿ ಗಳಿಸುವ ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ಹಾಕುವ ಅಧಿಕಾರ ಭಾರತದ್ದಾಗಿರುತ್ತದೆ. ನಿವಾಸ ಆಧಾರಿತ ತೆರಿಗೆಗೆ ಸಂಬಂಧಿಸಿದಂತೆ ಹಿಂದಿನ ಒಪ್ಪಂದದ ನಿಬಂಧನೆಗಳು ತೆರಿಗೆ ತಪ್ಪಿಸಲು ಆರ್ಥಿಕ ಮತ್ತು ನಿಜವಾದ ಬಂಡವಾಳ ಹರಿವು ಅಸ್ಪಷ್ಟತೆಗೆ ಮತ್ತು ವಿವಿಧ ಹೂಡಿಕೆಗಳ ಕೃತಕ ಮಾರ್ಗ ಬದಲಿಸುವಿಕೆಗೆ ದಾರಿ ಮಾಡಿಕೊಟ್ಟಿದ್ದವು. ಮಾರಿಷಸ್ ನಂತೆಯೇ ಈಗ ಈ ತಿದ್ದುಪಡಿಯು ಅಂಥ ಚಟುವಟಿಕೆಗಳನ್ನು ತಡೆಯುತ್ತದೆ. ಇದೇ ರೀತಿಯ ಬದಲಾವಣೆಗಾಗಿ ಸಿಂಗಾಪೂರದೊಂದಿಗೆ ಸಹ ಮಾತುಕತೆ ನಡೆದಿದೆ.
AKT/VBA/SH